ಪ್ರಧಾನ ಮಂತ್ರಿಯವರ ಕಛೇರಿ
2001ರ ಸಂಸತ್ ದಾಳಿಯ ಹುತಾತ್ಮರಿಗೆ ಪ್ರಧಾನಮಂತ್ರಿ ಅವರಿಂದ ಗೌರವ ನಮನ
प्रविष्टि तिथि:
13 DEC 2025 11:46AM by PIB Bengaluru
2001ರ ಡಿಸೆಂಬರ್ 13 ರಂದು ನಡೆದ ಹೇಯ ಭಯೋತ್ಪಾದಕ ದಾಳಿಯ ಸಮಯದಲ್ಲಿ ಭಾರತದ ಸಂಸತ್ತನ್ನು ರಕ್ಷಿಸುವಾಗ ಪ್ರಾಣ ತ್ಯಾಗ ಮಾಡಿದ ಧೈರ್ಯಶಾಲಿ ಭದ್ರತಾ ಸಿಬ್ಬಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಗೌರವ ನಮನ ಸಲ್ಲಿಸಿದರು.
ಕರ್ತವ್ಯದ ವೇಳೆ ಪ್ರಾಣ ತ್ಯಾಗ ಮಾಡಿದವರನ್ನು ರಾಷ್ಟ್ರವು ಅಪಾರವಾದ ಗೌರವದಿಂದ ಸ್ಮರಿಸುತ್ತದೆ ಎಂದು ಪ್ರಧಾನಿ ಹೇಳಿದರು. ಗಂಭೀರ ಅಪಾಯದ ಸಂದರ್ಭದಲ್ಲಿ ಅವರ ಧೈರ್ಯ, ಜಾಗರೂಕತೆ ಮತ್ತು ಅಚಲ ಜವಾಬ್ದಾರಿಯುತ ಪ್ರಜ್ಞೆಯು ಪ್ರತಿಯೊಬ್ಬ ನಾಗರಿಕನಿಗೂ ಶಾಶ್ವತ ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದರು.
ಈ ಕುರಿತು ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿರುವ ಶ್ರೀ ಮೋದಿ,
"ಈ ದಿನದಂದು, ನಮ್ಮ ರಾಷ್ಟ್ರವು 2001ರಲ್ಲಿ ನಮ್ಮ ಸಂಸತ್ತಿನ ಮೇಲೆ ನಡೆದ ಹೇಯ ದಾಳಿಯ ಸಮಯದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದವರನ್ನು ಸ್ಮರಿಸುತ್ತದೆ. ಗಂಭೀರ ಅಪಾಯದ ಸಂದರ್ಭದಲ್ಲಿ, ಅವರ ಧೈರ್ಯ, ಜಾಗರೂಕತೆ ಮತ್ತು ಅಚಲ ಕರ್ತವ್ಯ ಪ್ರಜ್ಞೆಯು ಗಮನಾರ್ಹವಾಗಿತ್ತು. ಅವರ ಸರ್ವೋಚ್ಚ ತ್ಯಾಗಕ್ಕೆ ಭಾರತ ಎಂದೆಂದಿಗೂ ಕೃತಜ್ಞವಾಗಿರುತ್ತದೆ."
*****
(रिलीज़ आईडी: 2203523)
आगंतुक पटल : 5
इस विज्ञप्ति को इन भाषाओं में पढ़ें:
Telugu
,
Marathi
,
Tamil
,
Malayalam
,
Manipuri
,
Bengali
,
Bengali-TR
,
English
,
Urdu
,
हिन्दी
,
Assamese
,
Punjabi
,
Gujarati