ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಸಂಪನ್ (SAMPANN) : ಡಿಜಿಟಲ್ ಏಕೀಕರಣದ ಮೂಲಕ ದೂರಸಂಪರ್ಕ ಇಲಾಖೆಯ ಪಿಂಚಣಿದಾರರ ಆಡಳಿತದಲ್ಲಿ ಪರಿವರ್ತನೆ

प्रविष्टि तिथि: 05 JAN 2026 3:58PM by PIB Bengaluru

ಸಂಪನ್ (SAMPANN - System for Accounting and Management of Pension) ಎಂಬುದು ದೂರಸಂಪರ್ಕ ಇಲಾಖೆಯ ಪಿಂಚಣಿದಾರರಿಗಾಗಿ ರೂಪಿಸಲಾದ ಒಂದು ಸಂಯೋಜಿತ ಆನ್‌ಲೈನ್ ಪಿಂಚಣಿ ನಿರ್ವಹಣಾ ವ್ಯವಸ್ಥೆಯಾಗಿದೆ. ಇದು ಪಿಂಚಣಿಯನ್ನು ಪ್ರಕ್ರಿಯೆಗೊಳಿಸಲು, ಮಂಜೂರು ಮಾಡಲು ಮತ್ತು ನೇರವಾಗಿ ಪಿಂಚಣಿದಾರರ ಬ್ಯಾಂಕ್ ಖಾತೆಗೆ ವಿತರಿಸಲು ಒಂದು ಏಕರೂಪದ ವೇದಿಕೆಯನ್ನು ಸೃಷ್ಟಿಸುತ್ತದೆ. ಇದು ಆನ್‌ಲೈನ್ ಕುಂದುಕೊರತೆ ನಿವಾರಣೆ, ಡಿಜಿಟಲ್ ಪ್ರೊಫೈಲ್ ನಿರ್ವಹಣೆ ಮತ್ತು ವಹಿವಾಟಿನ ದಾಖಲೆಗಳ ಸೌಲಭ್ಯವನ್ನು ಒದಗಿಸುತ್ತದೆ, ಇದರಿಂದಾಗಿ ದೂರಸಂಪರ್ಕ  ಇಲಾಖೆಯ ನಿವೃತ್ತ ನೌಕರರಿಗೆ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲಿದೆ.

ಡಿಜಿಟಲ್ ಆಡಳಿತ ಮತ್ತು ಕಾಗದರಹಿತ ಸೇವೆಗಳ ಸರ್ಕಾರದ ದೂರದೃಷ್ಟಿಯನ್ನು ಮತ್ತಷ್ಟು ಮುನ್ನಡೆಸುತ್ತಾ, ಪಿಂಚಣಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳಾದ ಸೇವಾ ಧನ ಪಾವತಿ ಆದೇಶಗಳು, ಪಿಂಚಣಿ ಪ್ರಮಾಣಪತ್ರಗಳು/ಇ-ಪಿಪಿಒಗಳು, ಪಿಂಚಣಿ ಪರಿವರ್ತನೆ ಪಾವತಿ ಆದೇಶಗಳು ಮತ್ತು ಫಾರ್ಮ್ 16 ಅನ್ನು ಈಗ ಡಿಜಿಲಾಕರ್ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ. ಈ ಏಕೀಕರಣವು ಪಿಂಚಣಿದಾರರು ತಮ್ಮ ಅಧಿಕೃತ ದಾಖಲೆಗಳನ್ನು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ಸುರಕ್ಷಿತವಾಗಿ ಪಡೆಯಲು, ಸಂಗ್ರಹಿಸಲು ಮತ್ತು ಪುನರಾವಲೋಕಿಸಲು ಅನುವು ಮಾಡಿಕೊಡುತ್ತದೆ. ಇದು ಹೆಚ್ಚಿನ ಅನುಕೂಲತೆ, ದೃಢೀಕರಣ ಮತ್ತು ದಾಖಲೆಗಳ ದೀರ್ಘಕಾಲದ ಡಿಜಿಟಲ್ ಸಂರಕ್ಷಣೆಯನ್ನು ಖಚಿತಪಡಿಸುತ್ತದೆ.

ಸಂಪನ್ —  “सम्पन्न जीवन, निश्चिंत जीवन”

 

*****


(रिलीज़ आईडी: 2211523) आगंतुक पटल : 30
इस विज्ञप्ति को इन भाषाओं में पढ़ें: English , Gujarati , Urdu , हिन्दी , Bengali-TR , Tamil