ಪ್ರಧಾನ ಮಂತ್ರಿಯವರ ಕಛೇರಿ
ನಿರಂತರ ಪ್ರಯತ್ನ ಮತ್ತು ಪ್ರಗತಿಯ ಮನೋಭಾವವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಹಂಚಿಕೊಂಡಿದ್ದಾರೆ; ಮಣಿಪುರ, ಮೇಘಾಲಯ ಮತ್ತು ತ್ರಿಪುರಾ ರಾಜ್ಯೋತ್ಸವದ ಶುಭಾಶಯಗಳನ್ನು ಸಹ ಅಲ್ಲಿನ ಜನತೆಗೆ ತಿಳಿಸಿದ್ದಾರೆ
प्रविष्टि तिथि:
21 JAN 2026 9:28AM by PIB Bengaluru
ಮೂರು ಈಶಾನ್ಯ ರಾಜ್ಯಗಳು ತಮ್ಮ ರಾಜ್ಯೋತ್ಸವ ದಿನವನ್ನು ಆಚರಿಸುತ್ತಿರುವುದರಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಣಿಪುರ, ಮೇಘಾಲಯ ಮತ್ತು ತ್ರಿಪುರಾ ಜನರಿಗೆ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಈ ರಾಜ್ಯಗಳ ಎಲ್ಲಾ ಸಹೋದರ ಸಹೋದರಿಯರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ರಾಜ್ಯಗಳ ಜನತೆ ತಮ್ಮ ಸ್ವಂತ ಪ್ರಯತ್ನಗಳ ಮೂಲಕ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ ಎಂದು ಆಶಿಸಿದ್ದಾರೆ.
ಈ ಸಂದರ್ಭದಲ್ಲಿ, ಪ್ರಧಾನ ಮಂತ್ರಿಯವರು ನಿರಂತರ ಪ್ರಯತ್ನ ಮತ್ತು ಪ್ರಗತಿಯ ಮನೋಭಾವವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತ ಮತ್ತು ಅದರ ಅರ್ಥವನ್ನು ಸಹ ಹಂಚಿಕೊಂಡಿದ್ದಾರೆ.
ಸಂಸ್ಕೃತ ಸುಭಾಷಿತದ ಅರ್ಥ ಹೀಗಿದೆ:
“चरैवेति चरैवेति चरन्वै मधु विन्दति।
सूर्यास्य पश्य श्रेमाणं न मामार न जीर्यति॥” ಸೂರ್ಯನು ತನ್ನ ಪ್ರಖರ ಶಕ್ತಿಯಿಂದ ಜಗತ್ತನ್ನು ದಣಿವರಿಯಿಲ್ಲದೆ ಮತ್ತು ಅನಂತವಾಗಿ ಬೆಳಗಿಸುವಂತೆ, ಸತತವಾಗಿ ಶ್ರದ್ಧೆಯುಳ್ಳ ವ್ಯಕ್ತಿಯು ಮಾತ್ರ ಪ್ರಗತಿಯ ಮಾಧುರ್ಯವನ್ನು ಸವಿಯಬಹುದು, ಜೀವನದಲ್ಲಿ ಚಲನೆ ಸದಾ ಇರಬೇಕು ಮತ್ತು ಮುನ್ನಡೆಯುತ್ತಲೇ ಇರಬೇಕು ಎಂದು ತಿಳಿಸುತ್ತದೆ.
ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಹೀಗೆ ಬರೆದುಕೊಂಡಿದ್ದಾರೆ:
“आज नॉर्थ ईस्ट के तीन राज्य मणिपुर, मेघालय और त्रिपुरा अपना स्थापना दिवस मना रहे हैं। इस अवसर पर यहां के अपने सभी भाई-बहनों को मेरी बहुत-बहुत शुभकामनाएं। अपने प्रयासों से जीवन के हर क्षेत्र में उन्हें सफलता मिले, यही कामना है।
चरैवेति चरैवेति चरन्वै मधु विन्दति।
सूर्यास्य पश्य श्रेमाणं न मामार न जीर्यति॥”
*****
(रिलीज़ आईडी: 2216759)
आगंतुक पटल : 6
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam