ಗೃಹ ವ್ಯವಹಾರಗಳ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದಲ್ಲಿ ವಸಾಹತುಶಾಹಿ ಕುರುಹುಗಳನ್ನು ಅಳಿಸಿಹಾಕುವ ಐತಿಹಾಸಿಕ ಕಾನೂನು ಸುಧಾರಣೆಗಳನ್ನು ಗೃಹ ಸಚಿವಾಲಯ ಮಂಡಿಸಿದ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಸ್ತಬ್ಧಚಿತ್ರಗಳು ಪ್ರತಿಬಿಂಬಿಸುತ್ತವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹೇಳಿದ್ದಾರೆ
ಈ ಕಾನೂನು ಸುಧಾರಣೆಗಳು ಶಿಕ್ಷೆ ಆಧಾರಿತ ಕಾನೂನು ವ್ಯವಸ್ಥೆಯಿಂದ ನ್ಯಾಯ ಆಧಾರಿತ ಕಾನೂನು ವ್ಯವಸ್ಥೆಗೆ ಭಾರತದ ಪಯಣಕ್ಕೆ ನಾಂದಿ ಹಾಡಿವೆ
ಹೊಸ ಇ-ಸಾಕ್ಷ್ಯ, ಇ-ಸಮ್ಮನ್ಸ್, ನ್ಯಾಯ ಶ್ರುತಿ, ಭಾರತದ ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿನ ವ್ಯವಸ್ಥೆ(NAFIS) ಮತ್ತು ಅಂತರ್ಸಂಪರ್ಕಯೋಗ್ಯ ಕ್ರಿಮಿನಲ್ ನ್ಯಾಯ (ICJS) ವ್ಯವಸ್ಥೆಗಳನ್ನು ಸಮರ್ಪಕವಾಗಿ ಪ್ರದರ್ಶಿಸುವ ಮೂಲಕ, ನವ ಭಾರತದಲ್ಲಿ ವೇಗ, ನಿಖರ ಹಾಗೂ ಜನಕೇಂದ್ರೀತ ನ್ಯಾಯ ವ್ಯವಸ್ಥೆಯ ಮಹತ್ವದ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತದೆ
प्रविष्टि तिथि:
26 JAN 2026 8:23PM by PIB Bengaluru
ಇಂದು ನಡೆದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಗೃಹ ವ್ಯವಹಾರಗಳ ಸಚಿವಾಲಯ (MHA) ಮಂಡಿಸಿದ ಮೂರು ಹೊಸ ಕ್ರಿಮಿನಲ್ ಕಾನೂನುಗಳಿಗೆ ಸಂಬಂಧಪಟ್ಟ ಸ್ತಬ್ಧಚಿತ್ರವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಸಾಹತುಶಾಹಿ ಗುರುತುಗಳನ್ನು ಅಳಿಸಿ ಹಾಕುವ ಐತಿಹಾಸಿಕ ಕಾನೂನು ಸುಧಾರಣೆಗಳನ್ನು ಪ್ರತಿಬಿಂಬಿಸಿದ್ದು, ಶಿಕ್ಷೆ ಆಧಾರಿತ ಕಾನೂನು ವ್ಯವಸ್ಥೆಯಿಂದ ನ್ಯಾಯ ಆಧಾರಿತ ಕಾನೂನು ವ್ಯವಸ್ಥೆಗೆ ಭಾರತದ ಪಯಣಕ್ಕೆ ನಾಂದಿ ಹಾಡಿವೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ತಿಳಿಸಿದ್ದಾರೆ,
ತಮ್ಮ ಎಕ್ಸ್ ಖಾತೆಯಲ್ಲಿ ಅವರು ಈ ರೀತಿ ಪೋಸ್ಟ್ ಮಾಡಿದ್ದಾರೆ, “ಇಂದು ನಡೆದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಗೃಹ ವ್ಯವಹಾರಗಳ ಸಚಿವಾಲಯ ಮಂಡಿಸಿದ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಕುರಿತ ಸ್ತಬ್ಧಚಿತ್ರವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದಲ್ಲಿ, ವಸಾಹತುಶಾಹಿ ಕುರುಹುಗಳನ್ನು ಅಳಿಸಿ ಹಾಕುವ ಐತಿಹಾಸಿಕ ಕಾನೂನು ಸುಧಾರಣೆಗಳನ್ನು ಪ್ರತಿಬಿಂಬಿಸಿದೆ ಮತ್ತು ಶಿಕ್ಷೆ ಆಧಾರಿತ ಕಾನೂನು ವ್ಯವಸ್ಥೆಯಿಂದ ನ್ಯಾಯ ಆಧಾರಿತ ಕಾನೂನು ವ್ಯವಸ್ಥೆಗೆ ಭಾರತದ ಪಯಣಕ್ಕೆ ಚಾಲನೆ ನೀಡಿದೆ. ಹೊಸ ಇ-ಸಾಕ್ಷ್ಯ, ಇ-ಸಮ್ಮನ್ಸ್, ನ್ಯಾಯ ಶ್ರುತಿ, ಭಾರತದ ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿನ ವ್ಯವಸ್ಥೆ(NAFIS) ಮತ್ತು ಅಂತರ್ಸಂಪರ್ಕಯೋಗ್ಯ ಕ್ರಿಮಿನಲ್ ನ್ಯಾಯ (ICJS) ವ್ಯವಸ್ಥೆಗಳನ್ನು ಸಮರ್ಪಕವಾಗಿ ಪ್ರದರ್ಶಿಸುವ ಮೂಲಕ, ಹೊಸ ಭಾರತದಲ್ಲಿ ವೇಗವಾಗಿ, ನಿಖರ ಹಾಗೂ ಜನಕೇಂದ್ರೀತ ನ್ಯಾಯ ವ್ಯವಸ್ಥೆಯ ಪ್ರಾಮುಖ್ಯತೆಯ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತದೆ.”
*****
(रिलीज़ आईडी: 2218932)
आगंतुक पटल : 6