ರೈಲ್ವೇ ಸಚಿವಾಲಯ
ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣಿಕರಲ್ಲಿ ಭಾರಿ ಜನಪ್ರಿಯತೆ ಗಳಿಸಿದೆ
ಟಿಕೆಟ್ ವಿಂಡೋ ತೆರೆದ ಕೆಲವೇ ಗಂಟೆಗಳಲ್ಲಿ ಮೊದಲ ದಿನದ ಪ್ರಯಾಣದ ಎಲ್ಲಾ ಟಿಕೆಟ್‌ಗಳು ಬುಕ್ ಆಗಿವೆ
प्रविष्टि तिथि:
20 JAN 2026 7:57PM by PIB Bengaluru
ಕಾಮಾಕ್ಯ (ಕೆ.ವೈ.ಕ್ಯೂ) ಮತ್ತು ಹೌರಾ (ಎಚ್.ಡಬ್ಲ್ಯೂ.ಎಚ್) ನಡುವಿನ ವಂದೇ ಭಾರತ್ ಸ್ಲೀಪರ್ ರೈಲಿನ (ರೈಲು ಸಂಖ್ಯೆ 27576) ಮೊದಲ ವಾಣಿಜ್ಯ ಸಂಚಾರಕ್ಕೆ ಪ್ರಯಾಣಿಕರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಿ.ಆರ್.ಎಸ್ ಮತ್ತು ಇತರ ಸೈಟ್‌ಗಳ ಮೂಲಕ ಟಿಕೆಟ್ ಬುಕಿಂಗ್ ತೆರೆದ ಕೆಲವೇ ಗಂಟೆಗಳಲ್ಲಿ ಎಲ್ಲಾ ಸೀಟುಗಳು ಬುಕ್ ಆಗಿವೆ. ಜನವರಿ 17, 2026 ರಂದು ಗೌರವಾನ್ವಿತ ಪ್ರಧಾನಮಂತ್ರಿಯವರು ಉದ್ಘಾಟಿಸಿದ ವಂದೇ ಭಾರತ್ ಸ್ಲೀಪರ್ ನ ವೇಗ, ಸೌಕರ್ಯ ಮತ್ತು ಆಧುನಿಕ ಸೌಲಭ್ಯಗಳನ್ನು ಅನುಭವಿಸುವ ಪ್ರಯಾಣಿಕರ ಉತ್ಸಾಹವನ್ನು ಈ ತ್ವರಿತ ಮಾರಾಟವು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.

ಜನವರಿ 22, 2026 ರಿಂದ ಕಾಮಾಕ್ಯದಿಂದ ಮತ್ತು ಜನವರಿ 23, 2026 ರಿಂದ ಹೌರಾ ದಿಂದ ಜಾರಿಗೆ ಬರುವಂತೆ ಈ ರೈಲು ತನ್ನ ಮೊದಲ ವಾಣಿಜ್ಯ ಪ್ರಯಾಣವನ್ನು ಪ್ರಾರಂಭಿಸಲಿದೆ. ಈ ಹೊಸ ಸೇವೆಯ ಟಿಕೆಟ್ ಬುಕಿಂಗ್ ಕಿಟಕಿಗಳು ಜನವರಿ 19, 2026 ರಂದು ಬೆಳಿಗ್ಗೆ 08:00 ಗಂಟೆಗೆ ಪ್ರಾರಂಭವಾಯಿತು. 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, ಎಲ್ಲಾ ವರ್ಗಗಳ ಟಿಕೆಟ್ ಗಳು ಸಂಪೂರ್ಣವಾಗಿ ಮಾರಾಟವಾದವು, ಇದು ಪರಿಚಯಿಸಲಾದ ಪ್ರೀಮಿಯಂ ಸೆಮಿ-ಹೈ-ಸ್ಪೀಡ್ ಸೇವೆಗೆ ಸಾರ್ವಜನಿಕರಲ್ಲಿ ಇರುವ ಅಪಾರ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ.
ಇದರ ಮೊದಲ ವಾಣಿಜ್ಯಿಕ ಓಟಕ್ಕೆ ದೊರೆತ ಈ ಗಮನಾರ್ಹ ಪ್ರತಿಕ್ರಿಯೆಯು ವೇಗವಾದ, ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ರೈಲು ಪ್ರಯಾಣ ಆಯ್ಕೆಗಳಿಗಾಗಿ ಪ್ರಯಾಣಿಕರಲ್ಲಿ ಹೆಚ್ಚುತ್ತಿರುವ ಆದ್ಯತೆಯನ್ನು ಒತ್ತಿಹೇಳುತ್ತದೆ. ಕಾಮಾಕ್ಯ - ಹೌರಾ ವಂದೇ ಭಾರತ್ ಸ್ಲೀಪರ್ ಈಶಾನ್ಯ ಮತ್ತು ಪೂರ್ವ ಭಾರತದ ನಡುವಿನ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ, ಆಧುನಿಕ ಸೌಲಭ್ಯಗಳು, ಸುಧಾರಿತ ಪ್ರಯಾಣದ ಸಮಯ ಮತ್ತು ವಿಶ್ವ ದರ್ಜೆಯ ರಾತ್ರಿ ಪ್ರಯಾಣದ ಅನುಭವವನ್ನು ಈ ವಿಶೇಷ ರೈಲು ನೀಡಲಿದೆ.
ಟಿಕೆಟ್ ವಿಂಡೋ ಕೆಲವೇ ಗಂಟೆಗಳಲ್ಲಿ ಸಂಪೂರ್ಣವಾಗಿ ಬುಕ್ ಮಾಡಿದ ಸ್ಥಿತಿಯು ಭಾರತೀಯ ರೈಲ್ವೆಯು ಪರಿಚಯಿಸುತ್ತಿರುವ ಆಧುನಿಕ ರೈಲು ಸೇವೆಗಳ ಬಗ್ಗೆ ಪ್ರಯಾಣಿಕರು ಹೊಂದಿರುವ ನಂಬಿಕೆ ಮತ್ತು ಉತ್ಸಾಹಕ್ಕೆ ಬಲವಾದ ಸಾಕ್ಷಿಯಾಗಿದೆ, ಇದು ಈ ಪ್ರದೇಶಕ್ಕೆ ಉತ್ಕೃಷ್ಟ ಪ್ರೀಮಿಯಂ ರೈಲು ಸಂಪರ್ಕದಲ್ಲಿ ಹೊಸ ಅಧ್ಯಾಯವನ್ನು ಗುರುತಿಸುತ್ತದೆ.
*****
(रिलीज़ आईडी: 2216619)
आगंतुक पटल : 14