ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಜಾಗತಿಕ ಇಂಧನ ಕ್ಷೇತ್ರದಲ್ಲಿ ತನ್ನ ಪಾತ್ರ ಬಲಪಡಿಸುವುದರೊಂದಿಗೆ ಮುಕ್ತಾಯಗೊಂಡ ಭಾರತ ಇಂಧನ ಸಪ್ತಾಹ 2026
ಜಾಗತಿಕ ಇಂಧನ ಸಂವಾದದ ಕೇಂದ್ರ ಸ್ಥಾನದಲ್ಲಿ ಉಳಿಯುವಾಗ ಭಾರತ ಭೌಗೋಳಿಕ ರಾಜಕೀಯ ಬದಲಾವಣೆಗೆ ಚೆನ್ನಾಗಿ ಸಿದ್ಧ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ
ಭಾರತದ ಇಂಧನ ಸ್ವಾಯತ್ತತೆಯನ್ನು ಬಲಪಡಿಸಲಿರುವ ದೇಶೀಯ ಶೋಧಕಾರ್ಯ, ಶುದ್ಧ ಇಂಧನ ವ್ಯಾಪ್ತಿ ವಿಸ್ತರಣೆ ಮತ್ತು ಸ್ಥಿರ ಬೆಲೆ ನಿಗದಿ
प्रविष्टि तिथि:
30 JAN 2026 2:33PM by PIB Bengaluru
ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಆಗುತ್ತಿರುವ ನಿರಂತರ ಭೌಗೋಳಿಕ ರಾಜಕೀಯ ಏರಿಳಿತಗಳನ್ನು ಎದುರಿಸಲು ಭಾರತ ಸದೃಢ ಸನ್ನದ್ಧತೆಯನ್ನು ಪ್ರದರ್ಶಿಸಿದೆ ಮತ್ತು ಅಂತಾರಾಷ್ಟ್ರೀಯ ಇಂಧನ ಚರ್ಚೆಯಲ್ಲಿ ಕೇಂದ್ರ ಸ್ಥಾನವನ್ನು ಪಡೆಯುವ ಪ್ರಯತ್ನವನ್ನು ಮುಂದುವರಿಸುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ ದೀಪ್ ಸಿಂಗ್ ಪುರಿ 2026ರ ಭಾರತ ಇಂಧನ ಸಪ್ತಾಹ (ಐಇಡಬ್ಲ್ಯೂ)ದ ಸಮಾರೋಪ ಸಮಾರಂಭದಲ್ಲಿ ಹೇಳಿದರು. ಈ ಕಾರ್ಯಕ್ರಮವನ್ನು ಗೋವಾದಲ್ಲಿ 2026ರ ಜನವರಿ 27 ರಿಂದ ಜನವರಿ 30 ರವರೆಗೆ ಆಯೋಜಿಸಲಾಗಿತ್ತು.
ಸಮಾರೋಪದ ನೇಪಥ್ಯದಲ್ಲಿ ಮಾತನಾಡಿದ ಶ್ರೀ ಹರ್ ದೀಪ್ ಸಿಂಗ್ ಪುರಿ, ಭಾರತದ ಇಂಧನ ಕಾರ್ಯತಂತ್ರವು ವೈವಿಧ್ಯೀಕರಣ, ಸ್ಥಿತಿಸ್ಥಾಪಕತ್ವ ಮತ್ತು ಭವಿಷ್ಯದ ದೃಷ್ಟಿಯ ಪರಿವರ್ತನೆಗಳಲ್ಲಿ ನಿರೂಪಿಸಲ್ಪಟ್ಟಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ”ನಾವು ಸತತ ಭೌಗೋಳಿಕ ರಾಜಕೀಯ ಆಘಾತಗಳನ್ನು ಚೆನ್ನಾಗಿ ನಿಭಾಯಿಸಿದ್ದೇವೆ. ಪೂರೈಕೆ ಮೂಲಗಳ ವೈವಿಧ್ಯೀಕರಣ ಮತ್ತು ಶುದ್ಧ ಇಂಧನಗಳ ಕಡೆಗೆ ತ್ವರಿತ ಪರಿವರ್ತನೆಯ ಮೂಲಕ ಪ್ರತಿಯೊಂದು ಸವಾಲನ್ನು ಅವಕಾಶವಾಗಿ ಪರಿವರ್ತಿಸಲಾಗಿದೆ’’ ಎಂದು ಕೇಂದ್ರ ಸಚಿವರು ಹೇಳಿದರು.

ಭಾರತದ ಜಾಗತಿಕ ಸ್ಥಾನವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ಪುರಿ, ದೇಶವು ಇಂದು ಮೂರನೇ ಅತಿದೊಡ್ಡ ಇಂಧನ ಗ್ರಾಹಕ, ನಾಲ್ಕನೇ ಅತಿದೊಡ್ಡ ಸಂಸ್ಕರಣಾಗಾರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಅಗ್ರ ರಫ್ತುದಾರರಲ್ಲಿ ಒಂದಾಗಿದೆ ಎಂದು ಹೇಳಿದರು. ”ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತವು ಇಂಧನದ ಲಭ್ಯತೆ, ಕೈಗೆಟುಕುವಿಕೆ ಮತ್ತು ಸುಸ್ಥಿರತೆಯನ್ನು ಖಾತ್ರಿಪಡಿಸಿಕೊಳ್ಳುವುದನ್ನು ಮುಂದುವರಿಸುತ್ತದೆ" ಎಂದು ಶ್ರೀ ಪುರಿ ಹೇಳಿದರು.
ಸಾಂಪ್ರದಾಯಿಕ ಇಂಧನಗಳಲ್ಲಿ ನಿರಂತರ ಹೂಡಿಕೆಗಳ ಜೊತೆಗೆ ಕಂಪ್ರೆಸ್ಡ್ ಜೈವಿಕ ಅನಿಲ (ಸಿಬಿಜಿ), ಹಸಿರು ಹೈಡ್ರೋಜನ್ ಮತ್ತು ಸ್ಥಳೀಯ ಶುದ್ಧ ಇಂಧನ ತಂತ್ರಜ್ಞಾನಗಳಿಗೆ ಸರ್ಕಾರದ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ಕೇಂದ್ರ ಸಚಿವರು ಒತ್ತಿ ಹೇಳಿದರು. ”ಸಾಂಪ್ರಪ್ರದಾಯಿಕ ಶಕ್ತಿಯು ಅತ್ಯಗತ್ಯವಾಗಿರುತ್ತದೆ, ಆದರೆ ಎಥೆನಾಲ್ ಮಿಶ್ರಣದಿಂದ ಸಿಬಿಜಿ, ಹೈಡ್ರೋಜನ್ ಮತ್ತು ಜೈವಿಕ ಇಂಧನಗಳವರೆಗೆ ನಾವು ಮಾಡುತ್ತಿರುವ ಪ್ರಗತಿಗಳು ಹಸಿರು ಇಂಧನಗಳು ವಿಸ್ತರಿಸುವ ಪಾತ್ರವನ್ನು ವಹಿಸುತ್ತವೆ ಎಂಬ ವಿಶ್ವಾಸವನ್ನು ನಮಗೆ ನೀಡುತ್ತವೆ’’ ಎಂದು ಅವರು ಹೇಳಿದರು.
ಜಾಗತಿಕ ಬೆಲೆ ಆಘಾತಗಳ ಸಮಯದಲ್ಲಿ ಗ್ರಾಹಕರ ಮೇಲಾಗುವ ಪರಿಣಾಮಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ ಸಚಿವರು, ಭಾರತವು ತನ್ನ ನಾಗರಿಕರನ್ನು ಬೆಲೆಗಳ ಏರಿಕೆಯಿಂದ ಯಶಸ್ವಿಯಾಗಿ ರಕ್ಷಿಸಿದೆ ಎಂದು ಹೇಳಿದರು. ”ಜಾಗತಿಕ ಬಿಕ್ಕಟ್ಟನ್ನು ಎಂದಿಗೂ ಗ್ರಾಹಕರಿಗೆ ವರ್ಗಾಯಿಸಲಾಗಿಲ್ಲ. ಭಾರತವು ಇಂದು ವಿಶ್ವದ ಅತ್ಯಂತ ಕಡಿಮೆ ಇಂಧನ ಬೆಲೆಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿಯೂ ಸಹ ನಿರಂತರ ಪೂರೈಕೆಯನ್ನು ಕಾಯ್ದುಕೊಳ್ಳಲಾಗಿದೆ’’ ಎಂದು ಅವರು ಹೇಳಿದರು, ಎಲ್ ಪಿಜಿ ಸೇರಿದಂತೆ ಇಂಧನ ಬೆಲೆಗಳು ಗ್ರಾಹಕರಿಗೆ ಕೈಗೆಟುಕುವಂತೆ ನೋಡಿಕೊಳ್ಳುವಲ್ಲಿ ತೈಲ ಮಾರುಕಟ್ಟೆ ಕಂಪನಿಗಳ ಸಕಾಲಿಕ ಹಸ್ತಕ್ಷೇಪಗಳನ್ನು ಸಚಿವರು ಉಲ್ಲೇಖಿಸಿದರು.

ಸಚಿವರ ನಂತರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಡಾ. ನೀರಜ್ ಮಿತ್ತಲ್, ಭಾರತದ ಯಶೋಗಾಥೆಯನ್ನು ಬೆಂಬಲಿಸಲು ಸರ್ಕಾರದ ನೀಲನಕ್ಷೆಯನ್ನು ಪ್ರಸ್ತುಪಡಿಸಿದರು. ”ಶೇಕಡ 7 ಕ್ಕಿಂತ ಅಧಿಕ ಆರ್ಥಿಕ ಬೆಳವಣಿಗೆಯೊಂದಿಗೆ, ಇಂಧನ ಬೇಡಿಕೆ ತೀವ್ರವಾಗಿ ಹೆಚ್ಚಾಗುತ್ತದೆ. ನಾವು ಎರಡು ಸ್ತಂಭಗಳ ಹೆಚ್ಚಿನ ಗಮನ ಹರಿಸಿದ್ದೇವೆ: ದೇಶೀಯ ಶೋಧನಾ ಕಾರ್ಯ ಮತ್ತು ಉತ್ಪಾದನೆಯನ್ನು ಬಲಪಡಿಸುವುದು ಮತ್ತು ಭಾರತವನ್ನು ಜಗತ್ತಿಗೆ ಸಂಸ್ಕರಿಸಿದ ಉತ್ಪನ್ನಗಳ ವಿಶ್ವಾಸಾರ್ಹ ಪೂರೈಕೆದಾರನ ಸ್ಥಾನಕ್ಕೇರಿಸುವುದು’’ ಎಂದು ಕಾರ್ಯದರ್ಶಿ ಹೇಳಿದರು.
ಸ್ವಾವಲಂಬನೆಯನ್ನು ಹೆಚ್ಚಿಸಲು ಶೋಧ ಕಾರ್ಯವನ್ನು ಜಾಸ್ತಿ ಮಾಡುವುದು ಮತ್ತು ಡ್ರಿಲ್ಲಿಂಗ್ ಸೇರಿದಂತೆ ಅಪ್‌ಸ್ಟ್ರೀಮ್ ಚಟುವಟಿಕೆಯನ್ನು ವೇಗಗೊಳಿಸಲು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಡಾ. ಮಿತ್ತಲ್ ವಿವರಿಸಿದರು. ಮೌಲ್ಯವರ್ಧನೆಯನ್ನು ಗರಿಷ್ಠಗೊಳಿಸಲು ಮತ್ತು ಆಮದುಗಳನ್ನು ತಗ್ಗಿಸಲು ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್‌ಗಳ ಸಂಯೋಜನೆಯ ಬಗ್ಗೆಯೂ ಅವರು ಬಲವಾಗಿ ಪ್ರತಿಪಾದಿಸಿದರು. “ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಉಳಿಯುವ ಜತೆಗೆ ನಾವು ನಮ್ಮ ಮನೆಯ ವ್ಯಾಪ್ತಿಯನ್ನು ನಿರ್ಮಿಸುತ್ತಿದ್ದೇವೆ’’ ಎಂದು ಅವರು ಹೇಳಿದರು.
ಇಂಧನ ಪರಿವರ್ತನೆಯ ಕುರಿತು ಡಾ. ಮಿತ್ತಲ್ ತಂತ್ರಜ್ಞಾನ ಮತ್ತು ಡಿಜಿಟಲೀಕರಣದ ಮಹತ್ವವನ್ನು ಪ್ರಮುಖವಾಗಿ ಉಲ್ಲೇಖಿಸಿದರು. “ಸರಕು ಸಾಗಾಣೆ ಗರಿಷ್ಠಗೊಳಿಸುವುದರಿಂದ ಎಐ ಅಧಾರಿತ ದಕ್ಷತೆಗಳವರೆಗೆ, ತಂತ್ರಜ್ಞಾನವು ವೆಚ್ಚಗಳನ್ನು ತಗ್ಗಿಸಲು ಮತ್ತು ಕಾರ್ಯಾಚರಣೆಯ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಕೇಂದ್ರವಾಗುತ್ತಿದೆ’’ ಎಂದು ಅವರು ಹೇಳಿದರು. 2030 ರ ವೇಳೆಗೆ ಶೇ.5 ರಷ್ಟು ಮಿಶ್ರಣವನ್ನು ಸಾಧಿಸುವ ಗುರಿಯೊಂದಿಗೆ, ಸಿಬಿಜಿಯಲ್ಲಿನ ತನ್ನ ಗುರಿಗಳನ್ನು ತಲುಪುವ ಹಾದಿಯಲ್ಲಿ ಭಾರತವು ಉತ್ತಮ ಹಾದಿಯಲ್ಲಿದೆ ಎಂದು ಅವರು ಹೇಳಿದರು. ಇದಕ್ಕೆ ರಾಜ್ಯಗಳ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ರೈತರ ನೇತೃತ್ವದ ಜೀವರಾಶಿ ಪೂರೈಕೆ ಸರಣಿಗಳು ಬೆಂಬಲ ನೀಡುತ್ತವೆ ಎಂದರು.
ಸಮಾರೋಪ ಗೋಷ್ಠಿಯು ಇಂಧನ ಸುರಕ್ಷತೆ, ಕೈಗೆಟುಕುವಿಕೆ ಮತ್ತು ಸುಸ್ಥಿರತೆಯನ್ನು ಸೇತುವೆ ಮಾಡುವ ವೇದಿಕೆಯಾಗಿ ಭಾರತ ಇಂಧನ ಸಪ್ತಾಹ 2026 ರ ಪಾತ್ರವನ್ನು ಬಲಪಡಿಸಿತು. ಇದೇ ವೇಳೆ ಭಾರತವನ್ನು ವೇಗವಾಗಿ ವಿಕಸನಗೊಳ್ಳುತ್ತಿರುವ ಜಾಗತಿಕ ಇಂಧನ ಆಯಾಮದಲ್ಲಿ ಸ್ಥಿರ, ವಿಶ್ವಾಸಾರ್ಹ ಮತ್ತು ಪ್ರಾಯೋಗಿಕ ನಾಯಕನನ್ನಾಗಿಸಿದೆ.
ಭಾರತ ಇಂಧನ ಸಪ್ತಾಹದ ಕುರಿತು
ಭಾರತ ಇಂಧನ ಸಪ್ತಾಹ ದೇಶದ ಪ್ರಮುಖ ಜಾಗತಿಕ ಇಂಧನ ವೇದಿಕೆಯಾಗಿದ್ದು, ಸುರಕ್ಷಿತ, ಸುಸ್ಥಿರ ಮತ್ತು ಕೈಗೆಟುಕುವ ಇಂಧನ ಭವಿಷ್ಯದತ್ತ ಪ್ರಗತಿಯನ್ನು ವೇಗಗೊಳಿಸಲು ಸರ್ಕಾರಿ ನಾಯಕರು, ಉದ್ಯಮ ಕಾರ್ಯನಿರ್ವಾಹಕರು ಮತ್ತು ನಾವೀನ್ಯಕಾರರನ್ನು ಒಗೂಡಿಸುತ್ತದೆ. ತಟಸ್ಥ ಅಂತಾರಾಷ್ಟ್ರೀಯ ವೇದಿಕೆಯಾಗಿ, ಐಇಡಬ್ಲೂ ಹೂಡಿಕೆ, ನೀತಿ ಜೋಡಣೆ ಮತ್ತು ಜಾಗತಿಕ ಇಂಧನ ಆಯಾಮವನ್ನು ರೂಪಿಸುವ ತಾಂತ್ರಿಕ ಸಹಯೋಗವನ್ನು ರೂಪಿಸುತ್ತದೆ.
*****
(रिलीज़ आईडी: 2220805)
आगंतुक पटल : 13