iffi banner

ಎಂದಿಗೂ ವಯಸ್ಸಾಗದ ಹುಡುಗನ ಕಣ್ಣುಗಳ ಮೂಲಕ, ಆಡಮ್‌ನ ಹಾಡುಗಳು ಒಂದು ರಾಷ್ಟ್ರದ ಆತ್ಮವನ್ನು ಪ್ರತಿಬಿಂಬಿಸುತ್ತವೆ


ಕೆ ಪೋಪರ್ ಸಾರ್ವತ್ರಿಕ ಸತ್ಯವನ್ನು ಸೆರೆಹಿಡಿಯುತ್ತಾರೆ - ಉತ್ಸಾಹಗಳು ತಲೆಮಾರುಗಳಲ್ಲಿ ಗುರುತನ್ನು ಹೇಗೆ ರೂಪಿಸುತ್ತವೆ

ಯೌವನದ ಚರ್ಮ: ಟ್ರಾನ್ಸ್‌ಜೆಂಡರ್ ಗುರುತು, ಪ್ರೀತಿ ಮತ್ತು ಸ್ಥಿತಿಸ್ಥಾಪಕತ್ವದ ಆತ್ಮೀಯ ಭಾವಚಿತ್ರ

‘ಸಾಂಗ್ಸ್ ಆಫ್ ಆಡಮ್’, ‘ಸ್ಕಿನ್ ಆಫ್ ಯೂತ್’ ಮತ್ತು ‘ಕೆ ಪೋಪರ್’ ಚಿತ್ರಗಳ ನಿರ್ದೇಶಕ, ಪಾತ್ರವರ್ಗ ಮತ್ತು ಸಂಪೂರ್ಣ ತಂಡವು ತಮ್ಮ ಚಲನಚಿತ್ರಗಳನ್ನು ರೂಪಿಸಿದ ವೈಯಕ್ತಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಫೂರ್ತಿಗಳ ಬಗ್ಗೆ ಬಲವಾದ ಒಳನೋಟಗಳನ್ನು ಐ.ಎಫ್.ಎಫ್.ಐ. ವೇದಿಕೆಯಲ್ಲಿ ಹಂಚಿಕೊಂಡರು. ಪತ್ರಿಕಾಗೋಷ್ಠಿಯು ಕಥೆ ಹೇಳುವಿಕೆಯ ಆಳ, ಚಲನಚಿತ್ರ ನಿರ್ಮಾಣದ ಸವಾಲುಗಳು ಮತ್ತು ಪರದೆಯ ಮೇಲೆ ಪ್ರತಿನಿಧಿಸುವ ಪ್ರಬಲ ಧ್ವನಿಗಳನ್ನು ಎತ್ತಿ ತೋರಿಸಿತು.

“ಸಾಂಗ್ಸ್ ಆಫ್ ಆಡಮ್”: ಸ್ಮರಣೆ ಮತ್ತು ಪರಿವರ್ತನೆಯಲ್ಲಿರುವ ರಾಷ್ಟ್ರಕ್ಕೆ ಮಾಂತ್ರಿಕ-ವಾಸ್ತವವಾದಿ ಗೀತೆ

ಸಹ-ನಿರ್ಮಾಪಕ ಅಸಮಾ ರಶೀದ್ ಅವರು, ವರ್ಷಗಳಿಂದ ಪೋಷಿಸಲ್ಪಟ್ಟ ಮತ್ತು ನಿರ್ದೇಶಕರ ಬಾಲ್ಯದ ನಷ್ಟದ ಮುಖಾಮುಖಿಯಲ್ಲಿ ಬೇರೂರಿರುವ ಯೋಜನೆಯಾದ ಸಾಂಗ್ಸ್ ಆಫ್ ಆಡಮ್ ನ ಆಳವಾದ ನಿಕಟ ಮೂಲವನ್ನು ಹಂಚಿಕೊಂಡರು.

"ನಾವು ಮೂರು ವರ್ಷಗಳಿಗೂ ಹೆಚ್ಚು ಕಾಲ ಈ ಚಿತ್ರದಲ್ಲಿ ಕೆಲಸ ಮಾಡಿದ್ದೇವೆ. ಈ ಚಿತ್ರ ನಿರ್ದೇಶಕರಿಗೆ ತುಂಬಾ ವೈಯಕ್ತಿಕವಾಗಿದೆ - ನಿರ್ದೇಶಕರು ತಮ್ಮ ಅಜ್ಜನ ಮರಣದ ನಂತರ 12 ನೇ ವಯಸ್ಸಿನಲ್ಲಿ ಈ ಚಲನಚಿತ್ರದ ಕಥೆಯ ಪರಿಕಲ್ಪನೆಯನ್ನು ಕಲ್ಪಿಸಿಕೊಂಡರು" ಎಂದು ಸಹ-ನಿರ್ಮಾಪಕ ಅಸಮಾ ರಶೀದ್ ಅವರು ಹೇಳಿದರು. ಮೆಸೊಪಟ್ಯಾಮಿಯಾ ಕಥೆಗೆ ವಿಶಾಲವಾದ ಮತ್ತು ಫಲವತ್ತಾದ ನೆಲವನ್ನು ಒದಗಿಸುತ್ತದೆ ಮತ್ತು ಅದರ ಕೇಂದ್ರದಲ್ಲಿರುವ ಹುಡುಗನ ಕಲ್ಪನೆಯನ್ನು ಮೀರಿ ತೆರೆದುಕೊಳ್ಳುತ್ತದೆ ಎಂದು ಅವರು ಹೇಳಿದರು. " ಇರಾಕ್ ಅನುಭವಿಸಿದ ಸಾಮಾಜಿಕ ರೂಪಾಂತರಗಳನ್ನು ಈ ಚಲನಚಿತ್ರದ ನಿರೂಪಣೆಯು ಪ್ರತಿಬಿಂಬಿಸುತ್ತದೆ" ಎಂದು ಸಹ-ನಿರ್ಮಾಪಕ ಅಸಮಾ ರಶೀದ್,ಹೇಳಿದರು.

ಅವರ ಮಾತುಗಳು ಚಿತ್ರದ ಭಾವನಾತ್ಮಕ ಆಳವನ್ನು ಪ್ರತಿಬಿಂಬಿಸುತ್ತವೆ - ಅಲ್ಲಿ ಕಾಲಾತೀತತೆ, ಪುರಾಣ ಮತ್ತು ರಾಷ್ಟ್ರೀಯ ಇತಿಹಾಸವು ಹೆಣೆದುಕೊಂಡಿದೆ. 

ಚಲನಚಿತ್ರದ ಬಗ್ಗೆ

ಇರಾಕ್ | 2025 | ಅರೇಬಿಕ್ | 97’ | ಬಣ್ಣ ಚಲನಚಿತ್ರ 

ಆಡಮ್ ನ ಹಾಡುಗಳು 1946 ರ ಮೆಸೊಪಟ್ಯಾಮಿಯಾದಲ್ಲಿ ನಡೆಯುತ್ತವೆ ಮತ್ತು 12 ವರ್ಷದ ಆಡಮ್ ಮೇಲೆ ಕೇಂದ್ರೀಕೃತವಾಗಿವೆ, ಅವನು ತನ್ನ ಅಜ್ಜನ ಸಮಾಧಿಯನ್ನು ನೋಡಿದ ನಂತರ, ಎಂದಿಗೂ ಬೆಳೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾನೆ. ವಿಚಿತ್ರವೆಂದರೆ, ಉಳಿದವರೆಲ್ಲರೂ ವಯಸ್ಸಾದಾಗ ಅವನು ಮಗುವಾಗಿಯೇ ಇರುತ್ತಾನೆ. ಅವನ ತಂದೆ, ಶಾಪಕ್ಕೆ ಹೆದರಿ, ಅವನನ್ನು ಪ್ರತ್ಯೇಕಿಸುತ್ತಾನೆ ಮತ್ತು ಅವನ ಸುತ್ತಲಿನವರು ಅವನ ಕಾಲಾತೀತ ಉಪಸ್ಥಿತಿಯೊಂದಿಗೆ ಹೋರಾಡುತ್ತಾರೆ. ಇರಾಕ್ ರಾಜಕೀಯ ಕ್ರಾಂತಿಗಳಿಗೆ ಒಳಗಾಗುತ್ತಿದ್ದಂತೆ - 1950 ರ ದಶಕದ ದಂಗೆಗಳಿಂದ ಸಮಕಾಲೀನ ಯುದ್ಧಗಳವರೆಗೆ - ಆಡಮ್ ಒಬ್ಬ ಅತೀಂದ್ರಿಯ ವ್ಯಕ್ತಿಯಾಗುತ್ತಾನೆ. ಮಾಂತ್ರಿಕ ವಾಸ್ತವಿಕತೆಯ ಮೂಲಕ, ಚಲನಚಿತ್ರವು ಅವನ ಶಾಶ್ವತ ಯೌವನವನ್ನು ಒಂದು ರಾಷ್ಟ್ರದ ಬದಲಾವಣೆಗೆ ವ್ಯತಿರಿಕ್ತವಾಗಿ ಸ್ಥಿರವಾಗಿ ಬೆಳೆಯುತ್ತಾನೆ, ನಿರಂತರ ಬದಲಾವಣೆಯ ನಡುವೆ ಅವನನ್ನು ನೆನಪು, ನಷ್ಟ ಮತ್ತು ಸ್ಥಿರತೆಗಾಗಿ ಹಾತೊರೆಯುವ ಒಂದು ಕಟುವಾದ ರೂಪಕವನ್ನಾಗಿ ಮಾಡುತ್ತದೆ.

“ಸ್ಕಿನ್ ಆಫ್ ಯೂತ್”: ಟ್ರಾನ್ಸ್ಜೆಂಡರ್ ಸಮುದಾಯದ ಗುರುತು, ಪ್ರೀತಿ ಮತ್ತು ಸ್ಥಿತಿಸ್ಥಾಪಕತ್ವದ ಆತ್ಮೀಯ ಭಾವನಾತ್ಮಕ ಚಿತ್ರವಾಗಿದೆ

ಲೇಖಕಿ ಮತ್ತು ನಿರ್ದೇಶಕಿ ಆಶ್ಲೀ ಮೇಫೇರ್ ಅವರು ಸ್ಕಿನ್ ಆಫ್ ಯೂತ್ ಚಲನಚಿತ್ರವನ್ನು ಕೇವಲ ಚಲನಚಿತ್ರವಾಗಿ ಅಲ್ಲ, ಬದಲಾಗಿ, ಸ್ಮರಣಾರ್ಥ ಮತ್ತು ಪ್ರೀತಿಯ ಸಂಕೇತ-ಪ್ರಕ್ರಿಯೆ ಎಂದು ಬಣ್ಣಿಸಿದ್ದಾರೆ.

“ಇದು ಮನದಾಳಕ್ಕೆ ತಟ್ಟುವ ಆಳವಾದ ವೈಯಕ್ತಿಕ ಕಥೆಯನ್ನು ಹೊಂದಿದೆ. ನಾನು ಮೂವರು ಒಡಹುಟ್ಟಿದವರಲ್ಲಿ ಒಬ್ಬಳಾಗಿದ್ದೇನೆ, ಮತ್ತು ನನ್ನ ಕಿರಿಯ ಸಹೋದರ ಟ್ರಾನ್ಸ್ಜೆಂಡರ್. ಇದು ಸಹೋದರನ ಟ್ರಾನ್ಸ್ಜೆಂಡರ್ ನ ಘನತೆ, ಅವಳ ಹಕ್ಕುಗಳು, ಅವಳ ಭಯಗಳು ಮತ್ತು ಅವಳ ಗುರುತನ್ನು - ಈ ಚಿತ್ರವು ಅವರುಗಳ ಸಾಮುದಾಯಿಕ ಪ್ರಯಾಣವನ್ನು ಅನ್ವೇಷಿಸುತ್ತದೆ. ತನ್ನ ಕಥೆಯಲ್ಲಿ, ಟ್ರಾನ್ಸ್ಜೆಂಡರ್ ಸಮುದಾಯದ ಅನೇಕರು ತಮ್ಮನ್ನು ತಾವು ನೋಡುತ್ತಾರೆ ಎಂದು ನಾನು ನಂಬುತ್ತೇನೆ, ”ಎಂದು ಅವರು ಪ್ರತಿಪಾದಿಸಿದರು.

ಗೋಚರತೆಯ ತುರ್ತು ಆವಶ್ಯಕತೆ ಬಗ್ಗೆ ಪ್ರಮುಖ ನಟಿ ವ್ಯಾನ್ ಕ್ವಾನ್ ಟ್ರಾನ್ ಅವರು ಸ್ಪಷ್ಟವಾಗಿ ಮಾತನಾಡಿದರು.

"ಲಿಂಗಪರಿವರ್ತಿತ ಸಮುದಾಯದ ಬಗ್ಗೆ ಹೆಚ್ಚಿನ ಚಲನಚಿತ್ರಗಳು ತಯಾರಾಗಿಲ್ಲ, ಮತ್ತು ಅವರರುಗಳ ಪರಿಸ್ಥಿತಿ ಇನ್ನೂ ಕಷ್ಟಕರವಾಗಿದೆ. ಸಮಾಜವು ಲಿಂಗಪರಿವರ್ತಿತ ಜನರ ಅಸ್ತಿತ್ವವನ್ನು ಗೌರವಿಸಲು ಕಲಿಯುತ್ತಾರೆ ಎಂಬುದು ನನ್ನ ಆಶಯ. ಈ ರೀತಿಯ ಪ್ರತಿಯೊಂದು ಕಥೆಯೂ ಅವರುಗಳ ಅನನ್ಯತೆಯ ಗುರುತಿಸುವಿಕೆಯತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ" ಎಂದು ಅವರು ಒತ್ತಿ ಹೇಳಿದರು.

ಮಾನವೀಯಗೊಳಿಸುವುದು, ಬೆಳಗಿಸುವುದು ಮತ್ತು ಮೌನವನ್ನು ಸವಾಲು ಎದುರಿಸುವಂತೆ ಮಾಡುವುದು ಇತ್ಯಾದಿ - ಅವರುಗಳ ಪ್ರತಿಬಿಂಬಗಳು ಚಿತ್ರದ ಉದ್ದೇಶವನ್ನು ಒತ್ತಿ ಹೇಳುತ್ತವೆ:

ಚಲನಚಿತ್ರದ ಬಗ್ಗೆ

ವಿಯೆಟ್ನಾಂ, ಸಿಂಗಾಪುರ, ಜಪಾನ್ | 2025 | ವಿಯೆಟ್ನಾಮೀಸ್ ಭಾಷೆ | 122’ | ಬಣ್ಣ ಚಲನಚಿತ್ರ

1990ರ ದಶಕದ ಸೈಗಾನ್ನಲ್ಲಿ ನಡೆದ ಈ ಚಿತ್ರವು ಲಿಂಗಪರಿವರ್ತನಾ ಶಸ್ತ್ರಚಿಕಿತ್ಸೆಯ ಕನಸು ಕಾಣುತ್ತಿರುವ ಲಿಂಗಪರಿವರ್ತಿತ ಲೈಂಗಿಕ ಕಾರ್ಯಕರ್ತೆ ಸ್ಯಾನ್ ಮತ್ತು ತನ್ನ ಮಗನನ್ನು ಬೆಂಬಲಿಸಲು ಹೋರಾಡುವ ಭೂಗತ ಹೋರಾಟಗಾರ ನಾಮ್ ನಡುವಿನ ತೀವ್ರವಾದ ಪ್ರಣಯವನ್ನು ಬಯಸುತ್ತದೆ. ಮಹಿಳೆಯಾಗಿ ಸ್ಯಾನ್ ಬದುಕಲು ನಿರ್ಧರಿಸುತ್ತಾಳೆ, ಆದರೆ ನಾಮ್ ತನ್ನ ಶಸ್ತ್ರಚಿಕಿತ್ಸೆಗೆ ಹಣ ಸಂಪಾದಿಸಲು ಮಾಡುವ ಕ್ರೂರ ಹೋರಾಟಗಳನ್ನು ಲಿಂಗಪರಿವರ್ತಿತ ಲೈಂಗಿಕ ಕಾರ್ಯಕರ್ತೆ ಸ್ಯಾನ್ ಸಹಿಸಿಕೊಳ್ಳುತ್ತಾಳೆ. ಹಿಂಸಾತ್ಮಕ ಭೂಗತ ಪ್ರಪಂಚಗಳು, ಸಾಮಾಜಿಕ ಪೂರ್ವಾಗ್ರಹಗಳು ಮತ್ತು ಡಾರ್ಕ್ ಶಕ್ತಿಗಳನ್ನು ಎದುರಿಸುವಾಗ ಅವರ ಪ್ರೀತಿ ಕಠಿಣ ಸವಾಲುಗಳನ್ನು ಎದುರಿಸುತ್ತದೆ, ಅದು ಅವರ ಸಂಬಂಧವನ್ನು ಕಳೆದುಕೊಳ್ಳುತ್ತದೆ.

“ಕೆ ಪೋಪರ್”: ಕನಸುಗಳು ಮತ್ತು ಭಕ್ತಿಯ ಹೃದಯಸ್ಪರ್ಶಿ ಬಹುಪೀಳಿಗೆಯ ಕಥೆಯಾಗಿದೆ

ನಿರ್ಮಾಪಕ ಸಜ್ಜದ್ ನಸ್ರೋಲ್ಲಾಹಿ ನಸಾಬ್ ವಿವರಿಸುವಂತೆ, ಉತ್ಸಾಹಗಳು ತಲೆಮಾರುಗಳಲ್ಲಿ ಗುರುತನ್ನು ಹೇಗೆ ರೂಪಿಸುತ್ತವೆ ಎಂಬ ಕೆ ಪೋಪರ್ ಚಲನಚಿತ್ರವು ಸಾರ್ವತ್ರಿಕ ಸತ್ಯವನ್ನು ಸೆರೆಹಿಡಿಯುತ್ತದೆ. 

“ಇದು ಸಂಗೀತ, ಆಟಗಳು ಅಥವಾ ಪಾಪ್ ಸಂಸ್ಕೃತಿಗೆ ಮೀಸಲಾಗಿರುವ ಪೀಳಿಗೆಯ ಬಗ್ಗೆ,” ಅವರು ಹೇಳಿದರು. “ಚಿತ್ರವು ಮೂರು ತಲೆಮಾರುಗಳನ್ನು ಮತ್ತು ಅವುಗಳ ನಡುವಿನ ವ್ಯತ್ಯಾಸಗಳನ್ನು ಚಿತ್ರಿಸುತ್ತದೆ. ಇದು ಅವರು ಎದುರಿಸುವ ಸವಾಲುಗಳನ್ನು ಪ್ರತಿಬಿಂಬಿಸುತ್ತದೆ, ಮತ್ತು ನಾವು ನಮ್ಮದೇ ಆದ ಸವಾಲುಗಳನ್ನು ಎದುರಿಸಿದ್ದೇವೆ - ಭಾರೀ ಹಿಮದಲ್ಲಿ ಚಿತ್ರೀಕರಣ, ದೂರದ ಹಳ್ಳಿಗಳಲ್ಲಿ ಕೆಲಸ ಮಾಡುವುದು ಅತ್ಯಂತ ಕಠಿಣ ಆದರೂ,  ಅದು ಕಥೆಯ ಸತ್ಯಾಸತ್ಯತೆಯನ್ನು ಹೆಚ್ಚಿಸಿದೆ.”

ಕೆ ಪೋಪರ್ ಅಂತಿಮವಾಗಿ ಜಾಗತಿಕ ಪ್ರಭಾವಗಳು ಕುಟುಂಬ, ಸಂಪ್ರದಾಯ ಮತ್ತು ಆಕಾಂಕ್ಷೆಯ ನಿಕಟ ವಾಸ್ತವಗಳನ್ನು ಹೇಗೆ ಪೂರೈಸುತ್ತವೆ ಎಂಬುದರ ದೃಶ್ಯಾವಳಿಗಳ ಜ್ಞಾಪನೆಯಾಗಿದೆ.

ಚಲನಚಿತ್ರದ ಬಗ್ಗೆ

ಇರಾನ್ | 2025 | ಪರ್ಷಿಯನ್ ಭಾಷೆ | 84’ | ಬಣ್ಣ ಚಲನಚಿತ್ರ 

ಇರಾನ್ ನ ಹದಿಹರೆಯದ ಹುಡುಗಿಯೊಬ್ಬಳು ಜನಪ್ರಿಯ ಕೊರಿಯಾದ ಕೆ-ಪಾಪ್ ಗಾಯಕನನ್ನು ಪ್ರೀತಿಸುತ್ತಿದ್ದಾಳೆ. ಗಾಯಕ  ಪ್ರದರ್ಶನ ನೀಡುವುದನ್ನು ನೋಡಲು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಲು ಹದಿಹರೆಯದ ಹುಡುಗಿ ಸಿಯೋಲ್ ಗೆ ಹೋಗಲು ಬಯಸುತ್ತಾಳೆ. ಅವಳನ್ನು ಸ್ಪರ್ಧೆಗೆ ಸ್ವೀಕರಿಸಲಾದರೂ, ಅವಳ ತಾಯಿ ಅವಳನ್ನು ತಡೆಯುತ್ತಾಳೆ, ಹೋಗುವುದನ್ನು ಗಂಭೀರವಾಗಿ ವಿರೋಧಿಸುತ್ತಾಳೆ.

ಚಲನಚಿತ್ರದ ಟ್ರೇಲರ್ ಗಳನ್ನು ಇಲ್ಲಿ ವೀಕ್ಷಿಸಿ: https://drive.google.com/file/d/1qSfrgJbrLk20M8GY2MKMxvTpzgyY5Juq/view?usp=drive_link

ಸಂಪೂರ್ಣ ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಿ:

ಐ.ಎಫ್.ಎಫ್.ಐ. ಬಗ್ಗೆ

1952 ರಲ್ಲಿ ಪ್ರಾರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಆಚರಣೆಯಾಗಿ ಅತ್ಯಂತ ಗೌರವದಿಂದ ಹೆಮ್ಮೆಯಾಗಿ ನಿಂತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ , ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ  ಜಂಟಿಯಾಗಿ ಆಯೋಜಿಸಿರುವ ಈ ಚಲನಚಿತ್ರ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್ಗಳು ದಿಟ್ಟ ಪ್ರಯೋಗಗಳನ್ನು ಎದುರಿಸುತ್ತವೆ ಮತ್ತು ಪೌರಾಣಿಕ ಕಲಾವಿದರು ನಿರ್ಭೀತ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ. ಅನ್ನು ನಿಜವಾಗಿಯೂ ಹೊಳೆಯುವಂತೆ ಮಾಡುವುದು ಅದರ ಸೃಜನಶೀಲ ಮಿಶ್ರಣ - ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್ಕ್ಲಾಸ್ಗಳು, ಗೌರವಗಳು ಮತ್ತು ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹಾರುವ ಉನ್ನತ-ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್.  ನವೆಂಬರ್ 20 ರಿಂದ 28, 2025 ರವರೆಗೆ ಗೋವಾದ ಬೆರಗುಗೊಳಿಸುವ ಅತ್ಯಾಕರ್ಷಕ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶಿಸಲಾಗುವ 56 ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಅದ್ಭುತ ವರ್ಣಪಟಲವನ್ನು ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ವಿಶೇಷ ಆಚರಣೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:
 

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56/

PIB IFFIWood Broadcast Channel:  https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji


*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


Release ID: 2194001   |   Visitor Counter: 5