ರಕ್ಷಣಾ ಸಚಿವಾಲಯ
ಮೋರನ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕ್ರಿಯಗೊಳ್ಳಲಿದೆ ತುರ್ತು ನಿಲುಗಡೆ ಸೌಲಭ್ಯ (ಇ ಎಲ್ ಎಫ್)
ಪ್ರಕಟಣಾ ದಿನಾಂಕ:
12 FEB 2026 11:03AM by PIB Bengaluru
ಅಸ್ಸಾಂ ರಾಜ್ಯವು 2026ರ ಫೆಬ್ರವರಿ 14 ರಂದು ದಿಬ್ರುಗಢ ಜಿಲ್ಲೆಯ ಮೋರನ್ ಬೈಪಾಸ್ ನಲ್ಲಿ ತುರ್ತು ನಿಲುಗಡೆ ಸೌಲಭ್ಯ (ELF) ಉದ್ಘಾಟನೆಯ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ಈಶಾನ್ಯ ರಾಜ್ಯಗಳಲ್ಲಿ ELF ಸೌಲಭ್ಯ ಕಲ್ಪಿಸಲಾಗಿದೆ.
ಭಾರತದ ಮಾನ್ಯ ಪ್ರಧಾನಮಂತ್ರಿ ಅವರು ಈ ಸೌಲಭ್ಯವನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಸೌಲಭ್ಯವು ಅನಿರೀಕ್ಷಿತ ಸಂದರ್ಭಗಳಲ್ಲಿ ಪರ್ಯಾಯ ರನ್ ವೇಯಾಗಿ ಹೆದ್ದಾರಿಯಲ್ಲಿ ಗುರುತಿಸಲ್ಪಟ್ಟ ಮಾರ್ಗವನ್ನು ತೆರೆಯುತ್ತದೆ. ಈ ಸೌಲಭ್ಯವು ತುರ್ತು ಲ್ಯಾಂಡಿಂಗ್ ನಿಭಾಯಿಸಬಲ್ಲದಾಗಿದೆ ಹಾಗೂ ಫೈಟರ್ ಜೆಟ್ ಗಳು, ಸಾಗಣೆ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಟೇಕ್ ಆಫ್ ಕಾರ್ಯಾಚರಣೆಯನ್ನು ನಿರ್ವಹಿಸಬಲ್ಲದಾಗಿದೆ. ಬಹು ದೂರದ ಪ್ರದೇಶಗಳಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್ ಎ ಡಿ ಆರ್) ಕಾರ್ಯಾಚರಣೆಗಳ ಸಂದರ್ಭಗಳಲ್ಲಿ ಇದು ಪ್ರಮುಖ ಪಾತ್ರ ವಹಿಸಬಲ್ಲದಾಗಿದೆ.
ಈ ರಾಷ್ಟ್ರೀಯ ಭದ್ರತೆಯ ಅತ್ಯಂತ ಪ್ರಮುಖ ಕಾರ್ಯಕ್ರಮಕ್ಕೆ ಮಾನ್ಯ ಪ್ರಧಾನಮಂತ್ರಿ, ಅಸ್ಸಾಂ ರಾಜ್ಯಪಾಲರು, ಅಸ್ಸಾಂ ಮುಖ್ಯಮಂತ್ರಿಗಳು ಮತ್ತು ನಾಗರಿಕ ಮತ್ತು ಮಿಲಿಟರಿ ಸೇವೆಯ ಹಿರಿಯ ಗಣ್ಯರು ಸಾಕ್ಷಿಯಾಗಲಿದ್ದಾರೆ.
*****
(ಪ್ರಕಟಣೆ ಐ.ಡಿ.: 2226911)
ವಿಸಿಟರ್ ಕೌಂಟರ್ : 9