ಪ್ರಧಾನ ಮಂತ್ರಿಯವರ ಕಛೇರಿ
ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ
ಎಲ್ಲಾ ಕ್ಷೇತ್ರಗಳಲ್ಲಿ ಭಾರತ-ವೆನೆಜುವೆಲಾ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸಲು ಮತ್ತು ಆಳಗೊಳಿಸಲು ಉಭಯ ನಾಯಕರ ಸಮ್ಮತಿ
ಜಾಗತಿಕ ದಕ್ಷಿಣಕ್ಕೆ ಉಭಯ ದೇಶಗಳ ನಿಕಟ ಸಹಕಾರದ ಮಹತ್ವ ಒತ್ತಿ ಹೇಳಿದ ಇಬ್ಬರೂ ನಾಯಕರು
प्रविष्टि तिथि:
30 JAN 2026 9:22PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೊಲಿವೇರಿಯನ್ ಗಣರಾಜ್ಯ ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾದ ಶ್ರೀಮತಿ ಡೆಲ್ಸಿ ಎಲೋಯಿನಾ ರೊಡ್ರಿಗಸ್ ಗೋಮೆಜ಼್ ಅವರಿಂದ ಇಂದು ದೂರವಾಣಿ ಕರೆ ಸ್ವೀಕರಿಸಿದರು.
ವ್ಯಾಪಾರ ಮತ್ತು ಹೂಡಿಕೆ, ಇಂಧನ, ಡಿಜಿಟಲ್ ತಂತ್ರಜ್ಞಾನ, ಆರೋಗ್ಯ, ಕೃಷಿ ಹಾಗೂ ಜನರ ನಡುವಿನ ಬಾಂಧವ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಭಾರತ-ವೆನೆಜುವೆಲಾ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸಲು ಮತ್ತು ಆಳಗೊಳಿಸಲು ಇಬ್ಬರೂ ನಾಯಕರು ಸಮ್ಮತಿಸಿದರು.
ಪರಸ್ಪರ ಹಿತಾಸಕ್ತಿಯ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಉಭಯರು ಅಭಿಪ್ರಾಯ ವಿನಿಮಯ ಮಾಡಿಕೊಂಡರು ಮತ್ತು ಜಾಗತಿಕ ದಕ್ಷಿಣಕ್ಕೆ ತಮ್ಮ ನಿಕಟ ಸಹಕಾರದ ಮಹತ್ವವನ್ನು ಒತ್ತಿ ಹೇಳಿದರು.
ಪರಸ್ಪರ ಸಂಪರ್ಕದಲ್ಲಿರಲು ಎರಡೂ ದೇಶಗಳ ನಾಯಕರು ಒಪ್ಪಿಕೊಂಡರು.
*****
(रिलीज़ आईडी: 2221244)
आगंतुक पटल : 2