ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಭಾರತ-ಓಮಾನ್ ಸಿ.ಇ.ಪಿ.ಎಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಶ್ಲಾಘಿಸಿದ್ದಾರೆ, ಮತ್ತು ಇದು ರೈತರು, ಕುಶಲಕರ್ಮಿಗಳು, ಮಹಿಳೆಯರು ಮತ್ತು ಎಂಎಸ್‌ಎಂಇಗಳ ಸಮೃದ್ಧಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ರಾಜತಾಂತ್ರಿಕತೆಯ ಗೆಲುವಾಗಿದೆ ಎಂದು ಬಣ್ಣಿಸಿದ್ದಾರೆ


ಭಾರತ-ಓಮಾನ್ ಸಿ.ಇ.ಪಿ.ಎ ಒಂದು ಮೈಲಿಗಲ್ಲಾಗಿದ್ದು, ಇದು ಒಮಾನ್‌ ನ 98.08% ಸುಂಕ ಮಾರ್ಗಗಳಲ್ಲಿ ಇನ್ನು ಮುಂದೆ ಶೂನ್ಯ ಸುಂಕ ಪ್ರವೇಶವನ್ನು ಒದಗಿಸುತ್ತದೆ, ಇದು ಭಾರತೀಯ ರಫ್ತಿನ 99.38% ಅನ್ನು ಒಳಗೊಂಡಿದೆ

ನಮ್ಮ ಶ್ರಮಶೀಲ ಜನರು ಮತ್ತು ಕೈಗಾರಿಕೆಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತಿರುವ ಈ ಒಪ್ಪಂದವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಅಡಿಯಲ್ಲಿ ನಮ್ಮ ವ್ಯಾಪಾರ ರಾಜತಾಂತ್ರಿಕತೆಯಲ್ಲಿನ ಮಹತ್ತರ ಬದಲಾವಣೆಗೆ ಸಾಕ್ಷಿಯಾಗಿದೆ, ಇದರಲ್ಲಿ ಜಾಗತಿಕ ಮಾತುಕತೆಗಳಲ್ಲಿ ಜನಸಾಮಾನ್ಯರ ಹಿತಾಸಕ್ತಿಗಳು ಮಹತ್ವದ ಚಾಲನಾ ಸ್ಥಾನವನ್ನು ಪಡೆದುಕೊಂಡಿವೆ ಎಂದು ಹೇಳಿದರು

प्रविष्टि तिथि: 18 DEC 2025 6:59PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಭಾರತ-ಓಮನ್ ಸಿ.ಇ.ಪಿ.ಎಯನ್ನು ಶ್ಲಾಘಿಸಿದ್ದಾರೆ, ಇದು ರೈತರು, ಕುಶಲಕರ್ಮಿಗಳು, ಮಹಿಳೆಯರು ಮತ್ತು ಎಂಎಸ್‌ಎಂಇಗಳ ಸಮೃದ್ಧಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ರಾಜತಾಂತ್ರಿಕತೆಯ ಗೆಲುವಾಗಿದೆ ಎಂದು ಬಣ್ಣಿಸಿದ್ದಾರೆ.

ಎಕ್ಸ್ ತಾಣದ ಸಂದೇಶದಲ್ಲಿ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, “ಮೋದಿ ಅವರ ರಾಜತಾಂತ್ರಿಕತೆಯು ರೈತರು, ಕುಶಲಕರ್ಮಿಗಳು, ಮಹಿಳೆಯರು ಮತ್ತು ಎಂಎಸ್‌ಎಂಇ ಗಳಿಗೆ ಸಮೃದ್ಧಿಯನ್ನು ಕಲ್ಪಿಸುತ್ತದೆ. ಭಾರತ-ಓಮನ್ ಸಿ.ಇ.ಪಿ.ಎ ಒಂದು ಮೈಲಿಗಲ್ಲಾಗಿದ್ದು, ಓಮಾನ್‌ ನ 98.08% ಸುಂಕ ಮಾರ್ಗಗಳಲ್ಲಿ ಇನ್ನು ಮುಂದೆ ಶೂನ್ಯ ಸುಂಕ ಪ್ರವೇಶವನ್ನು ಒದಗಿಸುತ್ತದೆ, ಇದು ಭಾರತೀಯ ರಫ್ತಿನ 99.38% ಅನ್ನು ಒಳಗೊಂಡಿದೆ. ನಮ್ಮ ಶ್ರಮಶೀಲ ಜನರು ಮತ್ತು ಕೈಗಾರಿಕೆಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತಿದೆ, ಈ ಒಪ್ಪಂದವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಅಡಿಯಲ್ಲಿ ನಮ್ಮ ವ್ಯಾಪಾರ ರಾಜತಾಂತ್ರಿಕತೆಯಲ್ಲಿನ ಮಹತ್ತರ ಬದಲಾವಣೆಗೆ ಸಾಕ್ಷಿಯಾಗಿದೆ, ಇದರಲ್ಲಿ ಜಾಗತಿಕ ಮಾತುಕತೆಗಳಲ್ಲಿ ಜನಸಾಮಾನ್ಯರ ಹಿತಾಸಕ್ತಿಗಳು ಮಹತ್ವದ ಚಾಲನಾ ಸ್ಥಾನವನ್ನು ಪಡೆದುಕೊಂಡಿವೆ.”

 

*****


(रिलीज़ आईडी: 2206260) आगंतुक पटल : 11
इस विज्ञप्ति को इन भाषाओं में पढ़ें: English , Urdu , Marathi , हिन्दी , Punjabi , Gujarati , Telugu , Malayalam