ಕೃಷಿ ಸಚಿವಾಲಯ
azadi ka amrit mahotsav

ವಿಕಸಿತ ಭಾರತ ಯುವ ನಾಯಕರ ಸಂವಾದ 2026ರಲ್ಲಿ ಯುವ ನಾಯಕರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್


ರಾಷ್ಟ್ರ ನಿರ್ಮಾಣದಲ್ಲಿ ಸಾಮೂಹಿಕ ಜವಾಬ್ದಾರಿಯ ಮಹತ್ವವನ್ನು ಉಲ್ಲೇಖಿಸಿದ ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು

ಬದ್ಧತೆ ಮತ್ತು ಶಿಸ್ತಿನಿಂದ ದೊಡ್ಡ ಗುರಿಗಳನ್ನು ಸಾಧಿಸಲು ಯುವ ನಾಯಕರನ್ನು ಪ್ರೋತ್ಸಾಹಿಸಿದ ಸಚಿವರಾದ ಚೌಹಾಣ್

प्रविष्टि तिथि: 12 JAN 2026 2:20PM by PIB Bengaluru

ವಿಕಸಿತ ಭಾರತ ಯುವ ನಾಯಕರ ಸಂವಾದ 2026 ರ ಪ್ರಕ್ರಿಯೆಯ ಭಾಗವಾಗಿ ಭಾರತ್ ಮಂಟಪದಲ್ಲಿಂದು ನಡೆದ ಗೌರವಾನ್ವಿತ ಕೇಂದ್ರ ಸಚಿವರ ಸಮಿತಿಯ ಮುಂದೆ ಟ್ರ್ಯಾಕ್-ವೈಸ್ (ವಲಯವಾರು) ಪ್ರಸ್ತುತಿಗಳ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಯುವ ನಾಯಕರೊಂದಿಗೆ ಸಂವಾದ ನಡೆಸಿದರು. ಈ ಗೋಷ್ಠಿಯ ಸಂವಾದದಲ್ಲಿ ಪ್ರಮುಖ ಮೈಲಿಗಲ್ಲಿಗೆ ಸಾಕ್ಷಿಯಾಯಿತು, ಹಿರಿಯ ನೀತಿ ನಿರೂಪಕರು ಮತ್ತು ದೇಶಾದ್ಯಂತದ ಅತ್ಯುತ್ತಮ ಯುವ ಪ್ರತಿನಿಧಿಗಳ ನಡುವೆ ನೇರ ಮುಖಾಮುಖಿಗೆ ರಚನಾತ್ಮಕ ವೇದಿಕೆಯನ್ನು ಒದಗಿಸಿತು.

ಸಂವಾದದ ವೇಳೆ, ಯುವ ನಾಯಕರು ಸುಸ್ಥಿರ ಮತ್ತು ಹಸಿರು ವಿಕಸಿತ ಭಾರತ ನಿರ್ಮಾಣ, ಸ್ಮಾರ್ಟ್ ಮತ್ತು ಸುಸ್ಥಿರ ಕೃಷಿಯ ಮೂಲಕ ಉತ್ಪಾದಕತೆ ಹೆಚ್ಚಳ ಮಾಡುವುದು ಮತ್ತು ಸಂಪ್ರದಾಯದೊಂದಿಗೆ ನಾವೀನ್ಯತೆ: ಆಧುನಿಕ ಭಾರತ ನಿರ್ಮಾಣ ಸೇರಿದಂತೆ ಹಲವು ವಿಷಯಾಧಾರಿತ ಕ್ಷೇತ್ರಗಳಲ್ಲಿ ತಮ್ಮ ಆಲೋಚನೆಗಳು, ನೀತಿ ದೂರದೃಷ್ಟಿಗಳು ಮತ್ತು ತಳಮಟ್ಟದ ನಾವೀನ್ಯತೆಗಳನ್ನು ಪ್ರಸ್ತುತಪಡಿಸಿದರು. ಆ ಪ್ರಾತ್ಯಕ್ಷಿಕೆಗಳಲ್ಲಿ ಭಾರತದ ಯುವಕರ ಚಿಂತನೆಯ ವೈವಿಧ್ಯತೆ, ಸೃಜನಶೀಲತೆ ಮತ್ತು ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳನ್ನು ಪ್ರತಿಬಿಂಬಿಸಲ್ಪಟ್ಟವು ಮತ್ತು ಅವು  ಸಮಗ್ರ ಹಾಗು ಸುಸ್ಥಿರ ಅಭಿವೃದ್ಧಿಯ ರಾಷ್ಟ್ರೀಯ ದೂರದೃಷ್ಟಿಗೆ ಅನುಗುಣವಾಗಿವೆ.

ಭಾಗವಹಿಸಿದವರನ್ನುದ್ದೇಶಿಸಿ ಮಾತನಾಡಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್‌, ರಾಷ್ಟ್ರ ನಿರ್ಮಾಣದಲ್ಲಿ ಉದ್ದೇಶಪೂರ್ವಕ ಜೀವನ ಮತ್ತು ಸಾಮೂಹಿಕ ಜವಾಬ್ದಾರಿಯ ಮಹತ್ವವನ್ನು ಹೇಳಿದರು. ಭಾರತದ ನಾಗರಿಕತೆಯ ತತ್ವಗಳನ್ನು ಆಧರಿಸಿ, ಸಮಾಜ ಮತ್ತು ರಾಷ್ಟ್ರದ ಸೇವೆಗೆ ಬದ್ಧತೆ ಹೊಂದಿದ್ದರೆ ಜೀವನವು ನಿಜವಾದ ಅರ್ಥವನ್ನು ಪಡೆಯುತ್ತದೆ ಎಂದು ಅವರು ಹೇಳಿದರು. ನಾಯಕತ್ವದ ಅಗತ್ಯ ಗುಣಲಕ್ಷಣಗಳಾಗಿ ಬದ್ಧತೆ, ಗಮನ ಕೇಂದ್ರೀಕರಿಸುವುದು ಮತ್ತು ಅಂತಃ ಶಕ್ತಿಯ ಮೌಲ್ಯಗಳನ್ನು ಎತ್ತಿ ತೋರಿಸುವ ಮೂಲಕ ಬದ್ಧತೆ ಮತ್ತು ಶಿಸ್ತಿನಿಂದ ದೊಡ್ಡ ಗುರಿಗಳನ್ನು ಸಾಧಿಸಬಹುದು ಎಂದು ಅವರು ಯುವ ನಾಯಕರನ್ನು ಪ್ರೋತ್ಸಾಹಿಸಿದರು. ವಿಕಸಿತ ಭಾರತಡೆಗಿನ ಪಯಣದಲ್ಲಿ ಅರ್ಥಪೂರ್ಣ ಯುವ ಜನಾಂಗದ ಸಕ್ರೀಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಇಂತಹ ವೇದಿಕೆಗಳನ್ನು ರೂಪಿಸುವಲ್ಲಿ ಪ್ರಧಾನಮಂತ್ರಿಯವರ ಮಾರ್ಗದರ್ಶನವನ್ನು ಕೇಂದ್ರ ಸಚಿವರು ಶ್ಲಾಘಿಸಿದರು.

ಆಡಳಿತ ಮತ್ತು ನೀತಿ ಸಂವಾದದಲ್ಲಿ ಯುವಜನರ ಒಳಗೊಳ್ಳುವಿಕೆಯನ್ನು ಸಾಂಸ್ಥಿಕಗೊಳಿಸುವ ಉದ್ದೇಶದಿಂದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಮೈ ಭಾರತ್ ವೇದಿಕೆಯ ಮೂಲಕ ವಿಕಸಿತ ಭಾರತ ಯುವ ನಾಯಕರ ಸಂವಾದ 2026 ಅನ್ನು ಆಯೋಜಿಸುತ್ತಿದೆ. ಭಾರತ ಮಂಟಪದಲ್ಲಿ ನಡೆದ ಸಂವಾದದ ಯಶಸ್ವಿ ಆಯೋಜನೆಯು ಯುವಜನರನ್ನು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಪ್ರಮುಖ ಪಾಲುದಾರರನ್ನಾಗಿ ಗುರುತಿಸುವ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ದೇಶದ ಪ್ರಗತಿಯಲ್ಲಿ ಅವರ ಧ್ವನಿಯನ್ನು ಸಂಯೋಜಿಸುವ ಭಾರತ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿತು.

 

*****


(रिलीज़ आईडी: 2213724) आगंतुक पटल : 14
इस विज्ञप्ति को इन भाषाओं में पढ़ें: English , Urdu , हिन्दी , Marathi , Gujarati , Tamil , Malayalam