ಹಣಕಾಸು ಸಚಿವಾಲಯ
azadi ka amrit mahotsav

ಕೃತಕ ಬುದ್ಧಿಮತ್ತೆಯಲ್ಲಿ ದುರ್ಬಲ ಅವಲಂಬನೆಗಳನ್ನು ತಪ್ಪಿಸಲು ಭಾರತವು ಬಂಡವಾಳ-ತೀವ್ರವಾದ ಮುಂಚೂಣಿ ಮಾದರಿಗಳಿಗಿಂತ ವಿಕೇಂದ್ರೀಕೃತ, ಅನ್ವಯಿಕ-ಚಾಲಿತ ವ್ಯವಸ್ಥೆಗಳಿಗೆ ಆದ್ಯತೆ ನೀಡಬೇಕು: ಆರ್ಥಿಕ ಸಮೀಕ್ಷೆ


ಆರ್ಥಿಕ ಸಮೀಕ್ಷೆ 2025-26 ಮಿತವ್ಯಯದ, ವಾಸ್ತವಿಕ ಜಗತ್ತಿನ ನಿಯೋಜನೆಯನ್ನು ವಿಸ್ತಾರ ವ್ಯಾಪ್ತಿಯಲ್ಲಿ ಪ್ರತಿಪಾದಿಸುತ್ತದೆ

ಭಾರತದ ವಿಧಾನವು ರಚನಾತ್ಮಕ ವಾಸ್ತವತೆಗಳಾದ ಬಂಡವಾಳ, ಇಂಧನ, ಸಾಂಸ್ಥಿಕ ಸಾಮರ್ಥ್ಯ ಮತ್ತು ಮಾರುಕಟ್ಟೆಯ ಆಳವಾದ ಅರಿವಿನೊಂದಿಗೆ ಕೃತಕ ಬುದ್ಧಿಮತ್ತೆ (ಎ.ಐ.) ಅಳವಡಿಕೆಯನ್ನು ಜೋಡಿಸುವ ಉದ್ದೇಶವನ್ನು ಹೊಂದಿದೆ.

ಸ್ಥಳೀಯ ಸೃಜನಶೀಲತೆಯನ್ನು ದುರ್ಬಲಗೊಳಿಸದೆ ಹಂಚಿಕೆಯ ಮೂಲಸೌಕರ್ಯ, ಮಾನದಂಡಗಳು, ಸರ್ಕಾರಿ ಚೌಕಟ್ಟುಗಳು ಮತ್ತು ನಿಧಿಯನ್ನು ಒದಗಿಸುವ ಮೂಲಕ ರಾಷ್ಟ್ರೀಯ ಎ.ಐ. ಮಿಷನ್ ಎ.ಐ.-ಪರಿಹಾರಗಳನ್ನು ವಿಸ್ತರಿಸಬಹುದು.

ಸ್ಥಳೀಯ ನಾವೀನ್ಯಕಾರರು, ಪುರಸಭೆ ಸಂಸ್ಥೆಗಳು, ನವೋದ್ಯಮಗಳು ( ಸ್ಟಾರ್ಟ್-ಅಪ್‌ಗಳು) ಮತ್ತು ಸಮುದಾಯ ಸಂಸ್ಥೆಗಳು ತಕ್ಷಣದ ಮತ್ತು ಸಂದರ್ಭೋಚಿತ ಸಮಸ್ಯೆಗಳನ್ನು ಪರಿಹರಿಸಲು ಎ.ಐ. ಯನ್ನು ನಿಯೋಜಿಸುತ್ತವೆ.

ಭಾಷೆ ಮತ್ತು ಧ್ವನಿ-ಮೊದಲ ಎ.ಐ. ವ್ಯವಸ್ಥೆಗಳು ಐತಿಹಾಸಿಕವಾಗಿ ಹೊರಗಿಡಲಾದ ಜನಸಂಖ್ಯೆಗೆ ಡಿಜಿಟಲ್ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುತ್ತವೆ.

2025-26ರ ಆರ್ಥಿಕ ಸಮೀಕ್ಷೆಯು ಭಾರತದ ಎ.ಐ. ಪರಿಸರ ವ್ಯವಸ್ಥೆಯ ಮುಂದಿನ ಹಾದಿಯನ್ನು ತೋರಿಸುತ್ತದೆ

ಪ್ರಕಟಣಾ ದಿನಾಂಕ: 29 JAN 2026 2:06PM by PIB Bengaluru

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ (ಕಾರ್ಪೊರೇಟ್ )  ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2025-26ರ ಆರ್ಥಿಕ ಸಮೀಕ್ಷೆಯು, ಕೃತಕ ಬುದ್ಧಿಮತ್ತೆಯನ್ನು ಪ್ರತಿಷ್ಠೆಯ ತಂತ್ರಜ್ಞಾನ ಓಟಕ್ಕಿಂತ ಹೆಚ್ಚಾಗಿ ಆರ್ಥಿಕ ತಂತ್ರವೆಂದು ಗುರುತಿಸುತ್ತದೆ. ಈ ಸಮೀಕ್ಷೆಯು ಕೃತಕ ಬುದ್ಧಿಮತ್ತೆಯನ್ನು ಜಾಗತಿಕ ಆರ್ಥಿಕತೆಯನ್ನು ಮರುರೂಪಿಸುತ್ತಿರುವ ರೀತಿಯನ್ನು ಪರಿಶೀಲಿಸುತ್ತದೆ ಮತ್ತು ತ್ವರಿತ ತಾಂತ್ರಿಕ ಬದಲಾವಣೆ ಮತ್ತು ನಿರಂತರ ಅನಿಶ್ಚಿತತೆಯಿಂದ ಗುರುತಿಸಲ್ಪಟ್ಟ ಪರಿಸರದಲ್ಲಿ ಭಾರತಕ್ಕೆ ಪ್ರಾಯೋಗಿಕ ಕಾರ್ಯತಂತ್ರವನ್ನು ವಿವರಿಸುತ್ತದೆ.

ಆರ್ಥಿಕ ಸಮೀಕ್ಷೆಯು ತನ್ನ ಮೀಸಲಾದ ಅಧ್ಯಾಯದಲ್ಲಿ ಭಾರತದಲ್ಲಿ ಎ.ಐ. ನಿಯೋಜನೆಯು ಆರ್ಥಿಕವಾಗಿ ಆಧಾರವಾಗಿರುವವುದರ ಜೊತೆಗೆ  ಸಾಮಾಜಿಕವಾಗಿ ಸ್ಪಂದಿಸುವಂತಹದ್ದಾಗಿರಬೇಕು ಎಂದು ಎತ್ತಿ ತೋರಿಸುತ್ತದೆ. ಸಹಯೋಗ ಮತ್ತು ಹಂಚಿಕೆಯ ನಾವೀನ್ಯತೆಯನ್ನು ಉತ್ತೇಜಿಸಲು ಮುಕ್ತ ಮತ್ತು ಪರಸ್ಪರ ಕಾರ್ಯಸಾಧ್ಯ ವ್ಯವಸ್ಥೆಗಳಲ್ಲಿ ಆಧಾರವಾಗಿರುವ ತಳಮಟ್ಟದ, ಬಹು ವಲಯ-ನಿರ್ದಿಷ್ಟ ವಿಧಾನಗಳಿಗೆ ಇದು ಒಂದು ಅವಕಾಶವನ್ನು ನೀಡುತ್ತದೆ. ಇದು ಮಾನವ ಬಂಡವಾಳ, ದತ್ತಾಂಶ ವೈವಿಧ್ಯತೆ ಮತ್ತು ಸಾಂಸ್ಥಿಕ ಸಮನ್ವಯದಲ್ಲಿ ಭಾರತದ ಸಾಮರ್ಥ್ಯಗಳೊಂದಿಗೆ ಹೊಂದಿಕೆಯಾಗುತ್ತದೆ.

ಭಾರತದಲ್ಲಿ ಎ.ಐ. ಗೆ ಬೇಡಿಕೆ ಹೆಚ್ಚಾಗಿ ಊಹಾತ್ಮಕ ಮುಂಚೂಣಿ ಬಳಕೆಗಳಿಗಿಂತ ವಾಸ್ತವಿಕ ಸಮಸ್ಯೆಗಳಿಂದ ಹೊರಹೊಮ್ಮುತ್ತಿದೆ. ಆರೋಗ್ಯ ರಕ್ಷಣೆ, ಕೃಷಿ, ನಗರ ನಿರ್ವಹಣೆ, ಶಿಕ್ಷಣ, ವಿಪತ್ತು ಸನ್ನದ್ಧತೆ ಮತ್ತು ಸಾರ್ವಜನಿಕ ಆಡಳಿತದಾದ್ಯಂತ ಉದಾಹರಣೆಗಳನ್ನು ಉಲ್ಲೇಖಿಸಿ, ಸ್ಥಳೀಯ ಹಾರ್ಡ್‌ವೇರ್‌ನಲ್ಲಿ ಕಾರ್ಯನಿರ್ವಹಿಸುವ ಮತ್ತು ಕಡಿಮೆ-ಸಂಪನ್ಮೂಲ ಸೆಟ್ಟಿಂಗ್‌ಗಳಲ್ಲಿ ಕಾರ್ಯನಿರ್ವಹಿಸುವ ಎ.ಐ. ವ್ಯವಸ್ಥೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಸಮೀಕ್ಷೆಯು ಉಲ್ಲೇಖಿಸುತ್ತದೆ. ಆರಂಭಿಕ ರೋಗ ತಪಾಸಣೆ ಮತ್ತು ನಿಖರತೆಯ ನೀರಿನ ನಿರ್ವಹಣೆಯಿಂದ ರೈತ ಮಾರುಕಟ್ಟೆ ಪ್ರವೇಶ, ತರಗತಿ ವಿಶ್ಲೇಷಣೆ ಮತ್ತು ಪ್ರಾದೇಶಿಕ ಭಾಷಾ ಇಂಟರ್ಫೇಸ್‌ಗಳವರೆಗೆ, ಎ.ಐ. ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ರಚನಾತ್ಮಕ ನ್ಯೂನತೆಗಳನ್ನು ಸರಿದೂಗಿಸುತ್ತದೆ. ಈ ಬಳಕೆಯು ಭಾರತದ ಆರ್ಥಿಕ ಮತ್ತು ಸಾಮಾಜಿಕ ಭೂದೃಶ್ಯಕ್ಕೆ ಅನುಗುಣವಾಗಿ ಮಿತವ್ಯಯದ, ಅಪ್ಲಿಕೇಶನ್-ಕೇಂದ್ರಿತ ಎ.ಐ. ಪರಿಹಾರಗಳಿಗೆ ದೊಡ್ಡ ಮತ್ತು ಸ್ಕೇಲೆಬಲ್ ಮಾರುಕಟ್ಟೆಯನ್ನು ಸೂಚಿಸುತ್ತದೆ.

ಸಮೀಕ್ಷೆಯು ಬಂಡವಾಳ ಲಭ್ಯತೆ, ಇಂಧನ ನಿರ್ಬಂಧಗಳು, ಸಾಂಸ್ಥಿಕ ಸಾಮರ್ಥ್ಯ ಮತ್ತು ಮಾರುಕಟ್ಟೆಯ ಬಗ್ಗೆ  ಆಳವಾದಂತಹ ತಿಳುವಳಿಕೆಯ ಜೊತೆಗೆ ಭಾರತದ ರಚನಾತ್ಮಕ ವಾಸ್ತವಗಳೊಂದಿಗೆ ಎ.ಐ. ಅಳವಡಿಕೆಯನ್ನು ಜೋಡಿಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ, ಇದರಿಂದಾಗಿ ತಂತ್ರಜ್ಞಾನದ ಆಯ್ಕೆಗಳು ದುರ್ಬಲವಾದ ಅವಲಂಬನೆಗಳನ್ನು ಸೃಷ್ಟಿಸುವ ಬದಲು ದೀರ್ಘಕಾಲೀನ ಬೆಳವಣಿಗೆಯನ್ನು ಬಲಪಡಿಸುತ್ತವೆ.

ಜಾಗತಿಕ ಎ.ಐ. ಅಭಿವೃದ್ಧಿಯು ಕಂಪ್ಯೂಟ್, ಹಣಕಾಸು, ಡೇಟಾ ಮತ್ತು ಮಾನದಂಡಗಳನ್ನು ನಿಗದಿಪಡಿಸುವ ಶಕ್ತಿಯ ಲಭ್ಯತೆಯಲ್ಲಿನ ರಚನಾತ್ಮಕ ಅಸಮಪಾರ್ಶ್ವಗಳಿಂದ ರೂಪುಗೊಳ್ಳುತ್ತಿರುವುದರಿಂದ, ವಾಸ್ತವಿಕ ನೀತಿಯನ್ನು ರೂಪಿಸಲು ಅಸಮತೋಲನಗಳು ಅತ್ಯಗತ್ಯವೆಂದು ಸಮೀಕ್ಷೆಯು ಗುರುತಿಸುತ್ತದೆ. ಈ ಸಂದರ್ಭದಲ್ಲಿ, ಆದ್ಯತೆಯ ಮಾರ್ಗವು ದೊಡ್ಡ, ಕೇಂದ್ರೀಕೃತ ವ್ಯವಸ್ಥೆಗಳಿಗಿಂತ ವಿಕೇಂದ್ರೀಕೃತ ಮತ್ತು ಅಪ್ಲಿಕೇಶನ್-ಚಾಲಿತ ಎ.ಐ.ಯನ್ನು ಒತ್ತಿಹೇಳುತ್ತದೆ. ವಲಯಗಳಲ್ಲಿ ನಿಯೋಜಿಸಲಾದ ಸಣ್ಣ, ಕಾರ್ಯ-ನಿರ್ದಿಷ್ಟ ಮಾದರಿಗಳು ನಾವೀನ್ಯತೆಯು ಹೆಚ್ಚು ಸಮವಾಗಿ ಹರಡಲು, ಸಂಸ್ಥೆಗಳಿಗೆ ಪ್ರವೇಶ ಅಡೆತಡೆಗಳನ್ನು ಕಡಿಮೆ ಮಾಡಲು ಮತ್ತು ಭಾರತದ ಆರ್ಥಿಕ ಭೂದೃಶ್ಯದ ವೈವಿಧ್ಯತೆಗೆ ಉತ್ತಮವಾಗಿ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ. ಸಮೀಕ್ಷೆಯು ಮುಕ್ತ ಮತ್ತು ಪರಸ್ಪರ ಕಾರ್ಯನಿರ್ವಹಿಸಬಹುದಾದ ಎ.ಐ. ವ್ಯವಸ್ಥೆಗಳನ್ನು ಬಲ ವರ್ಧಕಎಂದು ಕರೆಯುತ್ತದೆ.

ಎ.ಐ.-ಯುಗದಲ್ಲಿ ಶಿಕ್ಷಣ ಮತ್ತು ತರಬೇತಿ ಆದ್ಯತೆಗಳ ಕುರಿತು ಮತ್ತಷ್ಟು ವಿವರಿಸುತ್ತಾ, ಸಮೀಕ್ಷೆಯು ಕಿರಿದಾದ ತಾಂತ್ರಿಕ ವಿಶೇಷತೆಯಿಂದ ತಾರ್ಕಿಕತೆ, ಓದುವಿಕೆ, ತೀರ್ಪು, ಸಂವಹನ ಮತ್ತು ಹೊಂದಿಕೊಳ್ಳುವಿಕೆಯಂತಹ ಅಗತ್ಯ ಮೂಲಭೂತ ಸಾಮರ್ಥ್ಯಗಳ ಕಡೆಗೆ ಬದಲಾಯಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಇದು ಎ.ಐ. ಯನ್ನು ಕೆಲಸದ ಸ್ಥಳಗಳು ಮತ್ತು ಸಾರ್ವಜನಿಕ ವ್ಯವಸ್ಥೆಗಳಲ್ಲಿ ಸಂಯೋಜಿಸುತ್ತದೆ.

ಎ.ಐ.ಯ ದತ್ತಾಂಶ ಆಡಳಿತವನ್ನು ಜೋಡಿಸುತ್ತ, ಸಮೀಕ್ಷೆಯು ಅದನ್ನು ಪ್ರತ್ಯೇಕತೆಗಿಂತ ಹೊಣೆಗಾರಿಕೆ ಮತ್ತು ಮೌಲ್ಯ ಸೃಷ್ಟಿಯ ಸುತ್ತಲೂ ರೂಪಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಜಾಗತಿಕ ಪರಸ್ಪರ ಕಾರ್ಯಸಾಧ್ಯತೆಯನ್ನು ಕಾಪಾಡಿಕೊಳ್ಳುವಾಗ ದೇಶೀಯವಾಗಿ ಆರ್ಥಿಕ ಪ್ರಯೋಜನಗಳು ಸಂಗ್ರಹವಾಗುವುದನ್ನು ಖಚಿತಪಡಿಸಿಕೊಳ್ಳಲು ಪಾರದರ್ಶಕತೆ ಮತ್ತು ಲೆಕ್ಕಪರಿಶೋಧನೆಯೊಂದಿಗೆ ಸಂಯೋಜಿಸಲ್ಪಟ್ಟ ವಿಶ್ವಾಸಾರ್ಹ ದತ್ತಾಂಶ ಹರಿವುಗಳು ಕಠಿಣ ಸ್ಥಳೀಕರಣಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ನಿಯಂತ್ರಕ ವಿನ್ಯಾಸವು ಸೂಚಿತ ನಿಯಂತ್ರಣಕ್ಕಿಂತ ಪ್ರಮಾಣಾನುಗುಣ, ಅಪಾಯ-ಆಧಾರಿತ ವಿಧಾನಗಳನ್ನು ಬೆಂಬಲಿಸುತ್ತದೆ. ಸಂಭಾವ್ಯ ಹಾನಿ ಮತ್ತು ವ್ಯವಸ್ಥಿತ ಪ್ರಾಮುಖ್ಯತೆಯೊಂದಿಗೆ ಬಾಧ್ಯತೆಗಳನ್ನು ಅಳೆಯುತ್ತದೆ, ವಿಶಾಲ ಆರ್ಥಿಕ ಮತ್ತು ಸಾಮಾಜಿಕ ಉದ್ದೇಶಗಳೊಂದಿಗೆ ಖಾಸಗಿ ಪ್ರೋತ್ಸಾಹಕಗಳನ್ನು ಜೋಡಿಸುವಾಗ ನಾವೀನ್ಯತೆಯು ಮುಂದುವರಿಯಲು ಅನುವು ಮಾಡಿಕೊಡುತ್ತದೆ.

ಭಾರತದ ಎ.ಐ. ಕಾರ್ಯತಂತ್ರವನ್ನು ಅಕಾಲಿಕ ಲಾಕ್-ಇನ್ ಅಥವಾ ನಿಯಂತ್ರಕ ಅತಿಕ್ರಮಣವನ್ನು ತಪ್ಪಿಸಲು ಎಚ್ಚರಿಕೆಯಿಂದ ಸಂದರ್ಭಕ್ಕೆ ಅನುಗುಣವಾಗಿ ಅನುಕ್ರಮಗೊಳಿಸಬೇಕು ಎಂಬುದನ್ನು ಸಮೀಕ್ಷೆಯು ಪುನರುಚ್ಚರಿಸುತ್ತದೆ, ಇದರಿಂದಾಗಿ ಮೊದಲು ಸಮನ್ವಯವನ್ನು ನಿರ್ಮಿಸುವುದು, ನಂತರ ಸಾಮರ್ಥ್ಯ ಮತ್ತು ಕೊನೆಯದಾಗಿ ಹೊಣೆಗಾರಿಕೆ ವಿಧಿಸುವ  ನೀತಿ ಹತೋಟಿ, ಸಂಸ್ಥೆಗಳು ಮತ್ತು ಮಾರುಕಟ್ಟೆಗಳು ಸಹ-ವಿಕಸನಗೊಳ್ಳಲು ಅನುವು ಮಾಡಿಕೊಡುತ್ತದೆ.

ಅಧ್ಯಾಯದಲ್ಲಿನ ಸಮೀಕ್ಷೆಯು ಭಾರತದ ಆರ್ಥಿಕ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ, ಎ.ಐ. ಗೆ ಅಭಿವೃದ್ಧಿ-ಆಧಾರಿತ ವಿಧಾನ, ಎ.ಐ. ಗಾಗಿ ಮಾನವ ಬಂಡವಾಳದ ಪಾತ್ರ, ಆಡಳಿತ, ಸಾಂಸ್ಥಿಕ ವಾಸ್ತುಶಿಲ್ಪ ಮತ್ತು ದತ್ತಾಂಶದೊಂದಿಗೆ ಅಪಾಯಗಳು ಮತ್ತು ಸುರಕ್ಷೆ, ಹಾಗು ಭಾರತದ ಎ.ಐ. ಭವಿಷ್ಯಕ್ಕಾಗಿ ಹಂತ ಹಂತದ ಮಾರ್ಗಸೂಚಿಯನ್ನು ವಿವರಿಸುತ್ತದೆ.

ಕೃತಕ ಬುದ್ಧಿಮತ್ತೆ ಪರಿಸರ ವ್ಯವಸ್ಥೆ

ದೇಶಗಳು, ಸಂಸ್ಥೆಗಳು, ಸಾಮರ್ಥ್ಯಗಳು ಮತ್ತು ಮೌಲ್ಯ ಸರಪಳಿಯ ಹಂತಗಳಲ್ಲಿ ಎ.ಐ. ಪರಿಸರ ವ್ಯವಸ್ಥೆಯಲ್ಲಿ ಅಸಮತೆ ಮತ್ತು ವ್ಯಾಪಾರ-ವಹಿವಾಟುಗಳ ಕುರಿತು ಸಮೀಕ್ಷೆಯು ಚರ್ಚಿಸುತ್ತದೆ. ಈ ಅಸಮತೆಗಳು ರಚನಾತ್ಮಕ ಅನಾನುಕೂಲತೆಯನ್ನು ಸೂಚಿಸುವುದಿಲ್ಲ ಆದರೆ ವ್ಯಾಪಾರ-ವಹಿವಾಟುಗಳ ಬಗ್ಗೆ ಗಮನದಲ್ಲಿಟ್ಟುಕೊಂಡು ಎ.ಐ. ಯಿಂದ ಆರ್ಥಿಕ ಮತ್ತು ಸಾಮಾಜಿಕ ಆದಾಯವನ್ನು ಗರಿಷ್ಠಗೊಳಿಸಲು ಕಾರ್ಯಸಾಧ್ಯ ಮತ್ತು ಸುಸ್ಥಿರ ಎ.ಐ. ಕಾರ್ಯತಂತ್ರವನ್ನು ರೂಪಿಸಬೇಕಾದ ನಿರ್ಬಂಧಗಳನ್ನು ಗುರುತಿಸುತ್ತದೆ.

ಮುಂಚೂಣಿ ಮಾದರಿ ಅಭಿವೃದ್ಧಿ ಮತ್ತು ಅಪ್ಲಿಕೇಶನ್-ನೇತೃತ್ವದ ಅಭಿವೃದ್ಧಿಯ ನಡುವಿನ ಸಾಮರ್ಥ್ಯದ ಅಸಮತೆಯು ಭಾರತವು ದೇಶೀಯ ಆರ್ಥಿಕ ಆದ್ಯತೆಗಳೊಂದಿಗೆ ಹೊಂದಿಕೆಯಾಗುವ ಡೊಮೇನ್-ನಿರ್ದಿಷ್ಟ ಎ.ಐ. ವ್ಯವಸ್ಥೆಗಳ ಕಡೆಗೆ ಹೆಚ್ಚು ಪರಿಣಾಮಕಾರಿಯಾಗಿ ಸಂಪನ್ಮೂಲಗಳನ್ನು ನಿಯೋಜಿಸಲು ಕರೆ ನೀಡುತ್ತದೆ. ಬಂಡವಾಳ-ಕಾರ್ಮಿಕ ಹೊಂದಾಣಿಕೆಯು ವ್ಯಾಪ್ತಿ ಅಥವಾ ಪ್ರಮಾಣದ ವಿರುದ್ಧ ಸೇರ್ಪಡೆಯ ಕುರಿತಾದ ಚರ್ಚೆಯನ್ನು ವಿವರಿಸುತ್ತದೆ, ಇದು ಸವಾಲನ್ನು ಗುರುತಿಸುತ್ತದೆ - ಕಾರ್ಮಿಕ ವೃದ್ಧಿಯನ್ನು ಸುಗಮಗೊಳಿಸಲು ಎ.ಐ.ಯ ಪ್ರಸರಣವನ್ನು ಹೇಗೆ ವೇಗಗೊಳಿಸುವುದು, ಸ್ಕೇಲಿಂಗ್‌ಗಿಂತ ಅಂತರ್ಗತ ವಿಧಾನವನ್ನು ಆರಿಸಿಕೊಳ್ಳುವುದು ಹೇಗೆ ಎಂಬುದನ್ನು ಹೇಳುತ್ತದೆ.

ಮುಕ್ತ ಅಥವಾ ಸ್ವಾಮ್ಯದ ಮಾದರಿಗಳ ವೆಚ್ಚ, ನಿಯಂತ್ರಣ, ಅವಲಂಬನೆಯು ಎ.ಐ. ಮಾದರಿಗಳ ಮಾಲೀಕತ್ವ ಮತ್ತು ಆಡಳಿತದ ಮೇಲೆ ಚಿಂತಿಸುತ್ತದೆ. ದೇಶೀಯ ದತ್ತಾಂಶ ಮತ್ತು ಬೌದ್ಧಿಕ ಆಸ್ತಿಯಿಂದ ರಚಿಸಲಾದ ಆರ್ಥಿಕ ಮೌಲ್ಯವು ವಿದೇಶದಲ್ಲಿ ಸೆರೆಹಿಡಿಯಲ್ಪಡುವ ಬದಲು ಭಾರತದೊಳಗೆ ಸಂಗ್ರಹವಾಗುವುದನ್ನು ಖಚಿತಪಡಿಸಿಕೊಳ್ಳುವಾಗ ಹಂಚಿಕೆಯ ನಾವೀನ್ಯತೆಯನ್ನು ಸದುಪಯೋಗಪಡಿಸಿಕೊಳ್ಳುವ ಮುಕ್ತತೆ ಮತ್ತು ಉಸ್ತುವಾರಿಯ ನಡುವೆ ಸಮತೋಲನವನ್ನು ಸಾಧಿಸುವ ಅಗತ್ಯವನ್ನು ಸಮೀಕ್ಷೆಯು ಒತ್ತಿಹೇಳುತ್ತದೆ. ಕೇಂದ್ರೀಕೃತ ಪ್ರಮಾಣ ಮತ್ತು ವಿತರಣಾ ದಕ್ಷತೆಯ ನಡುವಿನ ವಿನಿಮಯವು ಸೀಮಿತ ಹಾರ್ಡ್‌ವೇರ್ ಮತ್ತು ವಿಕೇಂದ್ರೀಕೃತ ಕಂಪ್ಯೂಟ್ ನೆಟ್‌ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸಬಹುದಾದ ಸಣ್ಣ, ಕಾರ್ಯ-ನಿರ್ದಿಷ್ಟ ಮಾದರಿಗಳಿಗೆ ಹೆಚ್ಚು ಒತ್ತು ಕೊಡುತ್ತದೆ. ಬಾಹ್ಯ ಆಘಾತಗಳಿಂದ ನಿರ್ಣಾಯಕ ಕಾರ್ಯಗಳಿಗೆ ನಿರೋಧಕ ಶಕ್ತಿಯನ್ನು ಒದಗಿಸುವಾಗ  ಸಾಮರ್ಥ್ಯವನ್ನು ಹೆಚ್ಚಿಸುವಾಗ ಮುಕ್ತತೆಯನ್ನು ಕಾಪಾಡಿಕೊಳ್ಳಲು ಇದು ಕಾರ್ಯತಂತ್ರದ ಸ್ವಾಯತ್ತತೆ ಮತ್ತು ಜಾಗತಿಕ ನಾವೀನ್ಯತೆ ಜಾಲಗಳೊಂದಿಗೆ ನಿರಂತರ ಏಕೀಕರಣದ ಮೇಲೆ ಒತ್ತು ನೀಡುತ್ತದೆ.

ಭಾರತದಲ್ಲಿ ಸ್ಥಳೀಯ ದಕ್ಷತೆ ಮತ್ತು ಮಿತವ್ಯಯದ  ಕೃತಕ ಬುದ್ಧಿಮತ್ತೆ

ಭಾರತದ ಎ.ಐ. ಕಥೆ ಈಗಾಗಲೇ ತಳಮಟ್ಟದಿಂದ ವಿಕಸನಗೊಳ್ಳುತ್ತಿದೆ. ಸ್ಥಳೀಯ ನಾವೀನ್ಯಕಾರರು, ಪುರಸಭೆ ಸಂಸ್ಥೆಗಳು, ನವೋದ್ಯಮಗಳು ಮತ್ತು ಸಮುದಾಯ ಸಂಸ್ಥೆಗಳು ತಾವು ವಾಸಿಸುವ ಸಮುದಾಯಗಳಿಗೆ ತಕ್ಷಣದ ಮತ್ತು ಸಂದರ್ಭೋಚಿತವಾದ ಸಮಸ್ಯೆಗಳನ್ನು ಪರಿಹರಿಸಲು ಎ.ಐ. ಯನ್ನು ನಿಯೋಜಿಸುತ್ತಿವೆ. ಆರೋಗ್ಯ, ಕೃಷಿ, ಶಿಕ್ಷಣ, ನಗರ ನಿರ್ವಹಣೆ ಮತ್ತು ವಿಪತ್ತು ಸಿದ್ಧತೆಯಲ್ಲಿ ಎ.ಐ. ಬಹು-ವಲಯ ಅನ್ವಯಿಕೆಗಳನ್ನು ಹೊಂದಿದೆ.

• ದಕ್ಷಿಣ ಭಾರತದಲ್ಲಿ ಆಕ್ರಮಣಶೀಲವಲ್ಲದ ಎ.ಐ.-ಸಕ್ರಿಯಗೊಳಿಸಿದ ಥರ್ಮಲ್ ಇಮೇಜಿಂಗ್ ಪರಿಕರಗಳು ಕಡಿಮೆ ಸಂಪನ್ಮೂಲ ಸೆಟ್ಟಿಂಗ್‌ಗಳಲ್ಲಿ ಮುಂಚಿತವಾಗಿಯೇ ಸ್ತನ ಕ್ಯಾನ್ಸರ್ ತಪಾಸಣೆಯನ್ನು ನಡೆಸಬಲ್ಲವು

• ಪೋರ್ಟಬಲ್ ಮತ್ತು ಕಡಿಮೆ-ವೆಚ್ಚದ ಎ.ಐ.-ಸಕ್ರಿಯಗೊಳಿಸಿದ ಮುಖ ಕ್ಯಾನ್ಸರ್ ತಪಾಸಣೆ ಸಾಧನಗಳು ಪೂರ್ವ ಭಾರತದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಲು  ಸಹಾಯ ಮಾಡುತ್ತಿವೆ.

• ಎ.ಐ.-ಸಕ್ರಿಯಗೊಳಿಸಿದ ಕೃಷಿ ಜಾಲಗಳು 12 ರಾಜ್ಯಗಳಾದ್ಯಂತ 1.8 ಮಿಲಿಯನ್ ರೈತರಿಗೆ ಮಾರುಕಟ್ಟೆ ಪ್ರವೇಶ/ಲಭ್ಯತೆ , ಬೆಲೆ ಆವಿಷ್ಕಾರ ಮತ್ತು ಲಾಜಿಸ್ಟಿಕಲ್ ದಕ್ಷತೆಯನ್ನು ಸುಧಾರಿಸುತ್ತಿವೆ.

• ಎ.ಐ. ಅಳವಡಿಕೆಗೆ ಭಾರತದ ವಿಧಾನವು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾಷಿಣಿ ಮತ್ತು ಐ.ಐ.ಟಿ.  ಮದ್ರಾಸ್ ಅಭಿವೃದ್ಧಿಪಡಿಸಿದ ಎ.ಐ.4ಭಾರತ್ (AI4Bharat) ನಂತಹ ಉಪಕ್ರಮಗಳನ್ನು ಸಹ ಒಳಗೊಂಡಿದೆ. ಭಾಷೆ ಮತ್ತು ಧ್ವನಿ-ಮೊದಲು ಎ.ಐ. ವ್ಯವಸ್ಥೆಗಳು ಡಿಜಿಟಲ್ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಿವೆ.

ಸ್ಥಳೀಯ ಭಾಷೆಗಳಲ್ಲಿ ಸಂವಹನಗಳನ್ನು ಮುಂದುವರೆಸುವುದು ಮತ್ತು ಕಡಿಮೆ-ವೆಚ್ಚದ ಸಾಧನಗಳ ಮೂಲಕ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು, ಹಾಗು ಅಂತಹ ಮಿತವ್ಯಯದ ಎ.ಐ. ಮಾರ್ಗಗಳನ್ನು/ವ್ಯವಸ್ಥೆಗಳನ್ನು ವಿಕೇಂದ್ರೀಕೃತ, ಸಮಸ್ಯೆ-ಪೀಡಿತ ಮತ್ತು ಸ್ಥಳೀಯ ಅಗತ್ಯಗಳಲ್ಲಿ ಅಳವಡಿಸಿಕೊಳ್ಳುವುದರಿಂದ ಅವು   ವ್ಯಾಪಕ  ಪ್ರಮಾಣದಲ್ಲಿ ಪ್ರಯೋಜನವನ್ನು ಒದಗಿಸುತ್ತವೆ.  

ರಾಷ್ಟ್ರೀಯ ಎ.ಐ. ಮಿಷನ್ ಹಂಚಿಕೆಯ ಮೂಲಸೌಕರ್ಯ, ಮಾನದಂಡಗಳು, ಆಡಳಿತ ಚೌಕಟ್ಟುಗಳು ಮತ್ತು ಸ್ಥಳೀಯ ಸೃಜನಶೀಲತೆಯನ್ನು ದುರ್ಬಲಗೊಳಿಸದೆ ನಿಧಿಯನ್ನು ಒದಗಿಸುವ ಮೂಲಕ ವೈವಿಧ್ಯಮಯ ಎ.ಐ.-ಪರಿಹಾರಗಳನ್ನು ನೀಡಲು  ಸಹಾಯ ಮಾಡುತ್ತದೆ.

ಎ.ಐ. ಗೆ ಅಭಿವೃದ್ಧಿ ಆಧಾರಿತ ವಿಧಾನ

ಭಾರತದ ಸ್ವಂತ ಸ್ಥಳೀಯ ಎ.ಐ. ಅಭಿವೃದ್ಧಿಯ ಅಗತ್ಯವನ್ನು ಸಮೀಕ್ಷೆಯು  ಉಲ್ಲೇಖಿಸುತ್ತದೆ. ಎ.ಐ. ಪರಿಸರ ವ್ಯವಸ್ಥೆಯು ಸಾಕಷ್ಟು ಕಿರಿದಾಗಿ ಉಳಿದಿರುವುದು ಭಾರತವು ತನ್ನ ಕಾರ್ಯಪಡೆಗೆ ಹೆಚ್ಚು ಮೌಲ್ಯ-ಸೃಷ್ಟಿಸುವ ಮತ್ತು ಗೌರವಾನ್ವಿತ ಉದ್ಯೋಗಾವಕಾಶವನ್ನು ರೂಪಿಸಲು ಒಂದು ಅವಕಾಶವನ್ನು ಸೃಷ್ಟಿಸುತ್ತದೆ.

ಇದಲ್ಲದೆ, ಎ.ಐ. ಮೂಲಸೌಕರ್ಯ ವಿಸ್ತರಣೆಯ ದೀರ್ಘಾವಧಿಯ ವೇಗವನ್ನು ರೂಪಿಸುವಲ್ಲಿ ಅರ್ಥಪೂರ್ಣ ಪಾತ್ರವನ್ನು ವಹಿಸಲು ಜಾಗತಿಕ ಜಿ.ಪಿ.ಯು. ಪೂರೈಕೆ ಸರಪಳಿಗಳಲ್ಲಿನ ಬೆಳವಣಿಗೆಗಳನ್ನು ಸಮೀಕ್ಷೆಯು ಎತ್ತಿ ತೋರಿಸುತ್ತದೆ. ಮುಂದುವರಿದ ಕಂಪ್ಯೂಟ್‌ಗೆ ಪ್ರವೇಶದಲ್ಲಿ ಪೂರೈಕೆ-ಬದಿಯ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಕ್ರಮಗಳು ಹಣಕಾಸಿನ ಪ್ರವೇಶವನ್ನು ವಿಸ್ತರಿಸಲು ಮತ್ತು ಎ.ಐ. ದೇಶೀಯ ಅಭಿವೃದ್ಧಿಯನ್ನು ಉತ್ತೇಜಿಸಲು ಸಾಂಪ್ರದಾಯಿಕ ನೀತಿ  ಪೂರಕವಾಗಿರಬೇಕು. ಭಾರತವು ಜಾಗತಿಕ ಕಂಪ್ಯೂಟ್‌ಗೆ ವೈವಿಧ್ಯಮಯ ಮತ್ತು ಸ್ಥಿತಿಸ್ಥಾಪಕತ್ವದ  ಪ್ರವೇಶವನ್ನು ಅವಲಂಬಿಸಬೇಕಾದ ಅಗತ್ಯವಿದೆ.

ಇಂಡಿಯಾ ಎಐ ಮಿಷನ್ ಅಡಿಯಲ್ಲಿ ಸರ್ಕಾರ ಆಯೋಜಿಸಿದ, ಸಮುದಾಯ-ಮೇಲ್ವಿಚಾರಣೆ ವೇದಿಕೆಯು ಡೆವಲಪರ್‌ಗಳು, ಸಂಶೋಧಕರು ಮತ್ತು ಉದ್ಯಮಗಳು ಸಹಕರಿಸುವ ಸುರಕ್ಷಿತ ಮತ್ತು ಪಾರದರ್ಶಕ ಸ್ಥಳವನ್ನು ಒದಗಿಸುತ್ತದೆ. ವಲಯ-ನಿರ್ದಿಷ್ಟ ಎ.ಐ. ಸ್ಥಳೀಯ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಭಾರತವನ್ನು ವಿಶ್ವದ ಐಟಿ ವಲಯದ ಬ್ಯಾಕ್ ಆಫೀಸ್‌ನಿಂದ ಎ.ಐ. ಫ್ರಂಟ್ ಆಫೀಸ್‌ಗಳಲ್ಲಿ ಒಂದಾಗಿ ಪರಿವರ್ತಿಸಲು ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಬಹುದು. 'ಎ.ಐ.-ಒ.ಎಸ್.(AI-OS)' ಉಪಕ್ರಮದ ಅಡಿಯಲ್ಲಿ ಉನ್ನತ ಮಟ್ಟದ ಪರಿಹಾರ ವಿಧಾನಗಳನ್ನು ಅಭಿವೃದ್ಧಿ ಮಾಡುವ ಬಾಟಮ್-ಅಪ್ ವಿಧಾನವನ್ನು ಮುನ್ನಡೆಸಬಹುದು. ಭಾರತವು ಎ.ಐ. ಸಂಶೋಧನಾ ಉತ್ಪಾದನೆಗೆ ಅಗ್ರ ಜಾಗತಿಕ ಕೊಡುಗೆ ನೀಡುವ ದೇಶಗಳಲ್ಲಿ ಸ್ಥಾನ ಪಡೆದಿದೆ ಮತ್ತು ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ತಾಂತ್ರಿಕ ಪ್ರತಿಭೆಗಳ ಆಳವಾದ ಗುಂಪನ್ನು ಹೊಂದಿದೆ, ದೇಶವು ಹೆಚ್ಚು ಎ.ಐ.-ಸಾಕ್ಷರ ಕಾರ್ಮಿಕ ಬಲವನ್ನು ಹೊಂದಿದೆ.

ದೇಶದ ವೈವಿಧ್ಯತೆ ಮತ್ತು ಪ್ರಮಾಣವು ಆರೋಗ್ಯ, ಕೃಷಿ, ಹಣಕಾಸು, ಶಿಕ್ಷಣ ಮತ್ತು ಸಾರ್ವಜನಿಕ ಆಡಳಿತ ಸೇರಿದಂತೆ ವಿವಿಧ ವಲಯಗಳಲ್ಲಿ ವೈವಿಧ್ಯಮಯ ದೇಶೀಯ ಡೇಟಾಸೆಟ್‌ಗಳನ್ನು ಸಂಗ್ರಹಿಸುವ ಸಾಧ್ಯತೆಯನ್ನು ಸೂಚಿಸುತ್ತದೆ.

ಸರ್ಕಾರ, ಸಾಂಸ್ಥಿಕ ವಾಸ್ತುಶಿಲ್ಪ ಮತ್ತು ದತ್ತಾಂಶ

                                   ಭಾರತಕ್ಕಾಗಿ ಒಂದು ಎ.ಐ. ಆರ್ಥಿಕ ಮಂಡಳಿ

ಆಡಳಿತ ಮಂಡಳಿಯಿಂದ ಪ್ರತ್ಯೇಕವಾದ ಎ.ಐ. ಆರ್ಥಿಕ ಮಂಡಳಿಯು ಕೇವಲ ತಾಂತ್ರಿಕ ಅನಿವಾರ್ಯತೆಯೊಂದಿಗೆ ಮಾತ್ರವಲ್ಲದೆ, ನೈತಿಕ ಅವಶ್ಯಕತೆಯೊಂದಿಗೆ, ಹಾಗು ಭಾರತದ ಸಾಮಾಜಿಕ-ಆರ್ಥಿಕ ವಾಸ್ತವಗಳಿಗೆ ಸೂಕ್ಷ್ಮವಾಗಿರುವ ಅವಶ್ಯಕತೆಗಳೊಂದಿಗೆ ಕಾರ್ಯನಿರ್ವಹಿಸಲು ಉದ್ದೇಶಿಸಲಾಗಿದೆ. ಸಂಪನ್ಮೂಲ ನಿರ್ಬಂಧಗಳು ಮತ್ತು ಅಭಿವೃದ್ಧಿ ಆದ್ಯತೆಗಳನ್ನು ನಿಭಾಯಿಸುವಾಗ, ಭಾರತದ ಶಿಕ್ಷಣ ಮತ್ತು ಕೌಶಲ್ಯ ಮೂಲಸೌಕರ್ಯದ ವಿಕಸನದೊಂದಿಗೆ ತಂತ್ರಜ್ಞಾನ ನಿಯೋಜನೆಯನ್ನು ಜೋಡಿಸುವ ಜವಾಬ್ದಾರಿಯುತ ಸಮನ್ವಯ ಪ್ರಾಧಿಕಾರವಾಗಿ ಅದು ಕಾರ್ಯನಿರ್ವಹಿಸುತ್ತದೆ. ಅಂತಹ ಸಂಸ್ಥೆಗೆ ಮೂಲ ಆಡಳಿತ ತತ್ವಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ:

  1. ಮಾನವ ಪ್ರಾಮುಖ್ಯತೆ ಮತ್ತು ಆರ್ಥಿಕ ಉದ್ದೇಶ

  2. ವಿನ್ಯಾಸದ ಮೂಲಕ ಕಾರ್ಮಿಕ-ಮಾರುಕಟ್ಟೆ ಸೂಕ್ಷ್ಮತೆ

  3. ವೇಗಕ್ಕಿಂತ ಹೆಚ್ಚಿನ ಅನುಕ್ರಮಣಿಕೆ

  4. ತಂತ್ರಜ್ಞಾನ ಮತ್ತು ಮಾನವ ಬಂಡವಾಳದ ಸಹ-ವಿಕಾಸ

  5. ಸಾರ್ವಜನಿಕ ಹಿತಾಸಕ್ತಿ ಸುರಕ್ಷತೆಗಳು ಮತ್ತು ನೈತಿಕತೆಗೆ ಸಂಬಂಧಿಸಿ ರಾಜಿ ರಹಿತ ಕ್ರಮಗಳು.

ಎ.ಐ ನೀತಿಯಲ್ಲಿ ಕಾರ್ಮಿಕ ವಾಸ್ತವಗಳು ಮತ್ತು ಸಾಮಾಜಿಕ ಸ್ಥಿರತೆಯ ಆದ್ಯತೆಗಳನ್ನು ಅಳವಡಿಸುವ ಮೂಲಕ, ಉದ್ಯೋಗ ಮತ್ತು ಕೆಲಸದ ಘನತೆಯನ್ನು ಕಳೆದುಕೊಳ್ಳದೆ ಎ.ಐ. ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಸಂಸ್ಥೆ ಖಚಿತಪಡಿಸುತ್ತದೆ.

Data-as-a-Strategic-Resource.jpg

ನಿಯಂತ್ರಕ ಬೆಳವಣಿಗೆಗಳಿಗಿಂತ ನಾವೀನ್ಯತೆಗಳು ಮತ್ತು ಅನ್ವಯಿಕೆಗಳು ವೇಗವಾಗಿ ಮುಂದುವರಿಯುತ್ತಿರುವುದರಿಂದ, ಸಮೀಕ್ಷೆಯು ನೀತಿ ನಿರೂಪಕರಿಂದ ಅತ್ಯಂತ ಎಚ್ಚರಿಕೆಯ ಮತ್ತು ತ್ವರಿತ ಪ್ರತಿಕ್ರಿಯೆಯನ್ನು ಕೋರುತ್ತದೆ. ಭಾರತದಲ್ಲಿ ಎ.ಐ. ಅಳವಡಿಕೆಗೆ ನಿಯಂತ್ರಕ ವಿನ್ಯಾಸವು ಭಾರತದ ವಿಶಾಲ ಸಾಮಾಜಿಕ-ಆರ್ಥಿಕ ಸಂದರ್ಭದಲ್ಲಿ ಎ.ಐ.ಯನ್ನು ಸಂಯೋಜಿಸಲು ಪ್ರಯತ್ನಿಸುವಂತಿರಬೇಕು, ನಮ್ಮ ಕಾರ್ಮಿಕ ಮಾರುಕಟ್ಟೆಯ ವಾಸ್ತವಗಳಿಗೆ ವಿಶೇಷ ಪರಿಗಣನೆಯನ್ನು ಹೊಂದಿರಬೇಕು. ಎ.ಐ.ಯು ಮೊದಲಿನ ವ್ಯವಸ್ಥೆಯನ್ನು ಇದ್ದಕ್ಕಿದ್ದಂತೆ ಸ್ಥಳಾಂತರಿಸಿ   ಬದಲಿಸುವ ಬದಲು ಮಾನವೀಯತೆಗೆ ಸೇವೆ ಸಲ್ಲಿಸುತ್ತದೆ ಎಂಬುದನ್ನು ಅದು ಖಚಿತಪಡಿಸಿಕೊಳ್ಳಬೇಕು.

.. ಗೆ ಮಾನವ ಬಂಡವಾಳ

ಸಮೀಕ್ಷೆಯು ಅನುಭವದ ಕಲಿಕೆ, ಅನುಭವ ನಿರ್ಮಾಣಕ್ಕೆ ಆರಂಭಿಕ ಅವಕಾಶ, ಹೊಂದಿಕೊಳ್ಳುವ ಶಿಕ್ಷಣ ಮಾರ್ಗಗಳು ಮತ್ತು ಮಾನವ ಕೇಂದ್ರಿತ ಕೌಶಲ್ಯಗಳನ್ನು ಬಲಪಡಿಸುವುದನ್ನು ಹೇಳುತ್ತದೆ. 'ಔಪಚಾರಿಕ ಶಿಕ್ಷಣ ಮತ್ತು ಕೆಲಸದ ಅನುಭವ'ವನ್ನು ಪರಸ್ಪರ ಪ್ರತ್ಯೇಕವಾದ ವ್ಯವಸ್ಥೆಯಾಗಿ/ಘಟಕವಾಗಿ ನೋಡಬೇಕಾಗಿಲ್ಲ ಎಂದು ಸಮೀಕ್ಷೆಯು ಕರೆ ನೀಡುತ್ತದೆ. ಭಾರತದ ಜನಸಂಖ್ಯಾ ಲಾಭಾಂಶವನ್ನು ಸಮರ್ಥ ಕಾರ್ಯಪಡೆಯಾಗಿ ಪೋಷಿಸಲು, 'ಗಳಿಸಿರಿ ಮತ್ತು  ಕಲಿಯಿರಿ ಉಪಕ್ರಮ'ದಂತಹ ಸಾಂಸ್ಥಿಕೀಕರಣ ವ್ಯವಸ್ಥೆಗಳ ಅವಶ್ಯಕತೆಯಿದೆ. ಈ ಮಾರ್ಗವನ್ನು ಖಾಸಗಿ ವಲಯ ಮತ್ತು ಶೈಕ್ಷಣಿಕ ಸಂಸ್ಥೆಗಳು ಜೊತೆಗೂಡಿ ಸಹ-ವಿನ್ಯಾಸಗೊಳಿಸಬಹುದು. ರಾಷ್ಟ್ರೀಯ ಶಿಕ್ಷಣ ನೀತಿ 2020 ಮೇಲಿನ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ.

ಇದಲ್ಲದೆ, ವೈಟ್-ಕಾಲರ್ ಕಾರ್ಯಕ್ಷೇತ್ರದ ಹೊರಗಿನ ಉದ್ಯೋಗಗಳ ಸಮಗ್ರ ವಲಯ ನಕ್ಷೆಯನ್ನು ಕೈಗೊಳ್ಳಬೇಕಾಗಿದೆ. ಉದಾಹರಣೆಗೆ, ನರ್ಸಿಂಗ್ ಮತ್ತು ವೃದ್ಧಾಪ್ಯದ ಆರೈಕೆಯು ಸಿಬ್ಬಂದಿ ಕೊರತೆಯಿಂದಾಗಿ ಕ್ಷೇತ್ರಗಳಲ್ಲಿ ಕೌಶಲ್ಯಪೂರ್ಣ ಕಾರ್ಮಿಕರಿಗೆ ಹೆಚ್ಚುವರಿ ಬೇಡಿಕೆಯ ಸಾಧ್ಯತೆಯನ್ನು ಅದು ಉಲ್ಲೇಖಿಸುತ್ತದೆ.

.. ಸುರಕ್ಷತೆ ಮತ್ತು ಅಪಾಯಗಳು

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆಡಳಿತ ಮಾರ್ಗಸೂಚಿಗಳ ಅಡಿಯಲ್ಲಿ ಪ್ರಸ್ತಾಪಿಸಲಾದ 'ಎ.ಐ. ಸುರಕ್ಷತಾ ಸಂಸ್ಥೆ'ಯನ್ನು ಸಮೀಕ್ಷೆಯು ಎತ್ತಿ ತೋರಿಸುತ್ತದೆ, ಇದು ಉದಯೋನ್ಮುಖ ಅಪಾಯಗಳು, ಸಂಭಾವ್ಯ ನಿಯಂತ್ರಕ ಅಂತರಗಳು, ಎ.ಐ. ಸುರಕ್ಷತಾ ಸಮಸ್ಯೆಗಳ ಕುರಿತು ಸಮನ್ವಯ ಮತ್ತು ಜಾಗೃತಿ ಮೂಡಿಸಲು ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು ಇತ್ಯಾದಿಗಳನ್ನು ವಿಶ್ಲೇಷಿಸುತ್ತದೆ. ಎ.ಐ. ಮಾದರಿಗಳ ಕಾಲಾನುಕ್ರಮದ/ಆವರ್ತಕ, ಸನ್ನಿವೇಶ-ಆಧಾರಿತ ಪರೀಕ್ಷೆ ಮತ್ತು ರೆಡ್-ಟೀಮಿಂಗ್ ಅಂದರೆ ನೈತಿಕ ಹ್ಯಾಕರ್ ಗಳು ಸಂಸ್ಥೆಯ ಕೃತಕ ಬುದ್ಧಿಮತ್ತೆ ಪರಿಕರಗಳನ್ನು ಹ್ಯಾಕ್ ಮಾಡದಂತೆ ಕೈಗೊಳ್ಳುವ ಕ್ರಮಗಳು  ಸಾಂಸ್ಥಿಕರಣಗೊಳ್ಳಬೇಕು.

ಯುನೈಟೆಡ್ ಕಿಂಗ್‌ಡಮ್‌ನ ಎ.ಐ. ಭದ್ರತಾ ಸಂಸ್ಥೆ ಮತ್ತು ಯು.ಎಸ್.ಎ. ರಾಷ್ಟ್ರೀಯ ಮಾನದಂಡಗಳು ಮತ್ತು ತಂತ್ರಜ್ಞಾನದಂತಹ ಸಂಸ್ಥೆಗಳ ಅಂತರರಾಷ್ಟ್ರೀಯ ಸಹಕಾರವು ಹೆಚ್ಚಿನ ಅಪಾಯದ ಮಾದರಿಗಳ ಮತ್ತು ಮತ್ತು ಜಾಗತಿಕವಾಗಿ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಮೂಲಸೌಕರ್ಯವನ್ನು ಪೂರ್ಣಗೊಳಿಸಲು ಹಂಚಿಕೆಯ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ ಎಂದು ಸಮೀಕ್ಷೆಯು ಸೂಚಿಸುತ್ತದೆ. ವೈಯಕ್ತಿಕ ಹಕ್ಕುಗಳ ರಕ್ಷಣೆಯನ್ನು ಅದರ ಕೇಂದ್ರ ಭಾಗದಲ್ಲಿ ಇರಿಸದೆ ಇದ್ದರೆ ಸುರಕ್ಷೆಗೆ ಸಂಬಂಧಿಸಿದ ಯಾವುದೇ ಚಿಂತನೆ ಅಥವಾ ಮಾನವ ಕೇಂದ್ರಿತ ಎ.ಐ.ಯ ಯಾವುದೇ ಪರಿಕಲ್ಪನೆಯು ವಿಶ್ವಾಸಾರ್ಹವಲ್ಲ ಎಂದು ಸಮೀಕ್ಷೆಯು ಮತ್ತಷ್ಟು ಸ್ಪಷ್ಟಪಡಿಸಿದೆ. .

ಭಾರತದ '..' ಭವಿಷ್ಯಕ್ಕಾಗಿ ಮಾರ್ಗಸೂಚಿ

ಸಮೀಕ್ಷೆಯು ಭಾರತ ಎದುರಿಸುತ್ತಿರುವ ಪ್ರಮುಖ ಕೇಂದ್ರೀಯ ಸವಾಲುಗಳನ್ನು ವಿವರಿಸುತ್ತದೆ - ಅದು ದೇಶೀಯವಾಗಿ ಏನು ನಿರ್ಮಿಸುತ್ತದೆ, ಜಾಗತಿಕವಾಗಿ ಏನು ಸಂಗ್ರಹಿಸುತ್ತದೆ, ಅದು ಮೊದಲೇ ಏನನ್ನು ನಿಯಂತ್ರಿಸುತ್ತದೆ ಮತ್ತು ಅದು ಉದ್ದೇಶಪೂರ್ವಕವಾಗಿ ವಿಕಸನಗೊಳ್ಳಲು ಏನನ್ನು ಅನುಮತಿಸುತ್ತದೆ/ಯಾವುದಕ್ಕೆ ಅವಕಾಶ ಕೊಡುತ್ತದೆ ಎಂಬುದರ ಬಗ್ಗೆ ಅದು ಗಮನ ಹರಿಸುತ್ತದೆ. ಘಟನೆ ನಡೆದ ನಂತರ ಲಭಿಸುವ ಹಿನ್ನೋಟದ ಅರಿವು ಭಾರತವು ಹೆಚ್ಚು ಸಂಪನ್ಮೂಲ-ಸಮರ್ಥ ಮತ್ತು ಆರಂಭದಿಂದಲೇ ಸಾರ್ವಜನಿಕ ಉದ್ದೇಶಗಳೊಂದಿಗೆ ಹೊಂದಿಕೊಂಡಿರುವ ಎ.ಐ. ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲು ಅನುವು ಮಾಡಿಕೊಡುತ್ತದೆ, ನಿಯೋಜನೆಯೊಂದಿಗೆ ನಿಯಂತ್ರಣವನ್ನು ಹಾಗು ಅಭಿವೃದ್ಧಿಯನ್ನು ಅನುಕ್ರಮಗೊಳಿಸುತ್ತದೆ. ಇದು ದೇಶಕ್ಕೆ ಹೆಚ್ಚು ಸ್ಥಿತಿಸ್ಥಾಪಕತ್ವದ  ಮತ್ತು ಅಂತರ್ಗತ ಎ.ಐ. ಪಥವನ್ನು ಅನುಸರಿಸಲು ಅವಕಾಶವನ್ನು ನೀಡುತ್ತದೆ.

ಭಾರತದ ಸಾಮರ್ಥ್ಯಗಳು ಅಪ್ಲಿಕೇಶನ್-ಮುಂಚೂಣಿಯ ನಾವೀನ್ಯತೆ, ದೇಶೀಯ ಡೇಟಾದ ಉತ್ಪಾದಕ ಬಳಕೆ, ಮಾನವ ಬಂಡವಾಳದ ಆಳ ಮತ್ತು ಅಲ್ಲಲ್ಲಿ ಚದುರಿದಂತಿರುವ ಪ್ರಯತ್ನಗಳನ್ನು ಸಂಘಟಿಸಿ ಸಮನ್ವಯಗೊಳಿಸುವ  ಸಾರ್ವಜನಿಕ ಸಂಸ್ಥೆಗಳ ಸಾಮರ್ಥ್ಯದಲ್ಲಿವೆ. ಬಾಟಮ್-ಅಪ್ ತಂತ್ರದಲ್ಲಿ ಅಡಕವಾಗಿರುವ ಮುಕ್ತ ಮತ್ತು ಪರಸ್ಪರ ಕಾರ್ಯಸಾಧ್ಯ ವ್ಯವಸ್ಥೆಗಳು, ವಲಯ-ನಿರ್ದಿಷ್ಟ ಮಾದರಿಗಳು ಮತ್ತು ಹಂಚಿಕೆಯ ಭೌತಿಕ ಹಾಗು ಡಿಜಿಟಲ್ ಮೂಲಸೌಕರ್ಯಗಳಲ್ಲಿ ನೆಲೆಗೊಂಡಿರುವ ವ್ಯವಸ್ಥೆಗಳು ವ್ಯಾಪ್ತಿಯಲ್ಲಿ ಕಿರಿದಾದ ಅನ್ವೇಷಣೆಗಿಂತ ಮೌಲ್ಯ ಸೃಷ್ಟಿಗೆ ಹೆಚ್ಚು ವಿಶ್ವಾಸಾರ್ಹ ಮಾರ್ಗವನ್ನು ಒದಗಿಸುತ್ತವೆ.

ನಿಯಂತ್ರಣ, ದತ್ತಾಂಶ ಆಡಳಿತ ಮತ್ತು ಸುರಕ್ಷತೆಯು ಅಭಿವೃದ್ಧಿಯ ಜೊತೆ  ಸಮಾನಾಂತರವಾಗಿ ವಿಕಸನಗೊಳ್ಳಬೇಕಾಗುತ್ತದೆಯೇ ಹೊರತು ಅಭಿವೃದ್ಧಿಯ  ನಂತರ ಅಲ್ಲ. ಮಾಡಿದ ಆಯ್ಕೆಗಳನ್ನು ಅವಲಂಬಿಸಿ, ಎ.ಐ. ವಿಶಾಲ ವ್ಯಾಪ್ತಿ-ಆಧಾರಿತ ಉತ್ಪಾದಕತೆ ಮತ್ತು ಘನತೆಯ ಕೆಲಸಕ್ಕೆ ಒಂದು ಸಾಧನವಾಗಬಹುದು.ಇಲ್ಲಿ  ಭಾರತದ ಕೆಲಸವೆಂದರೆ ಎ.ಐ. ಅಭಿವೃದ್ಧಿಯು ಅದರ ಅಭಿವೃದ್ಧಿ ಆದ್ಯತೆಗಳು ಮತ್ತು ಅದರ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಸಾಧಿಸುವ ದೀರ್ಘಕಾಲೀನ ಮಹತ್ವಾಕಾಂಕ್ಷೆಯೊಂದಿಗೆ ಹೊಂದಿಕೆಯಾಗುವಂತೆ ನೋಡಿಕೊಳ್ಳುವುದು.

 

******

 

 



 


(ಪ್ರಕಟಣೆ ಐ.ಡಿ.: 2220661) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Punjabi , Malayalam