ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಡಿಡಿ ಫ್ರೀ ಡಿಶ್ ನಲ್ಲಿ ಜನಪ್ರಿಯ ಪ್ರಾದೇಶಿಕ ಚಾನೆಲ್ ಗಳನ್ನು ಮುಕ್ತಗೊಳಿಸಲು ಪ್ರಸಾರ ಭಾರತಿ ಪ್ರಾಯೋಗಿಕ ಉಪಕ್ರಮವನ್ನು ಪ್ರಾರಂಭಿಸಿದೆ
ಡಿಡಿ ಫ್ರೀ ಡಿಶ್ ಮಾಹಿತಿ ಮತ್ತು ಶಿಕ್ಷಣದ ಲಭ್ಯತೆಯನ್ನು ಬಲಪಡಿಸುತ್ತದೆ ಭಾರತದಾದ್ಯಂತ 65 ದಶಲಕ್ಷ ಕುಟುಂಬಗಳನ್ನು ತಲುಪಿದೆ
ಡಿಡಿ ಫ್ರೀ ಡಿಶ್ ಹೊಸ ಪ್ರಾಯೋಗಿಕ ಉಪಕ್ರಮದ ಅಡಿಯಲ್ಲಿ ಪ್ರಾದೇಶಿಕ ಭಾಷಾ ಚಾನೆಲ್ ಗಳಿಗೆ 2026ರ ಮಾರ್ಚ್ 31ರವರೆಗೆ ಉಚಿತ ಎಂ.ಪಿ.ಇ.ಜಿ-4 ಸ್ಲಾಟ್ ಗಳನ್ನು ನೀಡುತ್ತದೆ
प्रविष्टि तिथि:
28 NOV 2025 7:26PM by PIB Bengaluru
ಪ್ರಸಾರ ಭಾರತಿ ಡಿಡಿ ಫ್ರೀ ಡಿಶ್ ಪ್ಲಾಟ್ ಫಾರ್ಮ್ ನಲ್ಲಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಇದರಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಅನುಮತಿ ಪಡೆದ ಮತ್ತು ಪರವಾನಗಿ ಪಡೆದ ಜನಪ್ರಿಯ ಪ್ರಾದೇಶಿಕ ಭಾಷಾ ಚಾನೆಲ್ ಗಳು (ಹಿಂದಿ ಮತ್ತು ಉರ್ದು ಹೊರತುಪಡಿಸಿ ಶೆಡ್ಯೂಲ್ 8 ಭಾಷೆಗಳು), ಹೊಸದಾಗಿ ನವೀಕರಿಸಿದ ಎಂ.ಪಿ.ಇ.ಜಿ-4 ಸ್ಟ್ರೀಮ್ ಗಳಲ್ಲಿ ಖಾಲಿ ಇರುವ ಡಿಡಿ ಫ್ರೀ ಡಿಶ್ ಸ್ಲಾಟ್ ಗಳ ಹಂಚಿಕೆಗಾಗಿ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಇತರ ಚಟುವಟಿಕೆಗಳ ಜೊತೆಗೆ ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸುವ ಮೂಲಕ ಪ್ರವೇಶ, ಅವಕಾಶ ಮತ್ತು ಜಾಗೃತಿಯಲ್ಲಿನ ಅಂತರವನ್ನು ಕಡಿಮೆ ಮಾಡುವ ಬದ್ಧತೆಯಿಂದ ಪ್ರಾತಿನಿಧ್ಯವಿಲ್ಲದ ಮತ್ತು ಕಡಿಮೆ ಪ್ರಾತಿನಿಧ್ಯವಿಲ್ಲದ ಪ್ರದೇಶಗಳಲ್ಲಿ ಪ್ರಸಾರ ಭಾರತಿಯ ಪ್ರಯತ್ನವು ಪ್ರೇರಿತವಾಗಿದೆ.
ಡಿಡಿ ಫ್ರೀ ಡಿಶ್ ಪ್ಲಾಟ್ ಫಾರ್ಮ್ ನಲ್ಲಿ ಕಡಿಮೆ ಪ್ರಾತಿನಿಧ್ಯ / ಪ್ರಾತಿನಿಧ್ಯವಿಲ್ಲದ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಾಂಗ್ಲಾ, ಅಸ್ಸಾಮಿ ಮತ್ತು ಒಡಿಯಾ ಭಾಷೆಗಳ ಪ್ರಾದೇಶಿಕ ಚಾನೆಲ್ ಗಳಿಗೆ ಇತರ ಪ್ರಾದೇಶಿಕ ಭಾಷೆಗಳ ಚಾನೆಲ್ ಗಳಿಗಿಂತ ಆದ್ಯತೆ ನೀಡಲಾಗುತ್ತದೆ. ಪ್ರಾದೇಶಿಕ ಸುದ್ದಿ ವಾಹಿನಿಗಳಿಗೆ ಸುದ್ದಿಯೇತರ ಪ್ರಾದೇಶಿಕ ಚಾನೆಲ್ ಗಳಿಗಿಂತ ಆದ್ಯತೆ ನೀಡಲಾಗುವುದು.
ಈ ಪ್ರಾದೇಶಿಕ ಚಾನೆಲ್ ಗಳಿಗೆ ಪ್ರಾಯೋಗಿಕ ಆಧಾರದ ಮೇಲೆ ಉಚಿತವಾಗಿ ಸ್ಲಾಟ್ ಗಳನ್ನು ಹಂಚಿಕೆ ಮಾಡಲಾಗುತ್ತದೆ. ಹಂಚಿಕೆಯು 2026ರ ಮಾರ್ಚ್ 31ರವರೆಗಿನ ಅವಧಿಗೆ ಮಾತ್ರ ಇರುತ್ತದೆ.
ಡಿಡಿ ಫ್ರೀ ಡಿಶ್ ನ ಚಾನೆಲ್ ಗುಚ್ಛವು ವೈವಿಧ್ಯಮಯ ಮತ್ತು ಶ್ರೀಮಂತವಾಗಿದೆ. ಅದರಲ್ಲಿ ಹೆಚ್ಚಿನ ಪ್ರಕಾರಗಳನ್ನು ಪ್ರತಿನಿಧಿಸಲಾಗಿದೆ. ಪ್ರಸ್ತುತ ಡಿಡಿ ಫ್ರೀ ಡಿಶ್ 482 ಟಿವಿ ಚಾನೆಲ್ ಗಳನ್ನು ಹೊಂದಿದೆ (ಪಿಎಂ ಇವಿದ್ಯಾ ಮತ್ತು ಸ್ವಯಂ ಪ್ರಭಾದಂತಹ 320 ಡಿಡಿ ಸಹ-ಬ್ರಾಂಡ್ ಶೈಕ್ಷಣಿಕ ಚಾನೆಲ್ ಗಳು ಸೇರಿದಂತೆ) ಮತ್ತು 48 ರೆಡಿಯೊ ಚಾನೆಲ್ ಗಳನ್ನು ಹೊಂದಿದೆ. ದೂರದರ್ಶನ ಚಾನೆಲ್ ಗಳ ಹೊರತಾಗಿ, ಸಾಮಾನ್ಯ ಮನರಂಜನೆ, ಸುದ್ದಿ, ಭಕ್ತಿ, ಚಲನಚಿತ್ರಗಳು, ಕ್ರೀಡೆ ಇತ್ಯಾದಿಗಳ ಖಾಸಗಿ ಟಿವಿ ಚಾನೆಲ್ ಗಳನ್ನು ಈ ಗುಚ್ಛವು ಒಳಗೊಂಡಿದೆ.
ಪ್ರಸಾರ ಭಾರತಿಯ "ಡಿಡಿ ಫ್ರೀ ಡಿಶ್" ಡೈರೆಕ್ಟ್-ಟು-ಹೋಮ್ (ಡಿ.ಟಿ.ಹೆಚ್) ಪ್ಲಾಟ್ ಫಾರ್ಮ್ ಒಂದು ಉಚಿತ ಪ್ಲಾಟ್ ಫಾರ್ಮ್ ಆಗಿದ್ದು, ವೀಕ್ಷಕರಿಂದ ಯಾವುದೇ ಮಾಸಿಕ ಅಥವಾ ವಾರ್ಷಿಕ ಚಂದಾದಾರಿಕೆ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಈ ವಿಶಿಷ್ಟ ಮತ್ತು ಕೈಗೆಟುಕುವ ಮಾದರಿಯು ಡಿಡಿ ಫ್ರೀ ಡಿಶ್ ಅನ್ನು ಅತಿದೊಡ್ಡ ಡಿಟಿಹೆಚ್ ಪ್ಲಾಟ್ ಫಾರ್ಮ್ ಆಗಿ ಮಾಡಿದೆ. ದೂರದ, ಗ್ರಾಮೀಣ, ಪ್ರವೇಶಿಸಲಾಗದ ಮತ್ತು ಗಡಿ ಪ್ರದೇಶಗಳಲ್ಲಿಯೂ ಸಹ ಸುಮಾರು 65 ದಶಲಕ್ಷ ಮನೆಗಳನ್ನು (ಕ್ರೋಮ್ ಡೇಟಾದ ಪ್ರಕಾರ) ತಲುಪಿದೆ. ಡಿಡಿ ಫ್ರೀ ಡಿಶ್ ಮೂಲಕ, ಪ್ರಸಾರ ಭಾರತಿ ದೇಶದ ದೂರದ ಮೂಲೆಗಳಿಗೆ ಗುಣಮಟ್ಟದ ಮತ್ತು ಉಚಿತ ಮಾಹಿತಿ, ಶಿಕ್ಷಣ ಮತ್ತು ಮನರಂಜನೆಯನ್ನು ಒದಗಿಸುವ ಮೂಲಕ ಜನಸಾಮಾನ್ಯರನ್ನು ಸಬಲೀಕರಣಗೊಳಿಸುತ್ತಿದೆ, ಸಮಾಜದ ಅಂಚಿನಲ್ಲಿರುವ ಮತ್ತು ದುರ್ಬಲ ವರ್ಗಗಳಿಗೆ ಸಹ ಪ್ರಯೋಜನವನ್ನು ನೀಡುತ್ತದೆ ಮತ್ತು ಆ ಮೂಲಕ ಸಾರ್ವಜನಿಕ ಸೇವಾ ಪ್ರಸಾರದ ಪ್ರಾಥಮಿಕ ಉದ್ದೇಶವನ್ನು ಪೂರೈಸುತ್ತಿದೆ.
****
(रिलीज़ आईडी: 2196130)
आगंतुक पटल : 2