ಗೃಹ ವ್ಯವಹಾರಗಳ ಸಚಿವಾಲಯ
ಛತ್ತೀಸ್‌ಗಢದ ರಾಯಪುರದಲ್ಲಿಎಡಪಂಥೀಯ ಉಗ್ರವಾದ ಕುರಿತ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಛತ್ತೀಸ್‌ಗಢದ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗೃಹ ಸಚಿವರು ಪರಿಶೀಲನಾ ಸಭೆ ನಡೆಸಿದರು
ಒಂದು ಕಾಲದಲ್ಲಿ ನಕ್ಸಲ್ ಹಿಂಸಾಚಾರದ ಭದ್ರಕೋಟೆಯಾಗಿದ್ದ ಛತ್ತೀಸ್‌ಗಢವು ಈಗ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಡಬಲ್ ಇಂಜಿನ್ ಸರ್ಕಾರದಲ್ಲಿ ಅಭಿವೃದ್ಧಿಯ ಸಂಕೇತವಾಗಿದೆ
ಮೋದಿ ಸರ್ಕಾರದ ಅಡಿಯಲ್ಲಿ, ನಕ್ಸಲಿಸಂ ಅಂತ್ಯದ ಅಂಚನ್ನು ತಲುಪಿದೆ ಮತ್ತು 2026 ರ ಮಾರ್ಚ್ 31ರ ಮೊದಲು ದೇಶವು ಸಂಪೂರ್ಣವಾಗಿ ನಕ್ಸಲ್ ಮುಕ್ತವಾಗಲಿದೆ
ಕೇಂದ್ರ ಮತ್ತು ಛತ್ತೀಸ್‌ಗಢ ಸರ್ಕಾರದ ಭದ್ರತೆ ಕೇಂದ್ರಿತ ಕಾರ್ಯತಂತ್ರ, ಮೂಲಸೌಕರ್ಯಗಳು, ನಕ್ಸಲ್ ಹಣಕಾಸು ಜಾಲದ ಮೇಲಿನ ದಾಳಿ ಮತ್ತು ಶರಣಾಗತಿ ನೀತಿಯು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ
ಛತ್ತೀಸ್‌ಗಢದ ಯುವಕರು ಕ್ರೀಡೆ, ವಿಧಿವಿಜ್ಞಾನ ಮತ್ತು ತಾಂತ್ರಿಕ ಶಿಕ್ಷ ಣದಲ್ಲಿ ಪ್ರಗತಿಯನ್ನು ವೇಗಗೊಳಿಸುತ್ತಿದ್ದಾರೆ ಮತ್ತು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುತ್ತಿದ್ದಾರೆ
ಹಲವು ತಲೆಮಾರುಗಳನ್ನು ಬಡತನ ಮತ್ತು ಅನಕ್ಷರತೆಯ ಕತ್ತಲೆಗೆ ತಳ್ಳಿರುವ ನಕ್ಸಲಿಸಂನಿಂದ ದೇಶ ಮುಕ್ತವಾಗಲಿದೆ
ಛತ್ತೀಸ್‌ಗಢವು ಭದ್ರತೆ ಮತ್ತು ಅಭಿವೃದ್ಧಿ ರಂಗಗಳೆರಡರಲ್ಲೂ ಗಮನಾರ್ಹ ಪ್ರಗತಿ ಸಾಧಿಸಿದೆ
ಪ್ರಕಟಣಾ ದಿನಾಂಕ:
08 FEB 2026 7:51PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಛತ್ತೀಸ್‌ಗಢದ ರಾಯಪುರದಲ್ಲಿಎಡಪಂಥೀಯ ಉಗ್ರವಾದ (ಎಲ್‌ಡಬ್ಲ್ಯುಇ) ಕುರಿತ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಛತ್ತೀಸ್‌ಗಢದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗೃಹ ಸಚಿವರು ಪರಿಶೀಲನಾ ಸಭೆ ನಡೆಸಿದರು. ಸಭೆಗಳಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಶ್ರೀ ವಿಷ್ಣು ದೇವ್ ಸಾಯಿ, ಉಪಮುಖ್ಯಮಂತ್ರಿ ಶ್ರೀ ವಿಜಯ್ ಶರ್ಮಾ, ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ (ಐಬಿ) ನಿರ್ದೇಶಕರು, ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ), ಛತ್ತೀಸ್‌ಗಢದ ಮುಖ್ಯ ಕಾರ್ಯದರ್ಶಿ, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಹಾನಿರ್ದೇಶಕರು ಭಾಗವಹಿಸಿದ್ದರು. ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಛತ್ತೀಸ್‌ಗಢ, ತೆಲಂಗಾಣ, ಜಾರ್ಖಂಡ್, ಒಡಿಶಾ ಮತ್ತು ಮಹಾರಾಷ್ಟ್ರದ ಗೃಹ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿಗಳು) ಈ ಸಭೆಯಲ್ಲಿ ಭಾಗವಹಿಸಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ಕೇಂದ್ರ ಮತ್ತು ಛತ್ತೀಸ್‌ಗಢ ಸರ್ಕಾರದ ಭದ್ರತೆ ಕೇಂದ್ರಿತ ಕಾರ್ಯತಂತ್ರದ ಜತೆಗೆ ಮೂಲಸೌಕರ್ಯ, ನಕ್ಸಲ್ ಹಣಕಾಸು ಜಾಲದ ಮೇಲಿನ ದಾಳಿ ಮತ್ತು ಶರಣಾಗತಿ ನೀತಿಯು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ ಎಂದು ಹೇಳಿದರು. ಮುಂಬರುವ ಮಾರ್ಚ್ 31ರೊಳಗೆ ನಕ್ಸಲ್ ವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಛತ್ತೀಸ್‌ಗಢವು ಒಂದು ಕಾಲದಲ್ಲಿ ನಕ್ಸಲ್ ಹಿಂಸಾಚಾರದ ಭದ್ರಕೋಟೆಯಾಗಿತ್ತು, ಆದರೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಡಬಲ್ ಇಂಜಿನ್ ಸರ್ಕಾರದಲ್ಲಿಅದು ಈಗ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು. ಛತ್ತೀಸ್‌ಗಢದ ಯುವಕರು ಕ್ರೀಡೆ, ವಿಧಿವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಪ್ರಗತಿಯನ್ನು ವೇಗಗೊಳಿಸುತ್ತಿದ್ದಾರೆ ಮತ್ತು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುತ್ತಿದ್ದಾರೆ ಎಂದು ಅವರು ಹೇಳಿದರು.

ದೇಶದಿಂದ ನಕ್ಸಲಿಸಂ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಡಬಲ್ ಇಂಜಿನ್ ಸರ್ಕಾರ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ, ನಕ್ಸಲಿಸಂ ಅದರ ಅಂತ್ಯದ ಅಂಚನ್ನು ತಲುಪಿದೆ ಮತ್ತು 2026ರ ಮಾರ್ಚ್ 31ರ ಮೊದಲು ದೇಶವು ಸಂಪೂರ್ಣವಾಗಿ ನಕ್ಸಲ್ ಮುಕ್ತವಾಗಲಿದೆ ಎಂದು ಅವರು ಹೇಳಿದರು. ಅನೇಕ ತಲೆಮಾರುಗಳನ್ನು ಬಡತನ ಮತ್ತು ಅನಕ್ಷ ರತೆಯ ಕತ್ತಲೆಗೆ ತಳ್ಳಿರುವ ನಕ್ಸಲಿಸಂನಿಂದ ದೇಶವು ಶೀಘ್ರದಲ್ಲೇ ಮುಕ್ತವಾಗಲಿದೆ ಎಂದು ಗೃಹ ಸಚಿವರು ಹೇಳಿದರು. ನಕ್ಸಲರ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಚದುರಿಸಬಾರದು ಎಂದು ಶ್ರೀ ಅಮಿತ್ ಶಾ ಹೇಳಿದರು. ವಿವಿಧ ರಾಜ್ಯಗಳು ಮತ್ತು ಕೇಂದ್ರ ಏಜೆನ್ಸಿಗಳ ನಡುವೆ ಸುಗಮ ಸಮನ್ವಯದ ಅಗತ್ಯವನ್ನು ಒತ್ತಿ ಹೇಳಿದ ಅವರು, ಉಳಿದ ನಕ್ಸಲರನ್ನು ಇತರ ರಾಜ್ಯಗಳಿಗೆ ಪಲಾಯನ ಮಾಡಲು ಅವಕಾಶ ನೀಡಬಾರದು ಎಂದು ಹೇಳಿದರು.
ಛತ್ತೀಸ್‌ಗಢವು ಭದ್ರತೆ ಮತ್ತು ಅಭಿವೃದ್ಧಿ ರಂಗಗಳೆರಡರಲ್ಲೂ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ನಕ್ಸಲ್ ಪೀಡಿತ ಪ್ರದೇಶಗಳ ಜನರಿಗೆ ಅಭಿವೃದ್ಧಿಗೆ ಸಮಾನ ಅವಕಾಶಗಳು ಸಿಗುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
*****
(ಪ್ರಕಟಣೆ ಐ.ಡಿ.: 2225396)
ವಿಸಿಟರ್ ಕೌಂಟರ್ : 17