ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

2008ರ ಮುಂಬೈ ಭಯೋತ್ಪಾದಕ ದಾಳಿಯನ್ನು ಎದುರಿಸುವಾಗ ಸದೃಢವಾಗಿ ನಿಂತು ಸ್ವಂತ ಪ್ರಾಣ ತ್ಯಾಗ ಮಾಡಿದ ವೀರ ಸೈನಿಕರಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗೌರವ ನಮನ ಸಲ್ಲಿಸಿದರು


ಉಗ್ರರ ಈ ಹೇಡಿತನದ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗೌರವ ನಮನ ಸಲ್ಲಿಸಿದರು

ಭಯೋತ್ಪಾದನೆ ಕೇವಲ ಒಂದು ದೇಶಕ್ಕೆ ಇರುವ ಬೆದರಿಕೆಯಲ್ಲ, ಬದಲಾಗಿ ಇಡೀ ಮಾನವ ಜನಾಂಗಕ್ಕೆ ಒಂದು ದೊಡ್ಡ ಶಾಪವಾಗಿದೆ

ಭಯೋತ್ಪಾದನೆಯ ವಿರುದ್ಧ ಮೋದಿ ಸರ್ಕಾರ ಹೊಂದಿರುವ ಶೂನ್ಯ ಸಹಿಷ್ಣುತೆಯ ನೀತಿ ಸ್ಪಷ್ಟವಾಗಿದೆ ಮತ್ತು ಭಾರತದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಿಗೆ ವ್ಯಾಪಕ ಬೆಂಬಲವನ್ನು ನೀಡುವುದರೊಂದಿಗೆ ಇಡೀ ಜಗತ್ತು ಅದನ್ನು ಶ್ಲಾಘಿಸುತ್ತಿದೆ

Posted On: 26 NOV 2025 2:14PM by PIB Bengaluru

2008ರ ಮುಂಬೈ ಭಯೋತ್ಪಾದಕ ದಾಳಿಯನ್ನು ಎದುರಿಸುವಾಗ ಸದೃಢವಾಗಿ ನಿಂತು ಸ್ವಂತ ಪ್ರಾಣ ತ್ಯಾಗ ಮಾಡಿದ ವೀರ ಸೈನಿಕರಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಗೌರವ ನಮನ ಸಲ್ಲಿಸಿದರು. ಉಗ್ರರ ಈ ಹೇಡಿತನದ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ ಅವರು ಗೌರವ ಸಲ್ಲಿಸಿದರು.

‘ಎಕ್ಸ್’ ತಾಣದ ಸಂದೇಶದಲ್ಲಿ ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ ಅವರು, “2008ರಲ್ಲಿ ಇದೇ ದಿನದಂದು ಉಗ್ರ ಭಯೋತ್ಪಾದಕರು ಮುಂಬೈ ಮೇಲೆ ಹೇಡಿತನದ ದಾಳಿ ನಡೆಸಿ, ಭಯಾನಕ ಮತ್ತು ಅಮಾನವೀಯ ಕೃತ್ಯ ಎಸಗಿದರು. ಮುಂಬೈ ಭಯೋತ್ಪಾದಕ ದಾಳಿಯನ್ನು ಎದುರಿಸುವಾಗ ದೃಢವಾಗಿ ನಿಂತು ಸ್ವಂತ ಪ್ರಾಣ ತ್ಯಾಗ ಮಾಡಿದ ವೀರ ಸೈನಿಕರಿಗೆ ನಾನು ನಮಸ್ಕರಿಸುತ್ತೇನೆ ಮತ್ತು ಉಗ್ರರ ಈ ಹೇಡಿತನದ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ನಾನು ಗೌರವ ನಮನ ಸಲ್ಲಿಸುತ್ತೇನೆ.

ಭಯೋತ್ಪಾದನೆ ಕೇವಲ ಒಂದು ದೇಶಕ್ಕೆ ಮಾತ್ರ ಸೀಮಿತ ಬೆದರಿಕೆಯಲ್ಲ, ಇಡೀ ಮಾನವ ಜನಾಂಗಕ್ಕೆ ದೊಡ್ಡ ಶಾಪ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಮೋದಿ ಸರ್ಕಾರದ ನೀತಿ ಸ್ಪಷ್ಟವಾಗಿದೆ ಮತ್ತು ಇಡೀ ಜಗತ್ತು ಅದನ್ನು ಮೆಚ್ಚುತ್ತಿದೆ ಮತ್ತು ಭಾರತದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಿಗೆ ಜಾಗತಿಕವಾಗಿ ವ್ಯಾಪಕ ಬೆಂಬಲವನ್ನು ನೀಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

 

*****


(Release ID: 2195083) Visitor Counter : 2