|
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಡಿಸೆಂಬರ್ 2025ರ ವೇಳೆಗೆ ಪಿಎಂ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯಡಿ 26 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರಯೋಜನ
ಪಿ ಎಂ ಎಸ್ ಜಿ ಎಂ ಬಿ ವೈ ಅಡಿಯಲ್ಲಿ ₹14,771 ಕೋಟಿ ಕೇಂದ್ರ ಹಣಕಾಸು ನೆರವು ವಿತರಣೆ
ಪ್ರಕಟಣಾ ದಿನಾಂಕ:
03 FEB 2026 1:33PM by PIB Bengaluru
ಪಿಎಂ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆ (ಪಿ ಎಂ ಎಸ್ ಜಿ: ಎಂಬಿವೈ) ಒಂದು ಬೇಡಿಕೆ ಆಧಾರಿತ ಯೋಜನೆಯಾಗಿದ್ದು, ಸ್ಥಳೀಯ ಡಿಸ್ಕಾಮ್ ಗಳ ಗ್ರಿಡ್ ಸಂಪರ್ಕಿತ ವಿದ್ಯುತ್ ಸಂಪರ್ಕ ಹೊಂದಿರುವ ದೇಶದ ಎಲ್ಲಾ ವಸತಿ ಗ್ರಾಹಕರು ಯೋಜನೆಯ ರಾಷ್ಟ್ರೀಯ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಮೇಲ್ಛಾವಣಿ ಸೌರ (ಆರ್ ಟಿ ಎಸ್) ವ್ಯವಸ್ಥೆಗಳ ಅಳವಡಿಕೆಗಾಗಿ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
ಫೆಬ್ರವರಿ, 2024 ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ, ಡಿಸೆಂಬರ್ 2025 ರವರೆಗೆ ದೇಶಾದ್ಯಂತ ಒಟ್ಟು 20,85,514 ಮೇಲ್ಛಾವಣಿ ಸೌರ (ಆರ್ ಟಿ ಎಸ್) ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಇದರ ಅಡಿಯಲ್ಲಿ 14,771.82 ಕೋಟಿ ರೂ.ಗಳನ್ನು ಕೇಂದ್ರ ಹಣಕಾಸು ನೆರವು (ಸಿ ಎಫ್ ಎ) ಆಗಿ ವಿತರಿಸುವ ಮೂಲಕ ಒಟ್ಟು 26,14,446 ಕುಟುಂಬಗಳಿಗೆ ಪ್ರಯೋಜನ ಒದಗಿಸಲಾಗಿದೆ. ಅಳವಡಿಸಲಾದ ಆರ್ ಟಿ ಎಸ್ ವ್ಯವಸ್ಥೆಗಳ ಸಂಖ್ಯೆಯ ಆಧಾರದ ಮೇಲೆ ಯೋಜನೆಯಡಿ ಸಾಧಿಸಲಾದ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ಪ್ರಗತಿಯ ವಿವರವನ್ನು ಅನುಬಂಧದಲ್ಲಿ ನೀಡಲಾಗಿದೆ.
ಪಿ ಎಂ ಎಸ್ ಜಿ: ಎಂಬಿವೈ ಅಡಿಯಲ್ಲಿ, 1 ಕೋಟಿ ಮನೆಗಳಲ್ಲಿ ಆರ್ ಟಿ ಎಸ್ ಅಳವಡಿಸುವುದರಿಂದ 1,000 ಬಿಲಿಯನ್ ಯುನಿಟ್ ಗಳಷ್ಟು ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸಬಹುದು ಎಂದು ಅಂದಾಜಿಸಲಾಗಿದೆ. ಇದು ಆರ್ ಟಿ ಎಸ್ ವ್ಯವಸ್ಥೆಗಳ 25 ವರ್ಷಗಳ ಜೀವಿತಾವಧಿಯಲ್ಲಿ 720 ಮಿಲಿಯನ್ ಟನ್ ಸಿಒ2 ಸಮಾನ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕಾರಣವಾಗುತ್ತದೆ.
ಅನುಬಂಧ
ಯೋಜನೆಯಡಿ ಸಾಧಿಸಲಾದ ಪ್ರಗತಿಯ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ವಿವರಗಳು (31.12.2025 ರಂತೆ)
|
ಕ್ರ. ಸಂ.
|
ರಾಜ್ಯ/ಕೇಂದ್ರಾಡಳಿತ ಪ್ರದೇಶ
|
ಅಳವಡಿಕೆಗಳು (ಸಂಖ್ಯೆ)
|
ಪ್ರಯೋಜನ ಪಡೆದ ಕುಟುಂಬಗಳು (ಸಂಖ್ಯೆ)
|
ಬಿಡುಗಡೆಯಾದ ಸಿ ಎಫ್ ಎ (ಕೋಟಿ ರೂ.ಗಳಲ್ಲಿ)
|
|
1
|
ಗುಜರಾತ್
|
5,15,052
|
7,41,819
|
3,845.60
|
|
2
|
ಮಹಾರಾಷ್ಟ್ರ
|
3,91,887
|
6,34,782
|
2,787.59
|
|
3
|
ಉತ್ತರ ಪ್ರದೇಶ
|
3,26,386
|
3,29,847
|
2,234.63
|
|
4
|
ಕೇರಳ
|
1,77,392
|
1,82,071
|
1,275.36
|
|
5
|
ರಾಜಸ್ಥಾನ
|
1,19,006
|
1,22,027
|
823.12
|
|
6
|
ಆಂಧ್ರ ಪ್ರದೇಶ
|
84,618
|
87,479
|
562.14
|
|
7
|
ಮಧ್ಯಪ್ರದೇಶ
|
83,665
|
87,001
|
601
|
|
8
|
ಅಸ್ಸಾಂ
|
71,898
|
72,604
|
494.28
|
|
9
|
ಉತ್ತರಾಖಂಡ
|
58,562
|
58,724
|
413.5
|
|
10
|
ತಮಿಳುನಾಡು
|
51,227
|
59,517
|
353.34
|
|
11
|
ಹರಿಯಾಣ
|
48,149
|
54,437
|
327.71
|
|
12
|
ಒಡಿಶಾ
|
27,614
|
27,962
|
171.57
|
|
13
|
ತೆಲಂಗಾಣ
|
25,272
|
36,052
|
178.38
|
|
14
|
ಛತ್ತೀಸಗಢ
|
21,365
|
22,786
|
111.5
|
|
15
|
ಜಮ್ಮು ಮತ್ತು ಕಾಶ್ಮೀರ
|
18,497
|
18,505
|
130.08
|
|
16
|
ಕರ್ನಾಟಕ
|
15,082
|
23,900
|
112.85
|
|
17
|
ಬಿಹಾರ
|
14,276
|
14,924
|
101.69
|
|
18
|
ಪಂಜಾಬ್
|
10,777
|
10,887
|
76.29
|
|
19
|
ಹಿಮಾಚಲ ಪ್ರದೇಶ
|
6,022
|
6,023
|
45.42
|
|
20
|
ದೆಹಲಿ (ಎನ್ ಸಿ ಟಿ)
|
5,427
|
9,309
|
38.48
|
|
21
|
ಪುದುಚೇರಿ
|
2,221
|
2,221
|
15.28
|
|
22
|
ತ್ರಿಪುರ
|
1,848
|
1,859
|
12.72
|
|
23
|
ಜಾರ್ಖಂಡ್
|
1,460
|
1,462
|
9.72
|
|
24
|
ಗೋವಾ
|
1,415
|
1,768
|
9.27
|
|
25
|
ಲಡಾಖ್
|
1,214
|
1,214
|
8.75
|
|
26
|
ಪಶ್ಚಿಮ ಬಂಗಾಳ
|
1,131
|
1,194
|
2.53
|
|
27
|
ಚಂಡೀಗಢ
|
989
|
989
|
5.51
|
|
28
|
ಮಿಜೋರಾಂ
|
773
|
775
|
5.97
|
|
29
|
ಲಕ್ಷದ್ವೀಪ
|
722
|
722
|
5.81
|
|
30
|
ಮಣಿಪುರ
|
711
|
711
|
5.66
|
|
31
|
ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು
|
492
|
492
|
3.6
|
|
32
|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
|
171
|
190
|
1.13
|
|
33
|
ನಾಗಾಲ್ಯಾಂಡ್
|
132
|
132
|
1.03
|
|
34
|
ಮೇಘಾಲಯ
|
34
|
34
|
0.17
|
|
35
|
ಸಿಕ್ಕಿಂ
|
26
|
26
|
0.13
|
|
36
|
ಅರುಣಾಚಲ ಪ್ರದೇಶ
|
1
|
1
|
0.01
|
|
|
ಒಟ್ಟು
|
20,85,514
|
26,14,446
|
14,771.82
|
ಈ ಮಾಹಿತಿಯನ್ನು ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಕೇಂದ್ರ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಸಲ್ಲಿಸಿದ್ದಾರೆ.
*****
(ಪ್ರಕಟಣೆ ಐ.ಡಿ.: 2222607)
|