ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ನವದೆಹಲಿಯ ದಿಲ್ಲಿ ಹಾತ್‌ನಲ್ಲಿ ಜನವರಿ 18 ರಿಂದ 31 ರವರೆಗೆ ಪ್ರಧಾನಮಂತ್ರಿ ವಿಶ್ವಕರ್ಮ ಹಾತ್ 2026 ಆಯೋಜನೆ
ಕೇಂದ್ರ ಎಂಎಸ್‌ಎಂಇ ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ ಅವರಿಂದ ನಾಳೆ ಪ್ರದರ್ಶನ ಉದ್ಘಾಟನೆ
"ವಿಶ್ವಕರ್ಮ್ ಕಾ ಅಭಿಯಾನ್, ವಿಕಸಿತ ಭಾರತ್ ಕಾ ನಿರ್ಮಾಣ್" ಚೈತನ್ಯ ಪ್ರತಿಬಿಂಬಿಸುವ ಸಾಂಪ್ರದಾಯಿಕ ಕರಕುಶಲ ಮತ್ತು ಸಾಂಸ್ಕೃತಿಕ ಅನುಭವಗಳ ಪ್ರದರ್ಶನ
ದೇಶಾದ್ಯಂತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 117 ಕ್ಕೂ ಹೆಚ್ಚು ಕುಶಲಕರ್ಮಿಗಳು ಕಾರ್ಯಕ್ರಮದಲ್ಲಿ ಭಾಗಿ
प्रविष्टि तिथि:
17 JAN 2026 12:51PM by PIB Bengaluru
ಭಾರತ ಸರ್ಕಾರದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯವು (MSME) ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಕುಶಲಕರ್ಮಿಗಳು ಮತ್ತು ಕರಕುಶಲ ಕಲೆಗಾರರಿಗೆ ಪ್ರತ್ಯೇಕವಾಗಿ ಮೀಸಲಾಗಿರುವ ಪಿಎಂ ವಿಶ್ವಕರ್ಮ ಹಾತ್ 2026 ಅನ್ನು ಆಯೋಜಿಸಲಿದೆ. ನವದೆಹಲಿಯ INA ದಿಲ್ಲಿ ಹಾತ್‌ನಲ್ಲಿ 2026ರ ಜನವರಿ 18 ರಿಂದ 31 ರವರೆಗೆ ಪ್ರದರ್ಶನ ನಡೆಯಲಿದ್ದು, ಬೆಳಗ್ಗೆ 10:30 ರಿಂದ ರಾತ್ರಿ 10:00 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಈ ಪ್ರದರ್ಶನವನ್ನು ಕೇಂದ್ರ ಎಂ ಎಸ್ ಎಂ ಇ ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ ಉದ್ಘಾಟಿಸಲಿದ್ದು, ಎಂ ಎಸ್ ಎಂ ಇ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಉಪಸ್ಥಿತರಿರಲಿದ್ದಾರೆ.
ಕುಶಲಕರ್ಮಿಗಳು ತಮ್ಮ ಕರಕುಶಲ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖರೀದಿದಾರರು, ಪಾಲುದಾರರು ಮತ್ತು ಸಾರ್ವಜನಿಕರಿಗೆ ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಪ್ರಮುಖ ವೇದಿಕೆಯನ್ನು ಒದಗಿಸುವ ಜೊತೆಗೆ ಪ್ರಧಾನಮಂತ್ರಿ ವಿಶ್ವಕರ್ಮ ಹಾತ್ 2026, ಭಾರತದ ಶ್ರೀಮಂತ ಸಾಂಪ್ರದಾಯಿಕ ಕರಕುಶಲ ಪರಂಪರೆಯನ್ನು ಆಚರಿಸುವ ಮತ್ತು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.
ದೇಶಾದ್ಯಂತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 117 ಕ್ಕೂ ಹೆಚ್ಚು ಕುಶಲಕರ್ಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಇದು ಭಾರತದಾದ್ಯಂತದ ವೈವಿಧ್ಯಮಯ ಸಾಂಪ್ರದಾಯಿಕ ಕೌಶಲ್ಯ ಮತ್ತು ಕರಕುಶಲ ವಸ್ತುಗಳನ್ನು ಪ್ರದರ್ಶಿಸಲಿದೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳಿಗೆ ಮಾರುಕಟ್ಟೆ ಅವಕಾಶ ಹೆಚ್ಚಿಸಲು, ಲಭ್ಯತೆ ಸುಧಾರಿಸಲು ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಹಾತ್ ಪ್ರಯತ್ನಿಸಲಿದೆ. ಪ್ರಧಾನಮಂತ್ರಿ ವಿಶ್ವಕರ್ಮ ಹಾತ್ 2026 ಕ್ಕೆ ವಿದೇಶಿ ಮಿಷನ್ ಗಳ ಪ್ರತಿನಿಧಿಗಳನ್ನು ಸಹ ಆಹ್ವಾನಿಸಲಾಗಿದೆ.
ಈ ಪ್ರದರ್ಶನವು "ವಿಶ್ವಕರ್ಮ ಕಾ ಅಭಿಯಾನ, ವಿಕಸಿತ್ ಭಾರತ್ ಕಾ ನಿರ್ಮಾಣ್" ಚೈತನ್ಯವನ್ನು ಪ್ರತಿಬಿಂಬಿಸಲಿದೆ. ವ್ಯಾಪಕ ಶ್ರೇಣಿಯ ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಕರಕುಶಲ ಕಲೆಗಳ ನೇರ ಪ್ರಾತ್ಯಕ್ಷಿಕೆಗಳ ಜೊತೆಗೆ ಸಾಂಸ್ಕೃತಿಕ ಅನುಭವಗಳನ್ನು ಪ್ರದರ್ಶಿಸಲಿದೆ. ಕುಶಲಕರ್ಮಿಗಳನ್ನು ಸಬಲಗೊಳಿಸುವ, ಸಾಂಪ್ರದಾಯಿಕ ಕೌಶಲ್ಯಗಳನ್ನು ಸಂರಕ್ಷಿಸುವ ಮತ್ತು MSME ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಭಾರತ ಸರ್ಕಾರದ ಬದ್ಧತೆಯನ್ನು ಪಿಎಂ ವಿಶ್ವಕರ್ಮ ಹಾತ್ 2026 ಬಲಪಡಿಸಲಿದೆ.
******
(रिलीज़ आईडी: 2215615)
आगंतुक पटल : 17