ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾಜಿ ಸಂಸದ ಮತ್ತು ಕೇಂದ್ರ ಸಚಿವರಾದ ಶ್ರೀ ಕಬೀಂದ್ರ ಪುರ್ಕಾಯಸ್ಥ ಅವರ ನಿಧನಕ್ಕೆ ಪ್ರಧಾನಮಂತ್ರಿ ಅವರು ಸಂತಾಪ ಸೂಚಿಸಿದ್ದಾರೆ

प्रविष्टि तिथि: 07 JAN 2026 7:07PM by PIB Bengaluru

ಮಾಜಿ ಸಂಸದ ಮತ್ತು ಕೇಂದ್ರ ಸಚಿವರಾದ ಶ್ರೀ ಕಬೀಂದ್ರ ಪುರ್ಕಾಯಸ್ಥ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಸಮಾಜಕ್ಕೆ ಸೇವೆ ಸಲ್ಲಿಸುವಲ್ಲಿ ಅಚಲ ಬದ್ಧತೆ ಹೊಂದಿದ್ದ ಮತ್ತು ಅಸ್ಸಾಂನ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ ಶ್ರೀ ಪುರ್ಕಾಯಸ್ಥ ಅವರ ನಿಧನದಿಂದ ತಾವು ದುಃಖಿತರಾಗಿರುವುದಾಗಿ ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ರಾಜ್ಯಾದ್ಯಂತ ಭಾರತೀಯ ಜನತಾ ಪಕ್ಷವನ್ನು ಬಲಪಡಿಸುವಲ್ಲಿ ಶ್ರೀ ಪುರ್ಕಾಯಸ್ಥ ಜಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದರು .

ಎಕ್ಸ್ ತಾಣದ ಸಂದೇಶದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೀಗೆ ಹೇಳಿದ್ದಾರೆ:

“ಮಾಜಿ ಸಂಸದ ಮತ್ತು ಕೇಂದ್ರ ಸಚಿವರಾದ ಶ್ರೀ ಕಬೀಂದ್ರ ಪುರ್ಕಾಯಸ್ಥ ಅವರ ನಿಧನದಿಂದ ದುಃಖಿತರಾಗಿದ್ದೇವೆ. ಸಮಾಜಕ್ಕೆ ಸೇವೆ ಸಲ್ಲಿಸುವ ಅವರ ಬದ್ಧತೆ ಮತ್ತು ಅಸ್ಸಾಂನ ಪ್ರಗತಿಗೆ ನೀಡಿದ ಕೊಡುಗೆಯನ್ನು ಯಾವಾಗಲೂ ಸ್ಮರಿಸಲಾಗುವುದು. ರಾಜ್ಯಾದ್ಯಂತ ಬಿಜೆಪಿಯನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ನನ್ನ ಆಲೋಚನೆಗಳು ಇವೆ. ಓಂ ಶಾಂತಿ.”

“প্ৰাক্তন সাংসদ তথা কেন্দ্ৰীয় মন্ত্ৰী শ্ৰী কবীন্দ্ৰ পুৰকায়স্থ দেৱৰ বিয়োগত মৰ্মাহত হৈছো।  সমাজ সেৱাৰ প্ৰতি  তেওঁৰ দায়বদ্ধতা আৰু অসমৰ প্ৰগতিৰ প্ৰতি তেওঁৰ অৱদান সদায় স্মৰণীয় হৈ থাকিব।  সমগ্ৰ ৰাজ্যতে বিজেপিক শক্তিশালী কৰাৰ ক্ষেত্ৰত তেওঁ গুৰুত্বপূৰ্ণ ভূমিকা পালন কৰিছিল।   এই দুখৰ সময়ত তেওঁৰ পৰিয়াল আৰু গুণমুগ্ধসকলৰ প্ৰতি মোৰ সমবেদনা জনাইছো।  ঔম শান্তি।”

 

*****

 


(रिलीज़ आईडी: 2212254) आगंतुक पटल : 9
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Malayalam