ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ನಾಳೆ 100 ದಿನಗಳ ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ


ಮೂರು-ಹಂತಗಳ ಅಭಿಯಾನ ಯೋಜನೆಯ ಮೂಲಕ, ಬಾಲ್ಯ ವಿವಾಹ ಮುಕ್ತ ಭಾರತ ನಿರ್ಮಿಸುವ ಆಂದೋಲನಕ್ಕೆ  ಕೈ ಜೋಡಿಸಲು ನಾಗರಿಕರು, ಸಂಸ್ಥೆಗಳು ಮತ್ತು ಸಮುದಾಯ ನಾಯಕರಿಗೆ  ಸಚಿವಾಲಯ ಕರೆ

प्रविष्टि तिथि: 03 DEC 2025 9:30AM by PIB Bengaluru

ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನದ ಒಂದು ವರ್ಷವನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ಮುಕ್ತ ಭಾರತಕ್ಕಾಗಿ 100 ದಿನಗಳ ತೀವ್ರ ಜಾಗೃತಿ ಅಭಿಯಾನಕ್ಕೆ ನಾಳೆ (2025 ಡಿಸೆಂಬರ್ 4) ನವದೆಹಲಿಯ ವಿಜ್ಞಾನ ಭವನದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನವನ್ನು 2024ರ ನವೆಂಬರ್ 27 ರಂದು ಆರಂಭಿಸಿತು ಮತ್ತು ಅದು 2025ರ ನವೆಂಬರ್ 27ಕ್ಕೆ ಒಂದು ವರ್ಷವನ್ನು ಪೂರೈಸಿದೆ. ನಾಳೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಅವರು ರಾಜ್ಯ ಸಚಿವೆ ಶ್ರೀಮತಿ ಸಾವಿತ್ರಿ ಠಾಕೂರ್ ಮತ್ತಿತರರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮವು ಬಾಲ್ಯವಿವಾಹವನ್ನು ಕೊನೆಗೊಳಿಸುವ ರಾಷ್ಟ್ರೀಯ ಪ್ರತಿಜ್ಞೆ ಎಂಬ ಚಲನಚಿತ್ರವನ್ನು ಒಳಗೊಂಡಿದೆ. ಇದು ವಿಶೇಷವಾಗಿ ನಿರ್ಮಿಸಲಾದ ಚಲನಚಿತ್ರವಾಗಿದ್ದು, ದೇಶಾದ್ಯಂತದ ಸ್ಪೂರ್ತಿದಾಯಕ ಬದಲಾವಣೆಯ ಕಥೆಗಳನ್ನು ಪ್ರದರ್ಶಿಸುವ ಮತ್ತು ಮುಂಚೂಣಿಯ ಚಾಂಪಿಯನ್‌ಗಳ ನುಡಿಗಳು, ಸಾಮೂಹಿಕ ಪ್ರಗತಿಯನ್ನು ಆಚರಿಸುವುದು ಮತ್ತು ಕಾರ್ಯಾಚರಣೆಯ ಮುಂದಿನ ಹಂತಕ್ಕೆ ವೇಗದ ಬಲವರ್ಧನೆ ಒಳಗೊಂಡಿರುತ್ತದೆ. ಕಾರ್ಯಕ್ರಮದ ನೇರ ಪ್ರಸಾರವು https://webcast.gov.in/mwcd ಲಭ್ಯವಿದೆ.

100 ದಿನದ ಅಭಿಯಾನ (27 ನವೆಂಬರ್ 2025 – 8 ಮಾರ್ಚ್  2026)

ಈ ಅಭಿಯಾನವು ಸಮುದಾಯಗಳಿಗೆ ಶಕ್ತಿ ತುಂಬಲು ಮತ್ತು ನಿರಂತರ ಕ್ರಿಯೆಯನ್ನು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾದ ರಚನಾತ್ಮಕ, ಮೂರು-ಹಂತಗಳ ಯೋಜನೆಯನ್ನು ಅನುಸರಿಸುತ್ತದೆ:

  • 1ನೇ ಹಂತ (27 ನವೆಂಬರ್ – 31 ಡಿಸೆಂಬರ್ 2025):
    ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾಗೃತಿ ಚಟುವಟಿಕೆಗಳು, ಅದರಲ್ಲಿ ಚರ್ಚೆಗಳು, ಪ್ರಬಂಧ ಸ್ಪರ್ಧೆಗಳು, ಸಂವಾದಾತ್ಮಕ ಗೋಷ್ಠಿಗಳು ಮತ್ತು ಪ್ರತಿಜ್ಞೆ ಸಮಾರಂಭಗಳು ಸೇರಿವೆ.
  • 2ನೇ ಹಂತ (1 – 31 ಜನವರಿ 2026):
    ಮಕ್ಕಳ ಹಕ್ಕುಗಳು, ಸುರಕ್ಷತೆ ಮತ್ತು ಸಬಲೀಕರಣದ ಕುರಿತು ಸಂದೇಶಗಳನ್ನು ವರ್ಧಿಸಲು ಧಾರ್ಮಿಕ ನಾಯಕರು, ಸಮುದಾಯದ ಪ್ರಭಾವಿಗಳು ಮತ್ತು ವಿವಾಹ ಸೇವಾ ಪೂರೈಕೆದಾರರೊಂದಿಗೆ ತೊಡಗಿಸಿಕೊಳ್ಳುವುದು.
  • 3ನೇ ಹಂತ (1 ಫೆಬ್ರವರಿ– 8 ಮಾರ್ಚ್  2026):
    ಗ್ರಾಮ ಪಂಚಾಯಿತಿಗಳು ಮತ್ತು ಪುರಸಭೆಯ ವಾರ್ಡ್‌ಗಳನ್ನು ಸಜ್ಜುಗೊಳಿಸಿ ತಮ್ಮ ವ್ಯಾಪ್ತಿಯನ್ನು ಬಾಲ್ಯವಿವಾಹ ಮುಕ್ತವೆಂದು ಘೋಷಿಸುವ ನಿರ್ಣಯಗಳನ್ನು ಅಂಗೀಕರಿಸುವುದು

ಈ ರಾಷ್ಟ್ರೀಯ ಅಭಿಯಾನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಚಿವಾಲಯಗಳ ನಿಕಟ ಸಮನ್ವಯದೊಂದಿಗೆ ಜಾರಿಗೊಳಿಸಲಾಗುತ್ತಿದ್ದು, ಇದು ತಡೆರಹಿತ ಸಹಯೋಗ ಮತ್ತು ವ್ಯಾಪಕವಾದ ಜನಸಾಮಾನ್ಯರ ವ್ಯಾಪ್ತಿಯನ್ನು ಖಾತ್ರಿಪಡಿಸುತ್ತದೆ. ಈ 100 ದಿನಗಳ ಅಭಿಯಾನದ ಮೂಲಕ ದೇಶಾದ್ಯಂತ ನಾಗರಿಕರು, ಸಂಸ್ಥೆಗಳು ಮತ್ತು ಸಮುದಾಯ ಮುಖಂಡರು ಈ ಆಂದೋಲನಕ್ಕೆ ಸೇರಲು ಮತ್ತು ಬಾಲ್ಯವಿವಾಹ ಮುಕ್ತ ಭಾರತವನ್ನು ನಿರ್ಮಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಲು ಸಚಿವಾಲಯ ಕರೆ ನೀಡುತ್ತದೆ.

 

*****


(रिलीज़ आईडी: 2198029) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Bengali , Gujarati , Tamil