ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಂದ ನೆದರ್‌ಲ್ಯಾಂಡ್ಸ್‌ ನ ಎ ಎಸ್‌ ಎಂ ಎಲ್‌ ಪ್ರಧಾನ ಕಚೇರಿಗೆ ಭೇಟಿ


ಸ್ಥಿರ ನೀತಿಗಳು, ಪ್ರತಿಭಾವಂತರ ನೆಲೆ; ಜಾಗತಿಕ ಉಪಕರಣ ತಯಾರಕರನ್ನು ಭಾರತದತ್ತ ಸೆಳೆಯುತ್ತಿದೆ

प्रविष्टि तिथि: 23 JAN 2026 7:31PM by PIB Bengaluru

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಇಂದು ನೆದರ್ಲ್ಯಾಂಡ್ಸ್‌ ನ ವೆಲ್ಡ್‌ಹೋವನ್‌ ನಲ್ಲಿರುವ ಎ ಎಸ್ ಎಂ ಎಲ್ ಪ್ರಧಾನ ಕಚೇರಿಗೆ ಭೇಟಿ ನೀಡಿದರು.

ಭೇಟಿಯ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಭಾರತವು ಹೊಸ ಸೆಮಿಕಂಡಕ್ಟರ್ ಉದ್ಯಮವನ್ನು ಪ್ರಾರಂಭಿಸಿದೆ ಮತ್ತು ವೇಫರ್ ಮೇಲೆ ಸರ್ಕ್ಯೂಟ್ ಅನ್ನು ಮುದ್ರಿಸುವುದನ್ನು ಒಳಗೊಂಡಿರುವ ಲಿಥೋಗ್ರಫಿಯು ಸಂಪೂರ್ಣ ಸೆಮಿಕಂಡಕ್ಟರ್ ಉತ್ಪಾದನಾ ಸರಣಿಯಲ್ಲಿ ಅತ್ಯಂತ ಸಂಕೀರ್ಣ ಮತ್ತು ನಿಖರತೆಯನ್ನು ಬೇಡುವ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.

ಎ ಎಸ್ ಎಂ ಎಲ್ ಲಿಥೋಗ್ರಾಫಿಕ್ ಉಪಕರಣಗಳ ವಿಶ್ವದ ಪ್ರಮುಖ ಪೂರೈಕೆದಾರ ಸಂಸ್ಥೆಯಾಗಿದೆ ಎಂದು ಸಚಿವರು ತಿಳಿಸಿದರು ಮತ್ತು ವಿಶ್ವದಾದ್ಯಂತ ತಯಾರಾಗುವ ಪ್ರತಿಯೊಂದು ಚಿಪ್ ಅನ್ನು ಎ ಎಸ್ ಎಂ ಎಲ್ ಪ್ರಾಯೋಗಿಕವಾಗಿ ಸಕ್ರಿಯಗೊಳಿಸುತ್ತದೆ ಎಂದು ಅವರು ಹೇಳಿದರು. “ಧೋಲೇರಾದಲ್ಲಿರುವ ನಮ್ಮ ಫ್ಯಾಬ್ ಎ ಎಸ್ ಎಂ ಎಲ್  ಉಪಕರಣಗಳನ್ನು ಬಳಸಲಿದೆ. ಆದ್ದರಿಂದ ನಾನು ಅವರ ತಂತ್ರಜ್ಞಾನವನ್ನು ನೋಡಲು ಮತ್ತು ಅರ್ಥಮಾಡಿಕೊಳ್ಳಲು ಇಲ್ಲಿಗೆ ಬಂದಿದ್ದೇನೆ” ಎಂದು ಶ್ರೀ ವೈಷ್ಣವ್ ಹೇಳಿದರು.

ಎ ಎಸ್ ಎಂ ಎಲ್  ಭಾರತಕ್ಕೆ ಬರುವುದು ಒಂದು ಮಹತ್ವದ ಬೆಳವಣಿಗೆಯಾಗಲಿದೆ ಎಂದು ಸಚಿವರು ಹೇಳಿದರು. ಭಾರತದ ವಿನ್ಯಾಸ ಸಾಮರ್ಥ್ಯಗಳು, ಬೃಹತ್ ಪ್ರತಿಭಾವಂತರ ಸಮೂಹ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ಥಿರ ನೀತಿಗಳ ಕಾರಣದಿಂದಾಗಿ ಪ್ರಪಂಚದಾದ್ಯಂತದ ಹಲವಾರು ಉಪಕರಣ ತಯಾರಕರು ಈಗ ಭಾರತದಲ್ಲಿ ನೆಲೆ ಸ್ಥಾಪಿಸಲು ಎದುರು ನೋಡುತ್ತಿದ್ದಾರೆ ಎಂದು ಅವರು ಹೇಳಿದರು.

ಎ ಎಸ್ ಎಂ ಎಲ್  ಬಗ್ಗೆ

ಎ ಎಸ್ ಎಂ ಎಲ್  ಸೆಮಿಕಂಡಕ್ಟರ್ ಉದ್ಯಮಕ್ಕೆ ವಿಶ್ವದ ಪ್ರಮುಖ ಪೂರೈಕೆದಾರ ಸಂಸ್ಥೆಯಾಗಿದೆ. ಈ ಡಚ್ ಬಹುರಾಷ್ಟ್ರೀಯ ಕಂಪನಿಯು ಇಂಟಿಗ್ರೇಟೆಡ್ ಸರ್ಕ್ಯೂಟ್‌ ಗಳನ್ನು ತಯಾರಿಸಲು ಬಳಸುವ ಫೋಟೋಲಿಥೋಗ್ರಫಿ ಯಂತ್ರಗಳ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಪರಿಣತಿ ಹೊಂದಿದೆ. ಇದು ಪ್ರಮುಖ ಚಿಪ್ ತಯಾರಕರಿಗೆ ಸಿಲಿಕಾನ್ ಮೇಲೆ ಪ್ಯಾಟರ್ನ್‌ ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಅನುವು ಮಾಡಿಕೊಡುತ್ತದೆ, ಇದು ಸಣ್ಣದಾದ, ವೇಗವಾದ ಮತ್ತು ಹೆಚ್ಚು ಇಂಧನ-ದಕ್ಷತೆಯ ಚಿಪ್‌ ಗಳನ್ನು ತಯಾರಿಸಲು ಸಹಾಯ ಮಾಡುತ್ತದೆ.

ಎ ಎಸ್ ಎಂ ಎಲ್  ನಿಯೋಗವು ಸೆಮಿಕಾನ್‌ ಇಂಡಿಯಾ 2025ರಲ್ಲಿ ಭಾಗವಹಿಸಿತ್ತು, ಅಲ್ಲಿ ಅದು ಭಾರತದ ಸೆಮಿಕಂಡಕ್ಟರ್ ಪ್ರಯಾಣದಲ್ಲಿ ಪಾಲುದಾರರಾಗಲು ಬಲವಾದ ಆಸಕ್ತಿಯನ್ನು ವ್ಯಕ್ತಪಡಿಸಿತ್ತು.

 

*****


(रिलीज़ आईडी: 2217944) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी , Marathi , Gujarati , Odia