ವೈಯಕ್ತಿಕ ಹೋರಾಟಗಳಿಂದ ಆಸ್ಕರ್‌ವರೆಗೆ: ಚಲನಚಿತ್ರೋತ್ಸವದಲ್ಲಿ ಮಿಂಚಿದ ಕೊಲಂಬಿಯಾ ಚಲನಚಿತ್ರ 'ಎ ಪೊಯೆಟ್'
ಕಾಡುವ ಕೌಟುಂಬಿಕ ಕಥೆಯ ಮೂಲಕ ವಾಸ್ತವವನ್ನು ಮುಸುಕುಗೊಳಿಸುವ 'ದಿ ಡೆವಿಲ್ ಸ್ಮೋಕ್ಸ್'
ಮಾಂಟಂಡ್–ಸಿಗ್ನೊರೆಟ್ ನ ಉತ್ಸಾಹ ಮತ್ತು ಪ್ರಕ್ಷುಬ್ಧತೆಯನ್ನು ಪುನರ್ವಿಮರ್ಶಿಸುವ ಸಿ’ಸ್ಟ್ ಸಿ ಬಾನ್
#ಐ.ಎಫ್.ಎಫ್.ಐವುಡ್, 27 ನವೆಂಬರ್ 2025
ಫ್ರಾನ್ಸ್, ಕೊಲಂಬಿಯಾ ಮತ್ತು ಮೆಕ್ಸಿಕೋದ ಚಲನಚಿತ್ರ ನಿರ್ದೇಶಕರು ಇಂದು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಚಿತ್ರಗಳ ಬಗ್ಗೆ ಪ್ರಸ್ತುತಪಡಿಸಲು ಮತ್ತು ತಮ್ಮ ಸೃಜನಶೀಲ ಚಿತ್ರಗಳ ತಯಾರಿಯ ಪ್ರಯಾಣ ಕುರಿತು ಹಂಚಿಕೊಳ್ಳಲು ಒಟ್ಟು ಸೇರಿದರು, ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐ.ಎಫ್.ಎಫ್.ಐ) ಮೂರು ಖಂಡಗಳ ಮೂರು ಚಲನಚಿತ್ರಗಳು ಮಿಂಚಿದವು. ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗಾಗಿ ಎರಡು ಚಿತ್ರಗಳಾದ - 'ಎ ಪೊಯೆಟ್' ಮತ್ತು 'ಸಿ'ಸ್ಟ್ ಸಿ ಬಾನ್' - ಸ್ಪರ್ಧಿಸುತ್ತಿದ್ದರೆ, ಮೂರನೆಯದು - 'ದಿ ಡೆವಿಲ್ ಸ್ಮೋಕ್ಸ್' - ಅತ್ಯುತ್ತಮ ಚೊಚ್ಚಲ ಚಲನಚಿತ್ರ ವಿಭಾಗದಲ್ಲಿ ಸ್ಪರ್ಧಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಸೈಮನ್ ಜೈರೊ ಮೆಸಾ ಸೊಟೊ ಮತ್ತು ನಿರ್ಮಾಪಕ ಸಾರಾ ನಾಂಕ್ಲೇರ್ಸ್ ಪ್ರಸ್ತುತಪಡಿಸಿದ ಕೊಲಂಬಿಯಾದ 'ಎ ಪೊಯೆಟ್'; ಮೆಕ್ಸಿಕನ್ ಚಲನಚಿತ್ರ ನಿರ್ದೇಶಕ ಅರ್ನೆಸ್ಟೊ ಮಾರ್ಟಿನೆಜ್ ಬುಸಿಯೊ ಅವರ 'ದಿ ಡೆವಿಲ್ ಸ್ಮೋಕ್ಸ್'; ಮತ್ತು ಹಿರಿಯ ಫ್ರೆಂಚ್ ನಿರ್ದೇಶಕಿ ಡಯೇನ್ ಕುರಿಸ್ ಅವರ 'ಸೆಸ್ಟ್ ಸಿ ಬಾನ್' ಚಿತ್ರಗಳು ಭಾಗವಹಿಸಿದ್ದವು.

ಚಿತ್ರರಂಗಕ್ಕೆ ದಿಟ್ಟ ಹೆಜ್ಜೆ ಇಟ್ಟ ಅರ್ನೆಸ್ಟೊ
ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಅರ್ನೆಸ್ಟೊ ಮಾರ್ಟಿನೆಜ್ ಬುಸಿಯೊ, ದಿ ಡೆವಿಲ್ ಸ್ಮೋಕ್ಸ್ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ಎಂದರು, ಕಿರುಚಿತ್ರಗಳಿಂದ ಆರಂಭಿಸಿ ಪೂರ್ಣ-ಗಂಟೆಗಳವರೆಗಿನ ನಿರ್ಮಾಣದ ಚಿತ್ರಗಳವರೆಗೆ ತಮ್ಮ ಬದಲಾವಣೆಯನ್ನು ಗಮನಾರ್ಹವಾದ ಸೃಜನಶೀಲತೆ ಎಂದು ವಿವರಿಸಿದರು. ಈ ಚಿತ್ರವು ಐದು ಜನ ನಿಷ್ಠುರ ಸಹೋದರ ಸಹೋದರಿಯರು ಅವರ ಹೆತ್ತವರಿಂದ ತೊರೆದು ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವ ಅಜ್ಜಿಯ ಆರೈಕೆಯಲ್ಲಿ ಬೆಳೆಯುವುದನ್ನು ತೋರಿಸುವ ಕಥೆಯಾಗಿದೆ, ಇದು ವಾಸ್ತವ ಮತ್ತು ಕಲ್ಪನೆಯ ನಡುವಿನ ಗಡಿಗಳನ್ನು ಮಸುಕುಗೊಳಿಸುತ್ತದೆ. ಬಾಲನಟರಲ್ಲಿ ವಿಶ್ವಾಸ ಮತ್ತು ಭಾವನಾತ್ಮಕ ನಟನೆ ಬೆಳೆಸಲು ವಿನ್ಯಾಸಗೊಳಿಸಲಾದ ವ್ಯಾಪಕವಾದ ತರಬೇತಿ, ಮಾಸ್ಟರ್ ಕ್ಲಾಸ್ ಗಳು ಒಳಗೊಂಡಂತೆ ತಮ್ಮ ನಿಖರವಾದ ಪಾತ್ರ ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿದರು. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಾರ್ವತ್ರಿಕವಾಗಿ ಪ್ರತಿಧ್ವನಿಸುವ ಸ್ಥಳೀಯ ಕಥೆಗಳನ್ನು ಹೇಳುವ ಹೇಳುವ ಬದ್ಧತೆ ತಮ್ಮದಾಗಿದೆ ಎಂದರು, ಜಾಗತಿಕ ಆಕರ್ಷಣೆಯ ಬಗ್ಗೆ ಅತಿಯಾಗಿ ಯೋಚಿಸುವ ಬದಲು ಕಥೆಯ ಮೇಲೆ ಕೇಂದ್ರೀಕರಿಸಲು ನಾನು ಬಯಸುತ್ತೇನೆ ಎಂದು ಹೇಳಿದರು.

"ದಿ ಪೊಯೆಟ್" ನಿರ್ದೇಶಕರ ವೈಯಕ್ತಿಕ ಪಯಣ
ಕೊಲಂಬಿಯಾದ ನಿರ್ದೇಶಕ ಸೈಮನ್ ಜೈರೊ ಮೆಸಾ ಸೊಟೊ ಅವರು 'ಎ ಪೊಯೆಟ್' ತಮ್ಮ ಎರಡನೇ ಕಥಾಚಿತ್ರವಾಗಿದ್ದು, ಚಿತ್ರಕಥೆಯನ್ನೂ ಬರೆದವರೂ ಅವರೇ. ಈ ಕಥೆಯು ನಿರ್ದೇಶಕರ ವೈಯಕ್ತಿಕ ಅನುಭವಗಳು ಮತ್ತು ಆರಂಭಿಕ ಜೀವನದ ಹೋರಾಟಗಳಿಂದ ಬಂದಿದೆ. ಈ ಚಿತ್ರವು ಇಳಿವಯಸ್ಸಿನ ಕವಿಯ ಮೇಲೆ ಕೇಂದ್ರೀಕೃತವಾಗಿದೆ, ಒಬ್ಬ ಪ್ರತಿಭಾನ್ವಿತ ಹದಿಹರೆಯದ ಹುಡುಗಿಗೆ ಮಾರ್ಗದರ್ಶನ ನೀಡುವಾಗ ಕವಿ ಹೊಸ ಉದ್ದೇಶವನ್ನು ಕಂಡುಕೊಳ್ಳುತ್ತಾನೆ, ಕಾವ್ಯ ಜಗತ್ತಿನ ಸವಾಲುಗಳಿಗೆ ಅವಳನ್ನು ಒಡ್ಡುವ ಬಗ್ಗೆ ಅವನು ಚಿಂತಿಸುತ್ತಾನೆ - ಒಂದು ಕಾಲದಲ್ಲಿ ಅವನ ಸ್ವಂತ ಮಹತ್ವಾಕಾಂಕ್ಷೆಗಳನ್ನು ಸ್ಥಗಿತಗೊಳಿಸಿದ್ದ ಸವಾಲುಗಳು. ಕೊಲಂಬಿಯಾದಲ್ಲಿ ಚಿತ್ರಕ್ಕೆ ದೊರೆತ ಆತ್ಮೀಯ ಸ್ವಾಗತದ ಬಗ್ಗೆ - ವಿಶೇಷವಾಗಿ ಅವರ ಮೊದಲ ಚಿತ್ರದ ಸಾಧಾರಣ ಪ್ರದರ್ಶನ ಕಂಡ ನಂತರವೂ "ಎ ಪೊಯೆಟ್" ಚಿತ್ರವನ್ನು ಆಸ್ಕರ್‌ಗೆ ಕೊಲಂಬಿಯಾದ ಅಧಿಕೃತ ಪ್ರವೇಶವಾಗಿ ಆಯ್ಕೆ ಮಾಡಲಾಗಿತ್ತು ಎಂದು ಸಂತಸ ಹಂಚಿಕೊಂಡರು. ಕೊಲಂಬಿಯಾದ ಸಿನಿಮಾದ ವಿಕಸನಗೊಳ್ಳುತ್ತಿರುವ ಭೂದೃಶ್ಯದ ಬಗ್ಗೆ ಮೆಸಾ ಚರ್ಚಿಸಿದರು, ಸ್ಥಳೀಯ ಪ್ರೇಕ್ಷಕರು ನಿಧಾನವಾಗಿ ದೇಶೀಯ ಚಲನಚಿತ್ರಗಳನ್ನು ಹೆಚ್ಚು ಸ್ವೀಕರಿಸುತ್ತಾರೆ ಎಂದು ಹೇಳಿದರು. ಕೋವಿಡ್ ಸಾಂಕ್ರಾಮಿಕ ಸಮಯದ ಚೊಚ್ಚಲ ಮತ್ತು ಪ್ರಸ್ತುತ ಬಿಡುಗಡೆಯ ನಡುವಿನ ವ್ಯತಿರಿಕ್ತ ಚಿತ್ರ ವಿತರಣೆಯ ಅನುಭವಗಳನ್ನು ಸಹ ಅವರು ಪ್ರತಿಬಿಂಬಿಸಿದರು.

ಸಿ’ಸ್ಟ್ ಸಿ ಬಾನ್ ನಲ್ಲಿ ನೈಜ ಕಥೆಗಳನ್ನು ಎತ್ತಿ ತೋರಿಸಿದ ಕುರಿಸ್
ಅನುಭವಿ ಫ್ರೆಂಚ್ ಚಲನಚಿತ್ರ ನಿರ್ದೇಶಕಿ ಡಯೇನ್ ಕುರಿಸ್ ತಮ್ಮ ಚಲನಚಿತ್ರ ಸಿ’ಸ್ಟ್ ಸಿ ಬಾನ್ ಬಗ್ಗೆ ಮಾತನಾಡುತ್ತಾ, ನೈಜ ಕಥೆಗಳನ್ನು ದೃಢೀಕರಣದೊಂದಿಗೆ ಅಳವಡಿಸಿಕೊಳ್ಳುವ ಅವರ ಉತ್ಸಾಹವನ್ನು ವಿವರಿಸಿದರು. ಈ ಚಿತ್ರವು ಸಿನಿಮಾ ದಿಗ್ಗಜರಾದ ಯ್ವೆಸ್ ಮೊಂಟಾಂಡ್ ಮತ್ತು ಸಿಮೋನ್ ಸಿಗ್ನೊರೆಟ್ ನಡುವಿನ ಪ್ರಕ್ಷುಬ್ಧ ಪ್ರೇಮಕಥೆಯನ್ನು ವಿವರಿಸುತ್ತದೆ, ಅವರ ಆಳವಾದ ಬಂಧವು ಮರ್ಲಿನ್ ಮನ್ರೋ ಅವರೊಂದಿಗಿನ ಮಾಂಟಾಂಡ್ ಅವರ ಪ್ರಣಯದಿಂದ ಮುಚ್ಚಿಹೋಗಿದೆ. ಹಳೆಯ ಪ್ಯಾರಿಸ್‌ನ ಮನಮುಟ್ಟುವ ಹಿನ್ನೆಲೆಯಲ್ಲಿ ಹೆಣೆಯಲಾದ ಈ ಚಿತ್ರವು ಪ್ರೀತಿ, ದ್ರೋಹ ಮತ್ತು ಕಲಾತ್ಮಕ ಗ್ಲಾಮರ್ ಯುಗವನ್ನು ಸೆರೆಹಿಡಿಯುತ್ತದೆ. ತನ್ನ ಕುಟುಂಬವನ್ನು ಆಧರಿಸಿದ ತನ್ನ ಮೊದಲ ಚಿತ್ರವು ತನ್ನ ಅತ್ಯಂತ ಯಶಸ್ವಿ ಚಿತ್ರ ಎಂದು ಕುರಿಸ್ ಹೇಳಿಕೊಂಡರು. ಸಿನಿಮೀಯ ಕರಕುಶಲತೆಯು ನಿರಂತರವಾಗಿ ವಿಕಸನಗೊಳ್ಳುತ್ತದೆ. ಫ್ರೆಂಚ್ ಸಮಾಜ ಮತ್ತು ಫ್ರೆಂಚ್ ಚಲನಚಿತ್ರೋದ್ಯಮವು ಒದಗಿಸುವ ಬಲವಾದ ಸಾಂಸ್ಥಿಕ ಬೆಂಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು, ಇದು ಫ್ರೆಂಚ್ ಸಿನೆಮಾವನ್ನು ಜಾಗತಿಕ ಪ್ರಾಮುಖ್ಯತೆ ಮಟ್ಟಕ್ಕೆ ಕೊಂಡೊಯ್ಯಲು ಸಹಾಯ ಮಾಡಿದೆ ಎಂದರು.

ಈ ವರ್ಷದ ಐಎಫ್‌ಎಫ್‌ಐನಲ್ಲಿ ಪ್ರದರ್ಶಿಸಲಾದ ಸಮಕಾಲೀನ ಚಲನಚಿತ್ರ ನಿರ್ಮಾಣದ ವೈವಿಧ್ಯತೆ, ಆಳ ಮತ್ತು ಅಂತಾರಾಷ್ಟ್ರೀಯ ಮನೋಭಾವವನ್ನು ಚಲನಚಿತ್ರೋತ್ಸವವು ಎತ್ತಿ ತೋರಿಸಿತು.

ಪತ್ರಿಕಾಗೋಷ್ಠಿಯ ಲಿಂಕ್ ಗಳು
Teams of the films 'The Devil Smokes', 'A Poet' and 'C’est Si Bon' during the Press Conference at the PIB Media Centre#IFFIGoa #IFFI2025 #IFFI56 pic.twitter.com/MpdkMjokM5
— PIB in Goa 🇮🇳 (@PIB_Panaji) November 27, 2025
ಐ.ಎಫ್.ಎಫ್.ಐ ಬಗ್ಗೆ:
1952ರಲ್ಲಿ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಆಚರಣೆಯಾಗಿ ಆರಂಭಗೊಂಡು ನೆಲೆನಿಂತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ಇ.ಎಸ್.ಜಿ) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಇಂದು ಬೆಳೆದಿದೆ. ಅಲ್ಲಿ ಪುನಃಸ್ಥಾಪಿಸಲಾದ ಉತ್ಕೃಷ್ಟ ದರ್ಜೆಯ ಸಿನಿಮಾಗಳು ದಿಟ್ಟ ಪ್ರಯೋಗಗಳನ್ನು ಪೂರೈಸುತ್ತವೆ. ದಿಗ್ಗಜ ಕಲಾವಿದರು ನಿರ್ಭೀತರಾಗಿ ಯುವ ಕಲಾವಿದರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ ನಿಜವಾಗಿಯೂ ಮಿಂಚುವಂತೆ ಮಾಡುವುದು ವಿದ್ಯುತ್ಕಾಂತೀಯ ಕಾರ್ಯಕ್ರಮಗಳಾದ ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು, ಗೌರವಗಳು ಮತ್ತು ಹೆಚ್ಚಿನ ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್, ಅಲ್ಲಿನ ಕಲ್ಪನೆಗಳು, ಅಲ್ಲಿ ನಡೆಯುವ ಒಪ್ಪಂದಗಳು ಮತ್ತು ಸಹಯೋಗಗಳಿಂದ. ನವೆಂಬರ್ 20 ರಿಂದ 28 ರವರೆಗೆ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶನಗೊಳ್ಳುವ 56ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಬೆರಗುಗೊಳಿಸುವ ವರ್ಣಪಟಲವನ್ನು ಭರವಸೆ ನೀಡುತ್ತದೆ. ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಆಚರಣೆ ಇದು.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ:
https://www.pib.gov.in/PressReleasePage.aspx?PRID=2191742
https://www.pib.gov.in/PressReleasePage.aspx?PRID=2190381
ಐ.ಎಫ್.ಎಫ್.ಐ ವೆಬ್‌ಸೈಟ್: https://www.iffigoa.org/
ಪಿ.ಐ.ಬಿಯ ಐ.ಎಫ್.ಎಫ್.ಐ ಮೈಕ್ರೋಸೈಟ್: https://www.pib.gov.in/iffi/56/
ಪಿ.ಐ.ಬಿ ಐ.ಎಫ್.ಎಫ್.ಐ ಪ್ರಸಾರ ಚಾನೆಲ್: https://whatsapp.com/channel/0029VaEiBaML2AU6gnzWOm3F
ಎಕ್ಸ್ ಖಾತೆಗಳು: @IFFIGoa, @PIB_India, @PIB_Panaji
****
रिलीज़ आईडी:
2195715
| Visitor Counter:
3