ಗೃಹ ವ್ಯವಹಾರಗಳ ಸಚಿವಾಲಯ
ಗೃಹ ವ್ಯವಹಾರಗಳ ಸಚಿವಾಲಯ: ವರ್ಷಾಂತ್ಯದ ವಿಮರ್ಶೆ 2025
प्रविष्टि तिथि:
31 DEC 2025 9:59PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸುರಕ್ಷಿತ, ಸುಭದ್ರ ಮತ್ತು ವಿಕಸಿತ ಭಾರತದ ದೃಷ್ಟಿಕೋನವನ್ನು ಈಡೇರಿಸುವ ನಿಟ್ಟಿನಲ್ಲಿ ಅನೇಕ ಮಹತ್ವದ ಸಾಧನೆಗಳನ್ನು ಮಾಡಲಾಗಿರುವುದರಿಂದ 2025 ನೇ ವರ್ಷವು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಒಂದು ಮಹತ್ವದ ವರ್ಷವಾಗಿತ್ತು. ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಗೃಹ ವ್ಯವಹಾರ ಸಚಿವಾಲಯವು ಆಂತರಿಕ ಭದ್ರತೆಯನ್ನು ಬಲಪಡಿಸುವ ಮತ್ತು ಭಯೋತ್ಪಾದನೆ, ಉಗ್ರವಾದ, ಸಂಘಟಿತ ಅಪರಾಧ ಮತ್ತು ಸೈಬರ್ ದಾಳಿಯಂತಹ ಗಂಭೀರ ಬೆದರಿಕೆಗಳನ್ನು ಎದುರಿಸಲು ದೇಶದ ಪ್ರಯತ್ನಗಳ ಮೇಲೆ ಕೇಂದ್ರೀಕರಿಸಿದೆ.
ಎಡಪಂಥೀಯ ಉಗ್ರವಾದ(ಎಲ್.ಡಬ್ಲ್ಯೂ.ಇ)ದ ಬಹುತೇಕ ನಿರ್ಮೂಲನೆ, ಪರಿಣಾಮಕಾರಿ ಭಯೋತ್ಪಾದನಾ ನಿಗ್ರಹ ತಂತ್ರಗಳು, ಹೊಸ ಕ್ರಿಮಿನಲ್ ಕಾನೂನುಗಳನ್ನು ಅನುಷ್ಠಾನಗೊಳಿಸುವಲ್ಲಿ ಗಮನಾರ್ಹ ಪ್ರಗತಿ, ಹೆಚ್ಚಿದ ಸೈಬರ್ ಭದ್ರತೆ, ಮಾದಕ ದ್ರವ್ಯಗಳ ವಿರುದ್ಧ ಕಠೋರ ವಿಧಾನ ಹಾಗು ಶೂನ್ಯ ಸಹಿಷ್ಣುತೆ ಮತ್ತು 2027 ರ ಪರಿವರ್ತನಾತ್ಮಕ ಜನಗಣತಿಗೆ ಸಿದ್ಧತೆಗಳು ಸಚಿವಾಲಯದ ಪ್ರಮುಖ ಮುಖ್ಯಾಂಶಗಳಲ್ಲಿ ಸೇರಿವೆ. ತಂತ್ರಜ್ಞಾನ, ಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು ಅಂತರ-ಸಂಸ್ಥೆಗಳ ಸಹಯೋಗದಿಂದ ಬಲಪಡಿಸಲ್ಪಟ್ಟ ಈ ಉಪಕ್ರಮಗಳು ಹಿಂಸಾಚಾರವನ್ನು ಕಡಿಮೆ ಮಾಡಲು, ಹೆಚ್ಚಿನ ಶಿಕ್ಷೆಯ ಪ್ರಮಾಣಗಳಿಗೆ ಮತ್ತು ಅಂಚಿನಲ್ಲಿರುವ ಗುಂಪುಗಳ ಸಬಲೀಕರಣಕ್ಕೆ ಕಾರಣವಾಯಿತು, ಇದು ನ್ಯಾಯ, ಸುರಕ್ಷತೆ ಮತ್ತು ಸಮೃದ್ಧಿ ತತ್ವಗಳನ್ನು ಸಾಕಾರಗೊಳಿಸಿತು.
ಎಡಪಂಥೀಯ ಉಗ್ರವಾದ (ಎಲ್.ಡಬ್ಲ್ಯೂ.ಇ): ನಕ್ಸಲ್ ಮುಕ್ತ ಭಾರತ ಅಭಿಯಾನವು ಮೈಲಿಗಲ್ಲನ್ನು ಸಾಧಿಸಿದೆ
ನಕ್ಸಲ್ ಮುಕ್ತ ಭಾರತವನ್ನು ನಿರ್ಮಿಸುವ ಮೋದಿ ಸರ್ಕಾರದ ದೂರದೃಷ್ಟಿಯಡಿಯಲ್ಲಿ, ಮಾರ್ಚ್ 31, 2026 ರೊಳಗೆ ಎಡಪಂಥೀಯ ಉಗ್ರವಾದದ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಗೃಹ ಸಚಿವಾಲಯವು ಮುಂದಾಗಿದೆ. ಕಠೋರ ಭದ್ರತಾ ಕಾರ್ಯಾಚರಣೆಗಳು, ವ್ಯಾಪಕ ಅಭಿವೃದ್ಧಿ ಉಪಕ್ರಮಗಳು, ಪುನರ್ವಸತಿ ನೀತಿಗಳು ಮತ್ತು ಹೆಚ್ಚಿದ ಅಂತರ-ಏಜೆನ್ಸಿಗಳ ಸಮನ್ವಯ, ಮಾವೋವಾದಿ ಜಾಲವನ್ನು ಗಮನಾರ್ಹವಾಗಿ ಕಿತ್ತುಹಾಕುವುದು ಮತ್ತು ಪೀಡಿತ ಪ್ರದೇಶಗಳಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವುದು ಸೇರಿದಂತೆ ಹಲವಾರು ಕಾರ್ಯತಂತ್ರದಿಂದಾಗಿ ವರ್ಷ 2025 ಅಭೂತಪೂರ್ವ ಯಶಸ್ಸನ್ನು ಕಂಡಿತು.
- ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾರ್ಚ್ 31ರ ಮೊದಲು, ಛತ್ತೀಸ್‌ಗಢ ಸೇರಿದಂತೆ ಇಡೀ ದೇಶದಲ್ಲಿ ನಕ್ಸಲ್‌ವಾದವು ಕೊನೆಗೊಳ್ಳಲಿದೆ.
(ಏಪ್ರಿಲ್ 5, 2025- https://www.pib.gov.in/PressReleasePage.aspx?PRID=2119424®=3&lang=2
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನಕ್ಸಲಿಸಂ ಕುರಿತು ಛತ್ತೀಸ್‌ಗಢ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಒಡಿಶಾದ ಡಿಜಿಪಿಗಳು/ಎಡಿಜಿಪಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ನಡೆದ ಅಂತರ-ರಾಜ್ಯ ಭದ್ರತಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.
- ಮಾರ್ಚ್ 31, 2026ರ ವೇಳೆಗೆ ದೇಶವು ನಕ್ಸಲ್ ಮುಕ್ತವಾಗಲಿದೆ ಎಂದು ಗೃಹ ಸಚಿವರು ವಿಶ್ವಾಸದಿಂದ ಪುನರುಚ್ಚರಿಸಿದರು.(22 ಜೂನ್ 2025 - https://www.pib.gov.in/PressReleasePage.aspx?PRID=2138742®=3&lang=1 -
- 'ನಕ್ಸಲ್ ಮುಕ್ತ ಭಾರತ'ದ ಸಂಕಲ್ಪದಲ್ಲಿ ಐತಿಹಾಸಿಕ ಯಶಸ್ಸನ್ನು ಸಾಧಿಸಿದ ಭದ್ರತಾ ಪಡೆಗಳು ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿರುವ ಕರ್ರೆಗುತ್ತಲು ಬೆಟ್ಟದಲ್ಲಿ (ಕೆಜಿಎಚ್) ನಕ್ಸಲ್ ವಿರುದ್ಧ ನಡೆದ ಅತಿದೊಡ್ಡ ಕಾರ್ಯಾಚರಣೆಯಲ್ಲಿ 31 ನಕ್ಸಲರನ್ನು ಕೊಂದಿವೆ.
- ಒಂದು ಕಾಲದಲ್ಲಿ ಕೆಂಪು ಭಯೋತ್ಪಾದನೆಯಿಂದ ಆಳಲ್ಪಟ್ಟ ಕರ್ರೆಗುತ್ತಲು ಬೆಟ್ಟಗಳು ಈಗ ಹೆಮ್ಮೆಯಿಂದ ತ್ರಿವರ್ಣ ಧ್ವಜವನ್ನು ಹಾರಿಸುತ್ತಿವೆ: ಕೇಂದ್ರ ಗೃಹ ಸಚಿವರು.
- ನಮ್ಮ ಭದ್ರತಾ ಪಡೆಗಳು ಈ ಅತಿದೊಡ್ಡ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಕೇವಲ 21 ದಿನಗಳಲ್ಲಿ ಪೂರ್ಣಗೊಳಿಸಿವೆ ಮತ್ತು ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳ ಯಾವುದೇ ಸಾವುನೋವುಗಳು ಸಂಭವಿಸಿಲ್ಲ.(ಮೇ 14, 2025-https://www.pib.gov.in/PressReleasePage.aspx?PRID=2128736®=3&lang=1)
- ಒಂದು ಮಹತ್ವದ ಸಾಧನೆಯಲ್ಲಿ, ಭದ್ರತಾ ಪಡೆಗಳು ನಾರಾಯಣಪುರದಲ್ಲಿ 27 ಭಯಾನಕ ಮಾವೋವಾದಿಗಳನ್ನು ನಿಷ್ಕ್ರಿಯಗೊಳಿಸಿದರು, ಇದರಲ್ಲಿ ಚಳುವಳಿಯ ಬೆನ್ನೆಲುಬಾಗಿದ್ದ ಸಿಪಿಐ-ಮಾವೋವಾದಿ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಸೇರಿದ್ದಾರೆ. ಇದು ಮೂರು ದಶಕಗಳಲ್ಲಿ ಮೊದಲ ಬಾರಿಗೆ ಆದ ಉನ್ನತ ಮಟ್ಟದ ನಿರ್ಮೂಲನೆ. ಆಪರೇಷನ್ ಬ್ಲಾಕ್ ಫಾರೆಸ್ಟ್ ನಂತರ, ಹಲವು ರಾಜ್ಯಗಳಲ್ಲಿ 54 ಬಂಧನಗಳು ಮತ್ತು 84 ಶರಣಾಗತಿಗಳು ಸಂಭವಿಸಿವೆ.(ಮೇ 21,2025- https://www.pib.gov.in/PressReleasePage.aspx?PRID=2130295®=3&lang=2)
- ಛತ್ತೀಸ್‌ಗಢ ಮತ್ತು ತೆಲಂಗಾಣ ಗಡಿಯಾದ್ಯಂತದ ಕರೇಗುಟ್ಟಾ ಬೆಟ್ಟಗಳಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಭೇಟಿಯಾದರು.(ಮೇ 15, 2025 -https://www.pib.gov.in/PressReleasePage.aspx?PRID=2128919®=3&lang=2)
- ಕರೆಗುತ್ತಲು ಬೆಟ್ಟದಲ್ಲಿ 'ಆಪರೇಷನ್ ಬ್ಲಾಕ್ ಫಾರೆಸ್ಟ್' ಅನ್ನು ಯಶಸ್ವಿಯಾಗಿ ನಡೆಸಿದ ಸಿ ಆರ್ ಪಿ ಎಫ್., ಛತ್ತೀಸ್‌ಗಢ ಪೊಲೀಸ್, ಡಿ ಆರ್ ಜಿ ಮತ್ತು ಕೋಬ್ರಾ ಜವಾನರನ್ನು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಭೇಟಿ ಮಾಡಿ ಸನ್ಮಾನಿಸಿದರು.(ಸೆಪ್ಟೆಂಬರ್ 3, 2025 - https://www.pib.gov.in/PressReleasePage.aspx?PRID=2163233®=3&lang=2)
- ಛತ್ತೀಸ್‌ಗಢದ ಸುಕ್ಮಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಸಂಸ್ಥೆಗಳು 16 ನಕ್ಸಲೀಯರನ್ನು ನಿಶ್ಯಸ್ತ್ರಗೊಳಿಸಿದರು ಮತ್ತು ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಂಡರು. (ಮಾರ್ಚ್ 29, 2025 - https://www.pib.gov.in/PressReleasePage.aspx?PRID=2116756®=3&lang=1)
- ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ, ₹1 ಕೋಟಿ ಬಹುಮಾನದೊಂದಿಗೆ ಕುಖ್ಯಾತ ನಕ್ಸಲ್ ಕಮಾಂಡರ್, ಸಿಪಿಐ (ಎಂ)ನ ಸಿಸಿಎಂ ಸಹದೇವ್ ಸೊರೆನ್ ಅಲಿಯಾಸ್ ಪರ್ವೇಶ್ ಅವರ ಹತ್ಯೆಯಾಯಿತು. ಭದ್ರತಾ ಪಡೆಗಳು ಇತರ ಇಬ್ಬರು ಬೌಂಟಿ ನಕ್ಸಲ್‌ಗಳಾದ ರಘುನಾಥ್ ಹೆಂಬ್ರಾಮ್ ಅಲಿಯಾಸ್ ಚಂಚಲ್ ಮತ್ತು ಬಿರ್ಸೆನ್ ಗಂಜು ಅಲಿಯಾಸ್ ರಾಮ್ಖೇಲಾವನ್‌ರನ್ನು ಸಹ ನಿರ್ಮೂಲನೆ ಮಾಡಿದೆ. ಈ ನಕ್ಸಲ್ ವಿರೋಧಿ ಕಾರ್ಯಾಚರಣೆಯ ನಂತರ, ಉತ್ತರ ಜಾರ್ಖಂಡ್‌ನ ಬೊಕಾರೊ ಪ್ರದೇಶದಿಂದ ನಕ್ಸಲ್‌ವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ. (ಸೆಪ್ಟೆಂಬರ್ 15, 2025 https://www.pib.gov.in/PressReleasePage.aspx?PRID=2166820®=3&lang=1)
- ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿರುವ ನಾರಾಯಣಪುರದ ಅಬುಜ್ಮದ್ ಪ್ರದೇಶದಲ್ಲಿ.ಭದ್ರತಾ ಪಡೆಗಳು ಇಬ್ಬರು ಕೇಂದ್ರ ಸಮಿತಿ ಸದಸ್ಯ ನಕ್ಸಲ್ ನಾಯಕರಾದ ಕದರಿ ಸತ್ಯನಾರಾಯಣ ರೆಡ್ಡಿ ಅಲಿಯಾಸ್ ಕೋಸಾ ಮತ್ತು ಕಟ್ಟಾ ರಾಮ್‌ಚಂದ್ರ ರೆಡ್ಡಿ ಅವರನ್ನು ನಿರ್ಮೂಲನೆ ಮಾಡಿದೆ.(ಸೆಪ್ಟೆಂಬರ್ 22, 2025 https://www.pib.gov.in/PressReleasePage.aspx?PRID=2169782®=3&lang=1)
- ಈ ವರ್ಷ ಮೋದಿ ಸರ್ಕಾರವು ನಕ್ಸಲ್ ಮುಕ್ತ ಭಾರತವನ್ನು ನಿರ್ಮಿಸುವಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸಿದೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಹೆಚ್ಚು ಪೀಡಿತ ಜಿಲ್ಲೆಗಳ ಸಂಖ್ಯೆಯನ್ನು 3 ಕ್ಕೆ, ಪೀಡಿತ ಜಿಲ್ಲೆಗಳನ್ನು 18 ರಿಂದ 11 ಕ್ಕೆ ಇಳಿಸಿದೆ ಮತ್ತು 312 ಎಲ್‌ಡಬ್ಲ್ಯೂಇ ಕಾರ್ಯಕರ್ತರನ್ನು ನಿರ್ಮೂಲನೆ ಮಾಡಿದೆ, ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿದೆ. (15 ಅಕ್ಟೋಬರ್ 2025 - https://www.pib.gov.in/PressReleasePage.aspx?PRID=2088945®=3&lang=1)
- ಛತ್ತೀಸ್‌ಗಢದ ಬಿಜಾಪುರದಲ್ಲಿ 50 ನಕ್ಸಲರ ಶರಣಾಗತಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಪಾರ ಸಂತೋಷ ವ್ಯಕ್ತಪಡಿಸಿದರು.(ಮಾರ್ಚ್ 30, 2025 -https://www.pib.gov.in/PressReleasePage.aspx?PRID=2116853®=3&lang=2)
- ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿ 258 ನಕ್ಸಲರು ಶರಣಾಗಿದ್ದಾರೆ. ಸತೀಶ್ ಅಲಿಯಾಸ್ ಟಿ. ವಾಸುದೇವ್ ರಾವ್ (ಸಿಸಿಎಂ) ಸೇರಿದಂತೆ 10 ಹಿರಿಯ ಕಾರ್ಯಾಚರಣೆದಾರರು ಸೇರಿದಂತೆ ಅವರ ಮೇಲೆ 1 ಕೋಟಿ ರೂ. ಬಹುಮಾನವಿತ್ತು. AK-47 ಗಳು, INSAS, SLR ಗಳು, 303 ರೈಫಲ್‌ಗಳು ಇತ್ಯಾದಿ ಸೇರಿದಂತೆ ಅಪಾರ ಸಂಖ್ಯೆಯ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಅವರು ಹಸ್ತಾಂತರಿಸಿದ್ದಾರೆ.(16 ಅಕ್ಟೋಬರ್ 2025 https://www.pib.gov.in/PressReleasePage.aspx?PRID=2180005®=3&lang=1)
- ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ಬಸ್ತಾರ್ ಪಾಂಡಮ್ ಕಾರ್ಯಕ್ರಮವನ್ನುದ್ದೇಶಿಸಿ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಭಾಷಣ ಮಾಡಿದ್ದಾರೆ. ಬಸ್ತಾರ್ ಪಾಂಡಮ್‌ನ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಕಲೆಯನ್ನು ಜಗತ್ತಿಗೆ ತರುವ ಮೂಲಕ ಅದಕ್ಕೆ ಅಂತರರಾಷ್ಟ್ರೀಯ ಮನ್ನಣೆ ನೀಡಲು ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ನಕ್ಸಲರು ಇಡೀ ಬಸ್ತಾರ್‌ನ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಿಲ್ಲ; ಬಸ್ತಾರ್ ಈಗ ಭಯದ ಸಂಕೇತವಲ್ಲ, ಭವಿಷ್ಯದ ಸಂಕೇತವಾಗಿದೆ. ಬಸ್ತಾರ್ ಪಾಂಡಮ್ ಕಾರ್ಯಕ್ರಮವನ್ನು ಮುಂದಿನ ವರ್ಷ 12 ವಿಭಾಗಗಳಲ್ಲಿ ಆಚರಿಸಲಾಗುವುದು ಮತ್ತು ದೇಶಾದ್ಯಂತದ ಬುಡಕಟ್ಟು ಜನಾಂಗದವರು ಇದರಲ್ಲಿ ಭಾಗವಹಿಸುತ್ತಾರೆ. (5ನೇ ಏಪ್ರಿಲ್ 2025 - https://www.pib.gov.in/PressReleasePage.aspx?PRID=2119294®=3&lang=2)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ಬಸ್ತಾರ್ ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. 75 ದಿನಗಳ ಕಾಲ ನಡೆಯುವ ಬಸ್ತಾರ್ ದಸರಾ ಉತ್ಸವವು ಬುಡಕಟ್ಟು ಸಮುದಾಯ, ಛತ್ತೀಸ್‌ಗಢ ಅಥವಾ ಭಾರತಕ್ಕೆ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಸಾಂಸ್ಕೃತಿಕ ಉತ್ಸವವಾಗಿದೆ. (4ನೇ ಅಕ್ಟೋಬರ್ 2025 - https://www.pib.gov.in/PressReleasePage.aspx?PRID=2174829®=3&lang=1)
- ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ಬಸ್ತರ್ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭವನ್ನುದ್ದೇಶಿಸಿ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಮಾತನಾಡಿದರು. ಮುಂದಿನ 5 ವರ್ಷಗಳಲ್ಲಿ, ಬಸ್ತರ್ ವಿಭಾಗವು ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ಬುಡಕಟ್ಟು ವಿಭಾಗವಾಗಲಿದೆ. 2026ರ ಬಸ್ತರ್ ಒಲಿಂಪಿಕ್ಸ್ ನಕ್ಸಲ್ ಮುಕ್ತ ಬಸ್ತರ್‌ನಲ್ಲಿ ನಡೆಯಲಿದೆ.(13ನೇ ಡಿಸೆಂಬರ್ 2025 – https://www.pib.gov.in/PressReleasePage.aspx?PRID=2203518®=3&lang=1)
ಗೃಹ ಸಚಿವಾಲಯದ ಕಾರ್ಯವೈಖರಿಯ ಕುರಿತು ಚರ್ಚೆ
ರಾಜ್ಯಸಭೆಯಲ್ಲಿ ಗೃಹ ಸಚಿವಾಲಯದ ಕಾರ್ಯವೈಖರಿಯ ಕುರಿತು ನಡೆದ ಚರ್ಚೆಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಉತ್ತರಿಸಿದರು.
- ಮೋದಿ ಸರ್ಕಾರದ ಅಡಿಯಲ್ಲಿ ಭಯೋತ್ಪಾದನೆ, ನಕ್ಸಲಿಸಂ ಮತ್ತು ದಂಗೆಯು ಕೊನೆಗೊಳ್ಳುವ ಹಂತದಲ್ಲಿದೆ. ಮೋದಿ ಸರ್ಕಾರ ಭಯೋತ್ಪಾದನೆ ಅಥವಾ ಭಯೋತ್ಪಾದಕರನ್ನು ಸಹಿಸುವುದಿಲ್ಲ.
- ಮಾರ್ಚ್ 31, 2026 ರ ವೇಳೆಗೆ, ದೇಶವು ನಕ್ಸಲ್ ಮುಕ್ತವಾಗಲಿದೆ.
- ಮುಂದಿನ 3 ವರ್ಷಗಳಲ್ಲಿ ದೇಶಾದ್ಯಂತ ಹೊಸ ಕ್ರಿಮಿನಲ್ ಕಾನೂನುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು.
- ಮಾದಕ ವಸ್ತು ವ್ಯಾಪಾರದಿಂದ ಹಣ ಗಳಿಸುವ ಮತ್ತು ಆ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುವವರನ್ನು ಮೋದಿ ಸರ್ಕಾರ ಎಂದಿಗೂ ಬಿಡುವುದಿಲ್ಲ.
- ಎನ್‌ಐಎ 95% ಶಿಕ್ಷೆಯ ಪ್ರಮಾಣವನ್ನು ಸಾಧಿಸಿದೆ, ಇದು ವಿಶ್ವಾದ್ಯಂತ ಭಯೋತ್ಪಾದನಾ ನಿಗ್ರಹ ಸಂಸ್ಥೆಗಳಲ್ಲಿ ಅತ್ಯಧಿಕವಾಗಿದೆ.
(ಮಾರ್ಚ್ 21, 2025 - https://www.pib.gov.in/PressReleasePage.aspx?PRID=2113902®=3&lang=2)
ರಾಷ್ಟ್ರೀಯ ಭದ್ರತೆ: ಭಯೋತ್ಪಾದನೆ, ಉಗ್ರವಾದ, ಸಂಘಟಿತ ಅಪರಾಧ ಮತ್ತು ಸೈಬರ್ ದಾಳಿಯಂತಹ ಗಂಭೀರ ಬೆದರಿಕೆಗಳನ್ನು ಎದುರಿಸಲು ದೇಶದ ಪ್ರಯತ್ನಗಳನ್ನು ಬಲಪಡಿಸುವುದು
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಹೊಸ ಬಹು-ಸಂಸ್ಥೆ ಕೇಂದ್ರ (ಎಂಎಸಿ)ವನ್ನು ಉದ್ಘಾಟಿಸಿದರು.
- ಆಪರೇಷನ್ ಸಿಂಧೂರ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಢ ರಾಜಕೀಯ ಇಚ್ಛಾಶಕ್ತಿ, ಗುಪ್ತಚರ ಸಂಸ್ಥೆಗಳ ನಿಖರ ಮಾಹಿತಿ ಮತ್ತು ನಮ್ಮ ಸಶಸ್ತ್ರ ಪಡೆಗಳ ದೋಷರಹಿತ ದಾಳಿ ಸಾಮರ್ಥ್ಯದ ವಿಶಿಷ್ಟ ಸಂಕೇತವಾಗಿದೆ.
- ಹೊಸ ಎಂಎಸಿಎಲ್ಲಾ ಸಂಸ್ಥೆಗಳ ಪ್ರಯತ್ನಗಳನ್ನು ಸಂಯೋಜಿಸುತ್ತದೆ ಮತ್ತು ಸಂಕೀರ್ಣ ಮತ್ತು ಪರಸ್ಪರ ಸಂಬಂಧ ಹೊಂದಿರುವ ಪ್ರಸ್ತುತ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಎದುರಿಸಲು ತಡೆರಹಿತ ಮತ್ತು ಸಂಯೋಜಿತ ವೇದಿಕೆಯನ್ನು ಒದಗಿಸುತ್ತದೆ. (16 ಮೇ 2025 – https://www.pib.gov.in/PressReleasePage.aspx?PRID=2129141®=3&lang=2)
- ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ಸಿಬಿಐ ಅಭಿವೃದ್ಧಿಪಡಿಸಿದ BHARATPOL ಪೋರ್ಟಲ್ (ಭಾರತ್ ಪೊಲ್) ಅನ್ನು ಉದ್ಘಾಟಿಸಿದರು.
- ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, 'BHARATPOL' ಅನ್ನು ಪ್ರಾರಂಭಿಸುವುದರೊಂದಿಗೆ, ಭಾರತವು ಅಂತರರಾಷ್ಟ್ರೀಯ ತನಿಖೆಗಳಲ್ಲಿ ಹೊಸ ಯುಗಕ್ಕೆ ನಾಂದಿ ಹಾಡುತ್ತಿದೆ.
- ಮಾದಕ ದ್ರವ್ಯಗಳು, ಶಸ್ತ್ರಾಸ್ತ್ರಗಳು, ಮಾನವ ಕಳ್ಳಸಾಗಣೆ ಮತ್ತು ಇತರ ಗಡಿಯಾಚೆಗಿನ ಅಪರಾಧಗಳಿಗೆ ಸಂಬಂಧಿಸಿದ ಅಪರಾಧಗಳನ್ನು ಎದುರಿಸುವಲ್ಲಿ 'BHARATPOL' ಜಾಲವು 195 ದೇಶಗಳೊಂದಿಗೆ ಸಹಕಾರವನ್ನು ಸಕ್ರಿಯಗೊಳಿಸುತ್ತದೆ.
- 'BHARATPOL' ಇಂಟರ್‌ಪೋಲ್‌ನಿಂದ 19 ರೀತಿಯ ದತ್ತಾಂಶಗಳಿಗೆ ಪ್ರವೇಶವನ್ನು ಹೊಂದಿರುತ್ತದೆ, ಇದು ಅಪರಾಧಗಳನ್ನು ವಿಶ್ಲೇಷಿಸಲು, ಅವುಗಳನ್ನು ತಡೆಗಟ್ಟಲು ಮತ್ತು ಅಪರಾಧಿಗಳನ್ನು ಬಂಧಿಸಲು ಸಹಾಯಕವಾಗಿರುತ್ತದೆ.(7ನೇ ಜನವರಿ 2025 - https://www.pib.gov.in/PressReleasePage.aspx?PRID=2090877®=3&lang=1)
- ಆರ್ಥಿಕ, ಸೈಬರ್, ಭಯೋತ್ಪಾದಕ ಘಟನೆಗಳು ಅಥವಾ ಸಂಘಟಿತ ಅಪರಾಧಗಳಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಪರಾರಿಯಾಗುವ ವ್ಯಕ್ತಿಯನ್ನು ಕಾನೂನಿನ ಮುಂದೆ ಕಠಿಣ ವಿಧಾನದಿಂದ ತರಲು ಮೋದಿ ಸರ್ಕಾರ ವ್ಯವಸ್ಥೆಗಳನ್ನು ಮಾಡುತ್ತಿದೆ. ಪರಾರಿಯಾಗುವ ಅಪರಾಧಿಗಳ ವಿಷಯವು ದೇಶದ ಸಾರ್ವಭೌಮತ್ವ, ಆರ್ಥಿಕ ಸ್ಥಿರತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಮಾತ್ರವಲ್ಲದೆ ದೇಶದ ಭದ್ರತೆಗೂ ಸಂಬಂಧಿಸಿದೆ.(16ನೇ ಅಕ್ಟೋಬರ್ 2025 - https://www.pib.gov.in/PressReleasePage.aspx?PRID=2179886®=3&lang=1)
- ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ನಡೆದ 8ನೇ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.
- ಪ್ರಧಾನಿ ಮೋದಿ ಅವರು ಬಲವಾದ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಾ, ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ ಅಲ್ಲದೆ, ಆಪರೇಷನ್ ಸಿಂದೂರ್ ಮೂಲಕ ಅದನ್ನು ವಿಶ್ವದ ಮುಂದೆ ಗಮನಾರ್ಹ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ.
- ಈ ಸಮ್ಮೇಳನವು ಹಿರಿಯ ಅಧಿಕಾರಿಗಳಿಗೆ ಯುವ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು, ಸವಾಲುಗಳೊಂದಿಗೆ ಅವರನ್ನು ಪರಿಚಯಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳುವ ಮಾರ್ಗವನ್ನು ತೋರಿಸಲು ಅನುವು ಮಾಡಿಕೊಡುತ್ತದೆ. (26 ಜುಲೈ 2025 - https://www.pib.gov.in/PressReleasePage.aspx?PRID=2148988®=3&lang=1)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಛತ್ತೀಸ್‌ಗಢದ ರಾಯ್‌ಪುರದಲ್ಲಿ ಮೂರು ದಿನಗಳ 60ನೇ ಡಿಜಿಪಿ/ಐಜಿಪಿಗಳ ಸಮ್ಮೇಳನವನ್ನು ಉದ್ಘಾಟಿಸಿದರು.
- ಪ್ರಧಾನ ಮಂತ್ರಿ ಮೋದಿ ಅವರ ನೇತೃತ್ವದಲ್ಲಿ, ಡಿಜಿಪಿ/ಐಜಿಪಿಗಳ ಸಮ್ಮೇಳನವು ದೇಶದ ಆಂತರಿಕ ಭದ್ರತೆಗೆ ಪರಿಹಾರಗಳನ್ನು ಒದಗಿಸುವ ವೇದಿಕೆಯಾಗಿ ಹೊರಹೊಮ್ಮಿದೆ - ಸಮಸ್ಯೆ ಪರಿಹಾರ ಮತ್ತು ಸವಾಲುಗಳಿಂದ ಹಿಡಿದು ಕಾರ್ಯತಂತ್ರಗಳು ಮತ್ತು ನೀತಿ ನಿರೂಪಣೆಯವರೆಗೆ ಎಲ್ಲವನ್ನೂ ಒಳಗೊಂಡಿದೆ. (28ನೇ ನವೆಂಬರ್ 2025 - https://www.pib.gov.in/PressReleasePage.aspx?PRID=2196128®=3&lang=1)
- ಮೋಡಸ್ ಆಪರೇಂಡಿ ಬ್ಯೂರೋದಲ್ಲಿ, ಬಿಪಿಆರ್ &ಡಿ, ಎನ್ ಸಿ ಆರ್ ಬಿ, ಜೈಲು ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಜ್ಞರು ಅಪರಾಧಗಳ ಕಾರ್ಯವಿಧಾನವನ್ನು ವಿಶ್ಲೇಷಿಸಬೇಕು: ಕೇಂದ್ರ ಗೃಹ ಸಚಿವರು
- ಬಿಪಿಆರ್ &ಡಿ ತಳಮಟ್ಟದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ಎದುರಾಗುವ ಸವಾಲುಗಳನ್ನು ಗುರುತಿಸಲು ಸಂಶೋಧನೆ ನಡೆಸಬೇಕು ಮತ್ತು ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವತ್ತ ಕೆಲಸ ಮಾಡಬೇಕು. (9ನೇ ಜನವರಿ 2025 - https://www.pib.gov.in/PressReleasePage.aspx?PRID=2091547®=3&lang=1)
ಭಯೋತ್ಪಾದನಾ ನಿಗ್ರಹ ಕ್ರಮಗಳನ್ನು ಬಲಪಡಿಸಲಾಗಿದೆ
- ಪಹಲ್ಗಾಮ್ ಭಯೋತ್ಪಾದಕ ದಾಳಿಗೆ 'ಆಪರೇಷನ್ ಸಿಂದೂರ್' ಮೂಲಕ ಭಾರತದ ಬಲವಾದ, ಯಶಸ್ವಿ ಮತ್ತು ನಿರ್ಣಾಯಕ ಪ್ರತಿಕ್ರಿಯೆಯ ಕುರಿತು ಲೋಕಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಭಾಗವಹಿಸಿದರು.
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಆಪರೇಷನ್ ಸಿಂದೂರ್' ಮೂಲಕ ಭಯೋತ್ಪಾದಕ ಶಿಬಿರಗಳು ಮತ್ತು ಭಯೋತ್ಪಾದಕರ ನಾಯಕರುಗಳನ್ನು ನಿರ್ಮೂಲನೆ ಮಾಡಿದರು ಮತ್ತು 'ಆಪರೇಷನ್ ಮಹಾದೇವ್' ನಲ್ಲಿ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು ನಿರ್ನಾಮ ಮಾಡಿದರು.
- ಸೇನೆ, ಸಿಆರ್‌ಪಿಎಫ್ ಮತ್ತು ಜೆ & ಕೆ ಪೊಲೀಸರ ಜಂಟಿ 'ಆಪರೇಷನ್ ಮಹಾದೇವ್' ನಲ್ಲಿ, ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರಾದ ಸುಲೇಮಾನ್ ಅಲಿಯಾಸ್ ಫೈಜಲ್ ಜಟ್, ಹಮ್ಜಾ ಅಫ್ಘಾನಿ ಮತ್ತು ಜಿಬ್ರಾನ್ ಕೊಲ್ಲಲ್ಪಟ್ಟರು.
- ಆಪರೇಷನ್ ಸಿಂದೂರ್ ಪಾಕಿಸ್ತಾನದ ಬಗ್ಗೆ ಇಡೀ ಜಗತ್ತಿಗೆ ಬಹಿರಂಗಪಡಿಸಿತು ಮತ್ತು ನಮ್ಮ ಸೇನೆಯು ಪಾಕಿಸ್ತಾನದ ಯುದ್ಧ ಸಾಮರ್ಥ್ಯಗಳನ್ನು ಛಿದ್ರಗೊಳಿಸಿತು. (29 ಜುಲೈ 2025 - https://www.pib.gov.in/PressReleasePage.aspx?PRID=2149811®=3&lang=2)
- ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಬಲವಾದ, ಯಶಸ್ವಿ ಮತ್ತು ನಿರ್ಣಾಯಕ ಪ್ರತಿಕ್ರಿಯೆ - ಆಪರೇಷನ್ ಸಿಂದೂರ್ ಕುರಿತು ಇಂದು ರಾಜ್ಯಸಭೆಯಲ್ಲಿ ವಿಶೇಷ ಚರ್ಚೆಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಭಾಗವಹಿಸಿದರು.
- ಆಪರೇಷನ್ ಸಿಂದೂರ್ ಮತ್ತು ಆಪರೇಷನ್ ಮಹಾದೇವ್ ಮೂಲಕ ಭಾರತದ ಗೌರವವನ್ನು ಹೆಚ್ಚಿಸಿದ ಸೇನೆ ಮತ್ತು ಎಲ್ಲಾ ಭದ್ರತಾ ಪಡೆಗಳನ್ನು ಕೇಂದ್ರ ಗೃಹ ಸಚಿವರು ಅಭಿನಂದಿಸಿದರು.
- ಇಂದು, ಮೋದಿ ಸರ್ಕಾರದ ಅಡಿಯಲ್ಲಿ, ನಮ್ಮ ಸೇನೆಯು ಆಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜುಗೊಂಡಿದ್ದು, ಇದು ಅರ್ಧ ಗಂಟೆಯಲ್ಲಿ ಪಾಕಿಸ್ತಾನದ ಸಂಪೂರ್ಣ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಮಾಡಬಹುದು.
- ಆಪರೇಷನ್ ಸಿಂದೂರ್ ಮೂಲಕ, ನಾವು ಮೊದಲ ಬಾರಿಗೆ ಭಯೋತ್ಪಾದನೆಯ ಮೂಲಸ್ಥಾನದಲ್ಲಿ ದಾಳಿ ಮಾಡಿದ್ದೇವೆ. (30 ಜುಲೈ 2025 - https://www.pib.gov.in/PressReleasePage.aspx?PRID=2150501®=3&lang=1)
- ಭಾರತ ಭಯೋತ್ಪಾದನೆಗೆ ಮಣಿಯುವುದಿಲ್ಲ ಮತ್ತು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಬಿಡಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. (https://www.pib.gov.in/PressReleasePage.aspx?PRID=2123972®=3&lang=1)
- ದೆಹಲಿ ಸ್ಫೋಟದ ಕುರಿತು ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಗಳಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅಧ್ಯಕ್ಷತೆ. (https://www.pib.gov.in/PressReleasePage.aspx?PRID=2188930®=3&lang=1)
- ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಭದ್ರತಾ ಸಭೆಗಳ ಅಧ್ಯಕ್ಷತೆ ವಹಿಸಿದ್ದರು.
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಶ್ವತವಾಗಿ ಶಾಂತಿಯನ್ನು ಸ್ಥಾಪಿಸಲು ಮತ್ತು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಬದ್ಧವಾಗಿದೆ.
- ಮೋದಿ ಸರ್ಕಾರದ ನಿರಂತರ ಮತ್ತು ಸಂಘಟಿತ ಪ್ರಯತ್ನಗಳಿಂದಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ದೇಶದ ವಿರುದ್ಧ ಶಕ್ತಿಗಳಿಂದ ಪೋಷಿಸಲ್ಪಟ್ಟ ಸಂಪೂರ್ಣ ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ.(https://www.pib.gov.in/PressReleasePage.aspx?PRID=2120184®=3&lang=2 (https://www.pib.gov.in/PressReleasePage.aspx?PRID=2101932®=3&lang=2)(https://www.pib.gov.in/PressReleasePage.aspx?PRID=2176884®=3&lang=1)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ 'ಭಯೋತ್ಪಾದನಾ ವಿರೋಧಿ ಸಮ್ಮೇಳನ-2025' ಅನ್ನು ಉದ್ಘಾಟಿಸಿದರು.
- ಪ್ರಧಾನಮಂತ್ರಿಯವರ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಆಧರಿಸಿ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಬಗ್ಗೆ , ಈ ವಾರ್ಷಿಕ ಸಮ್ಮೇಳನವು ಭವಿಷ್ಯದ ಬೆದರಿಕೆಗಳನ್ನು ಎದುರಿಸಲು ಒಂದು ವೇದಿಕೆಯಾಗಿದೆ.
- ನಮ್ಮ ಭಯೋತ್ಪಾದನಾ ನಿಗ್ರಹ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸಲು ದೇಶ ಮತ್ತು ಜಗತ್ತಿನಲ್ಲಿ ಸಂಭವಿಸಿದ ಪ್ರತಿಯೊಂದು ಭಯೋತ್ಪಾದಕ ಘಟನೆಯನ್ನು ಎಲ್ಲಾ ಸಂಸ್ಥೆಗಳು ವಿಶ್ಲೇಷಿಸಬೇಕು. https://www.pib.gov.in/PressReleasePage.aspx?PRID=2208950®=3&lang=1
- ಭಯೋತ್ಪಾದಕ ಘಟನೆಗಳಲ್ಲಿ ತಂತ್ರಜ್ಞಾನದ ಬಳಕೆಯಿಂದಾಗಿ, ಭಯೋತ್ಪಾದನೆಯ ರೀತಿಯೂ ಬದಲಾಗುತ್ತಿದೆ; ನಾವು ಅವುಗಳಿಗಿಂತಲೂ ಎರಡು ಹೆಜ್ಜೆ ಮುಂದಿರಬೇಕು
- 2019 ರ ನಂತರ, ಯುಎಪಿಎ ಕಾಯ್ದೆ, ಎನ್ ಐ ಎ ಕಾಯ್ದೆ, ಪಿಎಂಎಲ್ ಎ ಗೆ ತಿದ್ದುಪಡಿಗಳು, ಭಯೋತ್ಪಾದನಾ ನಿಧಿಯ ವಿರುದ್ಧ ಕ್ರಮಗಳು, ಪಿಎಫ್ ಐ ಮೇಲಿನ ನಿಷೇಧ ಮತ್ತು ಎಂಎಸಿ, ಸಿಸಿಟಿಎನ್ ಎಸ್ ಮತ್ತು ಎನ್ ಎ ಟಿ ಜಿ ಆರ್ ಐ ಡಿ ಸ್ಥಾಪನೆಯು ಭಯೋತ್ಪಾದನೆಗೆ ಬಲವಾದ ಹೊಡೆತಗಳನ್ನು ನೀಡಿದೆ.
(https://www.pib.gov.in/PressReleseDetailm.aspx?PRID=2178986®=3&lang=2)
ಜಮ್ಮು-ಕಾಶ್ಮೀರ ಮತ್ತು ಲಡಾಖ್: ಶಾಶ್ವತ ಏಕೀಕರಣ, ಶಾಂತಿ ಮತ್ತು ಸಮೃದ್ಧಿಯ ಕಡೆಗೆ
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿತ್ತು ಮತ್ತು ಕಾಶ್ಮೀರವು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ ಎಂದು ಹೇಳಿದರು.
- 'ಜಮ್ಮು ಕಾಶ್ಮೀರ್ ಮತ್ತು ಲಡಾಖ್ ಥ್ರೂ ದಿ ಏಜಸ್: ಎ ವಿಶುವಲ್ ನರೇಟಿವ್ ಆಫ್ ಕಂಟಿನ್ಯೂಟೀಸ್ ಅಂಡ್ ಲಿಂಕ್ಜಸ್' ಪುಸ್ತಕವನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದ ಶ್ರೀ ಅಮಿತ್ ಶಾ, ಕಾಶ್ಮೀರದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಮೋದಿ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು.
(ಜನವರಿ 2, 2025 - https://www.pib.gov.in/PressReleasePage.aspx?PRID=2089702®=3&lang=2)
- ಭಾವನಾತ್ಮಕ ಏಕೀಕರಣವನ್ನು ಬೆಳೆಸುವ ಉಪಕ್ರಮಗಳಲ್ಲಿ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು 'ವತನ್ ಕೋ ಜಾನೋ' ಕಾರ್ಯಕ್ರಮದಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ 250 ಮಕ್ಕಳೊಂದಿಗೆ ಸಂವಾದ ನಡೆಸಿದರು, ಇದು ಯುವಜನರಿಗೆ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ.
- ಪ್ರಧಾನಿ ಮೋದಿ 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಇಡೀ ದೇಶವನ್ನು ಒಗ್ಗೂಡಿಸಿದರು, ಈಗ ಕಾಶ್ಮೀರದ ಮಕ್ಕಳು ಯಾವುದೇ ಇತರ ರಾಜ್ಯದ ಮಕ್ಕಳಂತೆ ದೇಶದ ಮೇಲೆ ಅಷ್ಟೇ ಹಕ್ಕನ್ನು ಹೊಂದಿದ್ದಾರೆ.
(ಫೆಬ್ರವರಿ 24, 2025 - https://www.pib.gov.in/PressReleasePage.aspx?PRID=2105908®=3&lang=2)
- ಮೋದಿ ಸರ್ಕಾರದ ಅಡಿಯಲ್ಲಿ, ಪ್ರತ್ಯೇಕತಾವಾದವು ಕೊನೆಯುಸಿರೆಳೆಯುತ್ತಿದೆ ಮತ್ತು ಕಾಶ್ಮೀರದಾದ್ಯಂತ ಏಕತೆಯ ವಿಜಯೋತ್ಸವವು ಪ್ರತಿಧ್ವನಿಸುತ್ತಿದೆ. ಹುರಿಯತ್‌ನೊಂದಿಗೆ ಸಂಬಂಧ ಹೊಂದಿರುವ ಎರಡು ಸಂಘಟನೆಗಳು ಪ್ರತ್ಯೇಕತಾವಾದದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಘೋಷಿಸಿವೆ.
(25ನೇ ಮಾರ್ಚ್ 2025 - https://www.pib.gov.in/PressReleasePage.aspx?PRID=2114925®=3&lang=1)
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನಿರ್ಮಿಸಿದ ಹೊಸ ಭಾರತದ ಮೇಲೆ ನಂಬಿಕೆ ಇಡಲು ಹುರಿಯತ್‌ನೊಂದಿಗೆ ಸಂಯೋಜಿತವಾಗಿರುವ ಇನ್ನೂ ಎರಡು ಗುಂಪುಗಳು ಪ್ರತ್ಯೇಕತಾವಾದವನ್ನು ತ್ಯಜಿಸಿವೆ.
(27ನೇ ಮಾರ್ಚ್ 2025 - https://www.pib.gov.in/PressReleasePage.aspx?PRID=2115712®=3&lang=1)
- ಮೋದಿ ಸರ್ಕಾರದ ಅಡಿಯಲ್ಲಿ ಏಕತೆಯ ಮನೋಭಾವವು ಜಮ್ಮು ಮತ್ತು ಕಾಶ್ಮೀರವನ್ನು ಆಳುತ್ತದೆ. ಇಲ್ಲಿಯವರೆಗೆ 12 ಹುರಿಯತ್-ಸಂಬಂಧಿತ ಸಂಘಟನೆಗಳು ಪ್ರತ್ಯೇಕತಾವಾದದಿಂದ ಬೇರ್ಪಟ್ಟಿವೆ, ಭಾರತದ ಸಂವಿಧಾನದ ಮೇಲೆ ನಂಬಿಕೆ ಇಟ್ಟಿವೆ. ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ʻಏಕ ಭಾರತ ಶ್ರೇಷ್ಠ ಭಾರತʼ ದೃಷ್ಟಿಕೋನದ ವಿಜಯವಾಗಿದೆ.
(11 ಏಪ್ರಿಲ್ 2025 - https://www.pib.gov.in/PressReleasePage.aspx?PRID=2120953®=3&lang=2)
- ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಗಡಿಯಾಚೆಗಿನ ದಾಳಿಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪತ್ರಗಳನ್ನು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ವಿತರಿಸಿದರು.
- ಈ ಸಂಕಷ್ಟದ ಸಮಯದಲ್ಲಿ ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಸದೃಢವಾಗಿನಿಂತಿದೆ.
- ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದ ನಾಗರಿಕರು ತೋರಿಸಿದ ದೇಶಭಕ್ತಿಯ ಮನೋಭಾವವು ಇಡೀ ರಾಷ್ಟ್ರದ ದೃಢಸಂಕಲ್ಪವನ್ನು ಬಲಪಡಿಸಿದೆ.
(30 ಮೇ 2025 - https://www.pib.gov.in/PressReleasePage.aspx?PRID=2132757®=3&lang=2)
ಸೈಬರ್ ಭದ್ರತೆ ಮತ್ತು ವಿಧಿವಿಜ್ಞಾನ ವಿಜ್ಞಾನ: ಸೈಬರ್ ಸುರಕ್ಷಿತ ಭಾರತವನ್ನು ರೂಪಿಸುವುದು
- 'ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧ' ಕುರಿತು ನವದೆಹಲಿಯಲ್ಲಿ ನಡೆದ ಗೃಹ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ವಹಿಸಿದ್ದರು.
- ಮೋದಿ ಅವರ ನೇತೃತ್ವದಲ್ಲಿ, ದೇಶವು 'ಡಿಜಿಟಲ್ ಕ್ರಾಂತಿ'ಗೆ ಸಾಕ್ಷಿಯಾಗುತ್ತಿದೆ.
- ಸೈಬರ್ ಅಪರಾಧಗಳನ್ನು ನಿಭಾಯಿಸಲು ಮೋದಿ ಸರ್ಕಾರ ನಾಲ್ಕು-ಹಂತದ ಕಾರ್ಯತಂತ್ರದೊಂದಿಗೆ ಮುಂದುವರಿಯುತ್ತಿದೆ: ಒಮ್ಮುಖ, ಸಮನ್ವಯ, ಸಂವಹನ ಮತ್ತು ಸಾಮರ್ಥ್ಯ.
- ಸೈಬರ್ ಅಪರಾಧವನ್ನು ತಡೆಗಟ್ಟಲು, ಗೃಹ ಸಚಿವರು ಮೋದಿ ಜೀ ಅವರ 'ಆಲೋಚಿಸುವುದನ್ನು ನಿಲ್ಲಿಸಿ-ಕ್ರಮ ಕೈಗೊಳ್ಳಿ' ಎನ್ನುವ ಮಂತ್ರದ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.
(11ನೇ ಫೆಬ್ರವರಿ 2025 – https://www.pib.gov.in/PressReleasePage.aspx?PRID=2101613®=3&lang=2)
- ಯಾವುದೇ ಅಪರಾಧಿಯನ್ನು ಶರವೇಗದಲ್ಲಿ ಬಂಧಿಸಲು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಹೊಸ ಇ-ಶೂನ್ಯ ಎಫ್‌ಐಆರ್ ಉಪಕ್ರಮವನ್ನು ಪರಿಚಯಿಸಿದೆ.
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 'ಸೈಬರ್ ಸುರಕ್ಷಿತ ಭಾರತ'ದ ದೃಷ್ಟಿಕೋನವನ್ನು ಸಾಧಿಸಲು ಇದು ಮಹತ್ವದ ಹೆಜ್ಜೆಯಾಗಿದೆ.
- ದೆಹಲಿಗಾಗಿ ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಲಾದ ಈ ಹೊಸ ವ್ಯವಸ್ಥೆಯು ಎನ್‌ಸಿಆರ್‌ಪಿ ಅಥವಾ 1930 ರಲ್ಲಿ ದಾಖಲಾಗುವ ಸೈಬರ್ ಆರ್ಥಿಕ ಅಪರಾಧಗಳನ್ನು ಸ್ವಯಂಚಾಲಿತವಾಗಿ ಎಫ್ ಐಆರ್ ಗಳಾಗಿ ಪರಿವರ್ತಿಸುತ್ತದೆ, ಆರಂಭದಲ್ಲಿ ₹10 ಲಕ್ಷ ಮಿತಿಗಿಂತ ಹೆಚ್ಚಿನದಾಗಿರುತ್ತದೆ.
(19ನೇ ಮೇ, 2025 - https://www.pib.gov.in/PressReleasePage.aspx?PRID=2129715®=3&lang=2)
- ಕೇಂದ್ರ ಗೃ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿಎನ್ ಎಫ್ ಎಸ್ ಯು ಆಯೋಜಿಸಿದ್ದ ಅಖಿಲ ಭಾರತ ವಿಧಿವಿಜ್ಞಾನ ವಿಜ್ಞಾನ ಶೃಂಗಸಭೆ 2025 ಅನ್ನು ಉದ್ದೇಶಿಸಿ ಮಾತನಾಡಿದರು.
- ಪ್ರಧಾನಮಂತ್ರಿ ಮೋದಿಯವರ ದೃಷ್ಟಿಕೋನವು ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಸಂಪೂರ್ಣ ಸನ್ನಿವೇಶವನ್ನು ಬದಲಾಯಿಸಿತು.
- ಗಡಿರಹಿತ ಅಪರಾಧಗಳನ್ನು ತಡೆಯಲು ವಿಧಿವಿಜ್ಞಾನದ ಬಳಕೆ ಅತ್ಯಗತ್ಯ: ಗೃಹ ಸಚಿವರು.
- ಆರೋಪಿ ಮತ್ತು ದೂರುದಾರರಿಬ್ಬರಿಗೂ ಯಾವುದೇ ಅನ್ಯಾಯವಾಗದಂತೆ ವಿಧಿ ವಿಜ್ಞಾನವನ್ನು ಅಪರಾಧ ನ್ಯಾಯ ವ್ಯವಸ್ಥೆಯ ಭಾಗವಾಗಿಸುವುದು ಮುಖ್ಯವಾಗಿದೆ.
(14ನೇ ಏಪ್ರಿಲ್ 2025- https://www.pib.gov.in/PressReleasePage.aspx?PRID=2121618®=3&lang=1)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಛತ್ತೀಸ್‌ಗಢದ ರಾಯ್‌ಪುರದಲ್ಲಿ ಎನ್ ಎಫ್ ಎಸ್ ಯು ಮತ್ತು ಸಿ ಎಫ್ ಎಸ್ ಎಲ್ ಕ್ಯಾಂಪಸ್‌ಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಎನ್ ಎಫ್ ಎಸ್ ಯು ರಾಯಪುರದ ತಾತ್ಕಾಲಿಕ ಕ್ಯಾಂಪಸ್ ಅನ್ನು ವಾಸ್ತವೋಪಮವಾಗಿ ಉದ್ಘಾಟಿಸಿದರು.
- ನ್ಯೂ ರಾಯ್‌ಪುರದಲ್ಲಿ ಎನ್ ಎಫ್ ಎಸ್ ಯು ಮತ್ತು ಸಿ ಎಫ್ ಎಸ್ ಎಲ್ ಸ್ಥಾಪನೆಯು ಛತ್ತೀಸ್‌ಗಢದಲ್ಲಿ ಮಾತ್ರವಲ್ಲದೆ ಇಡೀ ಮಧ್ಯ ಭಾರತದಾದ್ಯಂತ ಅಪರಾಧ ನ್ಯಾಯ ವ್ಯವಸ್ಥೆಯನ್ನು ಬಲಪಡಿಸುತ್ತದೆ.
- ವಿಧಿ ವಿಜ್ಞಾನದ ಸಹಾಯದಿಂದ, ಶಿಕ್ಷೆಯ ಪ್ರಮಾಣದ ವಿಷಯದಲ್ಲಿ ಭಾರತವು ಶೀಘ್ರದಲ್ಲೇ ವಿಶ್ವದ ಪ್ರಮುಖ ದೇಶಗಳಲ್ಲಿ ಸ್ಥಾನ ಪಡೆಯಲಿದೆ.
(ಜೂನ್ 22, 2025 - https://www.pib.gov.in/PressReleasePage.aspx?PRID=2138746®=3&lang=1)
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತ ಸರ್ಕಾರವು ಸ್ಪಷ್ಟ ದೃಷ್ಟಿಕೋನದೊಂದಿಗೆ ಸುರಕ್ಷಿತ, ಪಾರದರ್ಶಕ ಮತ್ತು ಸಾಕ್ಷ್ಯಾಧಾರಿತ ಅಪರಾಧ ನ್ಯಾಯ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ.
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಕೋಲ್ಕತ್ತಾದ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ (ಸಿ ಎಫ್ ಎಸ್ ಎಲ್) ಹೊಸ ಕಟ್ಟಡವನ್ನು ಉದ್ಘಾಟಿಸಿದರು.
- ವಿಧಿವಿಜ್ಞಾನ ಪ್ರಯೋಗಾಲಯದ ಮೂಲಕ ಕೋಲ್ಕತ್ತಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಒಡಿಶಾ, ಅಸ್ಸಾಂ, ಸಿಕ್ಕಿಂ ಮತ್ತು ಇಡೀ ಈಶಾನ್ಯ ಪ್ರದೇಶಗಳು ಸಾಕ್ಷ್ಯಾಧಾರಿತ ಅಪರಾಧ ನ್ಯಾಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಪಡೆಯುತ್ತವೆ.
(1 ಜೂನ್ 2025 - https://www.pib.gov.in/PressReleasePage.aspx?PRID=2133128®=3&lang=1)
ಹೊಸ ಕ್ರಿಮಿನಲ್ ಕಾನೂನುಗಳು: ಸಂತ್ರಸ್ತರ ಕೇಂದ್ರಿತ ನ್ಯಾಯದ ಹೊಸ ಯುಗದ ಆರಂಭ
- ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬಂದು ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಂಡಿದ್ದನ್ನು ಗುರುತಿಸಲು ನವದೆಹಲಿಯಲ್ಲಿ ನಡೆದ "ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆಯ ಸುವರ್ಣ ವರ್ಷ" ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಮಾತನಾಡಿದರು.
- ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಪರಿಚಯಿಸಲಾದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ನ್ಯಾಯಾಂಗ ಪ್ರಕ್ರಿಯೆಯನ್ನು ಕೈಗೆಟುಕುವ, ಸುಲಭಲಭ್ಯದ ಮತ್ತು ಸುಲಭವಾಗಿ ತಲುಪಬಹುದಾದಂತೆ ಮಾತ್ರವಲ್ಲದೆ ಸರಳ, ಸ್ಥಿರ ಮತ್ತು ಪಾರದರ್ಶಕವಾಗಿಸುತ್ತದೆ.
- ಜನರ ಹಕ್ಕುಗಳನ್ನು ರಕ್ಷಿಸುವ ನ್ಯಾಯ ವ್ಯವಸ್ಥೆಯನ್ನು ಪಾರದರ್ಶಕ, ನಾಗರಿಕ ಕೇಂದ್ರಿತ ಮತ್ತು ಸಮಯಕ್ಕೆ ಅನುಗುಣವಾಗಿ ಮಾಡುವುದಕ್ಕಿಂತ ದೊಡ್ಡ ಸುಧಾರಣೆ ಇನ್ನೊಂದಿಲ್ಲ.
- ಹೊಸ ಕಾನೂನುಗಳು 'ನಾನು ಎಫ್‌ಐಆರ್ ದಾಖಲಿಸಿದರೆ ಏನಾಗುತ್ತದೆ' ಎಂಬ ಮನಸ್ಥಿತಿಯನ್ನು 'ಎಫ್‌ಐಆರ್ ದಾಖಲಿಸುವುದರಿಂದ ತ್ವರಿತ ನ್ಯಾಯ ದೊರೆಯುತ್ತದೆ' ಎನ್ನುವ ಬಲವಾದ ನಂಬಿಕೆಗೆ ಬದಲಾಯಿಸುತ್ತವೆ.
- ಸಕಾಲಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು, ನಾವು ಪೊಲೀಸ್, ಪ್ರಾಸಿಕ್ಯೂಷನ್ ಮತ್ತು ನ್ಯಾಯಾಂಗವನ್ನು ಕಟ್ಟುನಿಟ್ಟಾದ ಸಮಯ ಮಿತಿಗೆ ಬದ್ಧಗೊಳಿಸಿದ್ದೇವೆ.
(1 ಜುಲೈ 2025 - https://www.pib.gov.in/PressReleasePage.aspx?PRID=2141356®=3&lang=1)
- ಹೊಸ ಕ್ರಿಮಿನಲ್ ಕಾನೂನುಗಳ ಪರಿಣಾಮಕಾರಿ ತಳಮಟ್ಟದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳೊಂದಿಗೆ ವ್ಯಾಪಕ ಪರಿಶೀಲನಾ ಸಭೆಗಳನ್ನು ನಡೆಸಿದರು.
ಗುಜರಾತ್ – 30ನೇ ಜನವರಿ 2025 https://www.pib.gov.in/PressReleasePage.aspx?PRID=2097618®=3&lang=1
ಮಧ್ಯಪ್ರದೇಶ – 17ನೇ ಜನವರಿ 2025 https://www.pib.gov.in/PressReleasePage.aspx?PRID=2093833®=3&lang=1
ಉತ್ತರ ಪ್ರದೇಶ – 7ನೇ ಜನವರಿ 2025 https://www.pib.gov.in/PressReleasePage.aspx?PRID=2091007®=3&lang=1
ಜಮ್ಮು ಮತ್ತು ಕಾಶ್ಮೀರ – 18ನೇ ಫೆಬ್ರವರಿ 2025 https://www.pib.gov.in/PressReleasePage.aspx?PRID=2104424®=3&lang=1
ಮಹಾರಾಷ್ಟ್ರ – 14ನೇ ಫೆಬ್ರವರಿ 2025 https://www.pib.gov.in/PressReleasePage.aspx?PRID=2103244®=3&lang=1
ಈಶಾನ್ಯ ರಾಜ್ಯಗಳು – ಮಾರ್ಚ್ 16 https://www.pib.gov.in/PressReleasePage.aspx?PRID=2111668®=3&lang=1
ಗೋವಾ – ಮಾರ್ಚ್ 3, 2025 https://www.pib.gov.in/PressReleasePage.aspx?PRID=2107850®=3&lang=1
ಛತ್ತೀಸ್‌ಗಢ 21 ಏಪ್ರಿಲ್ 2025 https://www.pib.gov.in/PressReleasePage.aspx?PRID=2123280®=3&lang=1
ಆಂಧ್ರಪ್ರದೇಶ – ಮೇ 23, 2025 https://www.pib.gov.in/PressReleasePage.aspx?PRID=2130820®=3&lang=1
ಪುದುಚೇರಿ 13ನೇ ಮೇ 2025 https://www.pib.gov.in/PressReleasePage.aspx?PRID=2128449®=3&lang=1
ನವದೆಹಲಿ – 5ನೇ ಮೇ 2025 https://www.pib.gov.in/PressReleasePage.aspx?PRID=2127124®=3&lang=1
ಮಾದಕ ವಸ್ತುಗಳ ವಿರುದ್ಧ ಹೋರಾಡುವುದು: ಮಾದಕ ವಸ್ತುಗಳ ಭಯೋತ್ಪಾದನಾ ಪರಿಸರ ವ್ಯವಸ್ಥೆಗಳನ್ನು ನಾಶಮಾಡಲು ಸರ್ಕಾರದ ಸಂಪೂರ್ಣ ವಿಧಾನ
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ 'ಮಾದಕ ವಸ್ತುಗಳ ಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ' ಕುರಿತು ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ
- ಎಲ್ಲಾ ರಾಜ್ಯಗಳು ಕಠಿಣ ವಿಧಾನದೊಂದಿಗೆ ಅಕ್ರಮ ರಹಸ್ಯ ಪ್ರಯೋಗಾಲಯಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ನಾವು ಮಾದಕ ವಸ್ತುಗಳ ಭಯೋತ್ಪಾದನೆಯ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಾಶಮಾಡಲು ದೃಢನಿಶ್ಚಯ ಹೊಂದಿದ್ದೇವೆ.
- ಮಾದಕ ದ್ರವ್ಯ-ಭಯೋತ್ಪಾದನಾ ಪರಿಸರ ವ್ಯವಸ್ಥೆಗಳು ಮತ್ತು ಮಾದಕವಸ್ತು ವ್ಯಾಪಾರಗಳನ್ನು ನಾಶಮಾಡಲು ಕಠಿಣ ಮತ್ತು ಸಂಪೂರ್ಣ ಸರ್ಕಾರದ ವಿಧಾನ ಅನುಸರಣೆ.
- ಮೋದಿ ಸರ್ಕಾರವು ಮಾದಕ ದ್ರವ್ಯ ಪೂರೈಕೆ ಸರಪಳಿಯ ವಿರುದ್ಧ ಕಠಿಣ ವಿಧಾನ, ಬೇಡಿಕೆ ಕಡಿತದಲ್ಲಿ ಕಾರ್ಯತಂತ್ರದ ವಿಧಾನ ಮತ್ತು ಸಂತ್ರಸ್ತರ ಬಗ್ಗೆ ಮಾನವೀಯ ವಿಧಾನದೊಂದಿಗೆ ಮುಂದುವರೆದಿದೆ.
(11ನೇ ಜನವರಿ 2025 https://www.pib.gov.in/PressReleasePage.aspx?PRID=2092097®=3&lang=1)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ಎ.ಎನ್.ಟಿ.ಎಫ್.) ಮುಖ್ಯಸ್ಥರ ಎರಡನೇ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದರು.
- ಮೋದಿ ಸರ್ಕಾರವು ಸಣ್ಣ ಮಾದಕ ದ್ರವ್ಯ ವ್ಯಾಪಾರಿಗಳ ವಿರುದ್ಧ ಮಾತ್ರವಲ್ಲದೆ ದೊಡ್ಡ ಮಾದಕ ದ್ರವ್ಯ ಮಾರಾಟಗಾರರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತಿದೆ.
- ಪ್ರವೇಶ ದ್ವಾರಗಳು, ವಿತರಣಾ ಜಾಲಗಳು ಮತ್ತು ದೇಶದಲ್ಲಿ ಸ್ಥಳೀಯವಾಗಿ ಮಾದಕವಸ್ತು ಮಾರಾಟ ಮಾಡುವ ಪ್ರಮುಖರ ಮೇಲೆ ತೀವ್ರ ಪ್ರಹಾರಗಳನ್ನು ಮಾಡಲಾಗುತ್ತಿದೆ. ವಿದೇಶದಿಂದ ಬಂದವರು ಮಾದಕವಸ್ತು ವ್ಯಾಪಾರ ಮಾಡಿದರೆ ಅವರನ್ನು ಹಸ್ತಾಂತರ ಮತ್ತು ಗಡೀಪಾರು ವ್ಯವಸ್ಥೆಗಳ ಮೂಲಕ ಕಾನೂನಿನ ಮೂಲಕ ಶಿಕ್ಷಿಸಲಾಗುತ್ತದೆ.
- ಕೇಂದ್ರ ಗೃಹ ಸಚಿವರು ಎನ್‌ಸಿಬಿಯ ಮಾದಕವಸ್ತು ನಾಶಮಾಡುವ ಅಭಿಯಾನವನ್ನು ಪ್ರಾರಂಭಿಸಿದರು ಮತ್ತು 11 ಸ್ಥಳಗಳಲ್ಲಿ ₹4,800 ಕೋಟಿ ಮೌಲ್ಯದ 1.37 ಲಕ್ಷ ಕಿಲೋಗ್ರಾಂಗಳಷ್ಟು ಮಾದಕವಸ್ತುಗಳನ್ನು ನಾಶಪಡಿಸಲಾಯಿತು.
(16ನೇ ಸೆಪ್ಟೆಂಬರ್ 2025 https://www.pib.gov.in/PressReleasePage.aspx?PRID=2167289®=3&lang=2)
- ಮಾದಕವಸ್ತು ಮುಕ್ತ ಭಾರತವನ್ನು ನಿರ್ಮಿಸುವ ನಿರಂತರ ಪ್ರಯತ್ನದಲ್ಲಿ, ಅಂತರರಾಷ್ಟ್ರೀಯ ಕಡಲ ಗಡಿಯ ಬಳಿ ₹1800 ಕೋಟಿ ಮೌಲ್ಯದ 300 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವ ಮೂಲಕ ಒಂದು ಮಹತ್ವದ ಸಾಧನೆ ಮಾಡಲಾಯಿತು.
(14ನೇ ಏಪ್ರಿಲ್ 2025 - https://www.pib.gov.in/PressReleasePage.aspx?PRID=2121541®=3&lang=1)
- ಎನ್ ಸಿ ಬಿಯ ಅಮೃತಸರ ವಲಯ ಘಟಕವು 4 ರಾಜ್ಯಗಳಲ್ಲಿ 4 ತಿಂಗಳ ಕಾಲ ನಡೆಸಿದ ಕಾರ್ಯಾಚರಣೆಯ ಮೂಲಕ ಮಾದಕ ವಸ್ತು ಸಾಗಣೆ ಕಾರ್ಟೆಲ್ ಅನ್ನು ಕಡಿತಗೊಳಿಸಿತು, ₹547 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿತು ಮತ್ತು 15 ಜನರನ್ನು ಬಂಧಿಸಿತು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಡಿಯಲ್ಲಿ ಮಾದಕ ವಸ್ತು ಮುಕ್ತ ಭಾರತವನ್ನು ನಿರ್ಮಿಸುವತ್ತ ಇದು ಒಂದು ಮಹತ್ವದ ಹೆಜ್ಜೆಯಾಗಿದೆ, ಎನ್ ಸಿ ಬಿ ತಂಡಕ್ಕೆ ಅಭಿನಂದನೆಗಳು.
(2ನೇ ಮೇ 2025 - https://www.pib.gov.in/PressReleasePage.aspx?PRID=2126353®=3&lang=1)
- ಎನ್ ಸಿ ಬಿ ಮುಂಬೈ 11.54 ಕೆಜಿ ಉತ್ತಮ ಗುಣಮಟ್ಟದ ಕೊಕೇನ್ ಮತ್ತು 4.9 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡಿದೆ.
(7ನೇ ಫೆಬ್ರವರಿ 2025 - https://www.pib.gov.in/PressReleasePage.aspx?PRID=2100736®=3&lang=2)
- ಜಾಗತಿಕ ಮಾದಕ ದ್ರವ್ಯ ಜಾಲವನ್ನು ಭೇದಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಎನ್ ಸಿ ಬಿ ಮತ್ತು ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳನ್ನು ಅಭಿನಂದಿಸಿದರು. ಈ ತನಿಖೆಯು ಬಹು-ಸಂಸ್ಥೆಗಳ ಸಮನ್ವಯಕ್ಕೆ ಒಂದು ಅದ್ಭುತ ಉದಾಹರಣೆಯಾಗಿದೆ, ಇದು 8 ಬಂಧನಗಳು ಮತ್ತು 5 ಸರಕುಗಳ ವಶಪಡಿಸಿಕೊಳ್ಳುವಿಕೆಗೆ ಕಾರಣವಾಯಿತು ಮತ್ತು 4 ಖಂಡಗಳು ಮತ್ತು 10+ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುವ ಈ ಜಾಲದ ವಿರುದ್ಧ ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಯಿತು.
(2ನೇ ಜುಲೈ 2025 - https://www.pib.gov.in/PressReleasePage.aspx?PRID=2141583®=3&lang=1)
- ಮಾದಕ ದ್ರವ್ಯಗಳ ತನಿಖೆಗೆ ಮೇಲಿನಿಂದ ಕೆಳಗಿನವರೆಗೆ ಮತ್ತು ಕೆಳಗಿನಿಂದ ಮೇಲಿನ ವಿಧಾನವನ್ನು ತೀವ್ರವಾಗಿ ಅನುಸರಿಸಿ, ನವದೆಹಲಿಯಲ್ಲಿ ₹262 ಕೋಟಿ ಮೌಲ್ಯದ 328 ಕೆಜಿ ಮೆಥಾಂಫೆಟಮೈನ್ ಅನ್ನು ವಶಪಡಿಸಿಕೊಳ್ಳುವ ಮೂಲಕ ಮತ್ತು ಇಬ್ಬರನ್ನು ಬಂಧಿಸುವ ಮೂಲಕ ಪ್ರಗತಿ ಸಾಧಿಸಲಾಯಿತು.
- ದೆಹಲಿಯಲ್ಲಿ ಮೆಥಾಂಫೆಟಮೈನ್‌ನ ಅತಿದೊಡ್ಡ ಸೆರೆಹಿಡಿಯುವಿಕೆಗಳಲ್ಲಿ ಇದು ಒಂದು.
- “ಕ್ರಿಸ್ಟಲ್ ಫೋರ್ಟ್ರೆಸ್” ಕಾರ್ಯಾಚರಣೆಯು ಸಂಶ್ಲೇಷಿತ ಮಾದಕವಸ್ತು ದಂಧೆ ಮಾಡುವವರು ಮತ್ತು ಅವುಗಳ ಅಂತರರಾಷ್ಟ್ರೀಯ ಜಾಲಗಳನ್ನು ನಿರ್ಮೂಲನೆ ಮಾಡುವಲ್ಲಿ ಎನ್‌ಸಿಬಿಯ ಅಚಲ ಗಮನವನ್ನು ಒತ್ತಿಹೇಳುತ್ತದೆ.
(23 ನವೆಂಬರ್ 2025 - https://www.pib.gov.in/PressReleasePage.aspx?PRID=2193199®=3&lang=1)
- ಹಣದ ದುರಾಸೆಗಾಗಿ ಯುವಕರನ್ನು ವ್ಯಸನದ ಕತ್ತಲೆಗೆ ದೂಡುವ ಮಾದಕವಸ್ತು ಕಳ್ಳಸಾಗಣೆದಾರರ ಬಗ್ಗೆ ಮೋದಿ ಆಡಳಿತವು ಶೂನ್ಯ-ಸಹಿಷ್ಣುತಾ ನೀತಿಯನ್ನು ಕಾಯ್ದುಕೊಂಡಿದೆ. ಸಮಗ್ರ 'ಮೇಲಿನಿಂದ ಕೆಳಕ್ಕೆ' ತನಿಖಾ ಕಾರ್ಯತಂತ್ರವನ್ನು ಬಳಸುವ ಮೂಲಕ, ಅಧಿಕಾರಿಗಳು ದೇಶಾದ್ಯಂತ 12 ಪ್ರತ್ಯೇಕ ಪ್ರಕರಣಗಳಲ್ಲಿ 29 ಕಳ್ಳಸಾಗಣೆದಾರರಿಗೆ ನ್ಯಾಯಾಲಯವು ದೋಷಿಗಳೆಂದು ಘೋಷಿಸಿದೆ.
(ಮಾರ್ಚ್ 2, 2025 https://www.pib.gov.in/PressReleasePage.aspx?PRID=2107483®=3&lang=1)
ಗಡಿ ನಿರ್ವಹಣೆ ಮತ್ತು ವಿದೇಶಿಯರು: ಭದ್ರತೆ ಮತ್ತು ಅಭಿವೃದ್ಧಿಯನ್ನು ಬಲಪಡಿಸುವುದು
- ಲೋಕಸಭೆಯಲ್ಲಿ ವಲಸೆ ಮತ್ತು ವಿದೇಶಿಯರ ಮಸೂದೆ, 2025 ರ ಮೇಲಿನ ಚರ್ಚೆಗೆ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಉತ್ತರಿಸಿದರು.
- ಮೋದಿ ಸರ್ಕಾರವು ವಲಸೆ ನೀತಿಯನ್ನು ಸಹಾನುಭೂತಿ, ಸೂಕ್ಷ್ಮತೆ ಮತ್ತು ರಾಷ್ಟ್ರಕ್ಕೆ ಇರುವ ಬೆದರಿಕೆಗಳ ಅರಿವಿನೊಂದಿಗೆ ರೂಪಿಸಿದೆ.
- ರಾಷ್ಟ್ರೀಯ ಭದ್ರತೆಗೆ ದೇಶವನ್ನು ಯಾರು ಪ್ರವೇಶಿಸುತ್ತಾರೆ, ಯಾವಾಗ, ಎಷ್ಟು ಕಾಲ ಮತ್ತು ಯಾವ ಉದ್ದೇಶಕ್ಕಾಗಿ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
- ಭಾರತವು ಧರ್ಮಛತ್ರವಲ್ಲ, ಅಲ್ಲಿ ಯಾರಾದರೂ ಯಾವುದೇ ಕಾರಣಕ್ಕಾಗಿ ಬಂದು ನೆಲೆಸಬಹುದು, ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕುವವರನ್ನು ತಡೆಯುವ ಅಧಿಕಾರ ಸಂಸತ್ತಿಗೆ ಇದೆ.
- ಈಗ, ಭಾರತಕ್ಕೆ ಬರುವ ಪ್ರತಿಯೊಬ್ಬ ವಿದೇಶಿ ಪ್ರಜೆಯ ಸಂಪೂರ್ಣ, ವ್ಯವಸ್ಥಿತ, ಸಂಯೋಜಿತ ಮತ್ತು ನವೀಕೃತ ದಾಖಲೆ ಇರುತ್ತದೆ.
- ಹೊಸ ವಲಸೆ ಕಾನೂನು ಪಾರದರ್ಶಕ, ತಂತ್ರಜ್ಞಾನ ಆಧಾರಿತ, ಸಮಯಕ್ಕೆ ಅನುಗುಣವಾಗಿ ಮತ್ತು ವಿಶ್ವಾಸಾರ್ಹವಾಗಿರುತ್ತದೆ.
(ಮಾರ್ಚ್ 27, 2025 https://www.pib.gov.in/PressReleasePage.aspx?PRID=2115972®=3&lang=2)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಹೊಸ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ ) ಪೋರ್ಟಲ್ ಗೆ ಚಾಲನೆ ನೀಡಿದರು.
- ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು ತನ್ನ ಒಸಿಐI ಕಾರ್ಡ್ ಹೊಂದಿರುವ ನಾಗರಿಕರಿಗೆ ವಿಶ್ವ ದರ್ಜೆಯ ವಲಸೆ ಸೌಲಭ್ಯಗಳನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ.
- ಹೊಸ ಪೋರ್ಟಲ್ 5 ದಶಲಕ್ಷಕ್ಕಿಂತಲೂ ಹೆಚ್ಚು ಒಸಿಐ ಕಾರ್ಡ್ ಹೊಂದಿರುವವರು ಮತ್ತು ಹೊಸ ಬಳಕೆದಾರರಿಗೆ ಹೆಚ್ಚಿನ ಕಾರ್ಯಕ್ಷಮತೆ, ಸುಧಾರಿತ ಭದ್ರತೆ ಮತ್ತು ಬಳಕೆದಾರ ಸ್ನೇಹಿ ಅನುಭವವನ್ನು ಒದಗಿಸುತ್ತದೆ.
(ಮೇ 19, 2025 https://www.pib.gov.in/PressReleasePage.aspx?PRID=2129691®=3&lang=2)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಲಕ್ನೋ, ತಿರುವನಂತಪುರಂ, ತಿರುಚ್ಚಿ, ಕೋಯಿಕ್ಕೋಡ್ ಮತ್ತು ಅಮೃತಸರ ವಿಮಾನ ನಿಲ್ದಾಣಗಳಲ್ಲಿ ಫಾಸ್ಟ್ ಟ್ರ್ಯಾಕ್ ವಲಸೆ - ವಿಶ್ವಾಸಾರ್ಹ ಪ್ರಯಾಣಿಕರ ಕಾರ್ಯಕ್ರಮ (ಎಫ್ ಟಿ ಐ-ಟಿಟಿಪಿ) ಅನ್ನು ವಾಸ್ತವೋಪಮವಾಗಿ (ವರ್ಚುವಲ್) ಉದ್ಘಾಟಿಸಿದರು.
(11ನೇ ಸೆಪ್ಟೆಂಬರ್ 2025 https://www.pib.gov.in/PressReleasePage.aspx?PRID=2165617®=3&lang=1 )
- ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಪಾಕಿಸ್ತಾನ ಮತ್ತು ನೇಪಾಳಕ್ಕೆ ಹೊಂದಿಕೊಂಡಿರುವ ಗಡಿ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳೊಂದಿಗೆ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
- ಆಪರೇಷನ್ ಸಿಂದೂರ್, ತನ್ನ ಗಡಿಗಳು, ಸೈನ್ಯ ಮತ್ತು ನಾಗರಿಕರಿಗೆ ಸವಾಲು ಹಾಕಲು ಧೈರ್ಯ ಮಾಡುವವರಿಗೆ ಭಾರತದ ಸೂಕ್ತ ಉತ್ತರ.
- ಈ ಸಮಯದಲ್ಲಿ ರಾಷ್ಟ್ರವು ಪ್ರದರ್ಶಿಸಿದ ಏಕತೆ ಭಾರತೀಯರ ನೈತಿಕತೆಯನ್ನು ಹೆಚ್ಚಿಸಿದೆ.
(7ನೇ ಮೇ 2025 https://www.pib.gov.in/PressReleasePage.aspx?PRID=2127583&rಉದಾ=3&lang=2)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, 76 ನೇ ಗಣರಾಜ್ಯೋತ್ಸವ ಆಚರಣೆಗಾಗಿ ರಾಜಧಾನಿಗೆ ಭೇಟಿ ನೀಡಿದಾಗ ನವದೆಹಲಿಯಲ್ಲಿ 'ವೈಬ್ರಂಟ್ ವಿಲೇಜ್ ಪ್ರೋಗ್ರಾಂ' (ವಿ ವಿ ಪಿ) ಅಡಿಯಲ್ಲಿ ಹಳ್ಳಿಗಳ ಗಣ್ಯ ಅತಿಥಿಗಳೊಂದಿಗೆ ಸಂವಾದ ನಡೆಸಿದರು.
- ʻವೈಬ್ರಂಟ್ ವಿಲೇಜ್ ಪ್ರೋಗ್ರಾಂʼ ಭೌತಿಕ ಮತ್ತು ಡಿಜಿಟಲ್ ಸಂಪರ್ಕವನ್ನು ಮಾತ್ರವಲ್ಲದೆ ಭಾವನಾತ್ಮಕ ಸಂಪರ್ಕವನ್ನೂ ಹೆಚ್ಚಿಸುತ್ತಿದೆ.
- ವಿವಿಪಿ ಗಡಿ ಹಳ್ಳಿಗಳ ಮೂಲಸೌಕರ್ಯ, ಸಂಸ್ಕೃತಿ, ಪ್ರವಾಸೋದ್ಯಮ, ಜೀವನಶೈಲಿ ಮತ್ತು ಆರ್ಥಿಕ ಅಭಿವೃದ್ಧಿಯು ದೇಶದ ಉಳಿದ ಭಾಗಗಳಂತೆಯೇ ಚೈತನ್ಯದಾಯಕವಾಗುವುದನ್ನು ಖಚಿತಪಡಿಸುತ್ತದೆ.
(25 ಜನವರಿ 2025 https://www.pib.gov.in/PressReleasePage.aspx?PRID=2096173®=3&lang=1)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಎರಡು ದಿನಗಳ ವೈಬ್ರಂಟ್ ವಿಲೇಜ್ ಪ್ರೋಗ್ರಾಂ (ವಿವಿಪಿ) ಕಾರ್ಯಾಗಾರವನ್ನು ಮುಖ್ಯ ಅತಿಥಿಯಾಗಿ ಉದ್ದೇಶಿಸಿ ಮಾತನಾಡಿದರು.
- ಜನಸಂಖ್ಯೆಯಲ್ಲಿನ ಬದಲಾವಣೆ ನಮ್ಮ ಕಾಳಜಿ ಎಂದು ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ, ಗಡಿ ಹಳ್ಳಿಗಳ ಜಿಲ್ಲಾಧಿಕಾರಿಗಳು ಸಹ ಇದನ್ನು ತಮ್ಮ ಜವಾಬ್ದಾರಿಯೆಂದು ಪರಿಗಣಿಸಬೇಕು.
- ಗಡಿ ಗ್ರಾಮಗಳಲ್ಲಿ ಮೂಲಸೌಕರ್ಯ, ಸಂರಕ್ಷಣೆ ಮತ್ತು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಪ್ರಚಾರವನ್ನು ಉತ್ತೇಜಿಸುವ ಮೂಲಕ ವಿವಿಪಿ ಉದ್ಯೋಗವನ್ನು ಹೆಚ್ಚಿಸುತ್ತಿದೆ
(26ನೇ ಆಗಸ್ಟ್ 2025 https://www.pib.gov.in/PressReleasePage.aspx?PRID=2160827®=3&lang=1)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕೇಂದ್ರ ಸಚಿವ ಸಂಪುಟದ ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ -2 ಅನ್ನು ಅನುಮೋದಿಸುವ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
- ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ ನಮ್ಮ ಗಡಿ ಗ್ರಾಮಗಳನ್ನು ಬೆಳವಣಿಗೆ ಮತ್ತು ಅಭಿವೃದ್ಧಿಯ ನರ ಕೇಂದ್ರಗಳಾಗಿ ಪರಿವರ್ತಿಸಲು ಒಂದು ಪ್ರಮುಖ ಮಾಧ್ಯಮವಾಗಿದೆ.
- ಈ ದೃಷ್ಟಿಕೋನವನ್ನು ಮತ್ತಷ್ಟು ಮುಂದುವರಿಸುತ್ತಾ, ಮೋದಿ ಸರ್ಕಾರವು ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ -2 ಅನ್ನು ಒಟ್ಟು ₹6,839 ಕೋಟಿ ವೆಚ್ಚದಲ್ಲಿ ಅನುಮೋದಿಸಿದೆ.
(4 ಏಪ್ರಿಲ್ 2025 https://www.pib.gov.in/PressReleasePage.aspx?PRID=2118980®=3&lang=2)
ವಿಪತ್ತು ನಿರ್ವಹಣೆ: ಪೂರ್ವಭಾವಿ ಚೇತರಿಕೆಯನ್ನು ನಿರ್ಮಿಸುವುದು
- ಮೋದಿ ಸರ್ಕಾರವು ಪ್ರತಿಕ್ರಿಯಾತ್ಮಕ ವಿಧಾನದ ಬದಲು ಪೂರ್ವಭಾವಿ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಸಾವುನೋವುಗಳನ್ನು ಕಡಿಮೆ ಮಾಡುವ ಬದಲು ಶೂನ್ಯ ಸಾವುನೋವುಗಳನ್ನು ಗುರಿಯಾಗಿಟ್ಟುಕೊಂಡು ವಿಪತ್ತುಗಳನ್ನು ನಿರ್ವಹಿಸುತ್ತಿದೆ.
- ರಾಜ್ಯಸಭೆಯಲ್ಲಿ ವಿಪತ್ತು ನಿರ್ವಹಣೆ (ತಿದ್ದುಪಡಿ) ಮಸೂದೆ, 2024 ರ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ವಿಪತ್ತು ನಿರ್ವಹಣೆಯಲ್ಲಿ ಜಾಗತಿಕ ನಾಯಕನಾಗಿದೆ ಎಂದು ಹೇಳಿದರು.
- ಮಸೂದೆಯು ವಿಪತ್ತು ಪ್ರತಿಕ್ರಿಯೆಯಲ್ಲಿ ಸಾಮರ್ಥ್ಯ, ತೀವ್ರತೆ, ದಕ್ಷತೆ ಮತ್ತು ನಿಖರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
- ಮೋದಿ ಅವರ ನಾಯಕತ್ವದಲ್ಲಿ, ಭಾರತವು ವಿಪತ್ತು ನಿರ್ವಹಣೆಯಲ್ಲಿ ಜಾಗತಿಕ ನಾಯಕನಾಯಿತು.
(ಮಾರ್ಚ್ 25, 2025 https://www.pib.gov.in/PressReleasePage.aspx?PRID=2115092®=3&lang=2)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ 'ವಿಪತ್ತು ನಿರ್ವಹಣೆ ಮತ್ತು ಸಾಮರ್ಥ್ಯ ವೃದ್ಧಿ' ಕುರಿತು ಗೃಹ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.
- ಮೋದಿ ಸರ್ಕಾರದ ವಿಪತ್ತು ಪ್ರತಿಕ್ರಿಯೆ ನೀತಿಯು ಸಾಮರ್ಥ್ಯ ವೃದ್ಧಿ, ವೇಗ, ದಕ್ಷತೆ ಮತ್ತು ನಿಖರತೆ ಎಂಬ ನಾಲ್ಕು ಸ್ತಂಭಗಳನ್ನು ಆಧರಿಸಿದೆ.
(ಆಗಸ್ಟ್ 19, 2025 https://www.pib.gov.in/PressReleasePage.aspx?PRID=2158183®=3&lang=1)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪರಿಹಾರ ಆಯುಕ್ತರು ಮತ್ತು ವಿಪತ್ತು ಪ್ರತಿಕ್ರಿಯೆ ಪಡೆಗಳ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು..
- ಭಾರತದ ವಿಪತ್ತು ಪ್ರತಿಕ್ರಿಯೆಯ ಇತಿಹಾಸ ಬರೆಯಲ್ಪಟ್ಟಾಗಲೆಲ್ಲಾ, ಮೋದಿ ಸರ್ಕಾರದ ಈ 10 ವರ್ಷಗಳು ಪರಿವರ್ತನಾ ದಶಕವೆಂದು ದಾಖಲಾಗುತ್ತವೆ: ಕೇಂದ್ರ ಗೃಹ ಸಚಿವ.
- 'ಕನಿಷ್ಠ ಸಾವುನೋವು' ಗುರಿಯನ್ನು ಅನುಸರಿಸುವಲ್ಲಿ, ಮೋದಿ ಸರ್ಕಾರವು ತನ್ನ 10 ವರ್ಷಗಳಲ್ಲಿ 'ಶೂನ್ಯ ಸಾವುನೋವು' ಗುರಿಯನ್ನು ಸಾಧಿಸಿದೆ, ಇದು ಇಡೀ ಜಗತ್ತನ್ನು ಬೆರಗುಗೊಳಿಸಿದೆ.
(16 ಜೂನ್ 2025 https://www.pib.gov.in/PressReleasePage.aspx?PRID=2136650®=3&lang=2)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಜಮ್ಮು ವಿಭಾಗದ ಮಳೆ, ಪ್ರವಾಹ ಮತ್ತು ಭೂಕುಸಿತ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದರು, ನೈಸರ್ಗಿಕ ವಿಕೋಪದಿಂದ ಉಂಟಾದ ಹಾನಿಗಳನ್ನು ಪರಿಶೀಲಿಸಿದರು. ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ದೃಢವಾಗಿ ನಿಂತಿದೆ ಮತ್ತು ಸುರಕ್ಷತೆ, ಪುನರ್ವಸತಿ ಮತ್ತು ಪುನರ್ನಿರ್ಮಾಣವನ್ನು ಸುಗಮಗೊಳಿಸಲು ತಕ್ಷಣದ ಪರಿಹಾರ, ಆರ್ಥಿಕ ನೆರವು ಮತ್ತು ತಾಂತ್ರಿಕ ಬೆಂಬಲವನ್ನು ನೀಡುತ್ತಿದೆ.
(ಸೆಪ್ಟೆಂಬರ್ 1, 2025 https://www.pib.gov.in/PressReleasePage.aspx?PRID=2162745®=3&lang=1)
- ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಎನ್.ಡಿ.ಆರ್.ಎಫ್.ನ 20ನೇ ಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಭಾಗವಹಿಸಿದರು.
- ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಮೋದಿಅವರ ತೊಡಗು, ವಿಧಾನ ಮತ್ತು ಉದ್ದೇಶ ಎಂಬ ಮೂರು ಅಂಶಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು.
- ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ.
- ಮೋದಿ ಸರ್ಕಾರದ ಶೂನ್ಯ ಸಾವುನೋವು ಗುರಿಯನ್ನು ಸಾಧಿಸಲು ಎನ್ ಡಿ ಆರ್ ಎಫ್, ಎನ್ ಡಿ ಎಂ ಎ ಮತ್ತು ಎನ್ ಐ ಡಿ ಎಂ ಸಂಪೂರ್ಣ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ.
(ಜನವರಿ 19, 2025 https://www.pib.gov.in/PressReleasePage.aspx?PRID=2094319®=3&lang=2)
- ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ (ಎಚ್ ಎಲ್ ಸಿ), 9 ರಾಜ್ಯಗಳಿಗೆ ಒಟ್ಟು 4645.60 ಕೋಟಿ ರೂ. ವೆಚ್ಚದ ಹಲವಾರು ತಗ್ಗಿಸುವಿಕೆ, ಚೇತರಿಕೆ ಮತ್ತು ಪುನರ್ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಿದೆ.
- ಎಚ್ ಎಲ್ ಸಿ ಪುನಃಸ್ಥಾಪನೆ ಮತ್ತು ಪುನರ್ವಸತಿಗೆ ಅನುಮೋದನೆ ನೀಡಿದೆ. ಅಸ್ಸಾಂ ರಾಜ್ಯಕ್ಕೆ ರೂ.692.05 ಕೋಟಿಯ ಜೌಗು ಪ್ರದೇಶಗಳ ಯೋಜನೆ.
- ಭೋಪಾಲ್, ಭುವನೇಶ್ವರ, ಗುವಾಹಟಿ, ಜೈಪುರ, ಕಾನ್ಪುರ, ಪಾಟ್ನಾ, ರಾಯ್ಪುರ, ತಿರುವನಂತಪುರ, ವಿಶಾಖಪಟ್ಟಣಂ, ಇಂದೋರ್ ಮತ್ತು ಲಕ್ನೋ ಸೇರಿದಂತೆ 11 ನಗರಗಳಿಗೆ ನಗರ ಪ್ರವಾಹ ಅಪಾಯ ನಿರ್ವಹಣಾ ಕಾರ್ಯಕ್ರಮ (ಯುಎಫ್‌ಆರ್‌ಎಂಪಿ) ಹಂತ-2 ಅನ್ನು ಸಮಿತಿಯು ಅನುಮೋದಿಸಿದೆ, ಒಟ್ಟು ರೂ.2444.42 ಕೋಟಿ ಆರ್ಥಿಕ ವೆಚ್ಚದೊಂದಿಗೆ.
(1ನೇ ಅಕ್ಟೋಬರ್ 2025 https://www.pib.gov.in/PressReleasePage.aspx?PRID=2173811®=3&lang=2)
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತ ಸರ್ಕಾರವು ನೈಸರ್ಗಿಕ ವಿಕೋಪಗಳು/ವಿಪತ್ತುಗಳ ಸಮಯದಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಜೊತೆಯಾಗಿ ನಿಂತಿದೆ.
- 2025-26ನೇ ಆರ್ಥಿಕ ವರ್ಷದಲ್ಲಿ, ಕೇಂದ್ರ ಸರ್ಕಾರವು ಎಸ್ ಡಿ ಆರ್ ಎಫ್ ಅಡಿಯಲ್ಲಿ 27 ರಾಜ್ಯಗಳಿಗೆ ರೂ.15,554 ಕೋಟಿ ಮತ್ತು ಎನ್ ಡಿ ಆರ್ ಎಫ್ ಅಡಿಯಲ್ಲಿ 15 ರಾಜ್ಯಗಳಿಗೆ ರೂ.2,267.44 ಕೋಟಿ ಬಿಡುಗಡೆ ಮಾಡಿದೆ.
- ಈ ವರ್ಷದ ಮಳೆಗಾಲದಲ್ಲಿ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗರಿಷ್ಠ 199 ಎನ್ ಡಿ ಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿತ್ತು.
(28ನೇ ಅಕ್ಟೋಬರ್ 2025 https://www.pib.gov.in/PressReleasePage.aspx?PRID=2183346®=3&lang=2)
- ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯು ರೂ. 2023ರ ಪ್ರವಾಹ, ಭೂಕುಸಿತ, ಮೇಘಸ್ಫೋಟ ಘಟನೆಯ ನಂತರದ ಚೇತರಿಕೆ ಮತ್ತು ಪುನರ್ನಿರ್ಮಾಣ ಯೋಜನೆಗಾಗಿ ಹಿಮಾಚಲ ಪ್ರದೇಶಕ್ಕೆ 2006.40 ಕೋಟಿ ಕೇಂದ್ರ ನೆರವು.
(18 ಜೂನ್ 2025 https://www.pib.gov.in/PressReleasePage.aspx?PRID=2137081®=3&lang=1)
ಈಶಾನ್ಯ: ಸಮಗ್ರ ಬೆಳವಣಿಗೆಗಾಗಿ ʻಆಕ್ಟ್ ಈಸ್ಟ್ ಮೊಮೆಂಟಮ್ʼ
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಅಸ್ಸಾಂ ರೈಫಲ್ಸ್ ಆಯೋಜಿಸಿದ್ದ 'ಏಕತಾ ಉತ್ಸವ - ಒಂದು ಧ್ವನಿ, ಒಂದು ರಾಷ್ಟ್ರ' ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
- ಪ್ರವಾಸೋದ್ಯಮದಿಂದ ತಂತ್ರಜ್ಞಾನದವರೆಗೆ, ಕ್ರೀಡೆಯಿಂದ ಬಾಹ್ಯಾಕಾಶದವರೆಗೆ, ಕೃಷಿಯಿಂದ ಉದ್ಯಮಶೀಲತೆಯವರೆಗೆ ಮತ್ತು ಬ್ಯಾಂಕಿಂಗ್‌ನಿಂದ ವ್ಯವಹಾರದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮೋದಿ ಸರ್ಕಾರ ಈಶಾನ್ಯಕ್ಕೆ ಹಲವಾರು ಮಾರ್ಗಗಳನ್ನು ತೆರೆದಿದೆ.
- ಮೋದಿ ಸರ್ಕಾರದ ಅಡಿಯಲ್ಲಿ ಈಶಾನ್ಯದಲ್ಲಿ ಹಿಂಸಾತ್ಮಕ ಘಟನೆಗಳಲ್ಲಿ 70% ಮತ್ತು ನಾಗರಿಕ ಸಾವುನೋವುಗಳಲ್ಲಿ 85% ರಷ್ಟು ಕಡಿತವು ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯ ಜೊತೆಗೆ ಸಾಂಸ್ಕೃತಿಕ ಅಭಿವೃದ್ಧಿಯೂ ನಡೆಯುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.
- ಈಶಾನ್ಯದ ಪರಂಪರೆಯ ಬಗ್ಗೆ ಇಡೀ ಭಾರತ ಹೆಮ್ಮೆಪಡುತ್ತದೆ, ಈಶಾನ್ಯವಿಲ್ಲದೆ ಭಾರತ ಮತ್ತು ಭಾರತವಿಲ್ಲದೆ ಈಶಾನ್ಯ ಅಪೂರ್ಣ.
(20ನೇ ಫೆಬ್ರವರಿ 2025 https://www.pib.gov.in/PressReleasePage.aspx?PRID=2105090®=3&lang=1)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಅಸ್ಸಾಂನ ಕೊಕ್ರಝಾರ್‌ನಲ್ಲಿ ನಡೆದ ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್ (ಎಬಿಎಸ್ ಯು) ನ 57ನೇ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.
- ಹಿಂದೆ, ಬೋಡೋಲ್ಯಾಂಡ್‌ನಲ್ಲಿ ಅಶಾಂತಿ, ಅವ್ಯವಸ್ಥೆ ಮತ್ತು ಪ್ರತ್ಯೇಕತಾವಾದದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು, ಈಗ, ಶಿಕ್ಷಣ, ಅಭಿವೃದ್ಧಿ ಮತ್ತು ಉದ್ಯಮದ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.
- ಹಿಂದೆ, ಬೋಡೋಲ್ಯಾಂಡ್ ಪ್ರದೇಶದಲ್ಲಿ ಗುಂಡುಗಳು ಹಾರುತ್ತಿದ್ದವು, ಇಂದು, ಬೋಡೋ ಯುವಕರು ತ್ರಿವರ್ಣ ಧ್ವಜವನ್ನು ಬೀಸುತ್ತಿದ್ದಾರೆ.
(16ನೇ ಮಾರ್ಚ್ 2025 https://www.pib.gov.in/PressReleasePage.aspx?PRID=2111636®=3&lang=2)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಸಮ್ಮುಖದಲ್ಲಿ, ಅಸ್ಸಾಂ ರೈಫಲ್ಸ್ ಬೆಟಾಲಿಯನ್ ಭೂಮಿಯನ್ನು ಮಿಜೋರಾಂನ ಐಜ್ವಾಲ್‌ನಲ್ಲಿ ಮಿಜೋರಾಂ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು ಮತ್ತು ನಕ್ಷೆಗಳ ಔಪಚಾರಿಕ ವಿನಿಮಯ ನಡೆಯಿತು.
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪ್ರಮುಖ ನಿರ್ಧಾರದಿಂದಾಗಿ, ಮಿಜೋರಾಂ ಜನರ ಮೂರು ದಶಕಗಳ ಹಳೆಯ ಬೇಡಿಕೆಯನ್ನು ಈಡೇರಿಸಲಾಯಿತು.
- ಈ ನಿರ್ಧಾರವು ಮಿಜೋರಾಂ ಜನರೆಡೆಗೆ ಮೋದಿ ಸರ್ಕಾರದ ಜವಾಬ್ದಾರಿ ಮತ್ತು ರಾಜ್ಯದ ಪ್ರಗತಿಗಾಗಿ ಅದರ ಬದ್ಧತೆಗೆ ಸಾಕ್ಷಿಯಾಗಿದೆ.
(15ನೇ ಮಾರ್ಚ್ 2025 https://www.pib.gov.in/PressReleasePage.aspx?PRID=2111509®=3&lang=2)
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಮಣಿಪುರದಲ್ಲಿ ಶಾಶ್ವತ ಶಾಂತಿಯನ್ನು ಪುನಃಸ್ಥಾಪಿಸಲು ಮತ್ತು ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ಸಂಪೂರ್ಣವಾಗಿ ಬದ್ಧವಾಗಿದೆ. ಮಣಿಪುರದ ಭದ್ರತಾ ಪರಿಸ್ಥಿತಿಯ ಕುರಿತು ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ವಹಿಸಿದ್ದರು.
(1ನೇ ಮಾರ್ಚ್ 2025 https://www.pib.gov.in/PressReleasePage.aspx?PRID=2107226®=3&lang=2)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಅನುಮೋದನೆ ಕೋರಿ ಲೋಕಸಭೆಯಲ್ಲಿ ಶಾಸನಬದ್ಧ ನಿರ್ಣಯವನ್ನು ಮಂಡಿಸಿದರು.
- ಮಣಿಪುರದಲ್ಲಿ ಶಾಂತಿ ಪುನಃಸ್ಥಾಪಿಸಲು ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ, ಈ ವಿಷಯವನ್ನು ರಾಜಕೀಯಗೊಳಿಸದಂತೆ ಗೃಹ ಸಚಿವರು ಎಲ್ಲಾ ಸದಸ್ಯರಿಗೆ ಮನವಿ ಮಾಡಿದರು.
(3ನೇ ಏಪ್ರಿಲ್ 2025 https://www.pib.gov.in/PressReleasePage.aspx?PRID=2118264®=3&lang=1)
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿ ಎ ಪಿ ಎಫ್): ಆಧುನೀಕರಣ ಮತ್ತು ಶೌರ್ಯವನ್ನು ಗೌರವಿಸುವುದು
- ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಸಿ ಎ ಪಿ ಎಫ್ ಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಅಧಿಕಾರಿ ಶ್ರೇಣಿಗಿಂತ ಕಡಿಮೆ ಇರುವ ಸಿಬ್ಬಂದಿಗೆ ಅವರ ನಿವೃತ್ತಿಯ ದಿನದಂದು ಗೌರವ ಶ್ರೇಣಿಯನ್ನು - ಒಂದು ಶ್ರೇಣಿಗಿಂತ ಹೆಚ್ಚಿನದನ್ನು ನೀಡಲು ಗೃಹ ಸಚಿವಾಲಯವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ತೆಗೆದುಕೊಳ್ಳಲಾದ ಐತಿಹಾಸಿಕ ನಿರ್ಧಾರವು, ಕಾನ್‌ಸ್ಟೆಬಲ್ ಹುದ್ದೆಯಿಂದ ಸಬ್-ಇನ್‌ಸ್ಪೆಕ್ಟರ್ ಹುದ್ದೆಗೆ ನಿವೃತ್ತರಾಗುವ ಸಿಬ್ಬಂದಿಯ ಸ್ವಾಭಿಮಾನ, ಹೆಮ್ಮೆ ಮತ್ತು ನೈತಿಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
(29ನೇ ಮೇ 2025 https://www.pib.gov.in/PressReleasePage.aspx?PRID=2132429®=3&lang=1)
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಸಿ ಎ ಪಿ ಎಫ್ ಗಳು ಹೆಚ್ಚಿನ ಕಲ್ಯಾಣ, ಮನ್ನಣೆ ಮತ್ತು ತಾಂತ್ರಿಕ ಬೆಂಬಲವನ್ನು ಪಡೆದವು.
- ಕಳೆದ 5 ವರ್ಷಗಳಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಿ ಆರ್ ಪಿ ಎಫ್ 400 ಕ್ಕೂ ಹೆಚ್ಚು ಫಾರ್ವರ್ಡ್ ಆಪರೇಟಿಂಗ್ ಬೇಸ್‌ಗಳನ್ನು ಸ್ಥಾಪಿಸಿದೆ, ಇದರಿಂದಾಗಿ 10 ವರ್ಷಗಳಲ್ಲಿ ನಕ್ಸಲ್ ಹಿಂಸಾಚಾರವು 70% ಕ್ಕಿಂತ ಹೆಚ್ಚು ತಗ್ಗಿದೆ.
(17ನೇ ಏಪ್ರಿಲ್ 2025 https://www.pib.gov.in/PressReleasePage.aspx?PRID=2122404®=3&lang=2)
- ಸಿ ಐ ಎಸ್ ಎಫ್ ದೇಶದ ಅಭಿವೃದ್ಧಿ, ಪ್ರಗತಿ ಮತ್ತು ಚಲನೆಯನ್ನು ಸುರಕ್ಷಿತಗೊಳಿಸುವುದಲ್ಲದೆ, ಅವುಗಳ ಸುಗಮ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
- ತಮಿಳುನಾಡಿನ ಥಕ್ಕೋಲಂನಲ್ಲಿರುವ ಸಿ ಐ ಎಸ್ ಎಫ್ ಪ್ರಾದೇಶಿಕ ತರಬೇತಿ ಕೇಂದ್ರಕ್ಕೆ ಚೋಳ ರಾಜವಂಶದ ಮಹಾನ್ ಯೋಧ ರಾಜಾದಿತ್ಯ ಚೋಳನ ಹೆಸರಿಟ್ಟಿರಿವುದು ಹೆಮ್ಮೆಯ ವಿಷಯ.
(7ನೇ ಮಾರ್ಚ್ 2025 https://www.pib.gov.in/PressReleasePage.aspx?PRID=2109087®=3&lang=2)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಗಡಿ ಭದ್ರತಾ ಪಡೆ (ಬಿ ಎಸ್ ಎಫ್) ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು.
- 'ಆಪರೇಷನ್ ಸಿಂದೂರ್' ಸಮಯದಲ್ಲಿ, BSF 118ಕ್ಕೂ ಹೆಚ್ಚು ಪಾಕಿಸ್ತಾನಿ ಪೋಸ್ಟ್‌ಗಳನ್ನು ನಾಶಪಡಿಸಿತು ಮತ್ತು ಅವರ ಸಂಪೂರ್ಣ ಕಣ್ಗಾವಲು ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಿತ್ತುಹಾಕಿತು.
- ಸಮಸ್ಯೆ ಇರುವ ಗಡಿಗಳಲ್ಲಿ 24x7 ಜಾಗರೂಕರಾಗಿರುವ ಜಾಗರೂಕ ಮತ್ತು ಸಮರ್ಪಿತ ಬಿ ಎಸ್ ಎಫ್ ಸಿಬ್ಬಂದಿಗೆ ರಾಷ್ಟ್ರವು ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ.
(30ನೇ ಮೇ 2025 https://www.pib.gov.in/PressReleasePage.aspx?PRID=2132761®=3&lang=1)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗುಜರಾತ್‌ನ ಭುಜ್‌ನಲ್ಲಿ ಗಡಿ ಭದ್ರತಾ ಪಡೆಯ ನ ವಜ್ರ ಮಹೋತ್ಸವ ಆಚರಣೆಯನ್ನುದ್ದೇಶಿಸಿ ಮಾತನಾಡಿದರು.
- ಬಿಎಸ್‌ಎಫ್ ಕಾವಲು ಕಾಯುವವರೆಗೆ, ಶತ್ರುಗಳು ಭಾರತದ ಒಂದು ಇಂಚಿನ ಭೂಮಿಯ ಮೇಲೆಯೂ ಕಣ್ಣಿಡಲು ಸಾಧ್ಯವಿಲ್ಲ.
- ನೀರು, ಭೂಮಿ ಮತ್ತು ಆಕಾಶ - ಈ ಮೂರು ಕ್ಷೇತ್ರಗಳಲ್ಲಿ, ಬಿಎಸ್‌ಎಫ್ ಒಂದೇ ಒಂದು ಗುರಿಯನ್ನು ಹೊಂದಿದೆ: ಭಾರತದ ಭದ್ರತೆ.
(21ನೇ ನವೆಂಬರ್ 2025 https://www.pib.gov.in/PressReleasePage.aspx?PRID=2192508®=3&lang=1)
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಭದ್ರತಾ ಪಡೆಗಳು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ.
- ಸೈನಿಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಕಡಿಮೆ ಮಾಡಲು ಮೋದಿ ಸರ್ಕಾರವು ಕೆಲಸ ಮಾಡುತ್ತಿದೆ.
- ಡ್ರೋನ್ ನಿಗ್ರಹ ತಂತ್ರಜ್ಞಾನ, ಸುರಂಗ ಗುರುತಿನ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ಕಣ್ಗಾವಲು ಸೇರಿದಂತೆ 26 ಕ್ಕೂ ಹೆಚ್ಚು ತಂತ್ರಜ್ಞಾನ-ಸಂಬಂಧಿತ ಉಪಕ್ರಮಗಳನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದೆ.
(ಏಪ್ರಿಲ್ 7, 2025 https://www.pib.gov.in/PressReleasePage.aspx?PRID=2119839®=3&lang=2)
ಜನಗಣತಿ 2027 & ಜಾತಿ ಜನಗಣತಿ: ಸಾಮಾಜಿಕ ನ್ಯಾಯಕ್ಕೆ ಬದ್ಧತೆ
- ಜನಸಂಖ್ಯಾ ಗಣತಿ-2027 ಅನ್ನು ಜಾತಿಗಳ ಎಣಿಕೆಯೊಂದಿಗೆ ಎರಡು ಹಂತಗಳಲ್ಲಿ ನಡೆಸಲಾಗುವುದು.
- ಜನಸಂಖ್ಯಾ ಗಣತಿ - 2027 ರ ಉಲ್ಲೇಖ ದಿನಾಂಕವು ಮಾರ್ಚ್, 2027 ರ ಮೊದಲ ದಿನದ 00:00 ಗಂಟೆಗಳಾಗಿರುತ್ತದೆ.
- ಲಡಾಖ್ ಕೇಂದ್ರಾಡಳಿತ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಸಮನ್ವಯವಿಲ್ಲದ ಹಿಮಪಾತ ಪ್ರದೇಶಗಳಿಗೆ, ಉಲ್ಲೇಖ ದಿನಾಂಕವು ಅಕ್ಟೋಬರ್, 2026ರ ಮೊದಲ ದಿನದ 00.00 ಗಂಟೆಗಳಾಗಿರುತ್ತದೆ.
(4ನೇ ಜೂನ್ 2025 https://www.pib.gov.in/PressReleasePage.aspx?PRID=2133845®=3&lang=1)
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸಿಸಿಪಿ ಯ ಮುಂಬರುವ ಜನಗಣತಿಯಲ್ಲಿ ಜಾತಿ ಜನಗಣತಿಯನ್ನು ಸೇರಿಸುವ ನಿರ್ಧಾರವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸಾಮಾಜಿಕ ನ್ಯಾಯಕ್ಕೆ ಬದ್ಧತೆಯಡಿಯಲ್ಲಿ ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರವೆಂದು ಶ್ಲಾಘಿಸಿದ್ದಾರೆ.
- ಮೋದಿ ಸರ್ಕಾರದ ನಿರ್ಧಾರವು ಎಲ್ಲಾ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳನ್ನು ಸಬಲೀಕರಣಗೊಳಿಸುತ್ತದೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ.
- ಈ ನಿರ್ಧಾರವು ಸಾಮಾಜಿಕ ಸಮಾನತೆ ಮತ್ತು ಪ್ರತಿಯೊಂದು ವಿಭಾಗದ ಹಕ್ಕುಗಳ ಕಡೆಗೆ ಬಲವಾದ ಬದ್ಧತೆಯ ಸಂದೇಶವನ್ನು ನೀಡುತ್ತದೆ.
(30ನೇ ಅರ್ಪಿಲ್ 2025 https://www.pib.gov.in/PressReleasePage.aspx?PRID=2125576®=3&lang=1)
ಅಧಿಕೃತ ಭಾಷೆ: ಭಾಷಾ ವೈವಿಧ್ಯತೆ ಮತ್ತು ಏಕತೆಯನ್ನು ಉತ್ತೇಜಿಸುವುದು
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಅಧಿಕೃತ ಭಾಷಾ ಇಲಾಖೆಯ 'ಸುವರ್ಣ ಮಹೋತ್ಸವ ಆಚರಣೆ'ಯನ್ನು ಮುಖ್ಯ ಅತಿಥಿಯಾಗಿ ಉದ್ದೇಶಿಸಿ ಮಾತನಾಡಿದರು.
- ಹೋರಾಟ, ಸಮರ್ಪಣೆ ಮತ್ತು ಸಂಕಲ್ಪದ ಆಧಾರದ ಮೇಲೆ, ಅಧಿಕೃತ ಭಾಷಾ ಇಲಾಖೆಯು 50 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದೆ.
- ಮೋದಿ ಸರ್ಕಾರದ ಅಡಿಯಲ್ಲಿ ಭಾರತೀಯ ಭಾಷೆಗಳು ತಂತ್ರಜ್ಞಾನ, ಶಿಕ್ಷಣ ಮತ್ತು ಆಡಳಿತ ಕ್ಷೇತ್ರದಲ್ಲಿ ಅಭೂತಪೂರ್ವ ಉತ್ತೇಜನವನ್ನು ಪಡೆಯುತ್ತಿವೆ.
(26ನೇ ಜೂನ್ 2025 https://www.pib.gov.in/PressReleasePage.aspx?PRID=2139919®=3&lang=1)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಭಾರತೀಯ ಭಾಷಾ ಅನುಭಾಗ್ (ಭಾರತೀಯ ಭಾಷಾ ವಿಭಾಗ) ಅನ್ನು ಪ್ರಾರಂಭಿಸಿದರು.
- ಭಾರತೀಯ ಭಾಷಾ ಅನುಭಾಗ್ (ಭಾರತೀಯ ಭಾಷಾ ವಿಭಾಗ) ಸ್ಥಾಪನೆಯೊಂದಿಗೆ, ಅಧಿಕೃತ ಭಾಷಾ ಇಲಾಖೆಯು ಈಗ ಸಂಪೂರ್ಣ ಇಲಾಖೆಯಾಗಿದೆ.
- ಭಾರತೀಯ ಭಾಷಾ ಅನುಭಾಗ್ ಭಾರತದ ಭಾಷಾ ವೈವಿಧ್ಯತೆಯನ್ನು ಒಳಗೊಂಡಂತೆ ಎಲ್ಲಾ ಭಾಷೆಗಳಿಗೆ ಬಲವಾದ ಮತ್ತು ಸಂಘಟಿತ ವೇದಿಕೆಯನ್ನು ಒದಗಿಸುತ್ತದೆ.
(6ನೇ ಜೂನ್ 2025 https://www.pib.gov.in/PressReleasePage.aspx?PRID=2134580®=3&lang=1)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2025ರ ಹಿಂದಿ ದಿವಸ್ ಸಂದರ್ಭದಲ್ಲಿ ಗಾಂಧಿನಗರ (ಗುಜರಾತ್) ನಲ್ಲಿ ನಡೆದ ಐದನೇ ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಂದಿಯನ್ನು ಒಳಗೊಂಡಂತೆ ಅಧಿಕೃತ ಭಾಷೆಯಾಗಿ ಎಲ್ಲಾ ಭಾರತೀಯ ಭಾಷೆಗಳ ಸಂರಕ್ಷಣೆ, ಪ್ರಚಾರ ಮತ್ತು ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಾರೆ.
- ಹಿಂದಿ ಮತ್ತು ಇತರ ಭಾರತೀಯ ಭಾಷೆಗಳ ನಡುವೆ ಯಾವುದೇ ಸ್ಪರ್ಧೆಯಿಲ್ಲ; ಅವು ಪರಸ್ಪರ ಪೂರಕವಾಗಿರುತ್ತವೆ.
- ಹಿಂದಿ ಕೇವಲ ಸಂಭಾಷಣೆ ಮತ್ತು ಆಡಳಿತದ ಭಾಷೆಯಾಗಿ ಮಾತ್ರ ಇರಬಾರದು, ವಿಜ್ಞಾನ, ತಂತ್ರಜ್ಞಾನ, ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆಯ ಭಾಷೆಯಾಗಿಯೂ ಇರಬೇಕು.
(14ನೇ ಸೆಪ್ಟೆಂಬರ್ 2025 https://www.pib.gov.in/PressReleasePage.aspx?PRID=2166537®=3&lang=1)
ವಲಯ ಮಂಡಳಿಗಳು: ಸಹಕಾರಿ ಒಕ್ಕೂಟವನ್ನು ಬಲಪಡಿಸಲು ಸಹಕಾರದ ಎಂಜಿನ್
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಪಶ್ಚಿಮ ವಲಯ ಮಂಡಳಿಯ 27 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು.
- ಮೋದಿ ಸರ್ಕಾರದಲ್ಲಿ, ವಲಯ ಮಂಡಳಿಗಳನ್ನು ಕಾರ್ಯತಂತ್ರದ ನಿರ್ಧಾರ ತೆಗೆದುಕೊಳ್ಳುವ ವೇದಿಕೆಯಾಗಿ ಸ್ಥಾಪಿಸಲಾಗಿದೆ, ಇದು ಔಪಚಾರಿಕ ಸಂಸ್ಥೆಗಳಾಗಿ ಅವುಗಳ ಸಾಂಪ್ರದಾಯಿಕ ಪಾತ್ರವನ್ನು ಮೀರಿಸುತ್ತದೆ.
(22ನೇ ಫೆಬ್ರವರಿ 2025 https://www.pib.gov.in/PressReleasePage.aspx?PRID=2105532®=3&lang=1)
- ಸದಸ್ಯ ರಾಷ್ಟ್ರಗಳ ನಡುವೆ ಯಾವುದೇ ಸಮಸ್ಯೆ ಅಥವಾ ವಿವಾದವಿಲ್ಲದ ಏಕೈಕ ಪ್ರಾದೇಶಿಕ ಮಂಡಳಿ ಕೇಂದ್ರ ವಲಯ ಮಂಡಳಿಯಾಗಿದೆ, ಇದು ಗಮನಾರ್ಹ ಸಾಧನೆಯಾಗಿದೆ. 2004-14ಕ್ಕೆ ಹೋಲಿಸಿದರೆ, 2014-25ರ ನಡುವಿನ ಪ್ರಾದೇಶಿಕ ಮಂಡಳಿ ಸಭೆಗಳಲ್ಲಿ ಚರ್ಚಿಸಲಾದ ಸುಮಾರು 83% ಸಮಸ್ಯೆಗಳನ್ನು ಪರಿಹರಿಸಲಾಗಿದೆ, ಇದು ಉತ್ತೇಜನಕಾರಿಯಾಗಿದೆ.
(24ನೇ ಜೂನ್ 2025 https://www.pib.gov.in/PressReleasePage.aspx?PRID=2139316®=3&lang=1)
- ಇಡೀ ಪೂರ್ವ ಭಾರತವು ಭಕ್ತಿ, ಜ್ಞಾನ, ಸಂಗೀತ, ವೈಜ್ಞಾನಿಕ ಸಂಶೋಧನೆ ಮತ್ತು ಕ್ರಾಂತಿಯ ಭೂಮಿಯಾಗಿದೆ, ಪೂರ್ವ ಭಾರತವು ಶಿಕ್ಷಣದ ಮೂಲ ತತ್ವಗಳನ್ನು ಸ್ಥಾಪಿಸುವಲ್ಲಿ ಬಹಳಷ್ಟು ಕೊಡುಗೆ ನೀಡಿದೆ. ಮೋದಿ ಸರ್ಕಾರದಲ್ಲಿ, ವಲಯ ಮಂಡಳಿಗಳು ಈಗ ಚರ್ಚೆಯ ವೇದಿಕೆಯ ಬದಲು ಸಹಕಾರದ ಎಂಜಿನ್ ಆಗಿ ಮಾರ್ಪಟ್ಟಿವೆ.
(10ನೇ ಜುಲೈ 2025 https://www.pib.gov.in/PressReleasePage.aspx?PRID=2143826®=3&lang=1)
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಬಲವಾದ ರಾಜ್ಯಗಳು ಮಾತ್ರ ಬಲಿಷ್ಠ ರಾಷ್ಟ್ರವನ್ನು ಸೃಷ್ಟಿಸುತ್ತವೆ' ಎಂಬ ದೃಷ್ಟಿಕೋನವನ್ನು ವಾಸ್ತವಕ್ಕೆ ಬದಲಾಯಿಸುವುದರಲ್ಲಿ ವಲಯ ಮಂಡಳಿಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ರಾಷ್ಟ್ರೀಯ ಪ್ರಗತಿಯೊಂದಿಗೆ ಪ್ರಾದೇಶಿಕ ಬಲ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಭಾರತದ ಜಾಗತಿಕ ನಾಯಕತ್ವ ನಮ್ಮ ಗುರಿಯಾಗಿದೆ.
(17ನೇ ನವೆಂಬರ್ 2025 https://www.pib.gov.in/PressReleasePage.aspx?PRID=2190941®=3&lang=1)
ಇತರ ಪ್ರಮುಖ ಸಭೆಗಳು ಮತ್ತು ಉಪಕ್ರಮಗಳು
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಲೋಕಸಭೆಯಲ್ಲಿ ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ, 2025, ಕೇಂದ್ರ ಪ್ರದೇಶಗಳ (ತಿದ್ದುಪಡಿ) ಮಸೂದೆ, 2025 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2025 ಅನ್ನು ಮಂಡಿಸಿದರು.
- ದೇಶದಲ್ಲಿ ರಾಜಕೀಯ ಭ್ರಷ್ಟಾಚಾರದ ವಿರುದ್ಧ ಮೋದಿ ಸರ್ಕಾರದ ಬದ್ಧತೆ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಪ್ರತಿಕ್ರಿಯೆಯಾಗಿ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಪರಿಚಯಿಸಲಾಯಿತು.
- ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಂತ್ರಿಗಳಂತಹ ಪ್ರಮುಖ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳು ಜೈಲಿನಲ್ಲಿದ್ದಾಗ ಸರ್ಕಾರವನ್ನು ನಡೆಸಲು ಸಾಧ್ಯವಾಗುವುದಿಲ್ಲ.
- ಸಾರ್ವಜನಿಕ ಜೀವನದಲ್ಲಿ ಕುಸಿಯುತ್ತಿರುವ ನೈತಿಕತೆಯ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ರಾಜಕೀಯಕ್ಕೆ ಸಮಗ್ರತೆಯನ್ನು ತರುವುದು ಈ ಮಸೂದೆಯ ಉದ್ದೇಶವಾಗಿದೆ.
(20ನೇ ಆಗಸ್ಟ್ 2025 https://www.pib.gov.in/PressReleasePage.aspx?PRID=2158593®=3&lang=1)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ನಡೆದ ದ್ವೀಪ ಅಭಿವೃದ್ಧಿ ಸಂಸ್ಥೆ (ಐಡಿ ಎ)ಯ 7 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು.
- 'ಪಿಎಂ ಸೂರ್ಯ ಘರ್' ಯೋಜನೆಯಡಿ, ಅಂಡಮಾನ್-ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪದ ಎಲ್ಲಾ ಮನೆಗಳಲ್ಲಿ ಶೇಕಡಾ 100ರಷ್ಟು ಸೌರಶಕ್ತಿ ಫಲಕಗಳನ್ನು ಅಳವಡಿಸಬೇಕು.
- ಈ ದ್ವೀಪಗಳು ದೆಹಲಿಯಿಂದ ದೂರವಿದ್ದರೂ, ಅವು ನಮ್ಮ ಹೃದಯಕ್ಕೆ ಹತ್ತಿರವಾಗಿವೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಸೌಲಭ್ಯಗಳನ್ನು ಹೆಚ್ಚಿಸುವುದು ಸರ್ಕಾರದ ಆದ್ಯತೆಯಾಗಿದೆ.
(3ನೇ ಜನವರಿ 2025 https://www.pib.gov.in/PressReleasePage.aspx?PRID=2089935®=3&lang=1)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ದೆಹಲಿಯ ಹೊಸದಾಗಿ ಆಯ್ಕೆಯಾದ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ, ಗೃಹ ಸಚಿವರಾದ ಶ್ರೀ ಆಶಿಶ್ ಸೂದ್, ದೆಹಲಿ ಪೊಲೀಸ್ ಆಯುಕ್ತರು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಮನ್ವಯದ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.
- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಿರೀಕ್ಷೆಯಂತೆ ದೆಹಲಿಯ ಡಬಲ್ ಎಂಜಿನ್ ಸರ್ಕಾರವು ಅಭಿವೃದ್ಧಿ ಹೊಂದಿದ ಮತ್ತು ಸುರಕ್ಷಿತ ದೆಹಲಿಗಾಗಿ ಡಬಲ್ ವೇಗದಲ್ಲಿ ಕೆಲಸ ಮಾಡುತ್ತದೆ.
- ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮೂಲದ ಒಳನುಸುಳುವವರು ದೇಶವನ್ನು ಪ್ರವೇಶಿಸಲು, ಅವರ ದಾಖಲೆಗಳನ್ನು ಪಡೆಯಲು ಮತ್ತು ಇಲ್ಲಿ ಅವರ ವಾಸ್ತವ್ಯವನ್ನು ಸುಗಮಗೊಳಿಸಲು ಸಹಾಯ ಮಾಡುವ ಸಂಪೂರ್ಣ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
- ಅಕ್ರಮ ಒಳನುಗ್ಗುವವರ ವಿಷಯವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ ಮತ್ತು ಅದನ್ನು ಕಟ್ಟುನಿಟ್ಟಾಗಿ ನಿಭಾಯಿಸಬೇಕು ಮತ್ತು ಅವರನ್ನು ಗುರುತಿಸಿ ಗಡೀಪಾರು ಮಾಡಬೇಕು.
(28 ಫೆಬ್ರವರಿ 2025 https://www.pib.gov.in/PressReleasePage.aspx?PRID=2107051®=3&lang=1)
- ದೆಹಲಿಯಲ್ಲಿ ಯಮುನಾ ಶುದ್ಧೀಕರಣ, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯ ಕುರಿತು ಸಭೆ ನಡೆಸಿದ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ, ಸಮಗ್ರ ವಿಧಾನದೊಂದಿಗೆ ಕೆಲಸ ಮಾಡಲು ನಿರ್ದೇಶಿಸಿದ್ದಾರೆ.
- ಯಮುನಾ ಕೇವಲ ನದಿಯಲ್ಲ, ನಮಗೆ ನಂಬಿಕೆಯ ಸಂಕೇತವೂ ಆಗಿದೆ, ಅದಕ್ಕಾಗಿಯೇ ಅದರ ಸ್ವಚ್ಛತೆ ಮೋದಿ ಸರ್ಕಾರಕ್ಕೆ ಆದ್ಯತೆಯಾಗಿದೆ.
- ಜಲಶಕ್ತಿ ಸಚಿವಾಲಯವು ಎಲ್ಲಾ ಒಳಚರಂಡಿ ಸಂಸ್ಕರಣಾ ಘಟಕಗಳಿಗೆ ಅವುಗಳ ಗುಣಮಟ್ಟ, ನಿರ್ವಹಣೆ ಮತ್ತು ವಿಸರ್ಜನೆಗೆ ಮಾನದಂಡಗಳನ್ನು ಸ್ಥಾಪಿಸುವ ಎಸ್ ಒ ಪಿ ಅನ್ನು ರಚಿಸಬೇಕು; ಎಸ್ ಒ ಪಿ ಯನ್ನು ಎಲ್ಲಾ ಇತರ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು.
- ದೆಹಲಿಯಲ್ಲಿ ಯಮುನಾ, ಕುಡಿಯುವ ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದಂತೆ ನಾವು ಮಾಡುವ ಯಾವುದೇ ಯೋಜನೆಯನ್ನು ಮುಂದಿನ 20 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಬೇಕು.
(22ನೇ ಮೇ 2025 https://www.pib.gov.in/PressReleasePage.aspx?PRID=2130581®=3&lang=1)
- ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ರಾಷ್ಟ್ರೀಯ ಗೀತೆ 'ವಂದೇ ಮಾತರಂ' ನ 150ನೇ ವಾರ್ಷಿಕೋತ್ಸವದಂದು ರಾಜ್ಯಸಭೆಯಲ್ಲಿ ವಿಶೇಷ ಚರ್ಚೆಯನ್ನು ಪ್ರಾರಂಭಿಸಿದರು.
- 'ವಂದೇ ಮಾತರಂ' ಕುರಿತ ಚರ್ಚೆಯ ಮೂಲಕ, ಭವಿಷ್ಯದ ಪೀಳಿಗೆಗಳು ಅದರ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತವೆ ಮತ್ತು ಅದು ರಾಷ್ಟ್ರದ ಪುನರ್ನಿರ್ಮಾಣಕ್ಕೂ ಅಡಿಪಾಯವಾಗುತ್ತದೆ.
- ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ವಂದೇ ಮಾತರಂ ಸ್ವಾತಂತ್ರ್ಯದ ಘೋಷಣೆಯಾಯಿತು, ಮತ್ತು ಈಗ ಅದು ಅಭಿವೃದ್ಧಿ ಹೊಂದಿದ ಮತ್ತು ಶ್ರೇಷ್ಠ ಭಾರತವನ್ನು ನಿರ್ಮಿಸಲು ಸ್ಪೂರ್ತಿದಾಯಕ ಮಂತ್ರವೂ ಆಗುತ್ತದೆ.
- ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ವಂದೇ ಮಾತರಂ ರಾಷ್ಟ್ರಕ್ಕೆ ಸಮರ್ಪಣಾ ಮಾಧ್ಯಮವಾಗಿತ್ತು, ಅದು ಇಂದಿಗೂ ಹಾಗೆಯೇ ಇದೆ ಮತ್ತು 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಅದು ಹಾಗೆಯೇ ಮುಂದುವರಿಯುತ್ತದೆ.
(9 ಡಿಸೆಂಬರ್ 2025 https://www.pib.gov.in/PressReleasePage.aspx?PRID=2201051®=3&lang=1)
- ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಭಾಗವಹಿಸಿದರು.
- ಸಾವಿನ ಸಂದರ್ಭದಲ್ಲಿ ಅಥವಾ ಯಾರಾದರೂ ಎರಡು ಸ್ಥಳಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದರೆ ಆ ಹೆಸರುಗಳನ್ನು ತೆಗೆದುಹಾಕುವುದು, 18 ವರ್ಷ ತುಂಬಿದಾಗ ಹೆಸರುಗಳನ್ನು ಸೇರಿಸುವುದು ಮತ್ತು ನುಸುಳುಕೋರರನ್ನು ಆಯ್ದ ಅಳಿಸುವುದು - ಅದನ್ನೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಎಂದು ಕರೆಯಲಾಗುತ್ತದೆ.
- ಒಳನುಗ್ಗುವವರು ಮುಖ್ಯಮಂತ್ರಿಗಳು ಮತ್ತು ಪ್ರಧಾನ ಮಂತ್ರಿಗಳನ್ನು ಆಯ್ಕೆ ಮಾಡುವುದನ್ನು ತಡೆಯಲು ಮತ್ತು ಆ ಮೂಲಕ ದೇಶವನ್ನು ಅಸುರಕ್ಷಿತವಾಗಿಸಲು, ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಅತ್ಯಗತ್ಯ - ಮತ್ತು ಆ ಪ್ರಕ್ರಿಯೆಯನ್ನು ಎಸ್‌ಐಆರ್‌ಎಂದು ಕರೆಯಲಾಗುತ್ತದೆ.
(10ನೇ ಡಿಸೆಂಬರ್ 2025 https://www.pib.gov.in/PressReleasePage.aspx?PRID=2201968®=3&lang=1)
- 2029ರ ಪ್ರತಿಷ್ಠಿತ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟಕ್ಕೆ ಭಾರತವನ್ನು ಆತಿಥೇಯ ರಾಷ್ಟ್ರವಾಗಿ ನೇಮಿಸಿದ್ದಕ್ಕೆ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಸಂತೋಷ ವ್ಯಕ್ತಪಡಿಸಿದರು, ಇದು ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದರು.
- ಈ ಕಾರ್ಯಕ್ರಮವನ್ನು ಆಯೋಜಿಸಲು ಭಾರತ್ ಪ್ರತಿಷ್ಠಿತ ಬಿಡ್ ಅನ್ನು ಗೆದ್ದಿರುವುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಿರ್ಮಿಸಲಾದ ನಮ್ಮ ವಿಸ್ತಾರವಾದ ಕ್ರೀಡಾ ಮೂಲಸೌಕರ್ಯಕ್ಕೆ ಜಾಗತಿಕ ಮನ್ನಣೆಯಾಗಿದೆ.
** (ಜೂನ್ 27, 2025 https://www.pib.gov.in/PressReleasePage.aspx?PRID=2140184®=3&lang=1)
- ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಮಾತನಾಡಿದರು.
- ಸ್ವಾತಂತ್ರ್ಯ ಚಳವಳಿಯ ಸಾಂಸ್ಥಿಕ ಬೆನ್ನೆಲುಬಾದ ಸರ್ದಾರ್ ಪಟೇಲ್ ನಮ್ಮ ದೇಶಕ್ಕೆ ಕೇವಲ ಒಬ್ಬ ವ್ಯಕ್ತಿಯಲ್ಲ, ಬದಲಾಗಿ ಒಂದು ಸಿದ್ಧಾಂತವಾಗಿದ್ದಾರೆ.
- ಅಕ್ಟೋಬರ್ 31 ರಂದು ಏಕ್ತಾ ನಗರದಲ್ಲಿ ನಡೆಯಲಿರುವ ಭವ್ಯ ಮೆರವಣಿಗೆಯ ಗೌರವ ವಂದನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸ್ವೀಕರಿಸಲಿದ್ದಾರೆ.
(30ನೇ ಅಕ್ಟೋಬರ್ 2025 https://www.pib.gov.in/PressReleasePage.aspx?PRID=2184144®=3&lang=1)
*****
(रिलीज़ आईडी: 2210522)
आगंतुक पटल : 8