ರೈಲ್ವೇ ಸಚಿವಾಲಯ
azadi ka amrit mahotsav

ದೆಹಲಿ-ಮುಂಬೈ ಮಾರ್ಗದಲ್ಲಿನ ʻಪಲ್ವಾಲ್-ಮಥುರಾ-ನಾಗ್ಡಾʼ ವಿಭಾಗ (633 ಆರ್‌ಕೆಎಂ) ಹಾಗೂ ದೆಹಲಿ-ಹೌರಾ ಮಾರ್ಗದ ʻಹೌರಾ-ಬರ್ಧಮಾನ್ʼ ವಿಭಾಗದಲ್ಲಿ (105 ಆರ್‌ಕೆಎಂ) ಒಟ್ಟು 738 ಕಿ.ಮೀ. ವ್ಯಾಪ್ತಿಯಲ್ಲಿ ʻಕವಚ್ 4.0ʼ ಸುರಕ್ಷತಾ ವ್ಯವಸ್ಥೆ ಕಾರ್ಯಾರಂಭ ಮಾಡಿದೆ


ರೈಲ್ವೆ ಇಲಾಖೆಯ ಎಲ್ಲಾ ʻಸುವರ್ಣ ಚತುರ್ಭುಜʼ (ಗೋಲ್ಡನ್‌ ಕ್ವಾಡ್ರಿಲ್ಯಾಟರಲ್‌-ಜಿಕ್ಯೂ) ಮಾರ್ಗಗಳು, ʻಸುವರ್ಣ ಕರ್ಣೀಯʼ(ಗೋಲ್ಡನ್‌ ಡಿಯೋಗ್ನಲ್‌-ಜಿಡಿ) ಮಾರ್ಗಗಳು, ಹೆಚ್ಚಿನ ದಟ್ಟಣೆಯ ರೈಲ್ವೆ ಜಾಲಗಳು ಹಾಗೂ ಭಾರತೀಯ ರೈಲ್ವೆಯ ಇತರೆ ಗುರುತಿಸಿದ ವಿಭಾಗಗಳನ್ನು ಒಳಗೊಂಡಂತೆ ಒಟ್ಟು 15,512 ರೂಟ್‌ ಕಿ.ಮೀ. ವ್ಯಾಪ್ತಿಯಲ್ಲಿ ಹಳಿ ಬದಿಯ ʻಕವಚ್ʼ ಸುರಕ್ಷತಾ ವ್ಯವಸ್ಥೆಯ ಅನುಷ್ಠಾನವನ್ನು ಕೈಗೆತ್ತಿಕೊಳ್ಳಲಾಗಿದೆ

ʻಕವಚ್ 4.0ʼ ವ್ಯವಸ್ಥೆಯು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸುಧಾರಿತ ಸ್ಥಳ ನಿಖರತೆ, ಸುಧಾರಿತ ಯಾರ್ಡ್ ಸಿಗ್ನಲ್ ಮಾಹಿತಿಯನ್ನು ಒಳಗೊಂಡಿದೆ. ಜೊತೆಗೆ ʻಒಎಫ್‌ಸಿʼ ಆಧಾರಿತ ಸ್ಟೇಷನ್ ಇಂಟರ್ಫೇಸ್ ಮತ್ತು ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಂಯೋಜನೆಯನ್ನು ಇದು ಒಳಗೊಂಡಿದೆ

प्रविष्टि तिथि: 05 DEC 2025 2:31PM by PIB Bengaluru
  1. ʻಕವಚ್ʼ - ಇದು ದೇಶೀಯವಾಗಿ ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ರೈಲು ಸುರಕ್ಷತಾ (ಎಟಿಪಿ) ವ್ಯವಸ್ಥೆಯಾಗಿದೆ. ʻಕವಚ್ʼ ಹೆಚ್ಚು ತಂತ್ರಜ್ಞಾನ ತೀವ್ರ ವ್ಯವಸ್ಥೆಯಾಗಿದ್ದು, ಇದಕ್ಕೆ ಅತ್ಯುನ್ನತ ಸುರಕ್ಷತಾ ಪ್ರಮಾಣೀಕರಣದ (ಎಸ್ಐಎಲ್ -4) ಅಗತ್ಯವಿರುತ್ತದೆ.
  2. ʻಲೋಕೊ ಪೈಲಟ್ʼ ರೈಲನ್ನು ನಿಧಾನಗೊಳಿಸಲು ವಿಫಲವಾದರೆ ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಅನ್ವಯಿಸುವ ಮೂಲಕ ನಿಗದಿತ ವೇಗದ ಮಿತಿಯೊಳಗೆ ರೈಲುಗಳನ್ನು ಓಡಿಸಲು ʻಕವಚ್ʼ ಲೋಕೋ ಪೈಲಟ್‌ಗೆ ಸಹಾಯ ಮಾಡುತ್ತದೆ. ಜೊತೆಗೆ ಪ್ರತಿಕೂಲ ಹವಾಮಾನದಲ್ಲಿ ರೈಲುಗಳನ್ನು ಸುರಕ್ಷಿತವಾಗಿ ಚಾಲನೆ ಮಾಡಲು ನೆರವಾಗುತ್ತದೆ.
  3. ಪ್ರಯಾಣಿಕರ ರೈಲುಗಳಲ್ಲಿ ಮೊದಲ ನೈಜ ಪ್ರಯೋಗಗಳನ್ನು ಫೆಬ್ರವರಿ 2016ರಲ್ಲಿ ಪ್ರಾರಂಭಿಸಲಾಯಿತು. ರೈಲ್ವೆ ಇಲಾಖೆ ಪೂರ್ವಾನುಭವ ಹಾಗೂ ʻಸ್ವತಂತ್ರ ಸುರಕ್ಷತಾ ಮೌಲ್ಯಮಾಪಕʼರಿಂದ(ಐಎಸ್ಎ) ಸುರಕ್ಷತಾ ಮೌಲ್ಯಮಾಪನದ ಆಧಾರದ ಮೇಲೆ, 2018-19ರಲ್ಲಿ ಮೂರು ಸಂಸ್ಥೆಗಳನ್ನು ʻಕವಚ್ 3.2ʼ ಪೂರೈಕೆಗಾಗಿ ಅನುಮೋದಿಸಲಾಗಿದೆ.
  4. ಜುಲೈ 2020ರಲ್ಲಿ ʻಕವಚ್ʼ ಅನ್ನು ರಾಷ್ಟ್ರೀಯ ʻಎಟಿಪಿʼ ವ್ಯವಸ್ಥೆಯಾಗಿ ಅಳವಡಿಸಿಕೊಳ್ಳಲಾಯಿತು.
  5. ಕವಚ್ ವ್ಯವಸ್ಥೆಯ ಅನುಷ್ಠಾನವು ಈ ಕೆಳಗಿನ ಪ್ರಮುಖ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ:

i. ಪ್ರತಿ ನಿಲ್ದಾಣ, ಬ್ಲಾಕ್ ಸೆಕ್ಷನ್‌ಗಳಲ್ಲಿ ʻಕವಚ್ʼ ನಿಲ್ದಾಣದ ಸ್ಥಾಪನೆ.

ii. ಟ್ರ್ಯಾಕ್ ಉದ್ದಕ್ಕೂ ʻಆರ್‌ಎಫ್‌ಐಡಿʼ ಟ್ಯಾಗ್‌ಗಳನ್ನು ಅಳವಡಿಸುವುದು.

iii. ವಿಭಾಗದುದ್ದಕ್ಕೂ ಟೆಲಿಕಾಂ ಟವರ್‌ಗಳ ಸ್ಥಾಪನೆ.

iv. ಹಳಿಯ ಉದ್ದಕ್ಕೂ ʻಆಪ್ಟಿಕಲ್ ಫೈಬರ್ ಕೇಬಲ್ʼ ಅಳವಡಿಕೆ.

v. ಭಾರತೀಯ ರೈಲ್ವೆಯಲ್ಲಿ ಕಾರ್ಯಾಚರಿಸುವ ಪ್ರತಿಯೊಂದು ರೈಲಿಗೂ ʻಕವಚ್‌ʼ ಸುರಕ್ಷತಾ ವ್ಯವಸ್ಥೆ ಒದಗಿಸುವುದು.

  1. ದಕ್ಷಿಣ ಮಧ್ಯ ರೈಲ್ವೆಯಲ್ಲಿ 1465 ರೂಟ್‌ ಕಿ.ಮೀ. ವ್ಯಾಪ್ತಿಯಲ್ಲಿ ʻಕವಚ್ 3.2ʼ ನಿಯೋಜನೆ ಹಾಗೂ ಪೂರ್ವ ಅನುಭವದ ಆಧಾರದ ಮೇಲೆ, ಮತ್ತಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ಅಂತಿಮವಾಗಿ, ನಿರ್ದಷ್ಟೆಯುಳ್ಳ ʻಕವಚ್ -40ʼ ಆವೃತ್ತಿಯನ್ನು 16.07.2024 ರಂದು ʻಆರ್‌ಡಿಎಸ್ಒʼ ಅನುಮೋದಿಸಿತು.
  2. ʻಕವಚ್ ಆವೃತ್ತಿ 4.0ʼ ವೈವಿಧ್ಯಮಯ ರೈಲ್ವೆ ಜಾಲಕ್ಕೆ ಅಗತ್ಯವಿರುವ ಎಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಭಾರತೀಯ ರೈಲ್ವೆಯ ಸುರಕ್ಷತೆಯಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಅಲ್ಪಾವಧಿಯಲ್ಲಿ, ಭಾರತೀಯ ರೈಲ್ವೆಯು ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ, ಪರೀಕ್ಷಿಸಿ, ನಿಯೋಜಿಸಲು ಪ್ರಾರಂಭಿಸಿತು.
  3. ʻಕವಚ್‌ ಆವೃತ್ತಿ 4.0ʼನಲ್ಲಿನ ಪ್ರಮುಖ ಸುಧಾರಣೆಯೆಂದರೆ ಇದು ಹೆಚ್ಚಿನ ಸ್ಥಳ ನಿಖರತೆ ಒದಗಿಸುತ್ತದೆ. ದೊಡ್ಡ ಯಾರ್ಡ್‌ಗಳಲ್ಲಿ ಸಿಗ್ನಲ್‌ಗಳ ಬಗ್ಗೆ ಸುಧಾರಿತ ಮಾಹಿತಿ ನೀಡುತ್ತದೆ. ʻಒಎಫ್‌ಸಿʼಯಲ್ಲಿ ನಿಲ್ದಾಣದಿಂದ ನಿಲ್ದಾಣಕ್ಕೆ ʻಕವಚ್ʼ ಇಂಟರ್ಫೇಸ್ ಒದಗಿಸುವುದರ ಜೊತೆಗೆ, ಅಸ್ತಿತ್ವದಲ್ಲಿರುವ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಮ್‌ಗೆ ನೇರ ಸಂಯೋಜನೆಯನ್ನು ಇದು ಒಳಗೊಂಡಿದೆ. ಈ ಸುಧಾರಣೆಗಳೊಂದಿಗೆ, ಭಾರತೀಯ ರೈಲ್ವೆಯಲ್ಲಿ ದೊಡ್ಡ ಮಟ್ಟದಲ್ಲಿ ʻಕವಚ್ ಆವೃತ್ತಿ 4.0ʼ ನಿಯೋಜನೆಗೆ ಇಲಾಖೆಯು ಸಜ್ಜಾಗಿದೆ.
  4. ವ್ಯಾಪಕ ಮತ್ತು ವಿಸ್ತಾರವಾದ ಪ್ರಯೋಗಗಳ ನಂತರ, ʻಕವಚ್ ಆವೃತ್ತಿ 4.0ʼ ಅನ್ನು ದೆಹಲಿ-ಮುಂಬೈ ಮಾರ್ಗದಲ್ಲಿನ ʻಪಲ್ವಾಲ್-ಮಥುರಾ-ನಗ್ಡಾ ವಿಭಾಗ (633 ಆರ್‌ಕೆಎಂ) ಹಾಗೂ ದೆಹಲಿ-ಹೌರಾ ಮಾರ್ಗದಲ್ಲಿನ ʻಹೌರಾ-ಬರ್ಧಮಾನ್ ವಿಭಾಗʼದಲ್ಲಿ (105 ಆರ್‌ಕಎಂ) ಒಟ್ಟು 738 ರೂಟ್ ಕಿ.ಮೀ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಿಯೋಜಿಸಿ ಕಾರ್ಯಾರಂಭ ಮಾಡಲಾಗಿದೆ. ದೆಹಲಿ-ಮುಂಬೈ ಮತ್ತು ದೆಹಲಿ -ಹೌರಾ ಮಾರ್ಗಗಳ ಉಳಿದ ವಿಭಾಗಗಳಲ್ಲಿ ʻಕವಚ್ʼ ಅನುಷ್ಠಾನವನ್ನು ಕೈಗೆತ್ತಿಕೊಳ್ಳಲಾಗಿದೆ.
  5. ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಮಾರ್ಗಗಳು ಸೇರಿದಂತೆ ಹೆಚ್ಚಿನ ದಟ್ಟಣೆಯ ಮಾರ್ಗಗಳಲ್ಲಿ ʻಕವಚ್‌ʼಗೆ ಸಂಬಂಧಿಸಿದ  ಪ್ರಮುಖ ಅಂಶಗಳಲ್ಲಿನ ಪ್ರಗತಿ ಈ ಕೆಳಗಿನಂತಿದೆ:

ಕ್ರ.ಸಂ.

ವಿವರ

ಪ್ರಗತಿ

i

ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ

7129 ಕಿ.ಮೀ.

ii

ಟೆಲಿಕಾಂ ಟವರ್‌ಗಳ ಸ್ಥಾಪನೆ

860 ಟವರ್‌ಗಳು

iii

ʻಕವಚ್‌ʼ ನಿಲ್ದಾಣಗಳ ಸ್ಥಾಪನೆ

549 ನಿಲ್ದಾಣಗಳು

iv

ಹಳಿ ಬದಿಯ ಸಾಧನ ಅಳವಡಿಕೆ

2674 ರೂಟ್‌ ಕಿ.ಮೀ.

v

ಲೋಕೋಗಳಲ್ಲಿ ʻಕವಚ್‌ʼ ಅಳವಡಿಕೆ

4,154

 

  1. ಇದಲ್ಲದೆ, ಹಳಿ ಬದಿಯ ʻಕವಚ್ʼ ಸಾಧನ ಅಳವಡಿಕೆ ಕಾರ್ಯವನ್ನು 15,512 ರೂಟ್‌ ಕಿ.ಎಂ. ವ್ಯಾಪ್ತಿಯಲ್ಲಿ ಎಲ್ಲಾ ʻಜಿಕ್ಯೂʼ,ʻಜಿಡಿʼ, ʻಎಚ್‌ಡಿಎನ್ʼ ಮತ್ತು ಭಾರತೀಯ ರೈಲ್ವೆಯ ಗುರುತಿಸಲಾದ ವಿಭಾಗಗಳಲ್ಲಿ ಕೈಗೊಳ್ಳಲಾಗಿದೆ.
  2. ಇನ್ನೂ 9,069 ರೈಲುಗಳಲ್ಲಿ ʻಕವಚ್ ಆವೃತ್ತಿ 4.0ʼ ನಿಯೋಜಿಸಲು ಬಿಡ್‌ಗಳನ್ನು ಆಹ್ವಾನಿಸಲಾಗಿದೆ. ರೈಲುಗಳಲ್ಲಿ ಹಂತ ಹಂತವಾಗಿ ʻಕವಚ್‌ʼ ಒದಗಿಸಲಾಗುತ್ತಿದೆ.
  3. ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ತರಬೇತಿ ನೀಡಲು ಭಾರತೀಯ ರೈಲ್ವೆಯ ʻಕೇಂದ್ರೀಕೃತ ತರಬೇತಿ ಸಂಸ್ಥೆʼಗಳಲ್ಲಿ ʻಕವಚ್ʼ ಕುರಿತು ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈವರೆಗೆ 40,000ಕ್ಕೂ ಹೆಚ್ಚು ತಂತ್ರಜ್ಞರು, ನಿರ್ವಾಹಕರು ಮತ್ತು ಎಂಜಿನಿಯರ್‌ಗಳಿಗೆ ʻಕವಚ್ʼ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಲಾಗಿದೆ. ಇದರಲ್ಲಿ 30,000 ಲೋಕೋ ಪೈಲಟ್‌ಗಳು ಮತ್ತು ಸಹಾಯಕ ಲೋಕೋ ಪೈಲಟ್‌ಗಳು ಸೇರಿದ್ದಾರೆ. ʻಐಆರ್ಐಎಸ್ಇಟಿʼ ಸಹಯೋಗದೊಂದಿಗೆ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
  4. ʻಕವಚ್ʼನ ನಿಲ್ದಾಣದ ಉಪಕರಣಗಳು, ಹಳಿ ಬದಿಯ ಉಪಕರಣ ಸೇರಿದಂತೆ ಸಂಬಂಧಪಟ್ಟ ಉಪಕರಣಗಳನ್ನು ಒದಗಿಸಲು ಅಂದಾಜು 1 ಕಿs.ಮೀ.ಗೆ  50 ಲಕ್ಷ ರೂ. ವೆಚ್ಚವಾಗಲಿದೆ. ರೈಲುಗಳಿಗೆ ʻಕವಚ್ʼ ಉಪಕರಣಗಳನ್ನು ಒದಗಿಸಲು ಅಂದಾಜು ಪ್ರತಿ ರೈಲಿಗೆ 80 ಲಕ್ಷ ರೂ. ವೆಚ್ಚವಾಗಲಿದೆ.
  5. ಅಕ್ಟೋಬರ್ 25 ರವರೆಗೆ ʻಕವಚ್ʼ ಕಾಮಗಾರಿಗಳಿಗೆ 2,354.36 ಕೋಟಿ ರೂ. ನಿಧಿ ಬಳಸಲಾಗಿದೆ. 2025-26ನೇ ಸಾಲಿನಲ್ಲಿ 1673.19 ಕೋಟಿ ರೂ. ನಿಧಿ ಹಂಚಿಕೆ ಮಾಡಲಾಗಿದೆ. ಕಾಮಗಾರಿಗಳ ಪ್ರಗತಿಗೆ ಅನುಗುಣವಾಗಿ ಅಗತ್ಯ ಹಣ ಲಭ್ಯವಾಗುವಂತೆ ಮಾಡಲಾಗುತ್ತಿದೆ.

ಕೇಂದ್ರ ರೈಲ್ವೆ; ವಾರ್ತಾ ಮತ್ತು ಪ್ರಸಾರ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಒದಗಿಸಿದ್ದಾರೆ.

 

*****


(रिलीज़ आईडी: 2199409) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी , Bengali , Gujarati