ರೈಲ್ವೇ ಸಚಿವಾಲಯ
azadi ka amrit mahotsav

ಸದೃಢ ಸೈಬರ್ ಭದ್ರತೆಯೊಂದಿಗೆ ಭಾರತೀಯ ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ಬಲಪಡಿಸುತ್ತದೆ


ಜನವರಿ 2025 ರಿಂದ 3.02 ಕೋಟಿ ಅನುಮಾನಾಸ್ಪದ ಬಳಕೆದಾರ ಐಡಿಗಳನ್ನು ನಿಷ್ಕ್ರಿಯಗೊಳಿಸಲಾಗಿದೆ; ನಿಜವಾದ ಟಿಕೆಟ್ ಬುಕಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಬಾಟ್ ವಿರೋಧಿ ಕ್ರಮವಿಧಾನಗಳನ್ನು ನಿಯೋಜಿಸಲಾಗಿದೆ

ಆನ್ ಲೈನ್ ತತ್ಕಾಲ್ ಟಿಕೆಟಿಂಗ್ ಗಾಗಿ 322 ರೈಲುಗಳಲ್ಲಿ ಮತ್ತು ಮೀಸಲಾತಿ ಕೌಂಟರ್ ಗಳಲ್ಲಿ 211 ರೈಲುಗಳಲ್ಲಿ ಆಧಾರ್ ಆಧಾರಿತ ಒಟಿಪಿ ಪರಿಶೀಲನೆ ಅಳವಡಿಸಲಾಗಿದೆ

ಜನಪ್ರಿಯ 96 ರೈಲುಗಳಲ್ಲಿ 95% ರಷ್ಟು ದೃಢೀಕೃತ ತತ್ಕಾಲ್ ಟಿಕೆಟ್ ಲಭ್ಯತೆಯ ಸಮಯ ಹೆಚ್ಚಾಗಿದೆ

प्रविष्टि तिथि: 11 DEC 2025 2:12PM by PIB Bengaluru

ಭಾರತೀಯ ರೈಲ್ವೆಯ ಮೀಸಲಾತಿ ಟಿಕೆಟ್ ಬುಕಿಂಗ್ ವ್ಯವಸ್ಥೆಯು ಉದ್ಯಮ-ಗುಣಮಟ್ಟದ, ದೃಢ ಮತ್ತು ಹೆಚ್ಚು ಸುರಕ್ಷಿತ ಐಟಿ ವೇದಿಕೆಯಾಗಿ, ಅತ್ಯಾಧುನಿಕ ಸೈಬರ್ ಭದ್ರತಾ ನಿಯಂತ್ರಣಗಳನ್ನು ಹಾಗೂ ಸುರಕ್ಷಿತತೆಯನ್ನು ಹೊಂದಿದೆ. ಮೀಸಲಾತಿ ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತು ನಿಯಮಿತ/ತತ್ಕಾಲ್ ಟಿಕೆಟ್ಗಳ ಲಭ್ಯತೆಯನ್ನು ಹೆಚ್ಚಿಸಲು ಭಾರತೀಯ ರೈಲ್ವೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಅವುಗಳಲ್ಲಿ ಈ ಕೆಳಗಿನ ನೂತನ ಕ್ರಮವಿಧಾನಗಳು ಒಳಗೊಂಡಿವೆ:

1. ಬಳಕೆದಾರ ಖಾತೆಗಳನ್ನು ಕಠಿಣ ರೀತಿಯ ಮರುಮೌಲ್ಯಮಾಪನ ಮತ್ತು ಪರಿಶೀಲನೆ ಮಾಡಲಾಗಿದೆ. ಜನವರಿ 2025 ರಿಂದ ಸುಮಾರು 3.02 ಕೋಟಿ ಅನುಮಾನಾಸ್ಪದ ಬಳಕೆದಾರ ಐಡಿಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

2. ನಿಜವಾದ ಬಳಕೆದಾರರಲ್ಲದ ಬಳಕೆದಾರರ ಐಡಿಗಳನ್ನು ಕಠಿಣ ರೀತಿಯಲ್ಲಿ ಸೋಸುವಿಕೆ ಮಾಡಲು ಮತ್ತು ಕಾನೂನುಬದ್ಧ ಪ್ರಯಾಣಿಕರಿಗೆ ಸುಗಮ ಬುಕಿಂಗ್ ಅನ್ನು ಖಚಿತಪಡಿಸಿಕೊಳ್ಳಲು “ಅಕಾಮಾಯಿ” ನಂತಹ ಆಂಟಿ-ಬಾಟ್ ಪರಿಹಾರ ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ.

3. ತತ್ಕಾಲ್ ಬುಕಿಂಗ್ ಗಳಲ್ಲಿ ದುರುಪಯೋಗವನ್ನು ತಡೆಯಲು ಮತ್ತು ನ್ಯಾಯಯುತತೆಯನ್ನು ಸುಧಾರಿಸಲು, ಆನ್ ಲೈನ್ ತತ್ಕಾಲ್ ಟಿಕೆಟ್ ಬುಕಿಂಗ್ ಗಾಗಿ ಆಧಾರ್ ಆಧಾರಿತ ಒಂದು-ಬಾಟ್ ಪಾಸ್ ವರ್ಡ್ (ಒಟಿಪಿ) ಪರಿಶೀಲನೆಯನ್ನು ಹಂತ ಹಂತವಾಗಿ ಪರಿಚಯಿಸಲಾಗಿದೆ. ಇದು 04.12.2025 ರಂತೆ, 322 ರೈಲುಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಮೇಲಿನ ಹಂತಗಳಿಂದ ಪರಿಷ್ಕರಣೆ ಪ್ರಾರಂಭವಾಗಿ, ಮೇಲೆ ತಿಳಿಸಲಾದ 322 ರೈಲುಗಳಲ್ಲಿ ಸುಮಾರು 65% ರಷ್ಟು ದೃಢಪಡಿಸಿದ ತತ್ಕಾಲ್ ಟಿಕೆಟ್ ಲಭ್ಯತೆಯ ಸಮಯ ಹೆಚ್ಚಾಗಿದೆ.

4. ಮೀಸಲಾತಿ ಕೌಂಟರ್ ಗಳಲ್ಲಿ ತತ್ಕಾಲ್ ಬುಕಿಂಗ್ ಗಳಿಗಾಗಿ ಆಧಾರ್ ಆಧಾರಿತ ಒಟಿಪಿಯನ್ನು ಹಂತ ಹಂತವಾಗಿ ಪರಿಚಯಿಸಲಾಗಿದೆ ಮತ್ತು 04.12.2025 ರಂತೆ 211 ರೈಲುಗಳಲ್ಲಿ ಇದನ್ನು ಜಾರಿಗೆ ತರಲಾಗಿದೆ.

5. ಈ ನೂತನ ವ್ಯವಸ್ಥೆ ಮತ್ತು ಇದೇ ರೀತಿಯ ಇತರ ಕ್ರಮಪದ್ಧತಿಗಳ ಪರಿಣಾಮವಾಗಿ, ಜನಪ್ರಿಯ 96 ರೈಲುಗಳಲ್ಲಿ ಸುಮಾರು 95% ರಷ್ಟು ದೃಢೀಕೃತ ತತ್ಕಾಲ್ ಟಿಕೆಟ್ ಲಭ್ಯತೆಯ ಸಮಯ ಹೆಚ್ಚಾಗಿದೆ.

6. ಅನುಮಾನಾಸ್ಪದವಾಗಿ ಬುಕ್ ಮಾಡಲಾದ ಪಿ.ಎನ್.ಆರ್.ಗಳಿಗಾಗಿ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್ ನಲ್ಲಿ ದೂರುಗಳು ದಾಖಲಾಗಿವೆ.

7. ಸೈಬರ್ ಬೆದರಿಕೆಗಳಿಂದ ಟಿಕೆಟ್ ಖರೀದಿ ವ್ಯವಸ್ಥೆಯನ್ನು ರಕ್ಷಿಸುವ ನೆಟ್ ವರ್ಕ್ ಫೈರ್ ವಾಲ್ಗಳು, ಅಕ್ರಮ ಒಳನುಗ್ಗುವಿಕೆ ತಡೆಗಟ್ಟುವಿಕೆ ವ್ಯವಸ್ಥೆಗಳು, ಅಪ್ಲಿಕೇಶನ್ ವಿತರಣಾ ನಿಯಂತ್ರಕಗಳು ಮತ್ತು ವೆಬ್ ಅಪ್ಲಿಕೇಶನ್ ಫೈರ್ ವಾಲ್ ಗಳಂತಹ ಬಹು ರಕ್ಷಣಾತ್ಮಕ ಪದರಗಳ ಬಳಕೆ ಅಳವಡಿಸಲಾಗಿದೆ. ಈ ವ್ಯವಸ್ಥೆಯನ್ನು ಮೀಸಲಾದ, ಪ್ರವೇಶ-ನಿಯಂತ್ರಿತ ಡೇಟಾ ಕೇಂದ್ರದಲ್ಲಿ ಆಯೋಜಿಸಲಾಗಿದೆ, ಸಿಸಿಟಿವಿ ಕಣ್ಗಾವಲು ಮತ್ತು ಅಂತ್ಯದಿಂದ - ಅಂತ್ಯದ ಎನ್ ಕ್ರಿಪ್ಶನ್ ಮೂಲಕ ಸುರಕ್ಷಿತಗೊಳಿಸಲಾಗಿದೆ. ಡೇಟಾ ಸೆಂಟರ್ ಅನ್ನು ಐ.ಎಸ್.ಒ. 27001 ಮಾಹಿತಿ ಭದ್ರತಾ ನಿರ್ವಹಣಾ ವ್ಯವಸ್ಥೆ (ಐ.ಎಸ್.ಎಂ.ಎಸ್.) ಮಾನದಂಡಗಳ ಅಡಿಯಲ್ಲಿ ಪ್ರಮಾಣೀಕರಿಸಲಾಗಿದೆ.

ಸೈಬರ್ ಭದ್ರತಾ ನಿಲುವನ್ನು ಮತ್ತಷ್ಟು ಬಲಪಡಿಸಲು, ಟೇಕ್-ಡೌನ್ ಸೇವೆಗಳು, ಬೆದರಿಕೆ ಮೇಲ್ವಿಚಾರಣೆ, ಆಳವಾದ ಮತ್ತು ಡಾರ್ಕ್ ವೆಬ್ ಕಣ್ಗಾವಲು ಮತ್ತು ಡಿಜಿಟಲ್ ಅಪಾಯ ರಕ್ಷಣೆ ಸೇರಿದಂತೆ ಸಮಗ್ರ ಸೈಬರ್ ಬೆದರಿಕೆ ಗುಪ್ತಚರ ಸೇವೆಗಳನ್ನು ರೈಲ್ ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಒದಗಿಸುತ್ತದೆ. ಈ ಸೇವೆಗಳು ಉದಯೋನ್ಮುಖ ಸೈಬರ್ ಬೆದರಿಕೆಗಳ ಬಗ್ಗೆ ಪೂರ್ವಭಾವಿ ಮತ್ತು ಕಾರ್ಯಸಾಧ್ಯವಾದ ಒಳನೋಟಗಳನ್ನು ನೀಡುತ್ತವೆ ಮತ್ತು ಸುಧಾರಿತ ಘಟನೆ ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸುತ್ತವೆ.

8. ಮುಂಗಡ ಮೀಸಲಾತಿ ವ್ಯವಸ್ಥೆಯ ನಿಯಮಿತ ಭದ್ರತಾ ಲೆಕ್ಕಪರಿಶೋಧನೆಗಳನ್ನು ಸಿ.ಇ.ಆರ್.ಟಿ.-ಇನ್-ಎಂಪನೆಲ್ಡ್ ಮಾಹಿತಿ ಭದ್ರತಾ ಆಡಿಟ್ ಏಜೆನ್ಸಿಗಳು ನಡೆಸುತ್ತವೆ. ಇದಲ್ಲದೆ, ಸೈಬರ್ ದಾಳಿಗಳನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು ಟಿಕೆಟಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಇಂಟರ್ನೆಟ್ ಟ್ರಾಫಿಕ್ ಅನ್ನು ಸಿ.ಇ.ಆರ್.ಟಿ.-ಇನ್ ಮತ್ತು ರಾಷ್ಟ್ರೀಯ ನಿರ್ಣಾಯಕ ಮಾಹಿತಿ ಮೂಲಸೌಕರ್ಯ ರಕ್ಷಣಾ ಕೇಂದ್ರ (ಎನ್.ಸಿ.ಐ.ಐ.ಪಿ.ಸಿ) ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ.

ಇದಲ್ಲದೆ, ರೈಲ್ವೆ ಮಂಡಳಿ, ವಲಯ ರೈಲ್ವೆಗಳು, ವಿಭಾಗೀಯ ಕಚೇರಿ ಇತ್ಯಾದಿ ಸೇರಿದಂತೆ ವಿವಿಧ ಹಂತಗಳಲ್ಲಿ ಸಾರ್ವಜನಿಕ ಪ್ರತಿನಿಧಿಗಳು / ಸಂಸ್ಥೆಗಳು / ರೈಲು ಬಳಕೆದಾರರಿಂದ ಔಪಚಾರಿಕ ಮತ್ತು ಅನೌಪಚಾರಿಕ ವಿನಂತಿಗಳು / ಸಲಹೆಗಳು / ಪ್ರಾತಿನಿಧ್ಯಗಳನ್ನು ಸ್ವೀಕರಿಸಲಾಗುತ್ತದೆ. ಅಂತಹ ವಿನಂತಿಗಳು/ ಸಲಹೆಗಳು /ಪ್ರಾತಿನಿಧ್ಯಗಳ ಸ್ವೀಕೃತಿಯು ನಿರಂತರ ಮತ್ತು ಕ್ರಿಯಾತ್ಮಕ ಪ್ರಕ್ರಿಯೆಯಾಗಿರುವುದರಿಂದ, ಅಂತಹ ವಿನಂತಿಗಳ ಕೇಂದ್ರೀಕೃತ ಸಂಕಲನವನ್ನು ನಿರ್ವಹಿಸಲಾಗುವುದಿಲ್ಲ. ಬದಲಾಗಿ,  ಇವುಗಳನ್ನು ಸ್ಥಳೀಯವಾಗಿ ತ್ವರಿತವಾಗಿ ಆಗಿಂದಾಗಲೇ  ಪರಿಶೀಲಿಸಲಾಗುತ್ತದೆ ಹಾಗೂ ಕಾರ್ಯಸಾಧ್ಯ ಮತ್ತು ಸಮರ್ಥನೀಯವೆಂದು ಕಂಡುಬಂದಂತೆ ಕಾಲಕಾಲಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ, ಇದು ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ.

ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ರೂಪದಲ್ಲಿ ಒದಗಿಸಿದ್ದಾರೆ.

 

*****


(रिलीज़ आईडी: 2202250) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Gujarati , Tamil , Telugu