ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಪರೀಕ್ಷಾ ಪೇ ಚರ್ಚಾ (ಪಿಪಿಸಿ 2026) ಇದರ 9ನೇ ಆವೃತ್ತಿಯು ಜನವರಿ 2026ರಲ್ಲಿ ನಡೆಯಲಿದೆ


ಜನವರಿ 11, 2026 ರವರೆಗೆ ಮೈಗೌ (MyGov) ಜಾಲತಾಣದಲ್ಲಿ ನೋಂದಣಿ ಅವಕಾಶ ತೆರೆದಿರುತ್ತವೆ

प्रविष्टि तिथि: 06 DEC 2025 12:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಶಿಷ್ಟ ಸಂವಾದಾತ್ಮಕ ಕಾರ್ಯಕ್ರಮವಾದ ಪರೀಕ್ಷಾ ಪೇ ಚರ್ಚಾ (ಪಿಪಿಸಿ), ಇದರ 9ನೇ ಆವೃತ್ತಿಯು ಮುಂಬರುವ ಜನವರಿ 2026ರಲ್ಲಿ ನಡೆಯಲಿದೆ. ಇದರಲ್ಲಿ ಭಾರತ ಮತ್ತು ವಿದೇಶಗಳ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಅವರೊಂದಿಗೆ ಪರೀಕ್ಷಾ ಸಿದ್ದತೆ ಪರೀಕ್ಷಾ ಒತ್ತಡವನ್ನು ಚರ್ಚಿಸಲು ಮತ್ತು ಪರೀಕ್ಷೆಗಳನ್ನು ಉತ್ಸವ ರೀತಿಯಲ್ಲಿ ಕಾಣಲು ಮತ್ತು ಜೀವನದ ಅವಿಭಾಜ್ಯ ಅಂಗವಾಗಿ ಆಚರಿಸಲು ತೊಡಗಿಸಿಕೊಳ್ಳುಲು ಪೂರಕ ವಿಧಿವಿಧಾನ ಚರ್ಚಿಸಲಾಗುವುದು.

ಭಾಗವಹಿಸುವವರ ಆಯ್ಕೆಗಾಗಿ, 1 ಡಿಸೆಂಬರ್ 2025 ರಿಂದ 11 ಜನವರಿ 2026 ರವರೆಗೆ ಮೈಗೌ ಜಾಲತಾಣದಲ್ಲಿ (https://innovateindia1.mygov.in/) ಅಂತರ್ಜಾಲ ಬಹುಆಯ್ಕೆಯ ಪ್ರಶ್ನಾವಳಿಯ (ಮಲ್ಟಿಪಲ್‌ ಚೋಯ್ಸ್‌ ಕ್ವೆಶ್ಚನ್ಸ್ -ಎಂ.ಸಿ.ಕ್ಯೂ)-ಆಧಾರಿತ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. 6 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ನೋಂದಾಯಿತ ಎಲ್ಲಾ ಭಾಗವಹಿಸುವವರು ಚಟುವಟಿಕೆಯನ್ನು ಪೂರ್ಣಗೊಳಿಸಿದ ನಂತರ ಮೈಗೌ ನಿಂದ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಪಡೆಯುತ್ತಾರೆ.

ಪರೀಕ್ಷಾ ಪೇ ಚರ್ಚಾದ 8ನೇ ಆವೃತ್ತಿಯನ್ನು ಫೆಬ್ರವರಿ 10, 2025 ರಂದು ಪ್ರಸಾರ ಮಾಡಲಾಯಿತು. ನವದೆಹಲಿಯ ಸುಂದರ್ ನರ್ಸರಿಯಲ್ಲಿ ನಡೆದ ಈ ಸಂವಾದವನ್ನು ನವೀನ ಹೊಸ ಸ್ವರೂಪದಲ್ಲಿ ನಡೆಸಲಾಯಿತು, ಇದರಲ್ಲಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ , ಸರ್ಕಾರಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು, ಸೈನಿಕ್ ಶಾಲೆಗಳು, ಏಕಲವ್ಯ ಮಾದರಿ ವಸತಿ ಶಾಲೆಗಳು, ಸಿ.ಬಿ.ಎಸ್.ಇ ಶಾಲೆಗಳು ಮತ್ತು ನವೋದಯ ವಿದ್ಯಾಲಯಗಳನ್ನು ಪ್ರತಿನಿಧಿಸುವ ಒಟ್ಟಾರೆ 36 ವಿದ್ಯಾರ್ಥಿಗಳು ಒಂದಡೆ ಒಟ್ಟುಗೂಡಿದರು. ”ಪ್ರೇರಣಾ” ದ ಹಳೆಯ ವಿದ್ಯಾರ್ಥಿಗಳು ಮತ್ತು “ಕಲಾ ಉತ್ಸವ” ಮತ್ತು “ವೀರ್ ಗಾಥಾ”ದ ವಿಜೇತರು ಸಹ ಭಾಗವಹಿಸಿದ್ದರು. ಈ ಆವೃತ್ತಿಯು ಕ್ರೀಡೆ ಮತ್ತು ಶಿಸ್ತು ಮತ್ತು ಮಾನಸಿಕ ಆರೋಗ್ಯದಿಂದ ಪೋಷಣೆ, ತಂತ್ರಜ್ಞಾನ ಮತ್ತು ಹಣಕಾಸು ಮತ್ತು ಸೃಜನಶೀಲತೆ ಮತ್ತು ಸಕಾರಾತ್ಮಕತೆಯವರೆಗೆ ಏಳು ಪ್ರತ್ಯೇಕ ಸಂಚಿಕೆಗಳನ್ನು ಒಳಗೊಂಡಿತ್ತು, ಇದು ಪ್ರಸಿದ್ಧ ವ್ಯಕ್ತಿಗಳಿಂದ ಸ್ಪೂರ್ತಿದಾಯಕ ಅನುಭವಗಳ ಒಳನೋಟಗಳನ್ನು ಕೂಡಾ ನೀಡುತ್ತದೆ.

2025ರಲ್ಲಿ, ಪರೀಕ್ಷಾ ಪೇ ಚರ್ಚಾ ಗಮನಾರ್ಹ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿತು, 245ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು, 153 ದೇಶಗಳ ಶಿಕ್ಷಕರು ಮತ್ತು 149 ದೇಶಗಳ ಪೋಷಕರ ಭಾಗವಹಿಸುವಿಕೆಯನ್ನು ಸೆಳೆಯಿತು. ಈ ಕಾರ್ಯಕ್ರಮವು 2018ರಲ್ಲಿ ಮೊದಲ ಆವೃತ್ತಿಯಲ್ಲಿ ಕೇವಲ 22,000 ವಿದ್ಯಾರ್ಥಿಗಳು ಭಾಗವಹಿಸುವವರಿಂದ 2025ರಲ್ಲಿ 8ನೇ ಆವೃತ್ತಿಯಲ್ಲಿ 3.56 ಕೋಟಿ ನೋಂದಣಿಯ ವರೆಗೆ ಅಸಾಧಾರಣ ಬೆಳವಣಿಗೆಗೆ ಪರೀಕ್ಷಾ ಪೆ ಚರ್ಚಾ ಸಾಕ್ಷಿಯಾಗಿದೆ - ಇದು ಸ್ಪಷ್ಟ ಪ್ರಸ್ತುತತೆ ಮತ್ತು ಪರಿಣಾಮವಾಗಿ ಜನಪ್ರಿಯತೆಯನ್ನು ಹೊಂದಿದೆ. ಇದರೊಂದಿಗೆ, 1.55 ಕೋಟಿ ಜನರು ಪಿಪಿಸಿ 2025ಗೆ ಸಂಬಂಧಿಸಿದ ರಾಷ್ಟ್ರವ್ಯಾಪಿ ಜನ ಆಂದೋಲನ ಚಟುವಟಿಕೆಗಳಲ್ಲಿ ಭಾಗವಹಿಸಿದರು, ಹಾಗೂ ಈ ವರೆಗಿನ ಒಟ್ಟು ಭಾಗವಹಿಸುವಿಕೆಯನ್ನು ಸುಮಾರು 5 ಕೋಟಿ ಮಟ್ಟಕ್ಕೆ ತಂದರು.

 

*****


(रिलीज़ आईडी: 2199884) आगंतुक पटल : 3
इस विज्ञप्ति को इन भाषाओं में पढ़ें: Odia , Marathi , English , Urdu , हिन्दी , Tamil