ಗ್ರಾಮೀಣಾಭಿವೃದ್ಧಿ ಸಚಿವಾಲಯ
ಗ್ರಾಮೀಣಾಭಿವೃದ್ಧಿ ಇಲಾಖೆ: ವರ್ಷಾಂತ್ಯದ ಅವಲೋಕನ 2025
16,000 ಕಿ.ಮೀ.ಗೂ ಅಧಿಕ ರಸ್ತೆಗಳು ಮತ್ತು 900ಕ್ಕೂ ಅಧಿಕ ಸೇತುವೆಗಳೊಂದಿಗೆ ಗ್ರಾಮೀಣ ಸಂಪರ್ಕಕ್ಕೆ ಪ್ರಮುಖ ಉತ್ತೇಜನ ನೀಡಿದ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ
ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ನಿಂದ 2 ಕೋಟಿ ಲಕ್ಷಪತಿ ದೀದಿಗಳಿಗೆ ಸಬಲೀಕರಣ
ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿಯಲ್ಲಿ 3.86 ಕೋಟಿ ಮನೆಗಳ ಮಂಜೂರಾಗಿದ್ದು ಮತ್ತು 2.92 ಕೋಟಿ ಮನೆಗಳ ನಿರ್ಮಾಣ ಕಾರ್ಯ ಪೂರ್ಣ
ಪಿಎಂ-ಜನ್ ಮನ್ ವಸತಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 4.71 ಲಕ್ಷ ಮನೆಗಳ ಮಂಜೂರು, 2.42 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣ
ಡಿಡಿಯು-ಜಿಕೆವೈ: 82,000 ಕ್ಕೂ ಅಧಿಕ ಗ್ರಾಮೀಣ ಯುವಕರಿಗೆ ತರಬೇತಿ ಮತ್ತು 37,000 ಜನರಿಗೆ ಉದ್ಯೋಗ ಲಭ್ಯ
ಗ್ರಾಮೀಣ ಯುವಕರ ಸಬಲೀಕರಣಗೊಳಿಸುತ್ತಿರುವ ಆರ್‌ಎಸ್‌ಇಟಿಗಳು : 625 ಸಂಸ್ಥೆಗಳಲ್ಲಿ 59 ಲಕ್ಷ ತರಬೇತಿ ಮತ್ತು 43 ಲಕ್ಷ ಜನರಿಗೆ ನೆಲೆ
ವಿಕಸಿತ ಭಾರತ - ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಗೆ ಖಾತರಿ - ವಿಬಿ-ಜಿ ರಾಮ್ ಜಿ ಗ್ರಾಮೀಣ ಜಾರಿ; ಕುಟುಂಬಗಳಿಗೆ 125 ದಿನಗಳ ಉದ್ಯೋಗ ಖಾತ್ರಿ
2025-26 ರಲ್ಲಿ ಎನ್ ಎಸ್ ಎಪಿಗೆ ₹9,652 ಕೋಟಿ ಅನುದಾನ ಪಡೆದುಕೊಂಡಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ₹5,564 ಕೋಟಿ ಬಿಡುಗಡೆ
1058 ಜಿಲ್ಲಾ ಮಟ್ಟದ ದಿಶಾ ಸಭೆಗಳ ಆಯೋಜನೆ; ಒಟ್ಟು 8 ಯೋಜನೆಗಳನ್ನು ದಿಶಾ ಡ್ಯಾಶ್‌ಬೋರ್ಡ್‌ಗೆ ಸೇರ್ಪಡೆ
प्रविष्टि तिथि:
01 JAN 2026 11:19AM by PIB Bengaluru
ಗ್ರಾಮೀಣಾಭಿವೃದ್ಧಿ ಇಲಾಖೆಯ ಸಮಗ್ರ ಪ್ರಯತ್ನಗಳು ಮೂಲಸೌಕರ್ಯ, ಜೀವನೋಪಾಯ, ವಸತಿ, ಉದ್ಯೋಗ, ಕೌಶಲ್ಯ ಮತ್ತು ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಮೂಲಕ 2025ರಲ್ಲಿ ಗ್ರಾಮೀಣ ಭಾರತದಲ್ಲಿ ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸಿದೆ.
1. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ ವೈ)
- ಡಿಸೆಂಬರ್ 2000 ರಲ್ಲಿ ಆರಂಭಿಸಲಾದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ ವೈ), ಬಹುತೇಕ ಎಲ್ಲಾ ಅರ್ಹ ಗ್ರಾಮೀಣ ವಸತಿಗಳನ್ನು ಸಂಪರ್ಕಿಸುವಲ್ಲಿ ಮತ್ತು ಗಣನೀಯ ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ಅನುಕೂಲವಾಗುವಂತೆ ಗಮನಾರ್ಹ ಸಾಧನೆಗಳನ್ನು ಮಾಡಿದೆ.
- 01.01.2025 ರಿಂದ 12.12.2025 ರವರೆಗೆ ಪ್ರತಿ ವಿಭಾಗದ ಅಡಿಯಲ್ಲಿ ಪಿಎಂಜಿಎಸ್ ವೈ ಯೋಜನೆಯಡಿಯಲ್ಲಿ ಸಾಧಿಸಿದ ಭೌತಿಕ ಸಾಧನೆಗಳು ಕೆಳಗೆ ಉಲ್ಲೇಖಿಸಲಾಗಿದೆ:
|
ಕ್ರ.ಸಂ
|
ಪಿಎಂಜಿಎಸ್ ವೈ ಪ್ರತಿ ವಿಭಾಗದಡಿಯಲ್ಲಿ
|
ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ಸಂಖ್ಯೆ
|
ಪೂರ್ಣಗೊಳಿಸಿದ ರಸ್ತೆಯ ಉದ್ದ (ಕಿ.ಮೀ.ಗಳಲ್ಲಿ)
|
ಪೂರ್ಣಗೊಳಿಸಲಾದ ಸೇತುವೆಗಳ ಸಂಖ್ಯೆ
|
|
1
|
ಪಿಎಂಜಿಎಸ್ ವೈ -I
|
180
|
552
|
72
|
|
2
|
ಪಿಎಂಜಿಎಸ್ ವೈ -II
|
24
|
62
|
03
|
|
3
|
ಆರ್ ಸಿಪಿಎಲ್ ಡಬ್ಲೂಇಎ
|
90
|
433
|
76
|
|
4
|
ಪಿಎಂಜಿಎಸ್ ವೈ -III
|
2121
|
14285
|
632
|
|
5
|
ಪಿಎಂಜನ್ ಮನ್
|
220
|
1046
|
158
|
|
|
ಒಟ್ಟು
|
2635
|
16378
|
941
|
- ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,720 ರಸ್ತೆ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲಾಗಿದೆ.
- 8,693.54 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ, ಗ್ರಾಮೀಣ, ದೂರದ ಮತ್ತು ಆರ್ಥಿಕವಾಗಿ ಪ್ರಮುಖ ಪ್ರದೇಶಗಳಿಗೆ ಪ್ರವೇಶವನ್ನು ಗಮನಾರ್ಹವಾಗಿ ಸುಧಾರಿಸಿದೆ.
- 481 ಸೇತುವೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ, ಎಲ್ಲಾ ಹವಾಮಾನ ಸಂಪರ್ಕವನ್ನು ಹೆಚ್ಚಿಸಲಾಗಿದೆ ಮತ್ತು ನದಿಗಳು ಮತ್ತು ಕಷ್ಟಕರ ಭೂಪ್ರದೇಶಗಳಲ್ಲಿ ಸಂಚಾರವನ್ನು ಸುಗಮಗೊಳಿಸಲಾಗಿದೆ.
- ಈ ಅವಧಿಯಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕಾಗಿ ₹8,548.26 ಕೋಟಿ ರೂ,ಬಂಡವಾಳ ವೆಚ್ಚ ಮಾಡಲಾಗಿದೆ.
- ಹೆಚ್ಚುವರಿಯಾಗಿ, ಗ್ರಾಮೀಣ ರಸ್ತೆಗಳ ನಿರ್ವಹಣೆ, ಸುಸ್ಥಿರತೆ, ಸುಧಾರಿತ ಸಂಚಾರ ಗುಣಮಟ್ಟ ಮತ್ತು ಅಸ್ತಿತ್ವದಲ್ಲಿರುವ ಸ್ವತ್ತುಗಳ ದೀರ್ಘ ಸೇವಾ ಜೀವನವನ್ನು ಖಾತ್ರಿಪಡಿಸಿಕೊಳ್ಳಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ₹811 ಕೋಟಿ ರೂ. ಖರ್ಚು ಮಾಡಿವೆ.
- 536 ರಸ್ತೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 1,736.25 ಕಿ.ಮೀ ರಸ್ತೆ ಜಾಲಕ್ಕೆ ಸೇರ್ಪಡೆಯಾಗಿದ್ದು, ತಮಿಳುನಾಡು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯವಾಗಿ ಹೊರಹೊಮ್ಮಿದೆ.
- ಹಿಮಾಚಲ ಪ್ರದೇಶವು ಅತಿ ಹೆಚ್ಚು ರಸ್ತೆ ಉದ್ದದ ಕಾಮಗಾರಿ ಪೂರ್ಣಗೊಳಿಸುವಿಕೆಯನ್ನು (1,103.77 ಕಿ.ಮೀ) ಸಾಧಿಸಿದೆ, ಇದು ಗುಡ್ಡಗಾಡು ಮತ್ತು ಸವಾಲಿನ ಭೂಪ್ರದೇಶದಲ್ಲಿ ಬಲವಾದ ಕಾರ್ಯಕ್ಷಮತೆ ಪ್ರತಿಬಿಂಬಿಸುತ್ತದೆ.
- ಬಿಹಾರದಲ್ಲಿ ಅತಿ ಹೆಚ್ಚು ಸೇತುವೆಗಳು ಪೂರ್ಣಗೊಂಡಿದ್ದು (173), ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸಿದೆ
- ಛತ್ತೀಸ್‌ಗಢ, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ಗಳಲ್ಲಿಯೂ ಗಣನೀಯ ಪ್ರಗತಿ ಸಾಧಿಸಲಾಗಿದೆ.
- ಗಡಿ, ಗುಡ್ಡಗಾಡು ಮತ್ತು ಈಶಾನ್ಯ ಪ್ರದೇಶಗಳಾದ ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಉತ್ತರಾಖಂಡ್‌ಗಳಲ್ಲಿ ಕೇಂದ್ರೀಕೃತ ಮೂಲಸೌಕರ್ಯ ಅಭಿವೃದ್ಧಿಯನ್ನು ಸಾಧಿಸಲಾಗಿದ್ದು, ಪ್ರಾದೇಶಿಕ ಬೆಳವಣಿಗೆ ಮತ್ತು ಕಾರ್ಯತಂತ್ರದ ಸಂಪರ್ಕವನ್ನು ಬೆಂಬಲಿಸುತ್ತಿದೆ.
- ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ -IV ಅಡಿಯಲ್ಲಿ ಈವರೆಗೆ ಉತ್ತರಾಖಂಡ, ಛತ್ತೀಸ್‌ಗಢ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಿಗೆ ಪಿಎಂಜಿಎಸ್ ವೈ -IV ಅಡಿಯಲ್ಲಿ ಒಟ್ಟು 5,436 ಕಿಮೀ ಉದ್ದದ ರಸ್ತೆಯನ್ನು ಮಂಜೂರು ಮಾಡಲಾಗಿದೆ.
ಡಿಜಿಟಲ್ ಉಪಕ್ರಮ
- ಪಿಎಂಜಿಎಸ್ ವೈ-ಒಎಂಎಂಎಎಸ್ (PMGSY OMMAS) ಪೋರ್ಟಲ್ ಅನ್ನು NeSL ನೊಂದಿಗೆ ಸಂಯೋಜಿಸುವ ಮೂಲಕ ಎಲೆಕ್ಟ್ರಾನಿಕ್ ಬ್ಯಾಂಕ್ ಗ್ಯಾರಂಟಿಗಳನ್ನು (eBGs) ಸಕ್ರಿಯಗೊಳಿಸಲಾಗಿದೆ, ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ.
- ರಸ್ತೆವಾರು ಭೌತಿಕ ಮತ್ತು ಆರ್ಥಿಕ ಗುರಿಗಳು ಮತ್ತು ಸಾಧನೆ ಮೇಲ್ವಿಚಾರಣೆಗಾಗಿ ಡೆಲ್ಟಾ ವರದಿಗಳನ್ನು ಪರಿಚಯಿಸಲಾಗಿದೆ, ನೈಜ-ಸಮಯದ ಕಾರ್ಯಕ್ಷಮತೆ ಮೇಲ್ವಿಚಾರಣೆ (ಟ್ರ್ಯಾಕಿಂಗ್) ಅನ್ನು ಬೆಂಬಲಿಸುತ್ತದೆ.
- ಸ್ಟ್ಯಾಂಡರ್ಡ್ ಬಿಡ್ಡಿಂಗ್ ಡಾಕ್ಯುಮೆಂಟ್ (SBD) ನ ಡಿಜಿಟಲೀಕರಣವನ್ನು ಪೂರ್ಣಗೊಳಿಸಲಾಗಿದೆ, ಬಿಡ್ ದಾಖಲೆಗಳ ಆನ್‌ಲೈನ್ ತಯಾರಿಕೆಯನ್ನು ಸುಗಮಗೊಳಿಸುತ್ತದೆ ಮತ್ತು ಖರೀದಿ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ
- ದೀನದಯಾಳ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ)
ಜೂನ್ 2011 ರಲ್ಲಿ ಆರಂಭಿಸಲಾದ ದೀನದಯಾಳ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಗ್ರಾಮೀಣಾಭಿವೃದ್ಧಿ ಸಚಿವಾಲಯದ (MoRD) ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. (ಡಿಎವೈ-ಎನ್ ಆರ್ ಎಲ್ ಎಂ) ಅನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯ {ಗ್ರಾಮೀಣ ಜೀವನೋಪಾಯ (RL) ವಿಭಾಗ} ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ಗಳ (SRLMs) ಸಹಯೋಗದೊಂದಿಗೆ ಕಾರ್ಯಗತಗೊಳಿಸುತ್ತದೆ. ”ಬಡ ಕುಟುಂಬಗಳು ಲಾಭದಾಯಕ ಸ್ವ-ಉದ್ಯೋಗ ಮತ್ತು ಕೌಶಲ್ಯಪೂರ್ಣ ವೇತನ ಉದ್ಯೋಗಾವಕಾಶಗಳನ್ನು ಪಡೆಯಲು ಅನುವು ಮಾಡಿಕೊಡುವ ಮೂಲಕ ಬಡತನವನ್ನು ಕಡಿಮೆ ಮಾಡುವುದು, ಬಡವರ ಬಲವಾದ ತಳಮಟ್ಟದ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಅವರ ಜೀವನೋಪಾಯದಲ್ಲಿ ಗಮನಾರ್ಹ ಸುಧಾರಣೆಗೆ ಕಾರಣವಾಗುತ್ತದೆ’’ ಎಂಬುದು ಮಿಷನ್‌ನ ಉದ್ದೇಶವಾಗಿದೆ. ಈ ಮಿಷನ್ ನಾಲ್ಕು ಪ್ರಮುಖ ಅಂಶಗಳಲ್ಲಿ ಹೂಡಿಕೆ ಮಾಡುವ ಮೂಲಕ ತನ್ನ ಉದ್ದೇಶವನ್ನು ಸಾಧಿಸಲು ಪ್ರಯತ್ನಿಸುತ್ತದೆ, ಅವುಗಳೆಂದರೆ (ಎ) ಗ್ರಾಮೀಣ ಬಡವರ ಸ್ವಯಂ-ನಿರ್ವಹಣೆಯ ಮತ್ತು ಆರ್ಥಿಕವಾಗಿ ಸುಸ್ಥಿರ ಸಮುದಾಯ ಸಂಸ್ಥೆಗಳ ಸಾಮಾಜಿಕ ಸಜ್ಜುಗೊಳಿಸುವಿಕೆ ಮತ್ತು ಪ್ರಚಾರ ಮತ್ತು ಬಲಪಡಿಸುವಿಕೆ; (ಬಿ) ಗ್ರಾಮೀಣ ಬಡವರ ಆರ್ಥಿಕ ಸೇರ್ಪಡೆ; (ಸಿ) ಸುಸ್ಥಿರ ಜೀವನೋಪಾಯಗಳು; ಮತ್ತು (ಡಿ) ಸಾಮಾಜಿಕ ಸೇರ್ಪಡೆ, ಸಾಮಾಜಿಕ ಅಭಿವೃದ್ಧಿ ಮತ್ತು ಸಮ್ಮಿಳಿತ.
ಕಾರ್ಯಕ್ರಮದ ಪ್ರಮುಖ ಅಂಶಗಳು
i. ಸಂಸ್ಥೆ ನಿರ್ಮಾಣ ಮತ್ತು ಸಾಮರ್ಥ್ಯ ವೃದ್ಧಿ: ಈ ಕಾರ್ಯಕ್ರಮವು ಸ್ವಸಹಾಯ ಗುಂಪುಗಳು (SHGs), ಗ್ರಾಮ ಸಂಸ್ಥೆಗಳು (VOs), ಮತ್ತು ಕ್ಲಸ್ಟರ್ ಮಟ್ಟದ ಒಕ್ಕೂಟಗಳು (CLFs) ನಂತಹ ಸಮುದಾಯ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ಗ್ರಾಮೀಣ ಬಡವರಿಗೆ ಪರಸ್ಪರ ಬೆಂಬಲ, ಉಳಿತಾಯ ಮತ್ತು ಸಾಲ ಲಭ್ಯತೆಗೆ ವೇದಿಕೆಯನ್ನು ಒದಗಿಸುತ್ತದೆ. ಈ ಗುಂಪುಗಳು ಬಡತನ ನಿರ್ಮೂಲನೆಗೆ ಸಾಮೂಹಿಕ ಸಂಪನ್ಮೂಲಗಳನ್ನು ನೀಡುತ್ತವೆ.
ii. ಸಾಮಾಜಿಕ ಸೇರ್ಪಡೆ ಮತ್ತು ಸಾಮಾಜಿಕ ಅಭಿವೃದ್ಧಿ: ಡಿಎವೈ-ಎನ್ ಆರ್ ಎಲ್ ಎಂ ಸಾಮಾಜಿಕ ನಡವಳಿಕೆ ಬದಲಾವಣೆ ಸಂವಹನವನ್ನು (SBCC) ಚಾಲನೆ ಮಾಡುತ್ತದೆ, ಗ್ರಾಮೀಣ ಸಮುದಾಯಗಳು ಆರೋಗ್ಯಕರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮತ್ತು ಸ್ವಚ್ಛ ಭಾರತ ಮಿಷನ್, ಪೋಷಣ್ ಅಭಿಯಾನ ಮತ್ತು ಇತರ ಸರ್ಕಾರಿ ಸೇವೆಗಳನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಇದು ಆಹಾರ, ಪೋಷಣೆ, ಆರೋಗ್ಯ ಮತ್ತು ವಾಶ್ (ಡಬ್ಲೂಎಎಸ್ ಎಚ್) (ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ), ಲಿಂಗ ಮತ್ತು PRI-CBO ಸಂಯೋಜನೆ ಮೇಲೆ ಕೇಂದ್ರೀಕರಿಸುತ್ತದೆ.
iii. ಹಣಕಾಸು ಸೇರ್ಪಡೆ: ಹಣಕಾಸು ಸೇವೆಗಳಿಗೆ ಸಾರ್ವತ್ರಿಕ ಲಭ್ಯತೆವನ್ನು ಗುರಿಯಾಗಿಟ್ಟುಕೊಂಡು, DAY-NRLM ದೂರದ ಪ್ರದೇಶಗಳಲ್ಲಿ ಮಹಿಳೆಯರನ್ನು ಬಿಸಿ ಸಖಿಗಳಾಗಿ ನಿಯೋಜಿಸುವ ಮೂಲಕ ನಿರ್ಣಾಯಕ ಬೆಂಬಲ ಒದಗಿಸುತ್ತದೆ. ಬ್ಯಾಂಕಿಂಗ್ ಸೇವೆಗಳು, ಸಾಲಗಳು ಮತ್ತು ಪಿಂಚಣಿ ಮತ್ತು ವಿಮೆಯಂತಹ ಸಾಮಾಜಿಕ ಭದ್ರತಾ ಯೋಜನೆಗಳನ್ನು ತಲುಪಿಸಲು ಅನುವು ಮಾಡಿಕೊಡುತ್ತದೆ.
iv. ಜೀವನೋಪಾಯಗಳು:
-
- ಕೃಷಿ ಜೀವನೋಪಾಯ: ಈ ಕಾರ್ಯಕ್ರಮವು ಕೃಷಿ-ಪರಿಸರ ಪದ್ಧತಿಗಳು, ಜಾನುವಾರು ನಿರ್ವಹಣೆ ಮತ್ತು ಉತ್ತಮ ಮಾರುಕಟ್ಟೆ ಪ್ರವೇಶದ ಮೂಲಕ ಮಹಿಳಾ ರೈತರಿಗೆ ಸಬಲೀಕರಣ ನೀಡುತ್ತದೆ. ಇದು ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ತಗ್ಗಿಸಲು ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯನ್ನು ಉತ್ತೇಜಿಸುತ್ತದೆ.
- ಕೃಷಿಯೇತರ ಜೀವನೋಪಾಯ: ಕೃಷಿಯ ಹೊರತಾಗಿ ಕರಕುಶಲ ವಸ್ತುಗಳು, ಆಹಾರ ಸಂಸ್ಕರಣೆ ಮತ್ತು ಸಣ್ಣ ಪ್ರಮಾಣದ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಸೂಕ್ಷ್ಮ ಉದ್ಯಮಗಳನ್ನು ಸ್ಥಾಪಿಸುವಲ್ಲಿ ಮಹಿಳೆಯರಿಗೆ DAY-NRLM ಬೆಂಬಲ ನೀಡುತ್ತದೆ. ಈ ಕಾರ್ಯಕ್ರಮವು ಭೂರಹಿತ ಗ್ರಾಮೀಣ ಮಹಿಳೆಯರು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಸಣ್ಣ ಉದ್ಯಮಗಳ ಮೇಲೆ ಕೇಂದ್ರೀಕರಿಸಿ ಆದಾಯ ಉತ್ಪಾದಿಸುವ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ.
ಯಶಸ್ಸಿಗೆ ಕೊಡುಗೆ ನೀಡುವ ನವೀನ ವೈಶಿಷ್ಟ್ಯಗಳು
a. ಸಾಮರ್ಥ್ಯ ವೃದ್ಧಿ ಮತ್ತು ಮಾನವ ಸಂಪನ್ಮೂಲಗಳು: DAY-NRLM ಯಶಸ್ವಿ ಅನುಷ್ಠಾನವನ್ನು ಖಾತ್ರಿಪಡಿಸಿಕೊಳ್ಳಲು ಉತ್ತಮ ತರಬೇತಿ ಪಡೆದ ಮಾನವ ಸಂಪನ್ಮೂಲಗಳ ಮೂಲಕ ಸಾಮರ್ಥ್ಯ ವೃದ್ಧಿಗೆ ಒತ್ತು ನೀಡುತ್ತದೆ. ರಾಜ್ಯ ಮತ್ತು ಇಲಾಖಾ ಬೆಂಬಲವು ಕಾರ್ಯಕ್ರಮದ ಉತ್ತಮ ಜಾರಿಗೊಳಿಸುವಿಕೆ ಮತ್ತು ನಿರ್ವಹಣೆಯನ್ನು ಸಕ್ರಿಯಗೊಳಿಸುತ್ತದೆ.
ಬಿ. ಸಮುದಾಯ ನೇತೃತ್ವದ ವಿಧಾನ: ಈ ಕಾರ್ಯಕ್ರಮವು ಮಹಿಳೆಯರನ್ನು ಸ್ವಸಹಾಯ ಗುಂಪುಗಳನ್ನು ರಚಿಸುವ ಮೂಲಕ ಮತ್ತು VOಗಳು ಮತ್ತು CLF ಗಳಲ್ಲಿ ಅವರನ್ನು ಸಂಯೋನೆಯೊಂದಿಗೆ ಅಭಿವೃದ್ಧಿಯ ಕೇಂದ್ರಬಿಂದುವಾಗಿ ಇರಿಸುತ್ತದೆ. ಇದು ಗ್ರಾಮೀಣ ಸಮುದಾಯಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು, ವಿಶ್ವಾಸವನ್ನು ಬಲಪಡಿಸುವಲ್ಲಿ ಮತ್ತು ಸಹಕಾರದಲ್ಲಿ ಮಹಿಳೆಯರನ್ನು ಒಳಗೊಳ್ಳುವ ಮೂಲಕ ಸಾಮಾಜಿಕ ಬಂಡವಾಳವನ್ನು ಬೆಳೆಸುತ್ತದೆ. 6 ಲಕ್ಷಕ್ಕೂ ಅಧಿಕ ತರಬೇತಿ ಪಡೆದ ಸಮುದಾಯ ಸಂಪನ್ಮೂಲ ವ್ಯಕ್ತಿಗಳು (ಸಿಆರ್ ಪಿಗಳು) ಜಾನುವಾರು, ಕೃಷಿ ಮತ್ತು ಹಣಕಾಸು ಸೇವೆಗಳಂತಹ ವಿಷಯಾಧಾರಿತ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸಿ. ಒಕ್ಕೂಟಗಳು: DAY-NRLM ನ ಬೆನ್ನೆಲುಬಾಗಿ SHGಗಳು ಕಾರ್ಯನಿರ್ವಹಿಸುತ್ತವೆ, ಸುಮಾರು 5.35 ಲಕ್ಷ VOಗಳು ಮತ್ತು 33,590 CLFಗಳು ಸಾಮೂಹಿಕ ಸಬಲೀಕರಣವನ್ನು ಸಕ್ರಿಯಗೊಳಿಸುತ್ತವೆ. ಈ ಒಕ್ಕೂಟಗಳು ಸಾಮೂಹಿಕ ಕ್ರಮ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಸಂಪನ್ಮೂಲಗಳ ಲಭ್ಯತೆಗೆ ವೇದಿಕೆಯನ್ನು ಒದಗಿಸುತ್ತವೆ.
ಡಿ. ಭಾಗವಹಿಸುವ ಯೋಜನೆ: DAY-NRLM ಗ್ರಾಮ ಮಟ್ಟದ ಸಭೆಗಳು, ಸಮಾಲೋಚನೆಗಳು ಮತ್ತು ಭಾಗವಹಿಸುವ ಗ್ರಾಮೀಣ ಮೌಲ್ಯಮಾಪನಗಳ ಮೂಲಕ ಅಭಿವೃದ್ಧಿ ಚಟುವಟಿಕೆಗಳ ಯೋಜನೆ ಮತ್ತು ಅವುಗಳನ್ನು ಜಾರಿಗೊಳಿಸುವಲ್ಲಿ ಗ್ರಾಮೀಣ ಸಮುದಾಯಗಳನ್ನು ಒಳಗೊಳ್ಳುವ, ತಳಮಟ್ಟದ ವಿಧಾನವನ್ನು ಸಂಯೋಜಿಸುತ್ತದೆ.
ಇ. ವ್ಯಾಪಾರ ಪ್ರತಿನಿಧಿಸುವ ಏಜೆಂಟರು (ಬಿಸಿಎಗಳು): 1.44 ಲಕ್ಷಕ್ಕೂ ಅಧಿಕ SHG ಸದಸ್ಯರನ್ನು BCAಗಳಾಗಿ (BC ಸಖಿಗಳು ಎಂದೂ ಕರೆಯುತ್ತಾರೆ) ನಿಯೋಜಿಸಲಾಗಿದೆ. ಠೇವಣಿ, ಸಾಲ, ಹಣ ವರ್ಗಾವಣೆಗಳು, ಪಿಂಚಣಿಗಳು ಮತ್ತು ವಿಮೆ ಸೇರಿದಂತೆ ಬ್ಯಾಂಕಿಂಗ್ ಸೇವೆಗಳ ಲಭ್ಯತೆಯನ್ನು ಸುಧಾರಿಸುತ್ತದೆ.
ಎಫ್.ಲಖ್ ಪತಿದೀದಿ ಉಪಕ್ರಮ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಬಲೀಕರಣಗೊಳಿಸುವುದು ಈ ಉಪಕ್ರಮದ ಗಮನ. ಮಹಿಳೆಯರು ವ್ಯವಹಾರಗಳನ್ನು ವಿಸ್ತರಿಸಲು ಮತ್ತು ಗ್ರಾಮೀಣ ಭಾರತದಾದ್ಯಂತ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಲು ಸಹಾಯ ಮಾಡುವ ಮೂಲಕ 3 ಕೋಟಿ "ಲಖ್ ಪತಿ ದೀದಿಗಳು" (ವಾರ್ಷಿಕವಾಗಿ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಗಳಿಸುವ ಮಹಿಳೆಯರು) ರಚಿಸುವುದು ಗುರಿಯಾಗಿದೆ. ಈವರೆಗೆ, ದೇಶದಲ್ಲಿ 2 ಕೋಟಿಗೂ ಅಧಿಕ ಸ್ವಸಹಾಯ ಗುಂಪು ಮಹಿಳೆಯರು ಲಖ್ ಪತಿ ದೀದಿಗಳಾಗಿದ್ದಾರೆ.
ಫಲಿತಾಂಶಗಳು ಮತ್ತು ಪರಿಣಾಮ
ವಿಶ್ವಬ್ಯಾಂಕ್ ಬೆಂಬಲದೊಂದಿಗೆ, ಪರಿಣಾಮ ಮೌಲ್ಯಮಾಪನಕ್ಕೆ ಅಂತಾರಾಷ್ಟ್ರೀಯ ಉಪಕ್ರಮ (3ie) ನಡೆಸಿದ 2019 ರ ಅಧ್ಯಯನವು DAY-NRLM ಕಾರ್ಯಕ್ರಮದ ಗಮನಾರ್ಹ ಪರಿಣಾಮವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತದೆ:
• ಆದಾಯದಲ್ಲಿ ಹೆಚ್ಚಳ: ಮೂಲ ಮೊತ್ತಕ್ಕಿಂತ ಆದಾಯದಲ್ಲಿ ಶೇ.19ರಷ್ಟು ಹೆಚ್ಚಳ.
• ಅನೌಪಚಾರಿಕ ಸಾಲಗಳಲ್ಲಿ ಕುಸಿತ: ಅನೌಪಚಾರಿಕ ಸಾಲಗಳ ಮೇಲಿನ ಅವಲಂಬನೆಯಲ್ಲಿ ಶೇ.20ರಷ್ಟು ಕಡಿತ.
• ಹೆಚ್ಚಿದ ಉಳಿತಾಯ: ಫಲಾನುಭವಿಗಳ ಉಳಿತಾಯದಲ್ಲಿ ಶೇ.28ರಷ್ಟು ಹೆಚ್ಚಳ.
• ಸುಧಾರಿತ ಕಾರ್ಮಿಕ ಪಡೆ ಭಾಗವಹಿಸುವಿಕೆ: ದ್ವಿತೀಯಕ ಉದ್ಯೋಗಗಳಲ್ಲಿ ತೊಡಗಿರುವ ಮಹಿಳೆಯರಲ್ಲಿ ಶೇ,4ರಷ್ಟು ಪ್ರಮಾಣ ಹೆಚ್ಚಳ.
• ಸರ್ಕಾರಿ ಯೋಜನೆಗಳಿಗೆ ವರ್ಧಿತ ಲಭ್ಯತೆ: ಮೂಲ ಅಂಕಿಅಂಶಗಳಿಗೆ ಹೋಲಿಸಿದರೆ ಚಿಕಿತ್ಸಾ ಕ್ಷೇತ್ರಗಳಲ್ಲಿ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಶೇ.6.5ರಷ್ಟು ಹೆಚ್ಚಿನ ಲಭ್ಯತೆ.
ಪರಿಸಮಾಪ್ತಿ
ಗ್ರಾಮೀಣ ಮಹಿಳೆಯರು ಮತ್ತು ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಡಿಎವೈ-ಎನ್ ಆರ್ ಎಲ್ ಎಂ ಪರಿವರ್ತನಾತ್ಮಕವಾಗಿದೆ. ಸಾಮಾಜಿಕ ಕ್ರೂಢೀಕರಣ, ಆರ್ಥಿಕ ಸೇರ್ಪಡೆ, ಜೀವನೋಪಾಯ ಪ್ರಚಾರ ಮತ್ತು ಸಾಮಾಜಿಕ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಮೂಲಕ, ಇದು ಲಕ್ಷಾಂತರ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಿದೆ, ಬಡತನ ತಗ್ಗಿಸಿದೆ ಮತ್ತು ಭಾರತದಾದ್ಯಂತ ಸಮಗ್ರ ಬೆಳವಣಿಗೆಗೆ ಕೊಡುಗೆ ನೀಡಿದೆ. ಈ ಕಾರ್ಯಕ್ರಮದ ಯಶಸ್ಸು ಅದರ ಸಮುದಾಯ ಆಧಾರಿತ ವಿಧಾನ, ಸಾಮರ್ಥ್ಯ ವೃದ್ಧಿ ಮತ್ತು ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಗ್ರಾಮೀಣ ಆರ್ಥಿಕತೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಮಹಿಳಾ ಕೇಂದ್ರಿತ ಉಪಕ್ರಮಗಳಲ್ಲಿದೆ.
ಕೋಷ್ಟಕ: ಡಿಎವೈ-ಎನ್ ಆರ್ ಎಲ್ ಎಂ ಅಡಿಯಲ್ಲಿ ಪ್ರಗತಿಯ ಚಿತ್ರಣ:
2011-2012 ರಿಂದ 2024-2025 (2025ರ ನವೆಂಬರ್ 30ರವರೆಗೆ)
|
ಕ್ರ.ಸಂ
|
ಸೂಚಕಗಳು
|
2011-12ನೇ ಹಣಕಾಸು ವರ್ಷದಿಂದ 2013-14ನೇ ಹಣಕಾಸು ವರ್ಷದವರೆಗಿನ ಪ್ರಗತಿ
|
2014-15ನೇ ಹಣಕಾಸು ವರ್ಷದಿಂದ 2025-26ನೇ ಸಾಲಿನವರೆಗಿನ ಪ್ರಗತಿ (2025ರ ನವೆಂಬರ್ 30ರವರೆಗೆ)
|
ಒಟ್ಟು ಸಾಧನೆ
30ನೇ ನವೆಂಬರ್ 2025 ರಂತೆ
|
-
|
ಸ್ವಸಹಾಯ ಗುಂಪುಗಳಲ್ಲಿ ಸಜ್ಜುಗೊಂಡ ಮಹಿಳೆಯರ ಸಂಖ್ಯೆ (ಕೋಟಿಗಳಲ್ಲಿ)
|
2.37
|
7.68
|
10.05
|
-
|
ಬಡ್ತಿ ಪಡೆದ ಸ್ವಸಹಾಯ ಗುಂಪುಗಳ ಸಂಖ್ಯೆ (ಲಕ್ಷಗಳಲ್ಲಿ)
|
21.31
|
69.59
|
90.90
|
-
|
ವಿತರಿಸಲಾದ ಸಾಲದ ಮೊತ್ತ (ರೂ. ಕೋಟಿ)
|
22,944.16
|
1166927.52
|
11.89 ಲಕ್ಷ ಕೋಟಿ
|
-
|
ಒದಗಿಸಲಾದ ಬಂಡವಾಳದ ಬೆಂಬಲ (ಆವರ್ತಕ ನಿಧಿ + ಸಮುದಾಯ ಹೂಡಿಕೆ ನಿಧಿ) ಮೊತ್ತ (ರೂ. ಕೋಟಿ)
|
1,501.58
|
49,866.81
|
62,339.75 ಕೋಟಿ
|
-
|
ಯಾವುದೇ ಲಾಭಮಾಡದ ಸ್ವತ್ತುಗಳು (NPA)
|
ಶೇ.9.58 (2014ರ ಮಾರ್ಚ್ 31ರವರೆಗೆ)
|
1.76% (ಈ ದಿನಾಂಕದವರೆಗೆ)
|
-
|
ಸಖಿ/ಡಿಜಿಪೇ ಸಖಿ ನಿಯೋಜಿಸಲಾದ ಬ್ಯಾಂಕಿಂಗ್ ವರದಿಗಾರರ ಸಂಖ್ಯೆ (NRLM+NRETP)
|
-
|
1.49 ಲಕ್ಷ
|
-
|
ಕೃಷಿ ಪರಿಸರ ಪದ್ಧತಿಗಳು (AEP) ಮಧ್ಯಸ್ಥಿಕೆಗಳ ಅಡಿಯಲ್ಲಿ ಒಳಗೊಳ್ಳಲಾದ ಮಹಿಳಾ ಕಿಸಾನ್‌ಗಳ ಸಂಖ್ಯೆ (ಲಕ್ಷಗಳಲ್ಲಿ)
|
24.27
|
420.73
|
487
|
-
|
ಕೃಷಿ-ಪೋಷಕಾಂಶ ಉದ್ಯಾನ ಹೊಂದಿರುವ ಮಹಿಳಾ ಕಿಸಾನ್ ಸಂಖ್ಯೆ (ಲಕ್ಷಗಳಲ್ಲಿ)
|
0
|
328
|
-
|
SVEP ಅಡಿಯಲ್ಲಿ ಬೆಂಬಲಿತ ಉದ್ಯಮಗಳ ಸಂಖ್ಯೆ (ಲಕ್ಷಗಳಲ್ಲಿ)
|
-
|
4.02
|
-
|
ಲಕ್ಷ ಪತಿ ದೀದಿಗಳ ಸಂಖ್ಯೆ
|
0
|
1.48 crore
|
2025ರ ಜನವರಿ 1ರಿಂದ ನವೆಂಬರ್ 30ರವರೆಗೆ ಡಿಎವೈ-ಎನ್ ಆರ್ ಎಲ್ ಎಂ ಪ್ರಗತಿ
|
ಕ್ರ.ಸಂ
|
ಸೂಚಕಗಳು
|
2025ರ ಜನವರಿ 1ರಿಂದ ನವೆಂಬರ್ 30ರವರೆಗೆ ಪ್ರಗತಿ
|
-
|
ಸ್ವಸಹಾಯ ಗುಂಪುಗಳಲ್ಲಿ ಸಜ್ಜುಗೊಂಡ ಮಹಿಳೆಯರ ಸಂಖ್ಯೆ
|
3,117
|
-
|
ಬಡ್ತಿ ಪಡೆದ ಸ್ವಸಹಾಯ ಗುಂಪುಗಳ ಸಂಖ್ಯೆ
|
387
|
-
|
ವಿತರಿಸಲಾದ ಸಾಲದ ಮೊತ್ತ (ರೂ. ಕೋಟಿ)
|
2,06,563
(2025ರ ಜನವರಿ 1ರಿಂದ ಅಕ್ಟೋಬರ್ 31ರವರೆಗೆ)
|
-
|
ಒದಗಿಸಲಾದ ಬಂಡವಾಳದ ಬೆಂಬಲ (ಆವರ್ತಕ ನಿಧಿ + ಸಮುದಾಯ ಹೂಡಿಕೆ ನಿಧಿ) ಮೊತ್ತ (ರೂ. ಕೋಟಿ)
|
12,669.53
|
-
|
ಯಾವುದೇ ಲಾಭ ಮಾಡದ ಸ್ವತ್ತುಗಳು (ಎನ್ ಪಿಎ )
|
1.79% (ಈ ದಿನಾಂಕದವರೆಗೆ)
|
-
|
ಸಖಿ/ಡಿಜಿಪೇ ಸಖಿ ನಿಯೋಜಿಸಲಾದ ಬ್ಯಾಂಕಿಂಗ್ ವರದಿಗಾರರ ಸಂಖ್ಯೆ (NRLM+NRETP)
|
12,241
|
-
|
ಕೃಷಿ ಪರಿಸರ ವಿಜ್ಞಾನದ ಅಡಿಯಲ್ಲಿ ಬರುವ ಮಹಿಳಾ ಕಿಸಾನ್‌ಗಳ ಸಂಖ್ಯೆ
ಆಚರಣೆಗಳು (AEP) ಮಧ್ಯಸ್ಥಿಕೆಗಳು (ಲಕ್ಷಗಳಲ್ಲಿ)
|
76.45
|
-
|
ಕೃಷಿ ಪರಿಸರ ವಿಜ್ಞಾನದ ಅಡಿಯಲ್ಲಿ ಒಳಗೊಳ್ಳಲಾದ ಮಹಿಳಾ ಕಿಸಾನ್‌ಗಳ ಸಂಖ್ಯೆ
|
51.25
|
-
|
SVEP ಅಡಿಯಲ್ಲಿ ಬೆಂಬಲಿತ ಉದ್ಯಮಗಳ ಸಂಖ್ಯೆ (ಲಕ್ಷಗಳಲ್ಲಿ)
|
71,833
|
-
|
ಲಕ್ಷ ಪತಿ ದೀದಿಗಳ ಸಂಖ್ಯೆ
|
ಒಟ್ಟಾರೆ 2 ಕೋಟಿ ರೂ.
|
- ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ
ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMAY-G) ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಇದು 2029 ರ ವೇಳೆಗೆ ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ವಸತಿರಹಿತ ಕುಟುಂಬಗಳು ಮತ್ತು ಕಚ್ಚಾ ಮತ್ತು ಶಿಥಿಲಗೊಂಡ ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ”ಸರ್ವರಿಗೂ ವಸತಿ’’ ಗುರಿಯನ್ನು ಸಾಧಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಡಿಯಲ್ಲಿ ಆರಂಭಿಕ ಗುರಿ 2024 ರ ಮಾರ್ಚ್ ವೇಳೆಗೆ 2.95 ಕೋಟಿ ಮನೆಗಳ ನಿರ್ಮಾಣಕ್ಕೆ ನೆರವು ನೀಡುವುದಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ವಸತಿ ಅಗತ್ಯವನ್ನು ಪೂರೈಸಲು 2024-25 ನೇ ಹಣಕಾಸು ವರ್ಷದಲ್ಲಿ ಹೆಚ್ಚುವರಿಯಾಗಿ 2 ಕೋಟಿ ಗ್ರಾಮೀಣ ಮನೆಗಳನ್ನು ನಿರ್ಮಿಸಲು 2024ರ ಆಗಸ್ಟ್ 9 ರಂದು ಕೇಂದ್ರ ಸಚಿವ ಸಂಪುಟವು ಯೋಜನೆಯನ್ನು ವಿಸ್ತರಿಸಲು ಅನುಮೋದನೆ ನೀಡಿತು.
09.12.2025 ರ ವೇಳೆಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 4.14 ಕೋಟಿ ಮನೆಗಳ ಗುರಿಯನ್ನು ಹಂಚಿಕೆ ಮಾಡಲಾಗಿದೆ, ಅದರಲ್ಲಿ 3.86 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದೆ ಮತ್ತು 2.92 ಕೋಟಿ ಮನೆಗಳನ್ನು ಪೂರ್ಣಗೊಳಿಸಲಾಗಿದೆ.
ಯೋಜನೆಯ ಒಟ್ಟಾರೆ ಭೌತಿಕ ಪ್ರಗತಿ ಈ ಕೆಳಗಿನಂತಿದೆ:
|
ಒಟ್ಟು ಮಂಜೂರಾದ ಮನೆಗಳ ಸಂಖ್ಯೆ
|
3,86,31,160
|
|
ಒಂದು ಕಂತು ಬಿಡುಗಡೆ ಮಾಡಿರುವ ಸಂಖ್ಯೆ
|
3,60,69,568
|
|
ಒಟ್ಟು ಪೂರ್ಣಗೊಂಡ ಮನೆಗಳು
|
291,90,774
|
2025ರ ಜನವರಿ 1, 2025 ರಿಂದ ಆರಂಭವಾಗುವ 2025 ರ ಯೋಜನೆಯಡಿಯಲ್ಲಿ ಭೌತಿಕ ಸಾಧನೆ ಈ ಕೆಳಗಿನಂತಿದೆ:
|
2025ರಲ್ಲಿ ಒಟ್ಟು ಮಂಜೂರು ಮಾಡಲಾದ ಮನೆಗಳ ಸಂಖ್ಯೆ
|
63,92,689
|
|
ಒಂದು ಕಂತು ಬಿಡುಗಡೆ ಮಾಡಿರುವ ಸಂಖ್ಯೆ
|
55,72,041
|
|
ಒಟ್ಟು ಪೂರ್ಣಗೊಂಡ ಮನೆಗಳು
|
23,43,066
|
ಪ್ರಾದೇಶಿಕ ಗ್ರಾಮೀಣ ಕಾರ್ಯಾಗಾರಗಳು: ಸಚಿವಾಲಯವು ಗೋವಾ ಮತ್ತು ಸಿಕ್ಕಿಂನಲ್ಲಿ ಪ್ರಾದೇಶಿಕ ಗ್ರಾಮೀಣ ಕಾರ್ಯಾಗಾರಗಳನ್ನು ಆಯೋಜಿಸಿತು (ಅದರಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ಭಾಗವಹಿಸಿದ್ದರು) ಪಿಎಂಎವೈ-ಜಿ, ಎಚ್ ಆರ್ ಸ್ಥಿತಿಗತಿ ಮತ್ತು ಆವಾಸ್ 2024ರ ಸಮೀಕ್ಷೆ ಮತ್ತು ಪಿಎಂ-ಜನ್ ಮನ್ ಅಡಿಯಲ್ಲಿ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಪರಿಶೀಲಿಸಲು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ಭಾಗವಹಿಸಿದ್ದರು.
ಉಪಕ್ರಮಗಳು:
ಯೋಜನೆಯನ್ನು ಮೊದಲಿನಿಂದ ಕೊನೆಯವರೆಗೆ ಇ-ಆಡಳಿತ ಪರಿಹಾರ, AwaasSoft ಮತ್ತು AwaasApp ಮೂಲಕ ಜಾರಿಗೊಳಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಯೋಜನೆಯ ಅನುಷ್ಠಾನ ಅಂಶಗಳಿಗೆ ಸಂಬಂಧಿಸಿದ ಬಹು ಅಂಕಿಅಂಶಗಳ ಡೇಟಾ ನಮೂದು ಮತ್ತು ಮೇಲ್ವಿಚಾರಣೆಗಾಗಿ AwaasSoft ಕಾರ್ಯಗಳನ್ನು ಒದಗಿಸುತ್ತದೆ. ಈ ಅಂಕಿಅಂಶಗಳಲ್ಲಿ ಭೌತಿಕ ಪ್ರಗತಿ (ನೋಂದಣಿಗಳು, ನಿರ್ಬಂಧಗಳು, ಮನೆ ಪೂರ್ಣಗೊಳಿಸುವಿಕೆ ಮತ್ತು ಕಂತುಗಳ ಬಿಡುಗಡೆ ಇತ್ಯಾದಿ), ಆರ್ಥಿಕ ಪ್ರಗತಿಯ ಸ್ಥಿತಿ ಇತ್ಯಾದಿ ಸೇರಿವೆ. 2016 ರಲ್ಲಿ ಯೋಜನೆಯನ್ನು ಆರಂಭಿಸಿದಾಗಿನಿಂದ ಹೊಸ ಉಪಕ್ರಮಗಳನ್ನು ಪರಿಚಯಿಸುವ ಮೂಲಕ ಯೋಜನೆಯನ್ನು ಹೆಚ್ಚು ಫಲಾನುಭವಿ ಸ್ನೇಹಿಯಾಗಿಸಲು ಪ್ರಯತ್ನಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಸಚಿವಾಲಯವು ತೆಗೆದುಕೊಂಡ ಪ್ರಮುಖ ಉಪಕ್ರಮಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ:
ತಾಂತ್ರಿಕ ಮಧ್ಯಸ್ಥಿಕೆಗಳು
ಯೋಜನೆಯ ಪರಿಣಾಮಕಾರಿ ಮತ್ತು ಪಾರದರ್ಶಕ ನಿರ್ವಹಣೆಗಾಗಿ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಪರಿಚಯಿಸುವಲ್ಲಿ ಪಿಎಂಎವೈ-ಜಿ ಸದಾ ಮುಂಚೂಣಿಯಲ್ಲಿದೆ. ಹೊಸ ಹಂತವನ್ನು ಜಾರಿಗೆ ತರುವುದರೊಂದಿಗೆ ಪಿಎಂಎವೈ-ಜಿ ಮನೆಗಳನ್ನು ಗುರುತಿಸುವುದರಿಂದ ಹಿಡಿದು ಪೂರ್ಣಗೊಳಿಸುವವರೆಗಿನ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಪಾವಿತ್ರ್ಯವನ್ನು ಖಚಿತಪಡಿಸಿಕೊಳ್ಳಲು ಬಹು ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಹೊಸ ವೈಶಿಷ್ಟ್ಯಗಳು
- ಆವಾಸ್+ 2024 ಸಮೀಕ್ಷೆ- ಪಿಎಂಎವೈ-ಜಿ ಅಡಿಯಲ್ಲಿ ಅರ್ಹ ಕುಟುಂಬಗಳನ್ನು ಗುರುತಿಸಲು ಆವಾಸ್+ 2024 ಮನೆ ಸಮೀಕ್ಷೆಯನ್ನು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಿಎಂಎವೈ-ಜಿ ಯ ಫಲಾನುಭವಿ ಡೇಟಾಬೇಸ್‌ನಲ್ಲಿ ಸೇರಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಆವಾಸ್+ 2024 ಮೊಬೈಲ್ ಅಪ್ಲಿಕೇಶನ್ ಬಳಸಿ ನಡೆಸಲಾಗಿದೆ (FY 2024-25 ರಿಂದ 2028-29). ಆವಾಸ್ ಪ್ಲಸ್ ಮೊಬೈಲ್ ಅಪ್ಲಿಕೇಶನ್ ಪೂರ್ವ-ನೋಂದಾಯಿತ ಸರ್ವೇಯರ್‌ಗಳ ಮೂಲಕ ಸ್ವಯಂ ಸಮೀಕ್ಷೆ ಮತ್ತು ನೆರವಿನ ಸಮೀಕ್ಷೆ, ವಸತಿ ತಂತ್ರಜ್ಞಾನ ಆಯ್ಕೆ, ಮುಖ ದೃಢೀಕರಣ, ಆಧಾರ್ ಆಧಾರಿತ ಇ-ಕೆವೈಸಿ, ಮನೆಯ ದತ್ತಾಂಶ ಸೆರೆಹಿಡಿಯುವುದು, ಅಸ್ತಿತ್ವದಲ್ಲಿರುವ ಮನೆಯ ಪರಿಸ್ಥಿತಿಗಳು, ಸಮಯ ಸ್ಟ್ಯಾಂಪ್ ಮಾಡಲಾದ ಮತ್ತು ಅಸ್ತಿತ್ವದಲ್ಲಿರುವ ಮನೆ ಪ್ರಸ್ತಾವಿತ ನಿರ್ಮಾಣ ಸ್ಥಳದ ಜಿಯೋ-ಟ್ಯಾಗ್ ಮಾಡಲಾದ ಫೋಟೋ ಸೆರೆಹಿಡಿಯುವಿಕೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಅಪ್ಲಿಕೇಶನ್ ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
- ಪಹಲ್ - ಪಿಎಂಎವೈ-ಜಿ ಯ ಫಲಾನುಭವಿಗಳಿಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮನೆ ನಿರ್ಮಾಣದಲ್ಲಿ ಸಹಾಯ ಮಾಡುತ್ತಿವೆ, ಅವುಗಳ ಸ್ಥಳೀಯ ಭೌಗೋಳಿಕ ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ ವಿಪತ್ತು ಉಪಶಮನ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಮನೆ ವಿನ್ಯಾಸ ಮಾಡಲಾಗಿದೆ. CSIR-CBRI ಸಹಯೋಗದೊಂದಿಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯವು 3D ವಿನ್ಯಾಸ ಟೈಪೊಲಜಿ ಪಹಲ್ ಸಂಕಲನವನ್ನು ಆಧರಿಸಿದ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುವ ಉಪಕ್ರಮವನ್ನು ಕೈಗೊಂಡಿದೆ, ಇದು ಆವಾಸ್ ಅಪ್ಲಿಕೇಶನ್ ಮೂಲಕ ಫಲಾನುಭವಿಗಳಿಗೆ ಆದರ್ಶ ವಸತಿ ವಿನ್ಯಾಸಗಳನ್ನು ಶಿಫಾರಸು ಮಾಡುತ್ತದೆ
- ಗ್ರಾಮೀಣ ಮೇಸನ್ ತರಬೇತಿ- PMAY-G ಯ ಕೌಶಲ್ಯ ವರ್ಗಾವಣೆಯ ಆನ್-ಸೈಟ್ ಮಾದರಿಯ ಜೊತೆಗೆ ಗ್ರಾಮೀಣ ಮೇಸನ್ ತರಬೇತಿಯನ್ನು ಪ್ರಸ್ತುತ ಹಣಕಾಸು ವರ್ಷದಿಂದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳ (RSETIs) ಮೂಲಕ ಆರಂಭಿಸಲಾಗಿದೆ. RSETIಗಳು ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿ (NCVET) ದ್ವಿ ಪ್ರಶಸ್ತಿ ನೀಡುವ ಸಂಸ್ಥೆಯಾಗಿ ಗುರುತಿಸಲ್ಪಟ್ಟ ರಾಷ್ಟ್ರೀಯ ಅಕಾಡೆಮಿ ಆಫ್ RUDSETI (NAR) ನಿಂದ ರಚಿಸಲ್ಪಟ್ಟ ಕ್ಯಾಂಪಸ್-ಆಧಾರಿತ ತರಬೇತಿ ವ್ಯವಸ್ಥೆಯನ್ನು ಒದಗಿಸುತ್ತವೆ. ಕೋರ್ಸ್ - ಕಲ್ಲು ಮತ್ತು ಕಾಂಕ್ರೀಟ್ ಕೆಲಸಗಳು (NARQ30055) - ಅಡಿಪಾಯಗಳು, ಗಾರೆ ಮಿಶ್ರಣ, ಇಟ್ಟಿಗೆ/ಬ್ಲಾಕ್/ಕಲ್ಲು ಕಲ್ಲು, ಪ್ಲಾಸ್ಟರಿಂಗ್, ಡಿಪಿಸಿ ನೆಲಹಾಸುಗಳನ್ನು ಒಳಗೊಂಡ 240 ಗಂಟೆಗಳ NSQF ಹಂತ 1 ಕಾರ್ಯಕ್ರಮವಾಗಿದ್ದು ಮತ್ತು ಆರ್ಥಿಕ ಸಾಕ್ಷರತೆ ಮತ್ತು ಸೂಕ್ಷ್ಮ-ಉದ್ಯಮ ನಿರ್ವಹಣೆಯಂತಹ ಉದ್ಯಮಶೀಲತಾ ಅಭಿವೃದ್ಧಿಯ ಅಂಶಗಳನ್ನು ಒಳಗೊಂಡಿದೆ. ಮೌಲ್ಯಮಾಪನಗಳನ್ನು NAR ಸ್ವತಂತ್ರವಾಗಿ ನಡೆಸುತ್ತದೆ, ಯಶಸ್ವಿ ಮೌಲ್ಯಮಾಪನದ ನಂತರ ಪ್ರಮಾಣೀಕರಣಗಳನ್ನು ನೀಡಲಾಗುತ್ತದೆ. RSETI ಮಾರ್ಗದ ಮೂಲಕ ಈವರೆಗೆ ಒಟ್ಟು 7,700 ಅಭ್ಯರ್ಥಿಗಳಿಗೆ ಪ್ರಮಾಣೀಕರಣ ನೀಡಲಾಗಿದ್ದು, ತರಬೇತಿ ಪಡೆದ ಯುವಕರಿಗೆ ಸ್ಥಳೀಯ ಜೀವನೋಪಾಯದ ಆಯ್ಕೆಗಳನ್ನು ಬಲವರ್ಧನೆಗೊಳಿಸಲಾಗಿದೆ.
ii. ಪಿಎಂ-ಜನ್ ಮನ್ ಉಪಕ್ರಮಗಳು ಮತ್ತು ಸಾಧನೆಗಳು
ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ಪಿಎಂ-ಜನ್ ಮನ್ (PM-JANMAN) ಯೋಜನೆಯು ಗ್ರಾಮೀಣಾಭಿವೃದ್ಧಿ ಸಚಿವಾಲಯ ಸೇರಿದಂತೆ ಭಾರತ ಸರ್ಕಾರದ 9 ಸಚಿವಾಲಯಗಳನ್ನು ಒಳಗೊಂಡ 11 ನಿರ್ಣಾಯಕ ಮಧ್ಯಸ್ಥಿಕೆಗಳನ್ನು ಒಳಗೊಂಡಿದೆ. PVTG ಕುಟುಂಬಗಳು ಮತ್ತು ವಾಸಸ್ಥಳಗಳಲ್ಲಿ ಸುರಕ್ಷಿತ ವಸತಿ, ರಸ್ತೆ ಸಂಪರ್ಕ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಆರೋಗ್ಯ, ಪೋಷಣೆ, ದೂರಸಂಪರ್ಕ ಸಂಪರ್ಕ, ವಿದ್ಯುತ್ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಯೋಜನೆಯಡಿಯಲ್ಲಿ ವಸತಿ ಮಧ್ಯಸ್ಥಿಕೆಯನ್ನು PMAY-G ಮೂಲಕ ಒಳಗೊಳ್ಳಲಾಗುತ್ತದೆ. 2025ರ ಡಿಸೆಂಬರ್ 09ರ ವೇಳೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 4,71,486 ಮನೆಗಳನ್ನು ಮಂಜೂರು ಮಾಡಲಾಗಿದೆ ಮತ್ತು 2,42,811 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಆದರೂ 2025ರ ಜನವರಿ 1 ರಿಂದ ಈವರೆಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,24,204 ಮನೆಗಳನ್ನು ಮಂಜೂರು ಮಾಡಲಾಗಿದೆ ಮತ್ತು 1,71,719 ಮನೆಗಳನ್ನು ಪೂರ್ಣಗೊಳಿಸಲಾಗಿದೆ.
- ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ)
ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಉದ್ಯೋಗ-ಸಂಬಂಧಿತ ಕಾರ್ಯಕ್ರಮಗಳನ್ನು ಮಾನದಂಡವಾಗಿ ತರುವ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯೊಂದಿಗೆ, ಗ್ರಾಮೀಣಾಭಿವೃದ್ಧಿ ಸಚಿವಾಲಯ (MoRD) ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಉದ್ಯೋಗ-ಸಂಬಂಧಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ) ಎಂದು 2014ರ ಸೆಪ್ಟೆಂಬರ್ 25 ರಂದು ಪರಿಷ್ಕರಿಸಿತು. ಪ್ರಮಾಣಿತ ನೇತೃತ್ವದ ಫಲಿತಾಂಶ-ಚಾಲಿತ ಗುಣಮಟ್ಟದ ಕೌಶಲ್ಯ ಕಾರ್ಯಕ್ರಮವಾದ DDU-GKY, ಭಾರತವನ್ನು ಜಾಗತಿಕವಾಗಿ ಆದ್ಯತೆಯ ಉತ್ಪಾದನಾ ಕೇಂದ್ರವಾಗಿ ಇರಿಸಲು ಪ್ರಧಾನ ಮಂತ್ರಿಯವರ 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ, ಜೊತೆಗೆ ರಾಷ್ಟ್ರದ ಇತರ ಪ್ರಮುಖ ಕಾರ್ಯಕ್ರಮಗಳಲ್ಲಿ ಗಣನೀಯವಾಗಿ ಕೊಡುಗೆ ನೀಡುವ ಪ್ರಯತ್ನಗಳನ್ನು ಒಟ್ಟುಗೂಡಿಸುತ್ತದೆ.
DDU-GKY ಎನ್ನುವುದು ಬೇಡಿಕೆ-ಆಧಾರಿತ ಗುರಿ ಮಂಜೂರಾತಿ ಪ್ರಕ್ರಿಯೆಯ ಆಧಾರದ ಮೇಲೆ ಪಿಪಿಪಿ ಮಾದರಿಯಲ್ಲಿ ಜಾರಿಗೆ ತರಲಾಗುತ್ತಿರುವ ಸರ್ಕಾರದ ನೇತೃತ್ವದ ಯೋಜನೆಯಾಗಿದೆ. ಗ್ರಾಮೀಣ ಬಡ ಯುವಕರ ಮೇಲೆ ಕೇಂದ್ರೀಕರಿಸುವುದು ಮತ್ತು ಪೋಸ್ಟ್-ಪ್ಲೇಸ್‌ಮೆಂಟ್ ಟ್ರ್ಯಾಕಿಂಗ್, ಧಾರಣ ಮತ್ತು ವೃತ್ತಿ ಪ್ರಗತಿಗೆ ನೀಡಲಾಗುವ ಪ್ರಾಮುಖ್ಯತೆ ಮತ್ತು ಪ್ರೋತ್ಸಾಹದ ಮೂಲಕ ಸುಸ್ಥಿರ ಉದ್ಯೋಗದ ಮೇಲೆ ಒತ್ತು ನೀಡುವುದರಿಂದ ಈ ಕಾರ್ಯಕ್ರಮವು ಇತರ ಕೌಶಲ್ಯ ತರಬೇತಿ ಕಾರ್ಯಕ್ರಮಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಗುಣಮಟ್ಟದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು, DDU-GKY NSDC ಯ ಸೆಕ್ಟರ್ ಸ್ಕಿಲ್ ಕೌನ್ಸಿಲ್‌ಗಳ (SSC) ಮೂಲಕ ಪ್ರತಿಯೊಬ್ಬ ತರಬೇತಿದಾರರ ಕೌಶಲ್ಯ, ಜ್ಞಾನ ಮತ್ತು ಮನೋಭಾವವನ್ನು ನಿರ್ಣಯಿಸಲು ಸ್ವತಂತ್ರ ಮೂರನೇ ವ್ಯಕ್ತಿಯ ಪ್ರಮಾಣೀಕರಣವನ್ನು ಕಡ್ಡಾಯಗೊಳಿಸುತ್ತದೆ. DDU-GKY ಅಡಿಯಲ್ಲಿ ಎರಡು ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಅಂದರೆ; 9 ರಾಜ್ಯಗಳ 27 ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳಿಗೆ ರೋಶ್ನಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ, ಮಹಿಳಾ ಅಭ್ಯರ್ಥಿಗಳಿಗೆ ಶೇ.40% ವ್ಯಾಪ್ತಿಯೊಂದಿಗೆ ಕಡ್ಡಾಯ ವಸತಿ ಕೋರ್ಸ್ ಮತ್ತು ಹಿಮಾಯತ್- ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಎಲ್ಲಾ ಯುವಕರು 100% ಕೇಂದ್ರ ನಿಧಿಯೊಂದಿಗೆ ಈ ಯೋಜನೆಗೆ ಒಳಪಡುತ್ತಾರೆ.
ಪ್ರಮುಖ ಲಕ್ಷಣಗಳು:
• ರಾಜ್ಯ ನೇತೃತ್ವದ ಯೋಜನೆ
• ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅನುಷ್ಠಾನ ವಿಧಾನ
• ಉದ್ಯೋಗ-ಸಂಬಂಧಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ
• ಕಡ್ಡಾಯ ಸಾಮಾಜಿಕ ಸೇರ್ಪಡೆ: ಎಸ್ ಸಿ/ಎಸ್ ಟಿ(ಶೇ.50), ಮಹಿಳೆಯರು (ಶೇ.33), ಮತ್ತು ವಿಶೇಷಚೇತನರುಗಳು (ಶೇ.5%).
• ಕನಿಷ್ಠ ಶೇ.70ರಷ್ಟು ಉದ್ಯೋಗ (ಕನಿಷ್ಠ ಶೇ.50 ವೇತನ ಉದ್ಯೋಗ ಮತ್ತು ಗರಿಷ್ಠ ಶೇ.20ರಷ್ಟು ಸ್ವಯಂ ಉದ್ಯೋಗ).
• ಸ್ಥಾನ ಪಡೆದ ಅಭ್ಯರ್ಥಿಗಳಿಗೆ ಕನಿಷ್ಠ ವೇತನ ಅಥವಾ ಅದಕ್ಕಿಂತ ಹೆಚ್ಚಿನ ವೇತನದ ಪ್ರಕಾರ ಸಂಬಳವನ್ನು ನೀಡಲಾಗುತ್ತದೆ. ಸ್ಥಾನ ಪಡೆದ ಅಭ್ಯರ್ಥಿಗಳಿಗೆ ನಂತರದ ಉದ್ಯೋಗ ಬೆಂಬಲ ಮತ್ತು ಧಾರಣ ಬೆಂಬಲ.
ಟಾರ್ಗೆಟ್ ಗ್ರೂಪ್:
ಡಿಡಿಯು-ಜಿಕೆವೈ ಗಾಗಿ ಗುರಿ ಗುಂಪು 15-35 ವರ್ಷ ವಯಸ್ಸಿನ ಬಡ ಗ್ರಾಮೀಣ ಯುವಕರು. ಆದರೂ ಮಹಿಳಾ ಅಭ್ಯರ್ಥಿಗಳು ಮತ್ತು ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳು (PVTGs), ಅಂಗವಿಕಲ ವ್ಯಕ್ತಿಗಳು (PwDs), ಟ್ರಾನ್ಸ್ಜೆಂಡರ್ ಮತ್ತು ಪುನರ್ವಸತಿ ಬಂಧಿತ ಕಾರ್ಮಿಕರು, ಕಳ್ಳಸಾಗಣೆಗೆ ಬಲಿಯಾದವರು, ಮಲಹೊರುವವರು(ಸ್ಕ್ಯಾವೆಂಜರ್ ಗಳು) , ಮಂಗಳಮುಖಿಯರು, ಎಚ್ಐವಿ ಯೊಂದಿಗೆ ವಾಸಿಸುವ ಜನರು ಮುಂತಾದ ಇತರ ವಿಶೇಷ ಗುಂಪುಗಳಿಗೆ ಸೇರಿದವರಾಗಿರಬೇಕು.
ಪ್ರಮುಖ ಸಾಧನೆಗಳು:
- ಡಿಡಿಯು-ಜಿಕೆವೈ ಅನ್ನು ಪ್ರಸ್ತುತ 27 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗುತ್ತಿದೆ ಮತ್ತು 606 ಯೋಜನೆಗಳಲ್ಲಿ 2369 ಕ್ಕೂ ಅಧಿಕ ತರಬೇತಿ ಕೇಂದ್ರಗಳನ್ನು ಹೊಂದಿದೆ (ಆದಾಗ್ಯೂ, 611 ಕಾರ್ಯನಿರ್ವಹಿಸುತ್ತಿವೆ), 37 ವಲಯಗಳಲ್ಲಿ ತರಬೇತಿ ನೀಡುವ 466 ಕ್ಕೂ ಹೆಚ್ಚು ಯೋಜನಾ ಅನುಷ್ಠಾನ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮತ್ತು 816 ಕ್ಕೂ ಹೆಚ್ಚು ಉದ್ಯೋಗಗಳಲ್ಲಿದ್ದಾರೆ.
- ಭೌತಿಕ ಪ್ರಗತಿ: ಡಿಡಿಯು-ಜಿಕೆವೈ ಅಡಿಯಲ್ಲಿ ಪ್ರಾರಂಭವಾದಾಗಿನಿಂದ, ಒಟ್ಟು 17.92 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ ಮತ್ತು 31.10.2025 ರವರೆಗೆ 11.64 ಲಕ್ಷ ಅಭ್ಯರ್ಥಿಗಳನ್ನು ನೇಮಿಸಲಾಗಿದೆ (575 ವಿದೇಶಿ ನಿಯೋಜನೆಗಳು ಸೇರಿದಂತೆ)
- ಪ್ರಗತಿ ಹಣಕಾಸು: ಡಿಡಿಯು-ಜಿಕೆವೈ ಅಡಿಯಲ್ಲಿ ಆರಂಭವಾದಾಗಿನಿಂದ, 31.10.2025 ರವರೆಗೆ ಒಟ್ಟು ₹779667.03 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.
- 2025ರ ಕ್ಯಾಲೆಂಡರ್ ವರ್ಷದಲ್ಲಿ, ಒಟ್ಟು 82272 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ, ಮತ್ತು 31.10.2025 ರವರೆಗೆ 37035 ಅಭ್ಯರ್ಥಿಗಳಿಗೆ ನೇಮಕಾತಿ ಮಾಡಲಾಗಿದೆ.
5. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳು (RSETIS)
- RSETI ಯೋಜನೆಯ ಹಿನ್ನೆಲೆ ಮತ್ತು ಅವಲೋಕನ ಪ್ರಗತಿ ಹಣಕಾಸು: DDU-GKY ಅಡಿಯಲ್ಲಿ ಆರಂಭವಾದಾಗಿನಿಂದ, 31.10.2025 ರವರೆಗೆ ಒಟ್ಟು ₹779667.03 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.
- 2025 ರ ಕ್ಯಾಲೆಂಡರ್ ವರ್ಷದಲ್ಲಿ, ಒಟ್ಟು 82272 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ ಮತ್ತು 31.10.2025 ರವರೆಗೆ 37035 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ
5. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳು (ಆರ್ ಎಸ್ ಇಟಿಐಎಸ್ RSETIS)
RSETI ಯೋಜನೆಯ ಹಿನ್ನೆಲೆ ಮತ್ತು ಅವಲೋಕನ
ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಗಳು (RSETIs) ಗ್ರಾಮೀಣಾಭಿವೃದ್ಧಿ ಸಚಿವಾಲಯದ (MoRD) ಸಹಯೋಗದೊಂದಿಗೆ ಸಾರ್ವಜನಿಕ ವಲಯ/ಖಾಸಗಿ ಬ್ಯಾಂಕುಗಳ ಪ್ರಾಯೋಜಕತ್ವದ ಅಡಿಯಲ್ಲಿ ಸ್ಥಾಪಿಸಲಾದ ನಿರ್ದಿಷ್ಟ, ಜಿಲ್ಲಾ ಮಟ್ಟದ ತರಬೇತಿ ಕೇಂದ್ರಗಳಾಗಿವೆ. ಈ ಯೋಜನೆಯು ಗ್ರಾಮೀಣ ಯುವಕರಿಗೆ ಉಚಿತ, ಅಲ್ಪಾವಧಿಯ ವಸತಿ ತರಬೇತಿಯನ್ನು ಒದಗಿಸುತ್ತದೆ, ಇದು ಬೋರ್ಡಿಂಗ್ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸುತ್ತದೆ. ತರಬೇತಿಯು ಬೇಡಿಕೆ-ಚಾಲಿತವಾಗಿದೆ ಮತ್ತು ಕೃಷಿ, ಕೈಗಾರಿಕೆ, ಸೇವೆಗಳು ಮತ್ತು ಸ್ಥಳೀಯವಾಗಿ ಸಂಬಂಧಿತ ವ್ಯಾಪಾರಗಳನ್ನು ಒಳಗೊಂಡ NSQF- ಕಂಪ್ಲೈಂಟ್ ಕೋರ್ಸ್‌ಗಳೊಂದಿಗೆ ಹೊಂದಿಕೆಯಾಗುತ್ತದೆ. ತರಬೇತಿಯ ನಂತರ, ತರಬೇತಿದಾರರು ಸ್ವ-ಉದ್ಯೋಗ, ಸಣ್ಣ-ಉದ್ಯಮ ಅಭಿವೃದ್ಧಿ ಅಥವಾ ವೇತನ ಉದ್ಯೋಗವನ್ನು ಸುಗಮಗೊಳಿಸಲು ಎರಡು ವರ್ಷಗಳ ಕಾಲ ನೆರವು ಪಡೆಯುತ್ತಾರೆ, ಬ್ಯಾಂಕುಗಳ ಮೂಲಕ ಸಾಲ ಸಂಪರ್ಕದ ಮೇಲೆ ಬಲವಾದ ಒತ್ತು ನೀಡಲಾಗುತ್ತದೆ. RSETI ಗಳು ತಮ್ಮದೇ ಆದ ನಿರ್ದಿಷ್ಟ ಮೂಲಸೌಕರ್ಯಗಳನ್ನು (ಭಾರತ ಸರ್ಕಾರದ ಅನುದಾನದಿಂದ ಬೆಂಬಲಿತ ಭೂಮಿ ಮತ್ತು ಕಟ್ಟಡಗಳು) ಹೊಂದುವಲ್ಲಿ ವಿಶಿಷ್ಟವಾಗಿವೆ, ಬಾಡಿಗೆ ಸೌಲಭ್ಯಗಳನ್ನು ಅವಲಂಬಿಸಿರುವ ಇತರ ಕೌಶಲ್ಯ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ.
ಯೋಜನೆಯ ಉದ್ದೇಶ
- 18-50 ವರ್ಷ ವಯಸ್ಸಿನ ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಉಚಿತ, ವಸತಿ, ಬೇಡಿಕೆ ಆಧಾರಿತ ಕೌಶಲ್ಯ ತರಬೇತಿಯನ್ನು ಒದಗಿಸುವುದು.
- ಉದ್ಯಮಶೀಲತಾ ಅಭಿವೃದ್ಧಿ ಮತ್ತು ಬ್ಯಾಂಕ್‌ಗಳೊಂದಿಗೆ ಸಾಲ ಸಂಪರ್ಕದ ಮೂಲಕ ತರಬೇತಿ ಪಡೆಯುವವರು ಸ್ವ-ಉದ್ಯೋಗ ಉದ್ಯಮಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುವುದು.
- 1-2 ವರ್ಷಗಳ ಕಾಲ ತರಬೇತಿಯ ನಂತರದ ಬೆಂಬಲದ ಮೂಲಕ ಸುಸ್ಥಿರ ಜೀವನೋಪಾಯವನ್ನು ಖಾತ್ರಿಪಡಿಸಿಕೊಳ್ಳುವುದು.
- ಫಲಿತಾಂಶಗಳನ್ನು ಗರಿಷ್ಠಗೊಳಿಸಲು ಇತರ ರಾಷ್ಟ್ರೀಯ ಕಾರ್ಯಕ್ರಮಗಳೊಂದಿಗೆ (NRLM, PMAY-G, MGNREGS-UNNATI, PM-VIkas MSDE, MSME, MoTA, KVIC ಇತ್ಯಾದಿ) ಸಂಯೋಜನೆಗೊಳಿಸುವುದು. ಯೋಜನೆಯ ವಿಶಿಷ್ಟ ಲಕ್ಷಣಗಳು
- ಬೋರ್ಡಿಂಗ್, ವಸತಿ ಮತ್ತು ಪ್ರಯಾಣ ಭತ್ಯೆ ಸೇರಿದಂತೆ ಉಚಿತ, ಪೂರ್ಣ ಸಮಯದ ವಸತಿ ತರಬೇತಿ.
- ಪಾರದರ್ಶಕತೆಗಾಗಿ AEBAS (ಆಧಾರ್ ಸಕ್ರಿಯಗೊಳಿಸಿದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ).
- ಕೌಶಲ್ ಪಂಜಿ ಅಪ್ಲಿಕೇಶನ್ ಮೂಲಕ ಅಭ್ಯರ್ಥಿ ನೋಂದಣಿ.
- 70 ಕೋರ್ಸ್‌ಗಳನ್ನು ನೀಡಲಾಗುತ್ತದೆ (65 NSQF-ಜೋಡಣೆ + MoRD ಅನುಮೋದಿಸಿದ 5 ವಿಶೇಷ ಕೋರ್ಸ್‌ಗಳು).
- ಸ್ಥಳೀಯ ಆರ್ಥಿಕತೆ ಮತ್ತು ಅಗತ್ಯಗಳನ್ನು ಆಧರಿಸಿ ಕಸ್ಟಮೈಸ್ ಮಾಡಿದ ತರಬೇತಿ ಮಾದರಿಗಳು.
- ಉದ್ಯೋಗದಲ್ಲಿ ನೆಲೆಯೂರಿದ್ದಾರೆಂಬುದನ್ನು ಖಾತ್ರಿಪಡಿಸಿಕೊಳ್ಳಲು 2 ವರ್ಷಗಳವರೆಗೆ ತರಬೇತಿಯ ನಂತರದ ಹ್ಯಾಂಡ್‌ಹೋಲ್ಡಿಂಗ್ ಮತ್ತು ಅನುಸರಣೆ.
- ಬ್ಯಾಂಕುಗಳೊಂದಿಗೆ ಸಾಲ ಸಂಪರ್ಕ ಸೌಲಭ್ಯ; ಉದ್ಯಮಶೀಲತೆಯ ಮೇಲೆ ಬಲವಾದ ಗಮನ.
- ಮಹಿಳೆಯರು, ಎಸ್‌ಸಿ/ಎಸ್‌ಟಿ, ಪಿಡಬ್ಲ್ಯೂಡಿಗಳು, ಸ್ವಸಹಾಯ ಗುಂಪು ಸದಸ್ಯರು ಮತ್ತು ಅಲ್ಪಸಂಖ್ಯಾತರಿಗೆ ವಿಶೇಷ ನಿಬಂಧನೆಗಳು.
ಭೌತಿಕ ಸಾಧನೆಗಳು (ಅಕ್ಟೋಬರ್, 2025 ರವರೆಗೆ)
• ಒಟ್ಟು ಸಂಸ್ಥೆಗಳು: 27 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಲ್ಲಿ 625 RSETIಗಳು, 612 ಜಿಲ್ಲೆಗಳನ್ನು ಒಳಗೊಂಡಿದೆ.
• ಒಟ್ಟು ತರಬೇತಿ ಪಡೆದವರು: 59 ಲಕ್ಷ ಗ್ರಾಮೀಣ ಯುವಕರು.
• ಒಟ್ಟು ನೆಲೆಸಿದವರು: ಸ್ವಯಂ/ವೇತನದ ಉದ್ಯೋಗದ ಮೂಲಕ 43 ಲಕ್ಷ.
RSETI 2.0 ಅಡಿಯಲ್ಲಿ ಪ್ರಮುಖ ಬದಲಾವಣೆಗಳು (2025-26 ರ ಹಣಕಾಸು ವರ್ಷದಿಂದ)
• ಸಾಲ ಸಂಪರ್ಕ ಗುರಿಯನ್ನು ಶೇ.50 ಕ್ಕೆ ಹೆಚ್ಚಿಸಲಾಗಿದೆ.
• ನೈಜ-ಸಮಯದ ಪಾರದರ್ಶಕತೆಗಾಗಿ ಡಿಜಿಟಲ್ ಆಡಳಿತ ವ್ಯವಸ್ಥೆಗಳು.
• NSQF-ಜೋಡಿಸಿದ ಕೋರ್ಸ್ ಗಳ ಪಟ್ಟಿ ಯನ್ನು ವಿಸ್ತರಿಸಲಾಗಿದೆ.
6. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನ್ರೇಗಾ-MGNREGS)
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮಹಾತ್ಮ ಗಾಂಧಿ ನರೇಗಾ) ದೇಶದ ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬಗಳ ಜೀವನೋಪಾಯ ಭದ್ರತೆಯನ್ನು ಹೆಚ್ಚಿಸಲು ಒಂದು ಕಾಯ್ದೆಯಾಗಿದ್ದು, ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 100 ದಿನಗಳ ಖಾತರಿಯ ವೇತನದ ಉದ್ಯೋಗವನ್ನು ಒದಗಿಸುವ ಮೂಲಕ ಅವರ ವಯಸ್ಕ ಸದಸ್ಯರು ಸ್ವಯಂಪ್ರೇರಿತರಾಗಿ ಕೌಶಲ್ಯರಹಿತ ದೈಹಿಕ ಕೆಲಸ ಮಾಡಬಹುದು.
ಉದ್ದೇಶಗಳು
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಮಹಾತ್ಮ ಗಾಂಧಿ ನರೇಗಾ) ಉದ್ದೇಶಗಳು:
1. ಗ್ರಾಮೀಣ ಪ್ರದೇಶದ ಪ್ರತಿಯೊಂದು ಕುಟುಂಬಕ್ಕೂ ಬೇಡಿಕೆಗೆ ಅನುಗುಣವಾಗಿ ಕನಿಷ್ಠ ನೂರು ದಿನಗಳ ಕೌಶಲ್ಯರಹಿತ ದೈಹಿಕ ಕೆಲಸ ಒದಗಿಸುವುದು, ಇದರಿಂದಾಗಿ ನಿಗದಿತ ಗುಣಮಟ್ಟ ಮತ್ತು ಬಾಳಿಕೆ ಬರುವ ಉತ್ಪಾದಕ ಸ್ವತ್ತುಗಳು ಸೃಷ್ಟಿಯಾಗುತ್ತವೆ;
2. ಬಡವರ ಜೀವನೋಪಾಯ ಸಂಪನ್ಮೂಲ ಮೂಲವನ್ನು ಬಲಪಡಿಸುವುದು;
3. ಸಾಮಾಜಿಕ ಸೇರ್ಪಡೆಯನ್ನು ಸಕ್ರಿಯವಾಗಿ ಖಾತ್ರಿಪಡಿಸಿಕೊಳ್ಳುವುದು; ಮತ್ತು
4. ಪಂಚಾಯತ್ ರಾಜ್ ಸಂಸ್ಥೆಗಳನ್ನು (ಪಿಆರ್ ಐ) ಬಲವರ್ಧನೆಗೊಳಿಸುವುದು.
ಮಹಾತ್ಮ ಗಾಂಧಿ ನರೇಗಾ ಅಡಿಯಲ್ಲಿ ಸಾಧನೆಗಳು:
|
ಕ್ರ.ಸಂ
|
ಸೂಚಕಗಳು
|
ಹಣಕಾಸು ವರ್ಷ 2025-26
(1ನೇ ಏಪ್ರಿಲ್ ನಿಂದ 02.12.2025)
|
|
1.
|
ಮಾನವ ದಿನಗಳ ಸೃಷ್ಟಿ (ಕೋಟಿಗಳಲ್ಲಿ)
|
161.6
|
|
2.
|
ಒಟ್ಟು ಕೇಂದ್ರ ಬಿಡುಗಡೆ (ಕೋಟಿ ರೂ.ಗಳಲ್ಲಿ)
|
69,194.59
|
|
3.
|
8 ದಿನಗಳಲ್ಲಿ ಶೇ.ಎಫ್ ಟಿಒ ಗಳು ಸೃಷ್ಟಿಯಾಗಿವೆ
|
95.31
|
|
4.
|
ಪೂರ್ಣಗೊಂಡ ಕೆಲಸಗಳ ಸಂಖ್ಯೆ (ಲಕ್ಷಗಳಲ್ಲಿ)
|
49.62
|
|
5.
|
ಒಟ್ಟು ಮಹಿಳೆಯರ ಶೇಕಡಾವಾರು ಮಾನವದಿನಗಳು
|
56.73
|
|
6.
|
ಒಟ್ಟು ಮಾನವ ದಿನಗಳ ಪ್ರಕಾರ ಶೇ.SC ಮಾನವ ದಿನಗಳು
|
17.37
|
|
7.
|
ಒಟ್ಟು ಮಾನವ ದಿನಗಳ ಪ್ರಕಾರ ಶೇ. ST ಮಾನವ ದಿನಗಳು
|
19.03
|
|
8.
|
ಬಿ ವರ್ಗ ಕಾಮಗಾರಿಗಳು ಶೇಕಡಾವಾರು %
|
60.59
|
ಮಹಾತ್ಮ ಗಾಂಧಿ ನರೇಗಾ ದಲ್ಲಿನ ಪ್ರಮುಖ ಉಪಕ್ರಮಗಳು/ಪ್ರಮುಖ ಮಧ್ಯಸ್ಥಿಕೆಗಳು:
- ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಸೇವೆ (NMMS): ಮಹಾತ್ಮ ಗಾಂಧಿ ನರೇಗಾ ಕಾರ್ಯಸ್ಥಳಗಳಲ್ಲಿ ಕಾರ್ಮಿಕರ ಹಾಜರಾತಿಯನ್ನು (ವೈಯಕ್ತಿಕ ಫಲಾನುಭವಿ ಕೆಲಸಗಳನ್ನು ಹೊರತುಪಡಿಸಿ) ದಿನಕ್ಕೆ ಎರಡು ಬಾರಿ ಜಿಯೋ-ಟ್ಯಾಗ್ ಮತ್ತು ಎರಡು ಸಮಯ-ಮುದ್ರೆಯ ಛಾಯಾಚಿತ್ರಗಳೊಂದಿಗೆ ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ನವೆಂಬರ್ ತಿಂಗಳಲ್ಲಿ ಶೇ.95.09ರಷ್ಟು (1ನೇ ಹದಿನೈದು ದಿನಗಳು) ಮತ್ತು 91.50ರಷ್ಟು (2ನೇ ಹದಿನೈದು ದಿನಗಳು) ಹಾಜರಾತಿಯನ್ನು NMMS ಅಪ್ಲಿಕೇಶನ್ ಬಳಕೆಯ ಮೂಲಕ ಸೆರೆಹಿಡಿಯಲಾಗಿದೆ.
- ಪ್ರದೇಶ ಅಧಿಕಾರಿ ಮೇಲ್ವಿಚಾರಣಾ ಭೇಟಿ ಅಪ್ಲಿಕೇಷನ್ : ಈ ಅಪ್ಲಿಕೇಶನ್ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ತಮ್ಮ ಕ್ಷೇತ್ರ ಭೇಟಿಯ ಸಂಶೋಧನೆಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಲು ಅನುಕೂಲ ಮಾಡಿಕೊಡುತ್ತದೆ ಮತ್ತು ಭೇಟಿ ನೀಡಿದ ಎಲ್ಲಾ ಕಾಮಗಾರಿ ಸ್ಥಳಗಳಿಗೆ ಸಮಯ ಮುದ್ರೆ ಮತ್ತು ಜಿಯೋಟ್ಯಾಗ್ ಮಾಡಿದ ಛಾಯಾಚಿತ್ರವನ್ನು ದಾಖಲಿಸಲು ಅಧಿಕಾರಿಗಳಿಗೆ ಅನುಕೂಲ ಮಾಡಿಕೊಡುತ್ತದೆ. 2025-26ನೇ ಹಣಕಾಸು ವರ್ಷದಲ್ಲಿ ನವೆಂಬರ್ 2025 ರವರೆಗೆ ಎಲ್ಲಾ ರಾಜ್ಯಗಳಲ್ಲಿ ಒಟ್ಟು 16,67,847 ಕಾಮಗಾರಿ ಸ್ಥಳಗಳನ್ನು ಪ್ರದೇಶ ಅಧಿಕಾರಿ ತಪಾಸಣೆ ಅಪ್ಲಿಕೇಶನ್ ಬಳಕೆಯ ಮೂಲಕ ಪರಿಶೀಲಿಸಲಾಗಿದೆ
- ಯುಕ್ತಧಾರ: ಜಿಐಎಸ್ ಆಧಾರಿತ ಯೋಜನಾ ಸಾಧನ - ಜಿಪಿ ಮಟ್ಟದಲ್ಲಿ ಜಿಐಎಸ್ ಆಧಾರಿತ ಯೋಜನೆಯನ್ನು ಸರಳಗೊಳಿಸಲು, ಯುಕ್ತಧಾರ, ಇಸ್ರೋ-NRSC ಸಹಯೋಗದೊಂದಿಗೆ ಜಿಯೋಸ್ಪೇಷಿಯಲ್ ಯೋಜನಾ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಯುಕ್ತಧಾರವನ್ನು ಬಳಸಿಕೊಂಡು ಜಿಪಿ ಯೋಜನೆಯನ್ನು ಪ್ರಾಯೋಗಿಕ ಆಧಾರದ ಮೇಲೆ ಆರಂಭಿಸಲಾಗಿದೆ, ಪ್ರತಿ ಬ್ಲಾಕ್‌ಗೆ ಒಂದು ಜಿಪಿಯಂತೆ. ಒಟ್ಟು 6,709 ಜಿಪಿಗಳನ್ನು ಗುರುತಿಸಲಾಗಿದೆ ಮತ್ತು ಅವರೆಲ್ಲರೂ ಯುಕ್ತಧಾರವನ್ನು ಬಳಸಿಕೊಂಡು ತಮ್ಮ ಯೋಜನೆಯನ್ನು ಆರಂಭಿಸಿದ್ದಾರೆ.
- ಭದ್ರತೆ - ಉದ್ಯೋಗಕ್ಕಾಗಿ ಗ್ರಾಮೀಣ ದರಗಳನ್ನು ಬಳಸಲು ಅಂದಾಜು ಲೆಕ್ಕಾಚಾರಕ್ಕಾಗಿ ಸಾಫ್ಟ್‌ವೇರ್: ಯೋಜನೆಯಡಿಯಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಅಂದಾಜು ಲೆಕ್ಕಾಚಾರಕ್ಕೆ ಅಪ್ಲಿಕೇಶನ್ ಅನ್ನು ಬಳಸಲಾಗುತ್ತಿದೆ.
- ಜಿಯೋ-ಮನ್ರೇಗಾ ಎಂಜಿಎನ್ಆರ್ಇಜಿಎ: ಆಸ್ತಿ ರಚನೆಯ ’ಮೊದಲು’, ‘ಕಾಮಗಾರಿ ನಡೆಯುವ ಸಮಯದಲ್ಲಿ’ ಮತ್ತು ‘ನಂತರ’ ಹಂತಗಳಲ್ಲಿ ಜಿಯೋಟ್ಯಾಗ್ ಮಾಡುವ ಮೂಲಕ ಸ್ವತ್ತುಗಳ ರಚನೆಯನ್ನು ಟ್ರ್ಯಾಕ್ ಮಾಡಲು ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಂಡು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿಯವರೆಗೆ, ಒಟ್ಟು 6.44 ಕೋಟಿ ಸ್ವತ್ತುಗಳನ್ನು ಜಿಯೋಟ್ಯಾಗ್ ಮಾಡಲಾಗಿದೆ.
- ಜಲಧೂತ್ ಅಪ್ಲಿಕೇಶನ್: ಗ್ರಾಮ ರೋಜ್‌ಗಾರ್ ಸಹಾಯಕ್ (GRS) ವರ್ಷಕ್ಕೆ ಎರಡು ಬಾರಿ (ಮುಂಗಾರು ಪೂರ್ವ ಮತ್ತು ಮುಂಗಾರು ನಂತರದ) ಆಯ್ದ ಬಾವಿಗಳ ನೀರಿನ ಮಟ್ಟವನ್ನು ಅಳೆಯಲು ಅನುವು ಮಾಡಿಕೊಡುತ್ತದೆ. ಈವರೆಗೆ, 2025 ರಲ್ಲಿ 2.57 ಲಕ್ಷ ಹಳ್ಳಿಗಳು ಮತ್ತು 1.08 ಲಕ್ಷ ಗ್ರಾಮ ಪಂಚಾಯತ್‌ಗಳನ್ನು ಒಳಗೊಂಡ ಮಾನ್ಸೂನ್ ನಂತರದ ಸುಮಾರು 3.92 ಲಕ್ಷ ಬಾವಿಗಳ ನೀರಿನ ಮಟ್ಟದ ಡೇಟಾವನ್ನು ಸಂಗ್ರಹಿಸಲಾಗಿದೆ.
- ಜನ್ ಮನ್ರೇಗ ಅಪ್ಲಿಕೇಶನ್: ತನ್ನ ನಾಗರಿಕರಿಗೆ ಮಾಹಿತಿಯನ್ನು ಪೂರ್ವಭಾವಿಯಾಗಿ ಬಹಿರಂಗಪಡಿಸುವಲ್ಲಿ ಮತ್ತು ಮಹಾತ್ಮ ಗಾಂಧಿ NREGS ಅನುಷ್ಠಾನದ ಬಗ್ಗೆ ಪ್ರತಿಕ್ರಿಯೆ ಕಾರ್ಯವಿಧಾನದಲ್ಲಿ ಸಹಾಯ ಮಾಡುತ್ತದೆ.
- ಮಿಷನ್ ಅಮೃತ್ ಸರೋವರ: ಪ್ರತಿ ಗ್ರಾಮೀಣ ಜಿಲ್ಲೆಯಲ್ಲಿ (ದೆಹಲಿ, ಚಂಡೀಗಢ ಮತ್ತು ಲಕ್ಷದ್ವೀಪ ಹೊರತುಪಡಿಸಿ) 75 ಅಮೃತ್ ಸರೋವರಗಳನ್ನು ನಿರ್ಮಿಸಲು ಅಥವಾ ಪುನರುಜ್ಜೀವನಗೊಳಿಸಲು ಮಿಷನ್ ಅಮೃತ್ ಸರೋವರವನ್ನು 2022ರ ಏಪ್ರಿಲ್ 24 ರಂದು ಗೌರವಾನ್ವಿತ ಪ್ರಧಾನ ಮಂತ್ರಿಗಳು ಆರಂಭಿಸಿದರು, ಭವಿಷ್ಯದ ಪೀಳಿಗೆಗೆ ನೀರಿನ ಸಂರಕ್ಷಣೆಯನ್ನು ಬಲಪಡಿಸಲು 2023ರ ಆಗಸ್ಟ್ 15 ರ ವೇಳೆಗೆ ದೇಶಾದ್ಯಂತ 50,000 ಸರೋವರಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿತ್ತು. ಮೊದಲ ಹಂತದಲ್ಲಿ 68,000 ಕ್ಕೂ ಅಧಿಕ ಅಮೃತ್ ಸರೋವರಗಳನ್ನು ನಿರ್ಮಿಸಲಾಗಿದೆ ಅಥವಾ ಪುನರುಜ್ಜೀವನಗೊಳಿಸಲಾಗಿದೆ, ಮಿಷನ್‌ಗಾಗಿ ನಮ್ಮ ವಿಸ್ತೃತ ದೂರದೃಷ್ಟಿಯೊದಿಗೆ ನಾವು ಯೋಜನೆ ವಿಸ್ತರಿಸಿದಾಗ ಇದರಲ್ಲಿ ಮನ್ರೇಗಾ ಮೂಲಕ ಪೂರ್ಣಗೊಂಡ 46,000 ಕ್ಕೂ ಅಧಿಕ ಸರೋವರಗಳು ಸೇರಿವೆ., ಈ ಸರೋವರಗಳು ಸುಸ್ಥಿರ ಜಲ ಸಂಪನ್ಮೂಲಗಳಾಗಿ ಕಾರ್ಯನಿರ್ವಹಿಸುವುದಲ್ಲದೆ, ಮಿಷನ್ ಅಮೃತ್ ಸರೋವರದ ಎರಡನೇ ಹಂತದಲ್ಲಿ ರೋಮಾಂಚಕ ಸಮುದಾಯ ಕೇಂದ್ರಗಳಾಗುವುದನ್ನು ಖಾತ್ರಿಪಡಿಸಿಕೊಳ್ಳಲು ಸಮುದಾಯದ ತೊಡಗಿಸಿಕೊಳ್ಳುವಿಕೆಯ ಮೇಲೆ ಕೇಂದ್ರೀಕರಿಸಿ ಹೆಚ್ಚಿನ ಸರೋವರಗಳ ನಿರ್ಮಾಣ ಮತ್ತು ಪುನರುಜ್ಜೀವನವನ್ನು ಕೈಗೊಳ್ಳಲಾಗುವುದು.
2025ರ ನವೆಂಬರ್ ವೇಳೆಗೆ ಎರಡನೇ ಹಂತದ ಅಡಿಯಲ್ಲಿ 15,892 ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಲಾಗಿದೆ ಮತ್ತು 1,818 ಕಾಮಗಾರಿಗಳು ಆರಂಭವಾಗಿವೆ. ಅಮೃತ ಸರೋವರ ಸ್ಥಳಗಳಲ್ಲಿ ವಿಶ್ವ ಪರಿಸರ ದಿನ ಮತ್ತು ಅಂತಾರಾಷ್ಟ್ರೀಯ ಯೋಗ ದಿನವನ್ನು 11.5 ಲಕ್ಷಕ್ಕೂ ಹೆಚ್ಚು ಜನರ ಸಕ್ರಿಯ ಸಮುದಾಯದ ಭಾಗವಹಿಸುವಿಕೆಯೊಂದಿಗೆ ಆಚರಿಸಲಾಯಿತು, 2025 ರ ಸ್ವಾತಂತ್ರ್ಯ ದಿನವನ್ನು "ಏಕ್ ಸರೋವರ್, ಏಕ್ ಸಂಕಲ್ಪ - ಜಲ ಸಂರಕ್ಷಣ ಕಾ" ಎಂಬ ವಿಷಯದೊಂದಿಗೆ 12 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದರು ಮತ್ತು ಸಂವಿಧಾನ ದಿನವನ್ನು (2025ರ ನವೆಂಬರ್ 26) ಸಾಂವಿಧಾನಿಕ ಮೌಲ್ಯಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಸ್ವಚ್ಛತೆ ಮತ್ತು ಗಿಡ ನೆಡುವ ಅಭಿಯಾನಗಳ ಚಟುವಟಿಕೆಗಳೊಂದಿಗೆ ಗುರುತಿಸಲಾಯಿತು
x. ನೇರ ನಗದು ವರ್ಗಾವಣೆ (ಡಿಬಿಟಿ): ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರಲು ಮತ್ತು ಸೋರಿಕೆಗಳನ್ನು ತಗ್ಗಿಸಲು, ವೇತನ ಪಾವತಿಯಲ್ಲಿ ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಕಾರ್ಯಕ್ರಮದ ಅಡಿಯಲ್ಲಿ ಶೇ.99 ಕ್ಕಿಂತ ಅಧಿಕ ವೇತನ ಪಾವತಿಗಳನ್ನು ಡಿಬಿಟಿ ವ್ಯವಸ್ಥೆಯ ಮೂಲಕ ಕಾರ್ಮಿಕರ ಖಾತೆಗಳಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಜಮಾ ಮಾಡಲಾಗುತ್ತದೆ.
xi.ಆಧಾರ್ ಪಾವತಿ ಸೇತುವೆ ವ್ಯವಸ್ಥೆ: ಡಿಬಿಟಿ ಪ್ರೋಟೋಕಾಲ್ ಅನ್ನು ಅನುಸರಿಸಿ ಫಲಾನುಭವಿಗಳ ಖಾತೆಗಳಿಗೆ ಆಧಾರ್ ಪಾವತಿ ಸೇತುವೆ ವ್ಯವಸ್ಥೆಯ ಮೂಲಕ ವೇತನ ಪಾವತಿಗಳನ್ನು ಮಾಡಲಾಗುತ್ತದೆ. ಒಟ್ಟು 12.17 ಕೋಟಿ ಸಕ್ರಿಯ ಕಾರ್ಮಿಕರಿಗೆ ಪ್ರತಿಯಾಗಿ ಶೇ.99.67ರಷ್ಟು ಸಕ್ರಿಯ ಕಾರ್ಮಿಕರ ಆಧಾರ್ ಅನ್ನು ಸೀಡ್ ಮಾಡಲಾಗಿದೆ.
xii. ಆಧಾರ್ ಆಧಾರಿತ ಇ-ಕೆವೈಸಿ ಪರಿಶೀಲನೆ: ಮಹಾತ್ಮ ಗಾಂಧಿ ನರೇಗಾ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ದೃಢೀಕರಣವನ್ನು ಬಲಪಡಿಸಲು, ಎಲ್ಲಾ ಸಕ್ರಿಯ ಕಾರ್ಮಿಕರ ಆಧಾರ್ ಆಧಾರಿತ ಇ-ಕೆವೈಸಿ ಪರಿಶೀಲನೆಯನ್ನು NMMS ಅಪ್ಲಿಕೇಶನ್ ಮೂಲಕ ಪರಿಚಯಿಸಲಾಗಿದೆ.
ಈ ಸುಧಾರಣೆಯು ಕಾರ್ಮಿಕರ ಅಧಿಕೃತ ಗುರುತನ್ನು ಖಾತ್ರಿಪಡಿಸುತ್ತದೆ, ನಕಲಿ ಅಥವಾ ನಕಲಿ ಉದ್ಯೋಗ ಕಾರ್ಡ್‌ಗಳನ್ನು ತೆಗೆದುಹಾಕುತ್ತದೆ ಮತ್ತು ಆಧಾರ್ ದೃಢೀಕರಣವನ್ನು ನೇರವಾಗಿ ಕ್ಷೇತ್ರ ಕಾರ್ಯಾಚರಣೆಗಳಲ್ಲಿ ಸಂಯೋಜಿಸುವ ಮೂಲಕ ಪರಿಶೀಲನಾ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಪರಿಣಾಮವಾಗಿ ನಿಜವಾದ ಕಾರ್ಮಿಕರು ಮಾತ್ರ ವೇತನವನ್ನು ಪಡೆಯಲು ಸಾಧ್ಯವಾಗುತ್ತದದೆ. ಇದರಿಂದಾಗಿ ವಂಚನೆ ಮತ್ತು ತಪ್ಪು ವರದಿ ಮಾಡುವ ಸಾಧ್ಯತೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಇ-ಕೆವೈಸಿ ಪ್ರಕ್ರಿಯೆಯು ವೇಗವಾದ, ಹೆಚ್ಚು ವಿಶ್ವಾಸಾರ್ಹ ಕ್ಷೇತ್ರ ಪರಿಶೀಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಹಾಜರಾತಿ ಮತ್ತು ವೇತನ ವಿತರಣಾ ವ್ಯವಸ್ಥೆಗಳ ನಿಖರತೆಯನ್ನು ಹೆಚ್ಚಿಸುತ್ತದೆ, ಯೋಜನೆಯ ಅನುಷ್ಠಾನದಲ್ಲಿ ಹೆಚ್ಚಿನ ದಕ್ಷತೆ ಮತ್ತು ಹೊಣೆಗಾರಿಕೆಗೆ ಕೊಡುಗೆ ನೀಡುತ್ತದೆ. ಮಹಾತ್ಮ ಗಾಂಧಿ ನರೇಗಾ ಅಡಿಯಲ್ಲಿ ಸಕ್ರಿಯ ಕಾರ್ಮಿಕರ ಇ-ಕೆವೈಸಿ ಪೂರ್ಣಗೊಳಿಸುವಿಕೆಯ ಸ್ಥಿತಿ 30.12.2025 ರಂತೆ ಶೇ.71.48 ರಷ್ಟಾಗಿದೆ.
xiii. ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮ ಸಭೆಯಲ್ಲಿ ಪನ್ಹಾಯತ್ ನಿರ್ಣಯ್ ಅಪ್ಲಿಕೇಶನ್ (ಪಿಎನ್ ಎ) ನೊಂದಿಗೆ ಸಂಯೋಜನೆ: ಸಾಮಾಜಿಕ ಲೆಕ್ಕಪರಿಶೋಧನಾ ಘಟಕಗಳು ನೈಜ-ಸಮಯದ(ರಿಯಲ್ ಟೈಮ್) ಜಿಯೋ-ಟ್ಯಾಗ್ ಮಾಡಲಾದ ಫೋಟೋಗಳು, ವೀಡಿಯೊಗಳು ಮತ್ತು ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮ ಸಭೆಯ ನಿರ್ಣಯಗಳು ಮತ್ತು ಹಾಜರಾತಿಯನ್ನು ಸೆರೆಹಿಡಿಯುತ್ತಿವೆ. ಅದನ್ನು ಪಂಚಾಯತ್ ನಿರ್ಣಯ್ ಅಪ್ಲಿಕೇಶನ್ (ಪಿಎನ್ ಎ)ದೊಂದಿಗೆ ಸಂಯೋಜಿಸಲಾಗಿದೆ. ಉಪಕ್ರಮದ ಒಂದನೇ ಹಂತದಡಿಯಲ್ಲಿ, 27 SAU ಗಳಲ್ಲಿ ಪ್ರತಿಯೊಂದರಿಂದ ಒಂದು ಗ್ರಾಮ ಪಂಚಾಯತ್ ಅನ್ನು ಆಯ್ಕೆ ಮಾಡಲಾಯಿತು ಮತ್ತು ಪ್ರಾಯೋಗಿಕ ಅನುಷ್ಠಾನದ ಭಾಗವಾಗಿ ಯಶಸ್ವಿಯಾಗಿ ಒಳಗೊಳ್ಳಲಾಯಿತು. ಈ ಅಡಿಪಾಯದ ಮೇಲೆ ಎರಡನೇ ಹಂತವಅನ್ನು 2025ರ ಮೇ 1 ರಂದು ಆರಂಭಿಸಲಾಯಿತು, 2025ರ ಸೆಪ್ಟೆಂಬರ್ ವೇಳೆಗೆ ಭಾಗವಹಿಸುವ ಎಲ್ಲಾ ರಾಜ್ಯಗಳಲ್ಲಿ ಪ್ರತಿ ಬ್ಲಾಕ್‌ನಲ್ಲಿ ಕನಿಷ್ಠ ಒಂದು ಗ್ರಾಮ ಪಂಚಾಯತ್ ಅನ್ನು ಒಳಗೊಳ್ಳುವ ವಿಶಾಲ ಉದ್ದೇಶವಿತ್ತು. ಎರಡನೇ ಹಂತದ ಎರಡನೇ ಚಕ್ರವು ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತದೆ, 2025–26 ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ದೇಶಾದ್ಯಂತ ಶೇ.100ರಷ್ಟು ಗ್ರಾಮ ಪಂಚಾಯತ್‌ಗಳನ್ನು ಒಳಗೊಳ್ಳಲು ಉಪಕ್ರಮದ ಗುರಿಯಿದೆ. ಈ ರಚನಾತ್ಮಕ ಮತ್ತು ತಂತ್ರಜ್ಞಾನ-ಸಕ್ರಿಯಗೊಳಿಸಿದ ವಿಧಾನವು ದೇಶಾದ್ಯಂತ ಸಾಮಾಜಿಕ ಲೆಕ್ಕಪರಿಶೋಧನಾ ಪ್ರಕ್ರಿಯೆಯ ಪಾರದರ್ಶಕತೆ, ಹೊಣೆಗಾರಿಕೆಯನ್ನು ಗಮನಾರ್ಹವಾಗಿ ಬಲಪಡಿಸುತ್ತಿದೆ. ಈವರೆಗೆ, 39,252 ಗ್ರಾಮ ಪಂಚಾಯತ್‌ಗಳನ್ನು ಪಿಎನ್ ಎ ವೇದಿಕೆಯಲ್ಲಿ ಮ್ಯಾಪ್ ಮಾಡಲಾಗಿದೆ, ಅವುಗಳಲ್ಲಿ 28,369 ಈಗಾಗಲೇ ಸಾಮಾಜಿಕ ಲೆಕ್ಕಪರಿಶೋಧನಾ ಪ್ರಕ್ರಿಯೆಯ ಮೂಲಕ ಒಳಗೊಳ್ಳಲ್ಪಟ್ಟಿವೆ.
xiv. ಕೇಂದ್ರ ತಂಡಗಳಿಂದ ಭೇಟಿಗಳ ಮೇಲ್ವಿಚಾರಣೆ: ಮಹಾತ್ಮ ಗಾಂಧಿ ನರೇಗಾ ಅನುಷ್ಠಾನದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು, 2025-26ನೇ ಹಣಕಾಸು ವರ್ಷದಲ್ಲಿ 25 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 55 ಜಿಲ್ಲೆಗಳಲ್ಲಿ ವಿಶೇಷ ಮೇಲ್ವಿಚಾರಣೆ ಮಾಡಲಾಗಿದೆ. ಮೇಲ್ವಿಚಾರಣಾ ತಂಡಗಳು 1000 ಕ್ಕೂ ಅಧಿಕ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿವೆ. ಈ ಭೇಟಿಯ ಪ್ರಮುಖ ಸಂಶೋಧನೆಗಳು ಈ ಕೆಳಗಿನಂತಿವೆ:
i. ಅನುಮತಿಸಲಾಗದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು
ii. ಕೆಲಸಗಳ ವಿಭಜನೆ
iii. ಕೆಲಸಗಳ ಪುನರಾವರ್ತನೆ/ನಕಲು
iv. ಕಳಪೆ ಗುಣಮಟ್ಟದ ಕಾಮಗಾರಿಗಳು ಮತ್ತು ಬಾಳಿಕೆ
v. ಸಚಿವಾಲಯ ಹೊರಡಿಸಿದ ಕಾರ್ಯವಿಧಾನಗಳು ಮತ್ತು ಮಾರ್ಗಸೂಚಿಗಳನ್ನು ಪಾಲಿಸದಿರುವುದು
ಮೇಲ್ವಿಚಾರಣಾ ಭೇಟಿಗಳಲ್ಲಿ ಕಂಡು ಬಂದಿರುವ ಅಂಶಗಳ ಆಧಾರದ ಮೇಲೆ, ಸಚಿವಾಲಯವು ಮಹಾತ್ಮ ಗಾಂಧಿ ನರೇಗಾದ ಉತ್ತಮ ಅನುಷ್ಠಾನಕ್ಕಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿವಿಧ ಸಲಹೆಗಳನ್ನು ನೀಡಿತು. ಅದರಲ್ಲಿ ವೈಯಕ್ತಿಕ ಫಲಾನುಭವಿ ಕಾಮಗಾರಿಗಳ ಕುರಿತು ಸಲಹೆ, ಗ್ರಾಮೀಣ ಸಂಪರ್ಕ ಕಾಮಗಾರಿಗಳ ಉತ್ತಮ ಅನುಷ್ಠಾನಕ್ಕಾಗಿ ಸಲಹೆ ಮತ್ತು ಭೂ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಮತ್ತು ಪರಿಶೀಲನೆ/ಪರಿಶೀಲನೆ ಕುರಿತು ಸಲಹೆ ಸೇರಿವೆ.
ಅದರ ಜೊತೆಗೆ ಮನ್ರೇಗಾ ಅಡಿಯಲ್ಲಿ ಹೆಚ್ಚಿನ ಅಪಾಯದ ಅಥವಾ ಅನುಮಾನಾಸ್ಪದ ಕಾಮಗಾರಿಗಳನ್ನು ಗುರುತಿಸಲು ಕೆಲಸದ ಮೇಲ್ವಿಚಾರಣಾ ಮಾಡ್ಯೂಲ್ (ಡಬ್ಲೂ ಎಂಎಂ) ಅನ್ನು ಅಭಿವೃದ್ಧಿಪಡಿಸಲು ಸಹ ನಿರ್ಧಾರ ತೆಗೆದುಕೊಳ್ಳಲಾಯಿತು, ಅವುಗಳಿಗೆ ಹತ್ತಿರದ ಪರಿಶೀಲನೆ, ತಪಾಸಣೆ ಮತ್ತು ಕ್ಷೇತ್ರ ಪರಿಶೀಲನೆ ಅಗತ್ಯವಿರಬಹುದು. ಬಹು ಅಪ್ಲಿಕೇಶನ್‌ಗಳು ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳಿಂದ ಫ್ಲ್ಯಾಗ್ ಮಾಡಲಾದ ಕಾಮಗಾರಿಗಳನ್ನು ಸೆರೆಹಿಡಿಯುವ ಮತ್ತು ಕ್ರೋಢೀಕರಿಸುವ ಮೂಲಕ, WMM ಅಂತಹ ಕಾಮಗಾರಿಗಳಿಗೆ ತ್ವರಿತವಾಗಿ ಆದ್ಯತೆ ನೀಡಲಾಗುತ್ತದೆ, ವ್ಯವಸ್ಥಿತವಾಗಿ ಪರಿಶೀಲಿಸಲಾಗುತ್ತದೆ ಮತ್ತು ಸೂಕ್ತವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಚಿತಪಡಿಸುತ್ತದೆ. ಈ ಚೌಕಟ್ಟಿನ ಅಡಿಯಲ್ಲಿ ಕೆಲಸವನ್ನು ಆರಂಭಿಸಿದ ನಂತರ, ಮತ್ತಷ್ಟು ಸಾಮಗ್ರಿ ಪಾವತಿಗಳನ್ನು ಸ್ಥಗಿತಗೊಳಿಸಲಾಗುತ್ತದೆ ಮತ್ತು ನಂತರ ಕನಿಷ್ಠ ಕಾರ್ಯಕ್ರಮ ಅಧಿಕಾರಿ ಮಟ್ಟದಲ್ಲಿ ಕ್ಷೇತ್ರ ಪರಿಶೀಲನೆ ಪೂರ್ಣಗೊಳ್ಳುವವರೆಗೆ, ನಂತರ ಕಾರ್ಯ-ಆಧಾರಿತ ಕ್ರಮ ತೆಗೆದುಕೊಂಡ ವರದಿಗಳ (ATRs) ಸಲ್ಲಿಕೆ ಮತ್ತು ಉನ್ನತ ಅಧಿಕಾರಿಗಳಿಂದ ಅವುಗಳನ್ನು ಸ್ವೀಕರಿಸುವವರೆಗೆ ಹಾಗೂ ನರೇಗಾ ಸಾಫ್ಟ್ NREGASoft ಮೂಲಕ ಯಾವುದೇ ಪಾವತಿಗಳನ್ನು ಅನುಮತಿಸಲಾಗುವುದಿಲ್ಲ.
ವಿಕಸಿತ ಭಾರತ - ರೋಜ್ಗಾರ್ ಮತ್ತು ಅಜೀವಿಕ ಮಿಷನ್ ಗ್ಯಾರಂಟಿ (ಗ್ರಾಮೀಣ) - ವಿಬಿ–ಜಿ ರಾಮ್ ಜಿ ಕಾಯ್ದೆ 2025 ಜಾರಿಗೆ ತಂದ ವರ್ಷ.
ಗ್ರಾಮೀಣ ಉದ್ಯೋಗ, ಸುಸ್ಥಿರ ಜೀವನೋಪಾಯ ಮತ್ತು ದೀರ್ಷಕಾಲ ಬಾಳಿಕೆ ಬರುವ ಸಾರ್ವಜನಿಕ ಆಸ್ತಿಗಳ ಸೃಷ್ಟಿಯನ್ನು ಬಲಪಡಿಸುವ ಉದ್ದೇಶದಿಂದ, ವಿಕಸಿತ ಭಾರತ - ರೋಜ್ಗಾರ್ ಮತ್ತು ಅಜೀವಿಕ ಮಿಷನ್ ಗ್ಯಾರಂಟಿ (ಗ್ರಾಮೀಣ) - ವಿಬಿ–ಜಿ ರಾಮ್ ಜಿ ಕಾಯ್ದೆ 2025 ಅನ್ನು ಪರಿಚಯಿಸುವ ಮೂಲಕ ಸರ್ಕಾರವು ಪರಿವರ್ತನಾ ನೀತಿ ಉಪಕ್ರಮವನ್ನು ಕೈಗೊಂಡಿತು. ಮನ್ರೇಗಾದ ಸಾಂಸ್ಥಿಕ ಕಲಿಕೆಯ ಆಧಾರದ ಮೇಲೆ, ಈ ಕಾಯ್ದೆಯು ಗ್ರಾಮೀಣ ಕುಟುಂಬಗಳಿಗೆ 125 ದಿನಗಳವರೆಗೆ ವೇತನ ಉದ್ಯೋಗದ ಶಾಸನಬದ್ಧ ಖಾತರಿಯನ್ನು ಒದಗಿಸುತ್ತದೆ.
ಹೊಸ ಕಾಯ್ದೆಯಲ್ಲಿ ಕಲ್ಪಿಸಲಾದ ಯೋಜನೆ ವಿಕೇಂದ್ರೀಕೃತ, ಪಾಲ್ಗೊಳ್ಳುವಿಕೆ ಮತ್ತು ತಳಮಟ್ಟದ್ದಾಗಿದೆ. ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳನ್ನು (ವಿಜಿಪಿಪಿ ಗಳು) ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆಯ ಮೂಲಕ ಸಿದ್ಧಪಡಿಸುತ್ತವೆ, ಆದ್ಯತೆಗಳು ಸಮುದಾಯದಿಂದಲೇ ಹೊರಹೊಮ್ಮುತ್ತವೆ ಎಂದು ಖಚಿತಪಡಿಸಿಕೊಳ್ಳುತ್ತವೆ. ಈ ಯೋಜನೆಗಳನ್ನು ವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟ್ಯಾಕ್ (VBNRIS) ನಲ್ಲಿ ಒಟ್ಟುಗೂಡಿಸಲಾಗಿದೆ - ಇದು ವಿಜಿಪಿಪಿಗಳಿಂದ ಹೊರಹೊಮ್ಮುವ ಪ್ರಸ್ತಾವಿತ ಕೆಲಸಗಳ ಏಕೀಕೃತ ಒಟ್ಟುಗೂಡಿಸುವಿಕೆಯಾಗಿದೆ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಒಟ್ಟುಗೂಡಿಸಲಾಗುತ್ತದೆ ಮತ್ತು ನಾಲ್ಕು ವಿಷಯಾಧಾರಿತ ಕೆಲಸಗಳ ಕ್ಷೇತ್ರಗಳೊಂದಿಗೆ ಸಂಯೋಜಿಸಲಾಗುತ್ತದೆ, ಅವುಗಳೆಂದರೆ: ಜಲ ಸುರಕ್ಷತೆ, ಪ್ರಮುಖ ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯಕ್ಕೆ ಸಂಬಂಧಿಸಿದ ಮೂಲಸೌಕರ್ಯ ಮತ್ತು ತೀವ್ರ ಹವಾಮಾನ ಘಟನೆಗಳು ಮತ್ತು ವಿಪತ್ತುಗಳನ್ನು ತಗ್ಗಿಸಲು ವಿಶೇಷ ಕೆಲಸಗಳು. ಈ ಚೌಕಟ್ಟು ಬಾಳಿಕೆ ಬರುವ ಮತ್ತು ಉತ್ಪಾದಕ ಗ್ರಾಮೀಣ ಸ್ವತ್ತುಗಳನ್ನು ರಚಿಸಲು ವಲಯಗಳಲ್ಲಿ ಸಂಯೋಜನೆಯನ್ನು ಉತ್ತೇಜಿಸುತ್ತದೆ. ಸಮಗ್ರ ಗ್ರಾಮೀಣ ಮೂಲಸೌಕರ್ಯ ಪರಿಸರ ವ್ಯವಸ್ಥೆಗೆ ಸಾಮೂಹಿಕವಾಗಿ ಕೊಡುಗೆ ನೀಡುವ ಸಾರ್ವಜನಿಕ ಕಾರ್ಯಗಳ ಮೂಲಕ ಸಬಲೀಕರಣ, ಪ್ರಗತಿ, ಸಮನ್ವಯ ಮತ್ತು ಶುದ್ಧತ್ವದ ಮೇಲೆ ಕೇಂದ್ರೀಕರಿಸುವುದು ಕಾಯಿದೆಯ ಪ್ರಮುಖ ಲಕ್ಷಣವಾಗಿದೆ.
ಕಾಯಿದೆಯು ಪ್ರಮಾಣಿತ ಹಂಚಿಕೆಯನ್ನು ಸಾಂಸ್ಥಿಕಗೊಳಿಸುತ್ತದೆ, ಹೊಣೆಗಾರಿಕೆಯನ್ನು ಬಲಪಡಿಸುತ್ತದೆ ಮತ್ತು ಬಯೋಮೆಟ್ರಿಕ್ ದೃಢೀಕರಣ, ಜಿಐಎಸ್ /ಬಾಹ್ಯಾಕಾಶ-ತಂತ್ರಜ್ಞಾನ-ಆಧಾರಿತ ಪರಿಶೀಲನೆ, ನೈಜ-ಸಮಯದ ಎಂಐಎಸ್ ಮೇಲ್ವಿಚಾರಣೆ ಮತ್ತು ಬಲಪಡಿಸಿದ ಸಾಮಾಜಿಕ ಲೆಕ್ಕಪರಿಶೋಧನಾ ಕಾರ್ಯವಿಧಾನಗಳು ಸೇರಿದಂತೆ ಬಹು ತಂತ್ರಜ್ಞಾನ-ಸಕ್ರಿಯಗೊಳಿಸಿದ ವ್ಯವಸ್ಥೆಗಳನ್ನು ಸಂಯೋಜನೆ ಮಾಡುತ್ತದೆ. ಈ ಸುಧಾರಣೆಗಳನ್ನು ನಿಧಿ ಬಳಕೆಯನ್ನು ಸುಧಾರಿಸಲು, ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಸೋರಿಕೆಗಳನ್ನು ತಗ್ಗಿಸಲು ಅನುವಾಗುವಂತೆ ರೂಪಿಸಲಾಗಿದೆ.
ವಿಬಿ-ಜಿ ರಾಮ್ ಜಿ ಕಾಯಿದೆಯು ಗ್ರಾಮೀಣ ಉದ್ಯೋಗವು ಹೆಚ್ಚಿನ ಆದಾಯ, ಸ್ಥಿತಿಸ್ಥಾಪಕ ಜೀವನೋಪಾಯ ಮತ್ತು ಬಲವಾದ ಗ್ರಾಮ ಆರ್ಥಿಕತೆಗಳಾಗಿ ಪರಿವರ್ತನೆಗೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇದರ ಅನುಷ್ಠಾನವು ಗ್ರಾಮೀಣ ಉದ್ಯೋಗ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಭದ್ರತೆಯನ್ನು 2047 ರ ವಿಕಸಿತ ಭಾರತದ ದೀರ್ಘಾವಧಿಯ ದೂರದೃಷ್ಟಿಯೊಂದಿಗೆ ಸಂಯೋಜನೆ ಮಾಡುವಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುತ್ತದೆ.
- ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ (ಎನ್ ಎಸ್ ಎಪಿ )
ಭಾರತದ ಸಂವಿಧಾನದ 41 ನೇ ವಿಧಿಯು ರಾಜ್ಯವು ತನ್ನ ನಾಗರಿಕರಿಗೆ ನಿರುದ್ಯೋಗ, ವೃದ್ಧಾಪ್ಯ, ಅನಾರೋಗ್ಯ ಮತ್ತು ಅಂಗವೈಕಲ್ಯ ಮತ್ತು ಇತರ ಅನರ್ಹ ಕೊರತೆಯ ಸಂದರ್ಭಗಳಲ್ಲಿ ಅದರ ಆರ್ಥಿಕ ಸಾಮರ್ಥ್ಯ ಮತ್ತು ಅಭಿವೃದ್ಧಿಯ ಮಿತಿಯೊಳಗೆ ಸಾರ್ವಜನಿಕ ನೆರವು ನೀಡಬೇಕೆಂದು ನಿರ್ದೇಶಿಸುತ್ತದೆ. ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ (ಎನ್ ಎಸ್ ಎಪಿ) ರಾಜ್ಯ ನೀತಿಯ ಈ ನಿರ್ದೇಶನ ತತ್ವಗಳನ್ನು ಪೂರೈಸುವ ನಿಟ್ಟಿನಲ್ಲಿ 1995ರ ಆಗಸ್ಟ್ 15 ರಂದು ಜಾರಿಗೆ ಬಂದಿತು. ಎನ್ ಎಸ್ ಎಪಿ ಮಾರ್ಗಸೂಚಿಗಳ ಪ್ರಕಾರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಗುರುತಿಸಿರುವ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ) ಕುಟುಂಬಗಳಿಗೆ ಹಾಗೂ ವೃದ್ಧಾಪ್ಯ, ವಿಧವೆಯರು ಮತ್ತು ಅಂಗವಿಕಲರಿಗೆ ಮೂಲ ಮಟ್ಟದ ಆರ್ಥಿಕ ಸಹಾಯವನ್ನು ಒದಗಿಸುವುದು ಎನ್ ಎಸ್ ಎಪಿ ಯ ಉದ್ದೇಶವಾಗಿದೆ.
2. ಕಾರ್ಯಕ್ರಮವು ವರ್ಷಗಳಲ್ಲಿ ಸಂಯೋಜನೆ, ಅರ್ಹತಾ ಮಾನದಂಡ ಮತ್ತು ಹಣಕಾಸಿನ ಮಾದರಿಯ ವಿಷಯದಲ್ಲಿ ಅನೇಕ ಬದಲಾವಣೆಗಳಿಗೆ ಒಳಗಾಗಿದೆ. ಪ್ರಸ್ತುತ ಇದು ಐದು ವಿಭಿನ್ನ ಯೋಜನೆಗಳನ್ನು ಒಳಗೊಂಡಿದೆ. ಈ ಪ್ರತಿಯೊಂದು ಯೋಜನೆಗಳ ಅಡಿಯಲ್ಲಿ ಒದಗಿಸಲಾದ ಅರ್ಹತಾ ಮಾನದಂಡಗಳು ಮತ್ತು ಹಣಕಾಸಿನ ನೆರವಿನ ಮೊತ್ತದ ವಿವರಗಳು ಈ ಕೆಳಗಿನಂತಿವೆ:
|
ಯೋಜನೆ
|
ಸಹಾಯಧನದ ಮೊತ್ತ
|
ಅರ್ಹತಾ ಮಾನದಂಡ
|
|
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ
|
200 ರೂ.
|
60-79 ವರ್ಷ ವಯಸ್ಸಿನ ಬಿಪಿಎಲ್ ಹಿರಿಯ ನಾಗರಿಕರು
|
|
500 ರೂ.
|
80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಬಿಪಿಎಲ್ ಹಿರಿಯ ನಾಗರಿಕರು
|
|
ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ
|
300 ರೂ.
|
40-79 ವರ್ಷ ವಯಸ್ಸಿನ ಬಿಪಿಎಲ್ ವಿಧವೆಯರು
|
|
500 ರೂ.
|
80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಬಿಪಿಎಲ್ ವಿಧವೆಯರು
|
|
ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವೈಕಲ್ಯ ಪಿಂಚಣಿ ಯೋಜನೆ
|
300 ರೂ.
|
18-79 ವರ್ಷ ವಯಸ್ಸಿನ 80% ಅಂಗವೈಕಲ್ಯ ಹೊಂದಿರುವ ಬಿಪಿಎಲ್ ವ್ಯಕ್ತಿಗಳು
|
|
500 ರೂ.
|
80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಬಿಪಿಎಲ್ ಅಂಗವೈಕಲ್ಯ ಪಿಂಚಣಿದಾರರು
|
|
ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ (NFBS)*
|
20,000/- ರೂ.
|
18-59 ವರ್ಷ ವಯಸ್ಸಿನ ಪ್ರಾಥಮಿಕ ಪೋಷಕನ ಮರಣದ ನಂತರ ಬಿಪಿಎಲ್ ಕುಟುಂಬದ ಬದುಕುಳಿದ ಮುಖ್ಯಸ್ಥರಿಗೆ
|
|
ಅನ್ನಪೂರ್ಣ*
|
ಪ್ರತಿ ತಿಂಗಳು 10 ಕೆಜಿ ಆಹಾರ ಧಾನ್ಯಗಳು
|
ವೃದ್ಧಾಪ್ಯ ಪಿಂಚಣಿ ಪಡೆಯದ ಬಿಪಿಎಲ್ ಹಿರಿಯ ನಾಗರಿಕರಿಗೆ
|
*NFBS ಮತ್ತು ಅನ್ನಪೂರ್ಣ ಬೇಡಿಕೆ ಆಧಾರಿತ ಯೋಜನೆಗಳಾಗಿವೆ.
3. ಮೂರು ಪಿಂಚಣಿ ಯೋಜನೆಗಳ ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕನಿಷ್ಠ ಸಮಾನ ಕೊಡುಗೆಯನ್ನು ನೀಡಬೇಕೆಂದು ಕೋರಲಾಗಿದೆ. ಸದ್ಯ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತಿಂಗಳಿಗೆ ₹50 ರಿಂದ ₹5700 ವರೆಗೆ ಕೊಡುಗೆಗಳನ್ನು ನೀಡುತ್ತಿವೆ. ಸದ್ಯ ಎನ್ ಎಸ್ ಎಪಿ 3.09 ಕೋಟಿ ಬಿಪಿಎಲ್ ಫಲಾನುಭವಿಗಳಿಗೆ ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶಕ್ಕೆ ಫಲಾನುಭವಿಗಳ ಸಂಖ್ಯೆಯ ಮೇಲೆ ಯೋಜನೆವಾರು ಮಿತಿ/ ಮಿತಿಯನ್ನು ಹೊಂದಿದೆ. ಎನ್ ಎಸ್ ಎಪಿ ಅಡಿಯಲ್ಲಿ ಯೋಜನೆವಾರು ಸಹಾಯವನ್ನು ಡಿಜಿಟಲೀಕರಣಗೊಂಡ ಫಲಾನುಭವಿಗಳ ಸಂಖ್ಯೆ ಅಥವಾ ರಾಜ್ಯ/ಕೇಂದ್ರಾಡಳಿತ ಪ್ರದೇಶ ಮಿತಿ, ಯಾವುದು ಕಡಿಮೆಯೋ ಅಲ್ಲಿಯವರೆಗೆ ಮಂಜೂರು ಮಾಡಲಾಗುತ್ತದೆ. 2024-25ರಲ್ಲಿ, ಎನ್ ಎಸ್ ಎಪಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 9652 ಕೋಟಿ ರೂ. ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. 2025-26ರ ಹಣಕಾಸು ವರ್ಷಕ್ಕೆ ಎನ್ ಎಸ್ ಎಪಿ ಯೋಜನೆಗೆ 9652.00 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ, ಅದರಲ್ಲಿ ರೂ. 5564.00 ಕೋಟಿಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 30.11.2025 ರವರೆಗೆ ಬಿಡುಗಡೆ ಮಾಡಲಾಗಿದೆ.
ಕಾರ್ಯಕ್ರಮದ ಪ್ರಮುಖ ಉಪಕ್ರಮಗಳು ಮತ್ತು ಸಾಧನೆಗಳು
• ಎನ್ ಎಸ್ ಎಪಿ ಅನ್ನು ಹೆಚ್ಚು ಪರಿಣಾಮಕಾರಿ, ಪಾರದರ್ಶಕ ಮತ್ತು ಫಲಿತಾಂಶ ಆಧಾರಿತವಾಗಿಸಲು, ಅನೇಕ ಪ್ರಯತ್ನಗಳನ್ನು (ನೀತಿ ಸುಧಾರಣೆ, ಬಜೆಟ್ ಹಂಚಿಕೆಯಲ್ಲಿ ಹೆಚ್ಚಳ, ಮಾಹಿತಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ, ಇತ್ಯಾದಿ) ಮಾಡಲಾಗಿದೆ. ಏಪ್ರಿಲ್ 2025 ರಿಂದ ನವೆಂಬರ್ 2025 ರವರೆಗೆ (30.11.2025 ರಂತೆ) ಈ ಕಾರ್ಯಕ್ರಮದ ಸಾಧನೆಗಳ ಸಂಕ್ಷಿಪ್ತ ವಿವರಣೆಯನ್ನು ಕೆಳಗೆ ನೀಡಲಾಗಿದೆ:-
7. ಎನ್ ಎಸ್ ಎಪಿ ಯೋಜನೆಗಳ ಅಡಿಯಲ್ಲಿ ಒಳಗೊಂಡಿರುವ ಫಲಾನುಭವಿಗಳ ಸಂಖ್ಯೆ ಮತ್ತು ಏಪ್ರಿಲ್ ನಿಂದ ನವೆಂಬರ್ 2025 ರವರೆಗೆ (30.11.2025 ರಂತೆ) ಬಿಡುಗಡೆಯಾದ ನಿಧಿಯ ವಿಷಯದಲ್ಲಿ ಭೌತಿಕ ಮತ್ತು ಆರ್ಥಿಕ ಸಾಧನೆಗಳನ್ನು ಕೆಳಗೆ ನೀಡಲಾಗಿದೆ.
|
ವರ್ಷ
|
2025-26 (ಏಪ್ರಿಲ್ 2025 ರಿಂದ ನವೆಂಬರ್ 2025)
|
|
ತಲುಪಿದ ಫಲಾನುಭವಿಗಳು (ಲಕ್ಷಗಳಲ್ಲಿ)
|
301.06
|
|
ಬಿಡುಗಡೆಯಾದ ನಿಧಿ (ಕೋಟಿ ರೂ.ಗಳಲ್ಲಿ)
|
5564.00
|
o ಎನ್ ಐಸಿ, ಡಿಒಆರ್ ಡಿ ಕೇಂದ್ರ ಎಂಐಎಸ್ - ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ- ಪಿಂಚಣಿ ಪಾವತಿ ವ್ಯವಸ್ಥೆ (NSAP-PPS) ಅನ್ನು ಅಭಿವೃದ್ಧಿಪಡಿಸಿದೆ, ಇದು ಆರಂಭಿಕ ಹಂತದಿಂದ ವಿತರಣಾ ಹಂತಕ್ಕೆ ಆರಂಧದಿಂದ ಕೊನೆಯವರೆಗಿನ ವಹಿವಾಟನ್ನು ಸುಗಮಗೊಳಿಸುತ್ತದೆ. ಇದು ವೃದ್ಧಾಪ್ಯ, ವಿಧವೆ ಮತ್ತು ಅಂಗವಿಕಲ ಫಲಾನುಭವಿಗಳ ವಿವರಗಳನ್ನು ಸಹ ಒದಗಿಸುತ್ತದೆ.
o ಫಲಾನುಭವಿಗಳ ಡೇಟಾವನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಡಿಜಿಟಲೀಕರಣಗೊಳಿಸುತ್ತವೆ. ಎನ್ ಎಸ್ ಎಪಿ ಪೋರ್ಟಲ್‌ನಲ್ಲಿ ಲಭ್ಯವಿರುವ ಡಿಜಿಟಲೀಕರಣಗೊಂಡ ಫಲಾನುಭವಿಗಳ ಸಂಖ್ಯೆಯ ಆಧಾರದ ಮೇಲೆ ರಾಜ್ಯಗಳಿಗೆ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ವರ್ಷಗಳಲ್ಲಿ, ನಿರಂತರ ಪ್ರಯತ್ನಗಳೊಂದಿಗೆ ಡಿಜಿಟಲೀಕರಣವು ಒಟ್ಟು ರಾಜ್ಯ ಮಿತಿ/ಕ್ಯಾಪ್‌ನ ಶೇ.96-97 ರಷ್ಟು ತಲುಪಿದೆ. ಪ್ರಸ್ತುತ, ಎಲ್ಲಾ ಸಂಭಾವ್ಯ ಫಲಾನುಭವಿಗಳ ಸುಮಾರು ಶೇ.100ರಷ್ಟು ಡೇಟಾವನ್ನು ಡಿಜಿಟಲೀಕರಣಗೊಳಿಸಲಾಗಿದೆ.
o ಪ್ರಸ್ತುತ, 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅಂತ್ಯದಿಂದ ಅಂತ್ಯದ ವಿತರಣೆಗಾಗಿ ಎನ್ ಎಸ್ ಎಪಿ -ಪಿಪಿಎಸ್ ಅನ್ನು ಬಳಸುತ್ತಿವೆ ಮತ್ತು ಇತರ 14 ರಾಜ್ಯಗಳು ವೆಬ್ ಸೇವೆಯ ಮೂಲಕ ಎನ್ ಎಸ್ ಎಪಿ -ಪಿಪಿಎಸ್ ನಲ್ಲಿ ವಹಿವಾಟಿನ ದತ್ತಾಂಶವನ್ನು ವರದಿ ಮಾಡುತ್ತಿವೆ.
o ಇನ್ನೂ 4 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಅವುಗಳೆಂದರೆ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಚಂಡೀಗಢ, ದಾದ್ರಾ ನಗರ ಹವೇಲಿ ಮತ್ತು ದಮನ್ ಮತ್ತು ಡಿಯು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಳ್ಳುವ ಪ್ರಯತ್ನಗಳು ನಡೆಯುತ್ತಿವೆ.
o ಎನ್ ಎಸ್ ಎಪಿ -ಪಿಪಿಎಸ್ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಎನ್ ಎಸ್ ಎಪಿ ಫಲಾನುಭವಿಗಳ ಆಧಾರ್ ಮತ್ತು SECC TIN ಸಂಖ್ಯೆಯನ್ನು ಸೆರೆಹಿಡಿಯಲು ಸಹ ಅನುಕೂಲ ಮಾಡಿಕೊಡುತ್ತದೆ. ಸದ್ಯ ಎನ್ ಎಸ್ ಎಪಿ ನ ನೋಂದಾಯಿತ ಪಿಂಚಣಿದಾರರ ಆಧಾರ್ ಮತ್ತು SECC TIN ನ ಜೋಡಣೆಯ ಸ್ಥಿತಿ ಕ್ರಮವಾಗಿ ಸುಮಾರು ಶೇ.91.45 ಮತ್ತು ಶೇ.28.83 ರಷ್ಟಾಗಿದೆ.
o ಎನ್ ಎಸ್ ಎಪಿ ಪಿಂಚಣಿ ಫಲಾನುಭವಿಗಳ ಡಿಜಿಟಲ್ ಲೈಫ್ ಪ್ರಮಾಣೀಕರಣಕ್ಕಾಗಿ ಆಧಾರ್ ಆಧಾರಿತ ಮೊಬೈಲ್ ಅಪ್ಲಿಕೇಶನ್ ಅನ್ನು ಗೌರವಾನ್ವಿತ ಗ್ರಾಮೀಣಾಭಿವೃದ್ಧಿ ಸಚಿವರು 2025ರ ಜುಲೈ 15 ರಂದು ಆರಂಭಿಸಿದರು. ಡಿಎಲ್ ಸಿ ಮಾರ್ಗಸೂಚಿಗಳು ಮತ್ತು ಬಳಕೆದಾರ ಕೈಪಿಡಿಯನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗಿದೆ. 2025ರ ಡಿಸೆಂಬರ್ 10 ರವೇಳೆಗೆ ಒಟ್ಟು 44.00 ಲಕ್ಷ ಫಲಾನುಭವಿಗಳನ್ನು ಡಿಎಲ್ ಸಿ ಮೂಲಕ ದೃಢೀಕರಿಸಲಾಗಿದೆ. ಎನ್ ಎಸ್ ಎಪಿ -ಪಿಪಿಎಸ್ ನಲ್ಲಿ ಒಳಗೊಳ್ಳುವ ಕೆಲವು ರಾಜ್ಯಗಳು ಡಿಎಲ್ ಸಿ ಅರ್ಜಿಯ ಮೂಲಕ ಫಲಾನುಭವಿ ಪರಿಶೀಲನೆಗಾಗಿ ರಾಜ್ಯ ಯೋಜನೆಗಳನ್ನು ಸೇರಿಸಲು ವಿನಂತಿಸಿವೆ. ಎನ್ ಎಸ್ ಎಪಿ -ಪಿಪಿಎಸ್ ನಲ್ಲಿ ಸೇರ್ಪಡೆಗೊಂಡ ರಾಜ್ಯಗಳಿಗೆ ರಾಜ್ಯ ಪಿಂಚಣಿ ಯೋಜನೆಗಳನ್ನು ಡಿಎಲ್ ಸಿ ಪರಿಶೀಲನೆಗಾಗಿ ಸೇರಿಸಲು ಕಾರ್ಯದರ್ಶಿ (RD) ಅನುಮೋದನೆ ನೀಡಿದ್ದಾರೆ. 2026 ರ ಜ.5ರ ಮೊದಲು ಎಲ್ಲಾ ಅಸ್ತಿತ್ವದಲ್ಲಿರುವ ಫಲಾನುಭವಿಗಳ ಡಿಎಲ್ ಸಿಅನ್ನು ಸಕಾರಾತ್ಮಕವಾಗಿ ಒಳಗೊಳ್ಳಲು ವಿಶೇಷ ಅಭಿಯಾನಗಳನ್ನು ಆಯೋಜಿಸಲು ರಾಜ್ಯಗಳನ್ನು ಕೋರಲಾಗಿದೆ.
o ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸಲು, (i) ಎನ್ ಎಸ್ ಎಪಿ ಯೋಜನೆಗಳ ಜೊತೆಗೆ ರಾಜ್ಯ ಟಾಪ್-ಅಪ್‌ಗಳು (ii) ಹೊಸ ಅರ್ಜಿದಾರರ ದಾಖಲಾತಿ, ಅರ್ಜಿಗಳ ಟ್ರ್ಯಾಕಿಂಗ್ ಮತ್ತು ನಿರ್ಬಂಧಗಳು ಮತ್ತು ವಿತರಣೆಗಳ ಸ್ಥಿತಿಯ ಬಗ್ಗೆ ಫಲಾನುಭವಿಗಳಿಗೆ ಮಾಹಿತಿಯನ್ನು ಒದಗಿಸಲು ನಾಗರಿಕ ಕೇಂದ್ರಿತ ಮೊಬೈಲ್ ಅಪ್ಲಿಕೇಶನ್ 'ಉಮಾಂಗ್' ಅನ್ನು ಅಭಿವೃದ್ಧಿಪಡಿಸಲಾಗಿದೆ.
8. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ)
ಸುಸ್ಥಿರ ಮತ್ತು ಸಮಗ್ರ ಗ್ರಾಮೀಣಾಭಿವೃದ್ಧಿಗಾಗಿ, ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳುವುದು ಮತ್ತು ವಿವಿಧ ಸಚಿವಾಲಯಗಳ ಶಾಸನಬದ್ಧವಲ್ಲದ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯ. ಈ ಉದ್ದೇಶವನ್ನು ಪೂರೈಸಲು, ಸಂಸತ್, ರಾಜ್ಯ ಶಾಸಕಾಂಗಗಳು ಮತ್ತು ಸ್ಥಳೀಯ ಸರ್ಕಾರಗಳಲ್ಲಿನ (ಪಂಚಾಯತ್ ರಾಜ್ ಸಂಸ್ಥೆಗಳು/ಪುರಸಭೆಗಳು) ಎಲ್ಲಾ ಚುನಾಯಿತ ಪ್ರತಿನಿಧಿಗಳ ನಡುವೆ ಉತ್ತಮ ಸಮನ್ವಯವನ್ನು ಖಾತ್ರಿಪಡಿಸಿಕೊಳ್ಳಲು ಸಂಸದರ ಅಧ್ಯಕ್ಷತೆಯಲ್ಲಿ 776 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ದಿಶಾ ಸಮಿತಿಗಳನ್ನು ರಚಿಸಲಾಗಿದೆ. ಇದು ಪರಿಣಾಮಕಾರಿ ಮತ್ತು ಸಕಾಲದಲ್ಲಿ ಅಭಿವೃದ್ಧಿಗಾಗಿ ನೆರವಾಗುತ್ತದೆ. ಅದೇ ರೀತಿ, ರಾಜ್ಯ ಮಟ್ಟದ ದಿಶಾ ಸಮಿತಿಗಳನ್ನು ರಾಜ್ಯ ಸರ್ಕಾರಗಳು ರಾಜ್ಯದ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಗಿರುತ್ತವೆ, ಅದು ರಾಜ್ಯದಲ್ಲಿ ಉನ್ನತ ಮಟ್ಟದಲ್ಲಿ ಪರಿಹರಿಸಬೇಕಾದ ವಿಷಯಗಳನ್ನು ನೋಡಿಕೊಳ್ಳುತ್ತದೆ. ಅಭಿವೃದ್ಧಿ ಕಾರ್ಯಕ್ರಮಗಳ ಸಂಘಟಿತ ಅನುಷ್ಠಾನಕ್ಕಾಗಿ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಪ್ರಯತ್ನಗಳನ್ನು ಒಗ್ಗೂಡಿಸುವ ಮೂಲಕ ದಿಶಾ ಸಂಪೂರ್ಣ ಸರ್ಕಾರದ ವಿಧಾನವನ್ನು ಉತ್ತೇಜಿಸುತ್ತದೆ. ಈ ದಿಶಾ ಸಮಿತಿಗಳನ್ನು ಬಲಪಡಿಸಲು ಸಚಿವಾಲಯವು 35 ಸಚಿವಾಲಯಗಳ 100 ಯೋಜನೆಗಳನ್ನು ಒಳಗೊಂಡಿರುವ ಅತ್ಯಾಧುನಿಕ ಡ್ಯಾಶ್‌ಬೋರ್ಡ್ ಅನ್ನು ಅಭಿವೃದ್ಧಿಪಡಿಸಿದೆ, ಇದು ತಳಮಟ್ಟದ (ಗ್ರಾಮದವರೆಗೆ) ಯೋಜನೆಗಳ ಸಮಯ ಸರಣಿಯ ಪ್ರಗತಿ ದತ್ತಾಂಶವನ್ನು ಒದಗಿಸುತ್ತದೆ, ಪ್ರವೃತ್ತಿಗಳು, ಇತರ ಭೌಗೋಳಿಕ ಗಡಿಗಳೊಂದಿಗೆ ತುಲನಾತ್ಮಕ ವಿಶ್ಲೇಷಣೆ, ವಿವಿಧ ರೀತಿಯ ಚಾರ್ಟ್‌ಗಳು, ಕೋಷ್ಟಕಗಳು ಇತ್ಯಾದಿಗಳನ್ನು ಇದು ಒಳಗೊಂಡಿದೆ.
ದಿಶಾ ಸಮಿತಿಗಳು ಸಾರ್ವಜನಿಕ ಪ್ರತಿನಿಧಿಗಳು, ನಾಗರಿಕ ಸಮಾಜದ ಸದಸ್ಯರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಒಗೂಡಿಸುವ ಮೂಲಕ ವಿವಿಧ ಕೇಂದ್ರ ಯೋಜನೆಗಳಿಗೆ ಸಂಬಂಧಿಸಿದ ಅನುಷ್ಠಾನ ಸವಾಲುಗಳನ್ನು ಪರಿಹರಿಸಲು ಸಹಕಾರಿ ಒಕ್ಕೂಟದ ಅನುಕರಣೀಯ ಮಾದರಿಯಾಗಿದೆ. ಸಮಿತಿಗಳ ರಚನೆಯ ನಂತರ ದೇಶಾದ್ಯಂತ 7800 ಕ್ಕೂ ಅಧಿಕ ಜಿಲ್ಲಾ ಮಟ್ಟದ ಸಭೆಗಳು ಮತ್ತು 38 ರಾಜ್ಯ ಮಟ್ಟದ ಸಭೆಗಳನ್ನು ನಡೆಸಲಾಗಿದೆ, ಇದು ಆಡಳಿತ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುವಲ್ಲಿ ಅವರ ಸಕ್ರಿಯ ಪಾತ್ರವನ್ನು ಒತ್ತಿಹೇಳುತ್ತದೆ. ದಿಶಾ ಸಮಿತಿಗಳ ಹೆಚ್ಚುತ್ತಿರುವ ಜನಪ್ರಿಯತೆಯು ಸಚಿವಾಲಯಗಳಿಂದ ತಮ್ಮ ಯೋಜನೆಗಳನ್ನು ಒಂದೇ ಸೂರಿನಡಿಯಲ್ಲಿ ಸೇರಿಸಲು ಹೆಚ್ಚಿನ ಮನವಿಗಳು ಬರುತ್ತಿರುವುದರಿಂದ ಸ್ಪಷ್ಟವಾಗಿದೆ
2025ರ ಜನವರಿ 1 ರಿಂದ ಇಲ್ಲಿಯವರೆಗೆ ಪ್ರಮುಖ ಸಾಧನೆಗಳು ಈ ಕೆಳಗಿನಂತಿವೆ:
- ವರ್ಷದಲ್ಲಿ ಜಿಲ್ಲೆಯ ಗೌರವಾನ್ವಿತ ಸಂಸದರ ಅಧ್ಯಕ್ಷತೆಯಲ್ಲಿ ಒಟ್ಟು 1058 ಜಿಲ್ಲಾ ಮಟ್ಟದ ದಿಶಾ ಸಭೆಗಳನ್ನು ಆಯೋಜಿಸಲಾಗಿದೆ.
- ರಾಜ್ಯ/ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ವರ್ಷದಲ್ಲಿ ಒಟ್ಟು 246 ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ.
- ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಒಟ್ಟು 8 ರಾಜ್ಯ ಮಟ್ಟದ ದಿಶಾ ಸಮಿತಿ ಸಭೆಗಳು ನಡೆದಿವೆ.
- ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ಒಟ್ಟು 23 ರಾಜ್ಯಸಭಾ ಸಂಸದರನ್ನು ಅಧ್ಯಕ್ಷರು/ಸಹ-ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಲಾಗಿದೆ.
- ದಿಶಾ ಡ್ಯಾಶ್‌ಬೋರ್ಡ್‌ನಲ್ಲಿ ಒಟ್ಟು 8 ಯೋಜನೆಗಳನ್ನು ಸೇರಿಸಲಾಗಿದೆ.
*****
(रिलीज़ आईडी: 2210535)
आगंतुक पटल : 69