ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಜನಪ್ರಿಯ ಚಲನಚಿತ್ರ ನಟ ಶ್ರೀ ಧರ್ಮೇಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಕೇಂದ್ರ ಗೃಹ ಸಚಿವರಾದ​​​​​​​ ಶ್ರೀ ಅಮಿತ್ ಶಾ


ತಮ್ಮ ಅದ್ಭುತ ನಟನೆಯಿಂದ ಆರು ದಶಕಗಳ ಕಾಲ ದೇಶದ ಪ್ರತಿಯೊಬ್ಬ ನಾಗರಿಕರ ಹೃದಯವನ್ನು ಮುಟ್ಟಿದ ಧರ್ಮೇಂದ್ರ ಅವರ ನಿಧನದಿಂದ ಭಾರತೀಯ ಚಲನಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟ

ಧರ್ಮೇಂದ್ರ ಅವರು ತಾವು ಅಭಿನಯಿಸಿದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ ಕೆಲವೇ ನಟರಲ್ಲಿ ಒಬ್ಬರು, ಮತ್ತು ತಮ್ಮ ಕಲೆಯ ಮೂಲಕ ಅವರು ಎಲ್ಲಾ ವಯೋಮಾನದ ಲಕ್ಷಾಂತರ ವೀಕ್ಷಕರ ಹೃದಯಗಳನ್ನು ಗೆದ್ದಿದ್ದರು

ಸಾಧಾರಣ ಹಿನ್ನೆಲೆಯಿಂದ ಬಂದ ಅವರು ಚಲನಚಿತ್ರೋದ್ಯಮದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು ಮತ್ತು ನಟನೆಯ ಮೂಲಕ ಅವರು ಶಾಶ್ವತವಾಗಿ ನಮ್ಮೊಂದಿಗೆ ಉಳಿಯುತ್ತಾರೆ

ದೇವರು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ, ಓಂ ಶಾಂತಿ ಶಾಂತಿ ಶಾಂತಿ

Posted On: 24 NOV 2025 3:57PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹೆಸರಾಂತ ಚಲನಚಿತ್ರ ನಟ ಶ್ರೀ ಧರ್ಮೇಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಶ್ರೀ ಅಮಿತ್ ಶಾ  ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ವೇದಿಕೆಯಲ್ಲಿ, ತಮ್ಮ ಅದ್ಭುತ ನಟನೆಯಿಂದ ಆರು ದಶಕಗಳ ಕಾಲ ದೇಶದ ಪ್ರತಿಯೊಬ್ಬ ನಾಗರಿಕರ ಹೃದಯವನ್ನು ಮುಟ್ಟಿದ ಧರ್ಮೇಂದ್ರ ಅವರ ನಿಧನದಿಂದ ಭಾರತೀಯ ಚಲನಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ. ಸಾಧಾರಣ ಹಿನ್ನೆಲೆಯಿಂದ ಬಂದ ಧರ್ಮೇಂದ್ರ ಅವರು ಚಲನಚಿತ್ರೋದ್ಯಮದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ಅವರು ಹೇಳಿದರು. ಧರ್ಮೇಂದ್ರ ಅವರು ತಾವು ಮುಟ್ಟಿದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ ಕೆಲವೇ ನಟರಲ್ಲಿ ಒಬ್ಬರು ಮತ್ತು ತಮ್ಮ ಅಭಿನಯದ ಮೂಲಕ ಎಲ್ಲಾ ವಯೋಮಾನದ ಲಕ್ಷಾಂತರ ವೀಕ್ಷಕರ ಹೃದಯಗಳನ್ನು ಗೆದ್ದರು ಎಂದು ಅವರು ಹೇಳಿದರು. ಧರ್ಮೇಂದ್ರ ಅವರು ತಮ್ಮ ನಟನೆಯ ಮೂಲಕ ನಮ್ಮೊಂದಿಗೆ ಸದಾ ಶಾಶ್ವತವಾಗಿ ಉಳಿಯುತ್ತಾರೆ ಎಂದು ಶ್ರೀ ಶಾ ಹೇಳಿದರು. ದೇವರು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಓಂ ಶಾಂತಿ ಶಾಂತಿ ಶಾಂತಿ.’’

 

*****


(Release ID: 2193620) Visitor Counter : 4