ಪ್ರಧಾನ ಮಂತ್ರಿಯವರ ಕಛೇರಿ
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 75ನೇ ಪುಣ್ಯತಿಥಿಯಂದು ‘ಭಾರತದ ಉಕ್ಕಿನ ಮನುಷ್ಯ’ನಿಗೆ ಪ್ರಧಾನಮಂತ್ರಿ ಅವರಿಂದ ಗೌರವ ನಮನ
ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜೀವನ ವಿಶೇಷ ಪ್ರೇರಣೆಯನ್ನು ನೀಡುತ್ತದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಸರ್ದಾರ್ ಪಟೇಲ್ ಅವರು ದೇಶವಾಸಿಗಳಲ್ಲಿ ಬಿತ್ತಿದ ರಾಷ್ಟ್ರೀಯ ಏಕತೆಯ ಭಾವನೆ ವಿಕಸಿತ ಭಾರತಕ್ಕೆ ಶಕ್ತಿಯ ಮೂಲವಾಗಿದೆ: ಪ್ರಧಾನಮಂತ್ರಿ ಶ್ರೀ ಮೋದಿ
ಪ್ರಕಟಣಾ ದಿನಾಂಕ:
15 DEC 2025 8:44AM by PIB Bengaluru
ಇಂದು ಭಾರತದ ‘ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 75ನೇ ವರ್ಷದ ಪುಣ್ಯತಿಥಿಯಂದು ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಗೌರವಪೂರ್ಣ ನಮನ ಸಲ್ಲಿಸಿದರು. ಸರ್ದಾರ್ ಪಟೇಲ್ ಅವರು ದೇಶವನ್ನು ಏಕೀಕರಿಸಿ, ಭಾರತವನ್ನು ಏಕತೆಯೆಂಬ ಒಂದೇ ನೂಲಿನಲ್ಲಿ ನೇಯ್ದು ಕಟ್ಟಲು ತಮ್ಮ ಸಂಪೂರ್ಣ ಜೀವನವನ್ನು ಸಮರ್ಪಿಸಿದ್ದರು ಎಂದು ಬಣ್ಣಿಸಿದರು.
ಸರ್ದಾರ್ ಪಟೇಲ್ ಅವರು ಏಕೀಕೃತ ಮತ್ತು ಬಲಿಷ್ಠ ಭಾರತದ ನಿರ್ಮಾಣಕ್ಕೆ ನೀಡಿದ ಅಪೂರ್ವ ಕೊಡುಗೆ ರಾಷ್ಟ್ರದ ಸಮೂಹ ಸ್ಮೃತಿಯಲ್ಲಿ ಶಾಶ್ವತವಾಗಿ ಅಚ್ಚಳಿಯದಂತೆ ಉಳಿಯುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು.
ಸರ್ದಾರ್ ಪಟೇಲ್ ಅವರ ಜೀವನವು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ನಿರಂತರವಾಗಿ ವಿಶೇಷ ಪ್ರೇರಣೆಯನ್ನು ನೀಡುತ್ತಿದೆ. ಭಾರತದ ಉಕ್ಕಿನ ಮನುಷ್ಯ ಎಂದು ಹೆಸರು ಗಳಿಸಿರುವ ವಲ್ಲಭಬಾಯಿ ಪಟೇಲ್ ಅವರು ದೇಶವಾಸಿಗಳಲ್ಲಿ ಬಿತ್ತಿದ ರಾಷ್ಟ್ರೀಯ ಏಕತೆಯ ಆತ್ಮವು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಶಕ್ತಿಯ ಮೂಲವಾಗಿ ಉಳಿದಿದೆ ಎಂದು ಹೇಳಿದರು.
ರಾಷ್ಟ್ರದ ನಿರ್ಮಾಣದಲ್ಲಿ ಸರ್ದಾರ್ ಪಟೇಲ್ ಅವರ ಅಪೂರ್ವ ಕೊಡುಗೆ, ಅವರ ದೃಢ ನಾಯಕತ್ವ ಮತ್ತು ಭಾರತದ ಏಕತೆ ಹಾಗೂ ಅಖಂಡತೆಯನ್ನು ಬಲಪಡಿಸುವತ್ತ ಅವರ ಅಚಲ ಬದ್ಧತೆ ಸದಾ ಬಲಿಷ್ಠ ಮತ್ತು ಸಾಮರ್ಥ್ಯಸಂಪನ್ನ ರಾಷ್ಟ್ರಕ್ಕೆ ಮಾರ್ಗದರ್ಶಕ ಶಕ್ತಿಯಾಗಿ ಸೇವೆ ಸಲ್ಲಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದ್ದಾರೆ.
ಶ್ರೀ ಮೋದಿ ಅವರು ತಮ್ಮ ಎಕ್ಸ್ ಖಾತೆಯ ಪ್ರತ್ಯೇಕ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“लौह पुरुष सरदार वल्लभभाई पटेल को उनकी 75वीं पुण्यतिथि पर मेरा सादर नमन। उन्होंने देश को एकसूत्र में पिरोने के लिए अपना जीवन समर्पित कर दिया। अखंड और सशक्त भारतवर्ष के निर्माण में उनका अतुलनीय योगदान कृतज्ञ राष्ट्र कभी भुला नहीं सकता।”
“भारत रत्न सरदार पटेल की 75वीं पुण्यतिथि आत्मनिर्भर भारत के लिए प्रेरणा लेने का भी एक विशेष अवसर है। उन्होंने देशवासियों में राष्ट्रीय एकता की जो भावना भरी, वो ‘विकसित भारत’ के लिए ऊर्जा का स्रोत है। राष्ट्र निर्माण में उनकी अद्वितीय भूमिका सशक्त और सामर्थ्यवान भारत के लिए पथ-प्रदर्शक बनी रहेगी।”
*****
(ಪ್ರಕಟಣೆ ಐ.ಡಿ.: 2203952)
ವಿಸಿಟರ್ ಕೌಂಟರ್ : 64
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Assamese
,
Bengali
,
Bengali-TR
,
Punjabi
,
Gujarati
,
Odia
,
Tamil
,
Telugu
,
Malayalam