ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2026ರ ವಿಕಸಿತ ಭಾರತ ಯುವ ನಾಯಕರ ಸಂವಾದದಲ್ಲಿ ಮಾಡಿದ ಭಾಷಣದ ಕೆಲವು ದೃಶ್ಯಗಳು ಹಂಚಿಕೊಂಡಿದ್ದಾರೆ

प्रविष्टि तिथि: 13 JAN 2026 9:16AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಇಂದು ದೆಹಲಿಯಲ್ಲಿ ನಡೆದ ವಿಕಸಿತ ಭಾರತ ಯುವ ನಾಯಕರ ಸಂವಾದ 2026 ಕಾರ್ಯಕ್ರಮದಲ್ಲಿ ಮಾಡಿದ ಭಾಷಣದ ಕೆಲವು ದೃಶ್ಯಗಳು ಹಂಚಿಕೊಂಡಿದ್ದಾರೆ.


ಎಕ್ಸ್ ಖಾತೆಯಲ್ಲಿ ಶ್ರೀ ಮೋದಿಯವರು ಹೀಗೆ ಬರೆದುಕೊಂಡಿದ್ದಾರೆ:

"ಕಳೆದ 11 ವರ್ಷಗಳಲ್ಲಿ, ದೇಶದ ಪ್ರತಿಯೊಂದು ವಲಯದಲ್ಲೂ ನಿರಂತರ ಅವಕಾಶಗಳ ಬಾಗಿಲುಗಳು ತೆರೆದುಕೊಳ್ಳುತ್ತಿವೆ. ವಿಷಯ ಮತ್ತು ಸೃಜನಶೀಲತೆ ಈ ಅವಕಾಶಗಳಲ್ಲಿ ಸೇರಿವೆ, ನಮ್ಮ ಯುವಜನತೆ ರಾಮಾಯಣ, ಮಹಾಭಾರತದ ಸ್ಪೂರ್ತಿದಾಯಕ ಪುರಾಣ ಕಥೆಗಳನ್ನು ಗೇಮಿಂಗ್ ಜಗತ್ತಿನಲ್ಲಿ ಸೇರಿಸಿಕೊಳ್ಳಬಹುದು, ಹನುಮಾನ್ ದೇವರು ಕೂಡ ಗೇಮಿಂಗ್ ಜಗತ್ತನ್ನು ನಡೆಸಬಲ್ಲರು!"

"ನಾವು ಆರಂಭಿಸಿರುವ ಮುಂದಿನ ಪೀಳಿಗೆಯ ಸುಧಾರಣೆಗಳ ಸರಣಿಯು ಈಗ ಸುಧಾರಣಾ ಎಕ್ಸ್‌ಪ್ರೆಸ್ ಆಗಿ ಮಾರ್ಪಟ್ಟಿದೆ. ಅದರ ಮೂಲತತ್ವ ನಮ್ಮ ಯುವ ಶಕ್ತಿಯಾಗಿದೆ.
#YoungLeadersDialogue2026”

"ನಾವು ಗುಲಾಮ ಮನಸ್ಥಿತಿಯನ್ನು ಜಯಿಸಬೇಕು, ನಮ್ಮ ಪರಂಪರೆ ಮತ್ತು ನಮ್ಮ ಆಲೋಚನೆಗಳನ್ನು ಯಾವಾಗಲೂ ಸ್ಮರಿಸುತ್ತಿರಬೇಕು. ಸ್ವಾಮಿ ವಿವೇಕಾನಂದರ ಜೀವನವೂ ನಮಗೆ ಇದನ್ನೇ ಕಲಿಸುತ್ತದೆ.
#YoungLeadersDialogue2026”

 

******


(रिलीज़ आईडी: 2214100) आगंतुक पटल : 4
इस विज्ञप्ति को इन भाषाओं में पढ़ें: English , Urdu , हिन्दी , Assamese , Bengali , Manipuri , Gujarati , Odia , Malayalam