ಲೋಕಸಭಾ ಸಚಿವಾಲಯ
azadi ka amrit mahotsav

ಶಾಸಕಾಂಗ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಮಾನದಂಡಗಳನ್ನು ರೂಪಿಸುವ ಅಗತ್ಯವನ್ನು ಲೋಕಸಭಾಧ್ಯಕ್ಷರಾದ​​​​​​​ ಶ್ರೀ ಓಂ ಬಿರ್ಲಾ ಪುನರುಚ್ಚರಿಸಿದ್ದಾರೆ


86ನೇ ಅಖಿಲ ಭಾರತ ಪೀಠಾಧ್ಯಕ್ಷರ ಸಮ್ಮೇಳನದ (ಎಐಪಿಒಸಿ) ಎರಡನೇ ದಿನದಂದು ಕಾರ್ಯಸೂಚಿಯ ವಿಷಯಗಳ ಕುರಿತು ಸುದೀರ್ಘ ಚರ್ಚೆಗಳು ನಡೆದವು

ಪಾರದರ್ಶಕ, ದಕ್ಷ ಮತ್ತು ನಾಗರಿಕ ಕೇಂದ್ರಿತ ಶಾಸಕಾಂಗ ಪ್ರಕ್ರಿಯೆಗಳಿಗಾಗಿ ತಂತ್ರಜ್ಞಾನದ ಸದ್ಬಳಕೆ, ಶಾಸಕರ ಸಾಮರ್ಥ್ಯ ವೃದ್ಧಿ ಮತ್ತು ಜನರಿಗೆ ಶಾಸಕಾಂಗದ ಉತ್ತರದಾಯಿತ್ವ ಕುರಿತು ಚರ್ಚೆ

प्रविष्टि तिथि: 20 JAN 2026 8:23PM by PIB Bengaluru

ಲಕ್ನೋದಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಪೀಠಾಧ್ಯಕ್ಷರ ಸಮ್ಮೇಳನದ (ಎಐಪಿಒಸಿ) ಎರಡನೇ ದಿನವು ಮೂರು ಪ್ರಮುಖ ವಿಷಯಗಳ ಮೇಲಿನ ಚರ್ಚೆಗಳೊಂದಿಗೆ ಮುಕ್ತಾಯವಾಯಿತು.

(1) ಪಾರದರ್ಶಕ, ದಕ್ಷ ಮತ್ತು ನಾಗರಿಕ ಕೇಂದ್ರಿತ ಶಾಸಕಾಂಗ ಪ್ರಕ್ರಿಯೆಗಳಿಗಾಗಿ ತಂತ್ರಜ್ಞಾನದ ಸದ್ಬಳಕೆ;

(2) ದಕ್ಷತೆಯನ್ನು ಹೆಚ್ಚಿಸಲು ಮತ್ತು ಪ್ರಜಾಸತ್ತಾತ್ಮಕ ಆಡಳಿತವನ್ನು ಬಲಪಡಿಸಲು ಶಾಸಕರ ಸಾಮರ್ಥ್ಯ ವೃದ್ಧಿ; ಮತ್ತು

(3) ಜನರಿಗೆ ಶಾಸಕಾಂಗಗಳ ಉತ್ತರದಾಯಿತ್ವ.

ಗೌರವಾನ್ವಿತ ಲೋಕಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರು ಪೂರ್ಣ ಪ್ರಮಾಣದ ಚರ್ಚೆಗಳಲ್ಲಿ ಭಾಗವಹಿಸಿದ್ದರು ಮತ್ತು ಗೌರವಾನ್ವಿತ ರಾಜ್ಯಸಭಾ ಉಪಸಭಾತಿ ಶ್ರೀ ಹರಿವಂಶ ಅವರು ಚರ್ಚೆಗಳನ್ನು ನಿರ್ವಹಿಸಿದರು.

ಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಿದ ಗೌರವಾನ್ವಿತ ಲೋಕಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರು, ದೇಶಾದ್ಯಂತದ ಶಾಸಕಾಂಗಗಳು ಅಳವಡಿಸಿಕೊಂಡಿರುವ ಅತ್ಯುತ್ತಮ ಕಾರ್ಯವಿಧಾನಗಳನ್ನು ಉತ್ತರ ಪ್ರದೇಶ ವಿಧಾನಸಭೆಯ ಕಾರ್ಯನಿರ್ವಹಣೆಯಲ್ಲಿ ಸಂಯೋಜಿಸಿದ್ದಕ್ಕಾಗಿ ಉತ್ತರ ಪ್ರದೇಶ ವಿಧಾನಸಭೆಯ ಗೌರವಾನ್ವಿತ ಸಭಾಧ್ಯಕ್ಷ ಶ್ರೀ ಸತೀಶ್ ಮಹಾನಾ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು. ಶಾಸಕರ ಶೈಕ್ಷಣಿಕ ಅರ್ಹತೆಗಳು ಮತ್ತು ವೃತ್ತಿಪರ ಅನುಭವಗಳನ್ನು ಗುರುತಿಸಿ ಅವುಗಳನ್ನು ರಚನಾತ್ಮಕವಾಗಿ ಬಳಸಿಕೊಳ್ಳುವ ಶ್ರೀ ಮಹಾನಾ ಅವರ ಉಪಕ್ರಮವನ್ನು ಶ್ರೀ ಬಿರ್ಲಾ ಪ್ರಶಂಸಿಸಿದರು.

ಹಿಂದಿನ ಎಐಪಿಒಸಿಗಳ ಪ್ರಮುಖ ವಿಚಾರ ವಿಮರ್ಶೆಗಳನ್ನು ಸ್ಮರಿಸಿದ ಶ್ರೀ ಬಿರ್ಲಾ ಅವರು, ಉತ್ಕೃಷ್ಟತೆ, ನಾವೀನ್ಯತೆ ಮತ್ತು ತಂತ್ರಜ್ಞಾನದ ಬಳಕೆಯಂತಹ ಮಾನದಂಡಗಳ ಮೇಲೆ ರಾಜ್ಯ ಶಾಸಕಾಂಗಗಳ ನಡುವೆ ಆರೋಗ್ಯಕರ ಸ್ಪರ್ಧೆಯ ಅಗತ್ಯವನ್ನು ಒತ್ತಿ ಹೇಳಿದರು. 2019 ರಲ್ಲಿ ಡೆಹ್ರಾಡೂನ್‌ನಲ್ಲಿ ನಡೆದ ಎಐಪಿಒಸಿ ಸಮಯದಲ್ಲಿ ನಡೆದ ಚರ್ಚೆಗಳನ್ನು ಉಲ್ಲೇಖಿಸಿದ ಅವರು, ರಾಜ್ಯ ಶಾಸಕಾಂಗಗಳ ದಕ್ಷತೆ ಮತ್ತು ಕಾರ್ಯನಿರ್ವಹಣೆಯನ್ನು ಸುಧಾರಿಸುವ ಬಗ್ಗೆ ತಮ್ಮ ದೀರ್ಘಕಾಲದ ದೃಷ್ಟಿಕೋನಗಳನ್ನು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಅದು ಭಾರತದ ಶಾಸಕಾಂಗ ಸಂಸ್ಥೆಗಳ ಅಭ್ಯಾಸಗಳು ಮತ್ತು ಕಾರ್ಯವಿಧಾನಗಳ ಪ್ರಮಾಣೀಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸುತ್ತಿದೆ ಎಂದು ಅವರು ಹೇಳಿದರು.

ಗೌರವಾನ್ವಿತ ರಾಜ್ಯಸಭಾ ಉಪಸಭಾತಿ ಶ್ರೀ ಹರಿವಂಶ ಅವರು ಶಾಸಕಾಂಗಗಳ ದಕ್ಷತೆಯನ್ನು ಹೆಚ್ಚಿಸುವಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಪಾತ್ರವನ್ನು ಎತ್ತಿ ತೋರಿಸಿದರು ಮತ್ತು ಈ ತಂತ್ರಜ್ಞಾನವನ್ನು ಸೂಕ್ತ ಹಾಗೂ ವಿಶ್ವಾಸಾರ್ಹವಾಗಿಸಲು ಅಗತ್ಯವಿರುವ ವಿವಿಧ ಹಂತಗಳನ್ನು ವಿವರಿಸಿದರು. ಸಂಸತ್ತಿನಲ್ಲಿ ಕೃತಕ ಬುದ್ಧಿಮತ್ತೆಯ ಪ್ರಾಯೋಗಿಕ ಬಳಕೆ ಮತ್ತು ಅದರ ಅನುಷ್ಠಾನದ ವಿವಿಧ ವಿಧಾನಗಳನ್ನು ಒತ್ತಿ ಹೇಳಿದ ಅವರು, ಶಾಸಕಾಂಗಗಳ ಸಾಂಸ್ಥಿಕ ಜ್ಞಾನವನ್ನು ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳೆರಡೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ನಡುವೆ ಹೆಚ್ಚಿನ ಸಮನ್ವಯದ ಅಗತ್ಯವಿದೆ ಎಂದು ಅವರು ತಿಳಿಸಿದರು.

ನಾಳೆ, ಜನವರಿ 21, 2026 ರಂದು ಸಮ್ಮೇಳನದ ಮೂರನೇ ಮತ್ತು ಅಂತಿಮ ದಿನವಾಗಿರುತ್ತದೆ. ಈ ಸಂದರ್ಭದಲ್ಲಿ ಗೌರವಾನ್ವಿತ ಲೋಕಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಉತ್ತರ ಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು ಭಾಗವಹಿಸಲಿದ್ದು, ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 

*****


(रिलीज़ आईडी: 2216649) आगंतुक पटल : 3
इस विज्ञप्ति को इन भाषाओं में पढ़ें: English , Urdu , हिन्दी , Gujarati , Odia , Tamil