ಪ್ರಧಾನ ಮಂತ್ರಿಯವರ ಕಛೇರಿ
ಜನವರಿ 15 ರಂದು ಕಾಮನ್‌ವೆಲ್ತ್‌ನ 28ನೇ ಸ್ಪೀಕರ್‌ಗಳು ಮತ್ತು ಅಧ್ಯಕ್ಷತೆ ವಹಿಸುವವರ ಸಮ್ಮೇಳನವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ
प्रविष्टि तिथि:
14 JAN 2026 11:19AM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 15, 2026 ರಂದು ಬೆಳಿಗ್ಗೆ 10:30ಕ್ಕೆ ನವದೆಹಲಿಯ ಸಂಸತ್ ಭವನದ ಸಂಕೀರ್ಣದ ಸಂವಿಧಾನ್ ಸದನದ ಕೇಂದ್ರ ಸಭಾಂಗಣದಲ್ಲಿ ಕಾಮನ್‌ವೆಲ್ತ್‌ನ ಸ್ಪೀಕರ್‌ಗಳು ಮತ್ತು ಅಧ್ಯಕ್ಷತೆ ವಹಿಸುವವರ 28ನೇ ಸಮ್ಮೇಳನವನ್ನು (CSPOC) ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಲೋಕಸಭೆ ಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಜಗತ್ತಿನ ವಿವಿಧ ಭಾಗಗಳಿಂದ 42 ಕಾಮನ್‌ವೆಲ್ತ್ ದೇಶಗಳು ಮತ್ತು 4 ಅರೆ ಸ್ವಾಯತ್ತ ಸಂಸತ್ತುಗಳ 61 ಸ್ಪೀಕರ್‌ಗಳು ಮತ್ತು ಅಧ್ಯಕ್ಷತೆ ವಹಿಸುವವರು ಭಾಗವಹಿಸಲಿದ್ದಾರೆ.
ಸದೃಢ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಿರ್ವಹಿಸುವಲ್ಲಿ ಸಭಾಧ್ಯಕ್ಷರು ಮತ್ತು ಅಧ್ಯಕ್ಷತೆ ವಹಿಸುವವರ ಪಾತ್ರ, ಸಂಸದೀಯ ಕಾರ್ಯನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ, ಸಂಸತ್ತಿನ ಸದಸ್ಯರ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ, ಸಂಸತ್ತಿನ ಬಗ್ಗೆ ಸಾರ್ವಜನಿಕ ತಿಳಿವಳಿಕೆಯನ್ನು ಹೆಚ್ಚಿಸಲು ನವೀನ ತಂತ್ರಗಳ ಬಳಕೆ ಮತ್ತು ಮತದಾನವನ್ನು ಮೀರಿ ನಾಗರಿಕರ ಪಾಲ್ಗೊಳ್ಳುವಿಕೆ ಸೇರಿ ವ್ಯಾಪಕ ಶ್ರೇಣಿಯ ಸಮಕಾಲೀನ ಸಂಸದೀಯ ವಿಷಯಗಳ ಕುರಿತು ಸಮ್ಮೇಳನವು ಚರ್ಚೆ ನಡೆಸಲಿದೆ.
*****
(रिलीज़ आईडी: 2214428)
आगंतुक पटल : 15
इस विज्ञप्ति को इन भाषाओं में पढ़ें:
Assamese
,
English
,
Urdu
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Tamil
,
Malayalam