ಪ್ರಧಾನ ಮಂತ್ರಿಯವರ ಕಛೇರಿ
ಪೋರ್ ಬಂದರ್ ನಿಂದ ಒಮಾನ್ ನ ಮಸ್ಕಟ್ ಗೆ ತನ್ನ ಚೊಚ್ಚಲ ಪ್ರಯಾಣವನ್ನು ಪ್ರಾರಂಭಿಸಿದ ಪ್ರಾಚೀನ ಭಾರತೀಯ ಹೊಲಿಗೆ ಹಡಗು ತಂತ್ರವನ್ನು ಬಳಸಿಕೊಂಡು ನಿರ್ಮಿಸಲಾದ ಐಎನ್ಎಸ್ ವಿ ಕೌಂಡಿನ್ಯವನ್ನು ಶ್ಲಾಘಿಸಿದ ಪ್ರಧಾನಮಂತ್ರಿ
प्रविष्टि तिथि:
29 DEC 2025 5:57PM by PIB Bengaluru
ಪೋರ್ ಬಂದರ್ ನಿಂದ ಒಮಾನ್ ನ ಮಸ್ಕಟ್ ಗೆ ತನ್ನ ಚೊಚ್ಚಲ ಪ್ರಯಾಣವನ್ನು ಆರಂಭಿಸುವ ಐಎನ್ ಎಸ್ ವಿ ಕೌಂಡಿನ್ಯಕ್ಕೆ ಜೀವ ತುಂಬುವಲ್ಲಿ ಸಮರ್ಪಿತ ಪ್ರಯತ್ನಗಳಿಗಾಗಿ ವಿನ್ಯಾಸಕರು, ಕುಶಲಕರ್ಮಿಗಳು, ಹಡಗು ನಿರ್ಮಾಣಕಾರರು ಮತ್ತು ಭಾರತೀಯ ನೌಕಾಪಡೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಭಾರತದ ಶ್ರೀಮಂತ ಕಡಲ ಸಂಪ್ರದಾಯಗಳನ್ನು ಬಿಂಬಿಸುವ ಪ್ರಾಚೀನ ಭಾರತೀಯ ಹೊಲಿಗೆ ಹಡಗು ತಂತ್ರವನ್ನು ಬಳಸಿಕೊಂಡು ಐಎನ್ಎಸ್ ವಿ ಕೌಂಡಿನ್ಯವನ್ನು ನಿರ್ಮಿಸಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. "ಸುರಕ್ಷಿತ ಮತ್ತು ಸ್ಮರಣೀಯ ಪ್ರಯಾಣಕ್ಕಾಗಿ ಸಿಬ್ಬಂದಿಗೆ ನನ್ನ ಶುಭಾಶಯಗಳು, ಅವರು ಕೊಲ್ಲಿ ಪ್ರದೇಶ ಮತ್ತು ಅದರಾಚೆಗಿನ ನಮ್ಮ ಐತಿಹಾಸಿಕ ಸಂಪರ್ಕಗಳನ್ನು ಮರಳಿ ಪಡೆಯುತ್ತಿದ್ದಾರೆ" ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
"ಐ.ಎನ್.ಎಸ್.ವಿ. ಕೌಂಡಿನ್ಯ ಪೋರ್ ಬಂದರ್ ನಿಂದ ಒಮಾನ್ ನ ಮಸ್ಕಟ್ ಗೆ ತನ್ನ ಮೊದಲ ಪ್ರಯಾಣವನ್ನು ಪ್ರಾರಂಭಿಸುತ್ತಿರುವುದನ್ನು ನೋಡಲು ಅದ್ಭುತವಾಗಿದೆ. ಪ್ರಾಚೀನ ಭಾರತೀಯ ಹೊಲಿದ ಹಡಗು ತಂತ್ರವನ್ನು ಬಳಸಿಕೊಂಡು ನಿರ್ಮಿಸಲಾದ ಈ ಹಡಗು ಭಾರತದ ಶ್ರೀಮಂತ ಕಡಲ ಸಂಪ್ರದಾಯಗಳನ್ನು ಬಿಂಬಿಸುತ್ತದೆ. ಈ ವಿಶಿಷ್ಟ ಹಡಗನ್ನು ಜೀವಂತಗೊಳಿಸುವಲ್ಲಿ ವಿನ್ಯಾಸಕರು, ಕುಶಲಕರ್ಮಿಗಳು, ಹಡಗು ನಿರ್ಮಾಣಕಾರರು ಮತ್ತು ಭಾರತೀಯ ನೌಕಾಪಡೆಯನ್ನು ನಾನು ಅಭಿನಂದಿಸುತ್ತೇನೆ. ಸುರಕ್ಷಿತ ಮತ್ತು ಸ್ಮರಣೀಯ ಪ್ರಯಾಣಕ್ಕಾಗಿ ಸಿಬ್ಬಂದಿಗೆ ನನ್ನ ಶುಭ ಹಾರೈಕೆಗಳು, ಅವರು ಗಲ್ಫ್ ಪ್ರದೇಶ ಮತ್ತು ಅದರಾಚೆಗಿನ ನಮ್ಮ ಐತಿಹಾಸಿಕ ಸಂಪರ್ಕಗಳನ್ನು ಮರಳಿ ಪಡೆಯುತ್ತಾರೆ."
@INSVKaundinya
*****
(रिलीज़ आईडी: 2209747)
आगंतुक पटल : 7
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Telugu
,
Malayalam