ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
azadi ka amrit mahotsav

ತಡವಾದ ಏರಿಕೆ, ಬಲವಾದ ಕಾರ್ಯಕ್ಷಮತೆ: ವಕ್ಫ್ ಮಂಡಳಿಗಳಿಂದ ನಿಧಾನಗತಿಯ ಆರಂಭದ ಹೊರತಾಗಿಯೂ ಯು.ಎಂ.ಇ.ಇ.ಡಿ ಪೋರ್ಟಲ್ ನಿಂದ ಬೃಹತ್ ಅಪ್‌‌ ಲೋಡ್‌ ಗಳ ನಿಭಾವಣೆ

प्रविष्टि तिथि: 09 DEC 2025 8:31PM by PIB Bengaluru

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು 2025ರ ಜೂನ್ 6 ರಂದು ಯು.ಎಂ.ಇ.ಇ.ಡಿ ಪೋರ್ಟಲ್ ಪ್ರಾರಂಭದ ಬಳಿಕ, ದತ್ತಾಂಶಗಳನ್ನು ಅಪ್‌ ಲೋಡ್‌ ಮಾಡುವ ಸಂಬಂಧ ತರಬೇತಿ ನೀಡಿ ಸಜ್ಜುಗೊಳಿಸಲು ರಾಜ್ಯಗಳು ಮತ್ತು ವಕ್ಫ್ ಮಂಡಳಿಗಳೊಂದಿಗೆ ಅವಿಶ್ರಾಂತವಾಗಿ ಕಾರ್ಯನಿರ್ವಹಿಸಿದೆ.  ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಏಳು ವಲಯ ವಿಮರ್ಶೆ-ಮತ್ತು-ತರಬೇತಿ ಸಭೆಗಳನ್ನು ನಡೆಸಿದೆ ಹಾಗೂ ಸುಮಾರು 10 ಕೋಟಿ ರೂಪಾಯಿಗಳ ಸಾಮರ್ಥ್ಯವರ್ಧನೆ ನಿಧಿಯನ್ನು 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು 32 ವಕ್ಫ್ ಮಂಡಳಿಗಳಿಗೆ ಕಂತುಗಳಲ್ಲಿ ಬಿಡುಗಡೆ ಮಾಡಲಾಗಿದೆ. ಸಹಾಯವಾಣಿ ಬೆಂಬಲ, ವಿಸಿ (ವಿಡಿಯೋ ಕಾನ್ಫರೆನ್ಸಿಂಗ್) ಆಧಾರಿತ ತರಬೇತಿ ಅವಧಿಗಳು ಮತ್ತು ಮಾಸ್ಟರ್ ಟ್ರೈನರ್ ಕಾರ್ಯಾಗಾರಗಳನ್ನು ಸಹ ಆಯೋಜಿಸಲಾಗಿತ್ತು. ಆದಾಗ್ಯೂ, ಈ ವ್ಯಾಪಕ ಪ್ರಯತ್ನಗಳ ಹೊರತಾಗಿಯೂ, ಬಹುತೇಕ ವಕ್ಫ್ ಮಂಡಳಿಗಳು ಆರು ತಿಂಗಳ ಅಪ್‌ ಲೋಡ್ ವಿಂಡೋದ ಮೊದಲ ನಾಲ್ಕು ತಿಂಗಳುಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾದವು. ಪೋರ್ಟಲ್ ನಲ್ಲಿ 2.42 ಲಕ್ಷಕ್ಕೂ ಹೆಚ್ಚು ಆಸ್ತಿಗಳ ವಿವರಗಳು ಲಭ್ಯವಾದ ನಂತರ ಮಾತ್ರ ನವೆಂಬರ್‌ ನಲ್ಲಿ ಅವು ಸಕ್ರಿಯವಾದವು. ಇದಕ್ಕೆ ವ್ಯತಿರಿಕ್ತವಾಗಿ, ಜೂನ್‌ ನಲ್ಲಿ ಕೇವಲ 11 ಅಪ್‌ಲೋಡ್‌ಗಳು, ಜುಲೈ ನಲ್ಲಿ 50, ಆಗಸ್ಟ್ 822 ಮತ್ತು ಸೆಪ್ಟೆಂಬರ್ ‌ನಲ್ಲಿ 4,000 ಕ್ಕಿಂತ ಸ್ವಲ್ಪ ಹೆಚ್ಚು ಮಾತ್ರ ಅಪ್‌ ಲೋಡ್‌ ಆಗಿದ್ದು, ಆರಂಭದಲ್ಲಿ ಮಂಡಳಿಗಳು ಪ್ರಕ್ರಿಯೆಯನ್ನು ಹೇಗೆ ಗಂಭೀರವಲ್ಲದ ರೀತಿಯಲ್ಲಿ ನಿರಾತಂಕವಾಗಿ ಪರಿಗಣಿಸಿದವು ಎಂಬುದನ್ನು ತೋರಿಸುತ್ತದೆ. ಅಸ್ತಿತ್ವದಲ್ಲಿರುವ ಆಸ್ತಿಯ ವಿವರಗಳನ್ನು ಯು.ಎಂ.ಇ.ಇ.ಡಿ ಪೋರ್ಟಲ್‌ ನಲ್ಲಿ ಅಪ್‌‌ ಲೋಡ್ ಮಾಡುವಲ್ಲಿ ವಕ್ಫ್ ಮಂಡಳಿಗಳ ಗಂಭೀರತೆಯನ್ನು ಅರ್ಥಮಾಡಿಕೊಳ್ಳಲು ಕೆಳಗಿನ ಕೋಷ್ಟಕವು ಸ್ವಯಂ ವಿವರಣಾತ್ಮಕವಾಗಿದೆ.

ಕೋಷ್ಠಕ: ಉಮೀದ್‌ ಪೋರ್ಟಲ್‌ ನಲ್ಲಿ ವಕ್ಫ್‌ ಆಸ್ತಿಗಳ ಮಾಸಾವಾರು ಅಪ್‌ ಲೋಡ್‌ ವಿವರಗಳು

ತಿಂಗಳು (2025)

ಅಪ್‌ ಲೋಡ್‌ ಮಾಡಲಾದ ಆಸ್ತಿಗಳು

ಜೂನ್

11

ಜುಲೈ

50

ಆಗಸ್ಟ್‌

822

ಸೆಪ್ಟೆಂಬರ್

4,327

ಅಕ್ಟೋಬರ್

25,827

ನವೆಂಬರ್‌

2,42,463

ಡಿಸೆಂಬರ್ (6ನೇ ತಾರೀಖಿನವರೆಗೆ)

2,43,582

ಒಟ್ಟು

5,17,082

2025 ರ ಏಪ್ರಿಲ್ 8 ರಂದು ಯು.ಎಂ.ಇ.ಇ.ಡಿ ಕಾಯ್ದೆ, 1995 ಜಾರಿಗೆ ಬಂದಿದ್ದು, ಅಸ್ತಿತ್ವದಲ್ಲಿರುವ ವಕ್ಫ್ ಆಸ್ತಿಗಳನ್ನು ಕೇಂದ್ರ ಪೋರ್ಟಲ್ ನಲ್ಲಿ ಅಪ್‌ ಲೋಡ್ ಮಾಡುವ ಅವಧಿ 2025ರ ಡಿಸೆಂಬರ್ 6 ರಂದು ಮುಕ್ತಾಯಗೊಂಡಿದೆ. ಒಟ್ಟು 5,17,082 ಆಸ್ತಿಗಳ ವಿವರಗಳನ್ನು ಅಪ್‌ ಲೋಡ್ ಮಾಡಲು ಪ್ರಕ್ರಿಯೆ ಆರಂಭಿಸಲಾಗಿದ್ದು, ಕೊನೆಯ ವಾರಗಳಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಗಳಾಗಿವೆ, ವಿಶೇಷವಾಗಿ ಕಳೆದ ಆರು ದಿನಗಳಲ್ಲಿ, ಪೋರ್ಟಲ್‌ ನಲ್ಲಿ 2,43,582 ಕ್ಕೂ ಹೆಚ್ಚು ಆಸ್ತಿಗಳ ವಿವರಗಳನ್ನು ನಮೂದಿಸಲಾಗಿದೆ. ಇದು ಯು.ಎಂ.ಇ.ಇ.ಡಿ ಪೋರ್ಟಲ್‌ ನ ಸದೃಢ ಸ್ವರೂಪದ ಪ್ರತೀಕವಾಗಿದೆ.  ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ವಕ್ಫ್ ಮಂಡಳಿಗಳು ಮೊದಲ ಐದು ತಿಂಗಳು ನಿಷ್ಕ್ರಿಯವಾಗಿದ್ದವು ಮತ್ತು ಗಡುವು ಹತ್ತಿರ ಬರುತ್ತಿದ್ದಂತೆ ಮಾತ್ರ ಕಾರ್ಯಾರಂಭ ಮಾಡಿವೆ.  ಅನೇಕ ರಾಜ್ಯಗಳು ಕೊನೆಯ ಕ್ಷಣದಲ್ಲಿ ಅಸಾಧಾರಣ ಬೃಹತ್ ಮಟ್ಟದ ಅಪ್‌ ಲೋಡ್‌ ಗಳನ್ನು ಪೂರ್ಣಗೊಳಿಸಿದ್ದು, ಆದಾಗ್ಯೂ, ಯು.ಎಂ.ಇ.ಇ.ಡಿ ಪೋರ್ಟಲ್, ಹಠಾತ್ ಹೆಚ್ಚಳವನ್ನು ಸರಾಗವಾಗಿ ನಿಭಾಯಿಸಿದೆ.   ಡಿಸೆಂಬರ್ 6 ರ ಗಡುವಿಗೂ ಮುನ್ನ ವಕ್ಫ್ ಆಸ್ತಿಗಳನ್ನು ಅಪ್‌ ಲೋಡ್ ಮಾಡಲು ಸಾಧ್ಯವಾಗದ ಮುತಾವಲ್ಲಿಗಳು ಪರ್ಯಾಯ ಮಾರ್ಗವನ್ನು ಅನುಸರಿಸಬಹುದು. ಯು.ಎಂ.ಇ.ಇ.ಡಿ ಕಾಯಿದೆಯು ಸ್ಪಷ್ಟವಾದ ಪರಿಹಾರ ಕಾರ್ಯವಿಧಾನವನ್ನು ಒದಗಿಸುತ್ತದೆ, ಅವರು ಪರಿಹಾರಕ್ಕಾಗಿ ತಮ್ಮ ತಮ್ಮ ವಕ್ಫ್ ನ್ಯಾಯಮಂಡಳಿಗಳನ್ನು ಸಂಪರ್ಕಿಸಬಹುದಾಗಿದೆ.

"ಒಟ್ಟು ವಕ್ಫ್ ಆಸ್ತಿಗಳ ಪೈಕಿ ಕೇವಲ ಶೇ. 27 ರಷ್ಟನ್ನು ಮಾತ್ರ ಅಪ್‌ಲೋಡ್ ಮಾಡಲಾಗಿದೆ" ಎಂಬ ಇತ್ತೀಚಿನ ಮಾಧ್ಯಮ ವರದಿಗಳು ಮೂಲಭೂತವಾಗಿ ತಪ್ಪು ಮತ್ತು ಸತ್ಯಕ್ಕೆ ದೂರವಾದ ಮಾಹಿತಿ. ಅವು ಸಂಪೂರ್ಣವಾಗಿ ಹಳೆಯ ಡಬ್ಲ್ಯೂ.ಎ.ಎಂ.ಎಸ್.ಐ ಅಂಕಿಅಂಶಗಳನ್ನು ಅವಲಂಬಿಸಿದ್ದು, ಇಂದು ಸಂಖ್ಯೆಗಳಿಗೆ ಯಾವುದೇ ಅಧಿಕೃತ ಪ್ರಸ್ತುತತೆ ಇಲ್ಲ. ಡಬ್ಲ್ಯೂ.ಎ.ಎಂ.ಎಸ್.ಐ ಅನ್ನು ವಿಶ್ವಾಸಾರ್ಹವಲ್ಲ ಎಂದು ದೀರ್ಘಕಾಲದಿಂದ ಪರಿಗಣಿಸಲಾಗಿತ್ತು: ನಿಯಮಾನುಸಾರ ಸ್ಥಳಾವಕಾಶ ಬಿಡದೇ ಸಂಪೂರ್ಣ ನಿರ್ಮಾಣ ಮಾಡಿರುವ (ಶೂನ್ಯ-ಪ್ರದೇಶದ) ಗುಣಲಕ್ಷಣಗಳ ಸಾವಿರಾರು ಆಸ್ತಿಗಳು, ಹೊಂದಿಕೆಯಾಗದ ಅಥವಾ ನಕಲಿ ಕೋಡ್‌ ಗಳು, ಪುರಾವೆಗಳಿಲ್ಲದೆ ಬೆಲೆ ಹೆಚ್ಚಳದ ಭೂ ಪ್ರದೇಶಗಳು ಮತ್ತು ಗಮನಾರ್ಹ ದತ್ತಾಂಶ-ನಮೂದು ಅಸಂಗತತೆಗಳಂತಹ ದೋಷಗಳಿವೆ. ಹಲವಾರು ರಾಜ್ಯ ಮಂಡಳಿಗಳು ಸ್ವತಃ ದೋಷಗಳನ್ನು ಒಪ್ಪಿಕೊಂಡಿವೆ. ದತ್ತಾಂಶವನ್ನು ಸರಿಪಡಿಸುವಂತೆ ಸಚಿವಾಲಯವು ರಾಜ್ಯಗಳಿಗೆ ಪದೇ ಪದೇ ನಿರ್ದೇಶನ ನೀಡಿದೆ; ಈ ವಿಷಯವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯ ಎರಡರ ಮುಂದೆಯೂ ಇಡಲಾಯಿತು. ಅಂತಿಮವಾಗಿ, ನಿರಂತರ ತಪ್ಪುಗಳಿಂದಾಗಿ, ಡಬ್ಲ್ಯೂ.ಎ.ಎಂ.ಎಸ್.ಐ ಅನ್ನು 2025 ರ ಮೇ 8 ರಂದು ಔಪಚಾರಿಕವಾಗಿ ನಿಷ್ಕ್ರಿಯಗೊಳಿಸಲಾಯಿತು ಮತ್ತು ಎಲ್ಲಾ ಅಧಿಕೃತ ಉದ್ದೇಶಗಳಿಗಾಗಿ ಮುಚ್ಚಲಾಯಿತು. ಯಾವುದೇ ಶೇಕಡಾವಾರು ಲೆಕ್ಕಾಚಾರಕ್ಕೆ ಛೇದವಾಗಿ ದೋಷಪೂರಿತ ದತ್ತಾಂಶವನ್ನು ಬಳಸುವುದು ದಾರಿತಪ್ಪಿಸುವ ಮಾರ್ಗವಾಗಿದೆ ಮತ್ತು ವಾಸ್ತವದಲ್ಲಿ ಸಮರ್ಥನೆಗೆ ಬಳಸಿಕೊಳ್ಳಲಾರದ ದತ್ತಾಂಶವಾಗಿದೆ.

ಯು.ಎಂ.ಇ.ಇ.ಡಿ ಪೋರ್ಟಲ್‌ ನ ಅಂತಿಮ ಹಂತದ ಗಮನಾರ್ಹ ಕಾರ್ಯಕ್ಷಮತೆಯನ್ನು ಮಾಧ್ಯಮ ವರದಿಗಳು ಕಡೆಗಣಿಸಿವೆ. ನವೆಂಬರ್ ಅಂತ್ಯ ಮತ್ತು ಡಿಸೆಂಬರ್ ಆರಂಭದಲ್ಲಿ ಮಂಡಳಿಗಳು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿದಾಗ, ಪೋರ್ಟಲ್ ಅಭೂತಪೂರ್ವ ಚಟುವಟಿಕೆಗೆ ಸಾಕ್ಷಿಯಾಯಿತು, ಕೊನೆಯ 150 ಗಂಟೆಗಳಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಅಪ್‌ಲೋಡ್‌ ಗಳನ್ನು ಮಾಡಲಾಗಿದೆ. ಅತ್ಯಂತ ಹೆಚ್ಚಿನ ದಟ್ಟಣೆ ಹೊರತಾಗಿಯೂ, ವ್ಯವಸ್ಥೆಯು ಸ್ಥಿರವಾಗಿ ಮತ್ತು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿತ್ತು, ಜೊತೆಗೆ ದಿನದ 24 ಗಂಟೆಗಳ ತಾಂತ್ರಿಕ ಬೆಂಬಲ ಕೂಡ ನೀಡಲಾಗಿತ್ತು. ಕರ್ನಾಟಕ (58,328), ಮಹಾರಾಷ್ಟ್ರ (62,939), ಗುಜರಾತ್ (27,458), ತೆಲಂಗಾಣ (46,480), ಬಿಹಾರ (15,204), ಪಂಜಾಬ್ (25,910), ಹರಿಯಾಣ (13,445), ಜಮ್ಮು ಮತ್ತು ಕಾಶ್ಮೀರ (25,293), ಉತ್ತರ ಪ್ರದೇಶ (92,830) ಸೇರಿದಂತೆ ಅನೇಕ ಪ್ರಮುಖ ರಾಜ್ಯಗಳು ಅಸಾಧಾರಣ ಅಧಿಕ ಪರಿಶೀಲಿಸಿದ ಅಪ್‌ ಲೋಡ್‌ ಗಳನ್ನು ದಾಖಲಿಸಿವೆ.

ಡಬ್ಲ್ಯೂ.ಎ.ಎಂ.ಎಸ್.ಐ ಗಿಂತ ಭಿನ್ನವಾಗಿ, ಪ್ರತಿ ಹಂತದಲ್ಲೂ ಸಾಕ್ಷ್ಯದೊಂದಿಗೆ ಯು.ಎಂ.ಇ.ಇ.ಡಿ ಅನ್ನು ತಯಾರಕ-ಪರಿಶೀಲಕ-ಅನುಮೋದಕ ಕಾರ್ಯನಿರ್ವಹಣಾ ಮಾದರಿಯ ಮೂಲಕ ಸೆರೆಹಿಡಿಯಲಾದ ತಾಜಾ, ದೃಢೀಕೃತ ದತ್ತಾಂಶ ಆಧಾರಿತವಾಗಿ ರೂಪಿಸಲಾಗಿದೆ, ಎರಡು ಸಂಬಂಧಪಡದ ವಸ್ತುಗಳ ಹೋಲಿಕೆ ಹೇಗೆ ಅರ್ಥ ರಹಿತವೋ, ಈ ಪರಿಶೀಲಿಸಿದ ದತ್ತಾಂಶವನ್ನು ಡಬ್ಲ್ಯೂ.ಎ.ಎಂ.ಎಸ್.ಐ ಯ ದೋಷ-ಸಹಿತ ಸಂಖ್ಯೆಗಳೊಂದಿಗೆ ಹೋಲಿಸುವುದು ಅದೇ ರೀತಿ ನಿರರ್ಥಕ.

ಸಚಿವಾಲಯವು ಪಾರದರ್ಶಕತೆ, ನಿಖರತೆ ಮತ್ತು ಹೊಣೆಗಾರಿಕೆಗೆ ಬದ್ಧವಾಗಿದೆ. ವಕ್ಫ್ ಆಸ್ತಿ ಅಪ್ ಲೋಡ್‌ ಗಳು ಯಾವುದೇ ಮೌಲ್ಯಮಾಪನವು ಪರಿಶೀಲಿಸಿದ ಯು.ಎಂ.ಇ.ಇ.ಡಿ ದತ್ತಾಂಶವನ್ನು ಮಾತ್ರ ಆಧರಿಸಿರಬೇಕೇ ಹೊರತು ಯಾವುದೇ ಅಧಿಕೃತ ಉದ್ದೇಶವನ್ನು ಪೂರೈಸದ ಸ್ಥಗಿತಗೊಂಡ ಪರಂಪರೆ ವ್ಯವಸ್ಥೆಯ ಮೇಲೆ ಅಲ್ಲ.

 

*****


(रिलीज़ आईडी: 2201260) आगंतुक पटल : 7
इस विज्ञप्ति को इन भाषाओं में पढ़ें: Urdu , English , Malayalam , हिन्दी , Marathi , Telugu