ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ 3,250 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಹು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯ ಇಣುಕುನೋಟಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 17 JAN 2026 5:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ 3,250 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಹು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ.

ಈ ಸಂಬಂಧ ಎಕ್ಸ್ ಖಾತೆಯ ಸರಣಿ ಪೋಸ್ಟ್ ಗಳಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ:

"ಪಶ್ಚಿಮ ಬಂಗಾಳದ ಮಾಲ್ಡಾದಿಂದ, ರೈಲ್ವೆ ಮೂಲಸೌಕರ್ಯವನ್ನು ಆಧುನೀಕರಿಸಲು ಮಹತ್ವದ ಹೆಜ್ಜೆ ಇಡಲಾಗಿದೆ.

ವಂದೇ ಭಾರತ್ ಸ್ಲೀಪರ್ ರೈಲುಗಳಿಗೆ ಹಸಿರು ನಿಶಾನೆ ತೋರುತ್ತಿರುವುದು ಅನುಕೂಲತೆಯನ್ನು ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿದೆ."

"ಪಶ್ಚಿಮ ಬಂಗಾಳ ರಾಜ್ಯವು ಇನ್ನೂ ನಾಲ್ಕು ಆಧುನಿಕ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನು ಪಡೆದಿರುವುದರಿಂದ ಅದರ ಜನರಿಗೆ ಅಭಿನಂದನೆಗಳು."

“পশ্চিমবঙ্গের মালদা থেকে রেল পরিকাঠামোর আধুনিকীকরণে এক গুরুত্বপূর্ণ পদক্ষেপ নেওয়া হয়েছে।

বন্দে ভারত স্লিপার ট্রেনের সূচনা যাত্রীসুবিধার ক্ষেত্রে এক বড় পদক্ষেপ।”

“রাজ্য আরও চারটি আধুনিক অমৃত ভারত এক্সপ্রেস ট্রেন পাওয়ায় পশ্চিমবঙ্গের মানুষকে অভিনন্দন।”

"ಮಾಲ್ಡಾ ರೈಲು ನಿಲ್ದಾಣದಲ್ಲಿ, ಹೌರಾದಿಂದ ಗುವಾಹಟಿಗೆ ಸಂಪರ್ಕ ಕಲ್ಪಿಸುವ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಿದರು. ನಿಲ್ದಾಣದಲ್ಲಿ ಮತ್ತು ರೈಲಿನಲ್ಲಿದ್ದ ಮಕ್ಕಳೊಂದಿಗೆ ಆಹ್ಲಾದಕರ ಸಂವಾದ ನಡೆಸಿದೆ." 

“মালদা রেল স্টেশনে পতাকা দেখিয়ে হাওড়া ও গুয়াহাটিকে সংযোগকারী প্রথম বন্দে ভারত স্লিপার ট্রেন-এর যাত্রা শুরু করালাম। স্টেশনে এবং ট্রেনে উপস্থিত শিশুদের সঙ্গে কথা বলে আনন্দিত হলাম।”

 

*****


(रिलीज़ आईडी: 2215758) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Gujarati , Odia , Tamil , Telugu , Malayalam