ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಆಕಾಶವಾಣಿಯಿಂದ 591 ಪ್ರಸಾರ ಕೇಂದ್ರಗಳ ನಿರ್ವಹಣೆ, ರಾಷ್ಟ್ರವ್ಯಾಪಿ ಸಾರ್ವಜನಿಕ ರೇಡಿಯೋ ಸಂಪರ್ಕ ವಿಸ್ತರಣೆ
प्रविष्टि तिथि:
18 DEC 2025 12:50PM by PIB Bengaluru
ಆಕಾಶವಾಣಿಯು ಸದ್ಯ 591 ಪ್ರಸಾರ ಕೇಂದ್ರಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ 230 ಕೇಂದ್ರಗಳು ಮೂಲ ಕಾರ್ಯಕ್ರಮಗಳನ್ನು ಸಿದ್ಧಪಡಿಸಲು ಮತ್ತು ಪ್ರಸಾರ ಮಾಡಲು ಸ್ಟುಡಿಯೋ ಸೌಲಭ್ಯವನ್ನು ಹೊಂದಿವೆ.
ಉಳಿದ 361 ಕೇಂದ್ರಗಳು ಪ್ರಸಾರಗಳ ವ್ಯಾಪ್ತಿಯನ್ನು ಹೆಚ್ಚಿಸಲು ಇತರ ಆಕಾಶವಾಣಿ ಕೇಂದ್ರಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ.
ಪ್ರಸಾರ ಕೇಂದ್ರಗಳ ರಾಜ್ಯವಾರು ವಿವರಗಳು ಪ್ರಸಾರ ಭಾರತಿಯ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಅದರ ವಿಳಾಸ https://prasarbharati.gov.in
ಭಿಲ್ವಾರಾದಲ್ಲಿ ಒಂದು 100W FM ರಿಲೇ ಕೇಂದ್ರ (ರಿಲೇ ಕೇಂದ್ರವಾಗಿ 2023ರ ಏ.28ರಿಂದ ನಿಯೋಜಿಸಲಾಗಿದೆ) ವಿವಿಧ ಭಾರತಿ ಸೇವೆಯನ್ನು ಪ್ರಸಾರ ಮಾಡುತ್ತದೆ.
ಉದಯಪುರ ಆಕಾಶವಾಣಿ ಕೇಂದ್ರ ಕಾರ್ಯಕ್ರಮಗಳ ನಿರ್ಮಿಸಲು ಮತ್ತು ಪ್ರಸಾರಕ್ಕಾಗಿ ಸ್ಟುಡಿಯೋ ಸೌಲಭ್ಯಗಳನ್ನು ಹೊಂದಿದೆ. ಇದು ವಿವಿಧ ಭಾರತಿ ಸೇವೆ (ಎಫ್ ಎಂ) ನಲ್ಲಿ ಸ್ಥಳೀಯವಾಗಿ ಕಾರ್ಯಕ್ರಮಗಳನ್ನು ನಿರ್ಮಿಸುತ್ತದೆ.
ಭಿಲ್ವಾರಾ ಆಕಾಶವಾಣಿ ಕೇಂದ್ರ ಸೇರಿದಂತೆ ಪ್ರಸಾರ ಭಾರತಿಯ ರಿಲೇ ಕೇಂದ್ರಗಳನ್ನು ದೇಶಾದ್ಯಂತ ಸ್ಥಾಪಿಸಲಾಗಿದ್ದು, ಇತರ ಆಕಾಶವಾಣಿ ಕೇಂದ್ರಗಳು ನಿರ್ಮಿಸುವ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುವ ಆದೇಶವನ್ನು ನೀಡಲಾಗಿದೆ.
ಇದು ತಾಂತ್ರಿಕ ಮತ್ತು ಮಾನವ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಮತ್ತು ಸಾರ್ವಜನಿಕ ಪ್ರಸಾರದ ವ್ಯಾಪಕ ಸಾರ್ವಜನಿಕ ವ್ಯಾಪ್ತಿಯನ್ನು ಖಾತ್ರಿಪಡಿಸುತ್ತದೆ, ಇದರಿಂದಾಗಿ ಕಾರ್ಯಕ್ರಮಗಳಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.
ಈ ಮಾಹಿತಿಯನ್ನು ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು 2025ರ ಡಿ.17 ರಂದು ಲೋಕಸಭೆಗೆ ನೀಡಿದ್ದಾರೆ.
*****
(रिलीज़ आईडी: 2205895)
आगंतुक पटल : 8