ಐ.ಎಫ್.ಎಫ್.ಐ ಎರಡನೇ ದಿನ: ಮಾಸ್ಟರ್ ಕ್ಲಾಸ್ ಗಳು, ದುಂಡುಮೇಜಿನ ಸಭೆಗಳು ಮತ್ತು ಪ್ರತಿಭಾ ಪ್ರದರ್ಶನಗಳ ಮೂಲಕ ಭಾರತದ ಸೃಜನಾತ್ಮಕ ಸಾಮರ್ಥ್ಯ ಅನಾವರಣ
56ನೇ ಐ.ಎಫ್.ಎಫ್.ಐ 2025ರ ಎರಡನೇ ದಿನವು ಜಾಗತಿಕ ಸಿನಿಮೀಯ ವಿನಿಮಯ, ಉದಯೋನ್ಮುಖ ಪ್ರತಿಭೆಗಳ ಪ್ರದರ್ಶನ, ಉನ್ನತ ಮಟ್ಟದ ರಾಜತಾಂತ್ರಿಕ ತೊಡಗಿಸಿಕೊಳ್ಳುವಿಕೆ ಮತ್ತು ರೋಮಾಂಚಕ ಸಾಂಸ್ಕೃತಿಕ ಸಂವಾದಗಳ ಕ್ರಿಯಾತ್ಮಕ ಸಮ್ಮಿಲನಕ್ಕೆ ಸಾಕ್ಷಿಯಾಯಿತು. ಮಾಸ್ಟರ್ ಕ್ಲಾಸ್ ಸರಣಿಯ ಉದ್ಘಾಟನೆ, 'ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ' (ಸಿ.ಎಂ.ಒ.ಟಿ-2025) ಚಾಲನೆ, ರಾಯಭಾರಿಗಳ ದುಂಡುಮೇಜಿನ ಸಭೆ, ಸಿನಿಮಾ ಕುರಿತ ಸಂವಾದ ಮತ್ತು ತಾರೆಯರ ಮೆರುಗು ತುಂಬಿದ ರೆಡ್ ಕಾರ್ಪೆಟ್ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳ ಸರಣಿಯು, ಪ್ರಮುಖ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವಾಗಿ ಐ.ಎಫ್.ಎಫ್.ಐ ಬೆಳೆಯುತ್ತಿರುವ ಖ್ಯಾತಿಯನ್ನು ಉಲ್ಲೇಖಿಸಿದವು.
ಐ.ಎಫ್.ಎಫ್.ಐ 2025 ಮಾಸ್ಟರ್‌ಕ್ಲಾಸ್ ಸರಣಿಯನ್ನು ಉದ್ಘಾಟಿಸಿದ ಡಾ. ಎಲ್. ಮುರುಗನ್
ಗೋವಾದ ಕಲಾ ಅಕಾಡೆಮಿಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ಗಣ್ಯ ಚಲನಚಿತ್ರ ವ್ಯಕ್ತಿತ್ವಗಳ ಸಮ್ಮುಖದಲ್ಲಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಮಾಸ್ಟರ್ ಕ್ಲಾಸ್ ಸರಣಿಯನ್ನು ಉದ್ಘಾಟಿಸಿದರು.
ಐ.ಎಫ್.ಎಫ್.ಐ ಯ ವ್ಯಾಪಕ ಜನಪ್ರಿಯತೆ ಮತ್ತು ಎಲ್ಲರಿಗೂ ತಲುಪುವ ಬದ್ಧತೆಯನ್ನು ಪ್ರತಿಬಿಂಬಿಸುವಂತೆ, ಇದೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು. ಈ ವಿಭಾಗದಲ್ಲಿ ಆಸ್ಟ್ರೇಲಿಯಾ, ಜಪಾನ್, ಜರ್ಮನಿ ಮತ್ತು ಕೆನಡಾದಿಂದ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್ ಅವರು ಗೋವಾದ ಕಲಾ ಅಕಾಡೆಮಿಯಲ್ಲಿ ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವ ಮೂಲಕ ಐ.ಎಫ್.ಎಫ್.ಐ 2025ರ ಮಾಸ್ಟರ್ ಕ್ಲಾಸ್ ಸರಣಿಯನ್ನು ಉದ್ಘಾಟಿಸಿದರು.

ಗೋವಾದಲ್ಲಿ ನಡೆಯುತ್ತಿರುವ 56ನೇ ಐ.ಎಫ್.ಎಫ್.ಐಯಲ್ಲಿ, ಕೇಂದ್ರ ರಾಜ್ಯ ಸಚಿವರಾದ ಶ್ರೀ ಎಲ್. ಮುರುಗನ್ ಅವರು, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಖ್ಯಾತ ಚಲನಚಿತ್ರ ನಿರ್ಮಾಪಕ ಶ್ರೀ ಮುಜಾಫರ್ ಅಲಿ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ, ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವ ಮೂಲಕ ಬಹುನಿರೀಕ್ಷಿತ 'ಮಾಸ್ಟರ್‌ಕ್ಲಾಸ್ ಸರಣಿ'ಯನ್ನು ಉದ್ಘಾಟಿಸಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಗೋವಾದಲ್ಲಿ ನಡೆಯುತ್ತಿರುವ 56ನೇ ಐ.ಎಫ್.ಎಫ್.ಐ ಯ ಮಾಸ್ಟರ್ ಕ್ಲಾಸ್ ಸರಣಿಯಲ್ಲಿ ಮಾತನಾಡುತ್ತಿರುವುದು.

ಗೋವಾದಲ್ಲಿ ನಡೆಯುತ್ತಿರುವ 56ನೇ ಐ.ಎಫ್.ಎಫ್.ಐ ಯ ಮಾಸ್ಟರ್ ಕ್ಲಾಸ್ ಸರಣಿಯಲ್ಲಿ ಕೇಂದ್ರ ರಾಜ್ಯ ಸಚಿವರಾದ ಶ್ರೀ ಎಲ್. ಮುರುಗನ್, ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಚಲನಚಿತ್ರ ನಿರ್ಮಾಪಕ ಶ್ರೀ ಮುಜಾಫರ್ ಅಲಿ ಮತ್ತು ಇತರ ಗಣ್ಯರು.
ಸಿ.ಎಂ.ಒ.ಟಿ 2025 ಆರಂಭ: 48 ಗಂಟೆಗಳ ಫಿಲ್ಮ್ಮೇಕಿಂಗ್ ಸವಾಲನ್ನು ಸ್ವೀಕರಿಸಿದ 125 ಯುವ ಪ್ರತಿಭೆಗಳು
ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋ (ಸಿ.ಎಂ.ಒ.ಟಿ) ನ ಐದನೇ ಆವೃತ್ತಿಯು ಪ್ರಾರಂಭವಾಗಿದ್ದು, 125 ಉದಯೋನ್ಮುಖ ಚಲನಚಿತ್ರ ತಯಾರಕರು ತೀವ್ರವಾದ 48 ಗಂಟೆಗಳ ಚಲನಚಿತ್ರ ತಯಾರಿಕೆಯ ಸವಾಲಿನಲ್ಲಿ ಭಾಗವಹಿಸುತ್ತಿದ್ದಾರೆ.
ಡಾ. ಮುರುಗನ್ ಅವರು ಭಾಗವಹಿಸುವವರಿಗೆ, ಈ ತೀವ್ರ ಒತ್ತಡದ ವಾತಾವರಣವನ್ನು ತಮ್ಮ ಕಲಾ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಅಲ್ಲದೆ, ಭಾರತದ ಸೃಜನಾತ್ಮಕ ಆರ್ಥಿಕತೆಯನ್ನು ಬಲಪಡಿಸಲು ಮತ್ತು ಮುಂದಿನ ಪೀಳಿಗೆಯ ಪ್ರತಿಭೆಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಮುಂಬೈನ ಹೊಸ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ ನಂತಹ ಉಪಕ್ರಮಗಳನ್ನು ಉಲ್ಲೇಖಿಸಿದರು.

ನಮ್ಮ ಭವಿಷ್ಯದ ಫಿಲ್ಮ್‌ಮೇಕರ್ ಗಳ ಹಬ್ಬ! ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಹಾಗೂ ಶ್ರೀ ಸಂಜಯ್ ಜಾಜು ಅವರೊಂದಿಗೆ 'ಸಿ.ಎಂ.ಒ.ಟಿ 2025'ಕ್ಕೆ ಚಾಲನೆ ನೀಡಿದ ಸಂಭ್ರಮದ ಕ್ಷಣ

ಭವಿಷ್ಯದ ಪ್ರತಿಭೆಗಳ ಹಬ್ಬ! ಸಚಿವರಾದ ಡಾ. ಎಲ್. ಮುರುಗನ್ ಹಾಗೂ ಶ್ರೀ ಸಂಜಯ್ ಜಾಜು ಅವರೊಂದಿಗೆ 'ಸಿ.ಎಂ.ಒ.ಟಿ 2025'ಕ್ಕೆ ಚಾಲನೆ ನೀಡಿದ ಖುಷಿಯ ಕ್ಷಣ

ಸಿ.ಎಂ.ಒ.ಟಿ 2025ಕ್ಕೆ ಚಾಲನೆ! ಇಲ್ಲಿ ಒಂದೆಡೆ ಸೇರಿರುವ ಅಪಾರ ಪ್ರತಿಭೆ ಮತ್ತು ಅವರಲ್ಲಿನ ಉತ್ಸಾಹವನ್ನು ನೋಡುವುದೇ ಒಂದು ಸಂಭ್ರಮ

ಸಿ.ಎಂ.ಒ.ಟಿ 2025: ಭವಿಷ್ಯದ ಚಲನಚಿತ್ರ ನಿರ್ಮಾಪಕರನ್ನು ಉದ್ದೇಶಿಸಿ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಭಾಷಣ!

ಸಿ.ಎಂ.ಒ.ಟಿ 2025: ಭವಿಷ್ಯದ ಚಲನಚಿತ್ರ ನಿರ್ಮಾಪಕರನ್ನು ಉದ್ದೇಶಿಸಿ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಭಾಷಣ!
ತಾರೆಯರ ಮೆರುಗು ಮತ್ತು ಪ್ರೇಕ್ಷಕರ ಕಣ್ಮನ ಸೆಳೆದ 'ರೆಡ್ ಕಾರ್ಪೆಟ್'
ಖ್ಯಾತ ಸಿನಿ ತಾರೆಯರು ಚಲನಚಿತ್ರಗಳ 'ಗಾಲಾ ಪ್ರೀಮಿಯರ್' ಗಳಲ್ಲಿ (ವಿಶೇಷ ಪ್ರದರ್ಶನ) ಪಾಲ್ಗೊಳ್ಳುವುದರೊಂದಿಗೆ, ರೆಡ್ ಕಾರ್ಪೆಟ್ (Red-Carpet) ವಿಭಾಗವು ಉತ್ಸವದ ಪ್ರಮುಖ ಆಕರ್ಷಣೆಯಾಗಿ ಮುಂದುವರಿಯಿತು. ಪ್ರೇಕ್ಷಕರು ಮತ್ತು ಚಿತ್ರಕರ್ಮಿಗಳನ್ನು ಬೆಸೆಯುವ ನಿಟ್ಟಿನಲ್ಲಿ ರೂಪಿಸಲಾದ ಈ ವಿಭಾಗವು, ವಿಶ್ವ, ಏಷ್ಯಾ ಮತ್ತು ಭಾರತದ ಪ್ರೀಮಿಯರ್‌ಗಳಿಗೆ ಸಾಕ್ಷಿಯಾಯಿತು. ಇದು ಒಟ್ಟಾರೆ ಚಲನಚಿತ್ರೋತ್ಸವದ ವಾತಾವರಣಕ್ಕೆ ಮತ್ತಷ್ಟು ಮೆರುಗು ಮತ್ತು ಚೈತನ್ಯವನ್ನು ತುಂಬಿತು.

ಗೋವಾ 2025ರ ಐ.ಎಫ್.ಎಫ್.ಐ ನ ರೆಡ್ ಕಾರ್ಪೆಟ್ ನಲ್ಲಿ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್

ಗೋವಾ 2025ರ ಐ.ಎಫ್.ಎಫ್.ಐ ನ ರೆಡ್ ಕಾರ್ಪೆಟ್ ನಲ್ಲಿ ಅನುಪಮ್ ಖೇರ್, ಜಾಕಿ ಶ್ರಾಫ್ ಮತ್ತು ಇತರರು

ಗೋವಾ 2025ರ ಐ.ಎಫ್.ಎಫ್.ಐ ನ ರೆಡ್ ಕಾರ್ಪೆಟ್‌ನಲ್ಲಿ ಮನೋಜ್ ಬಾಜಪೇಯಿ ಮತ್ತು ದಿ ಫ್ಯಾಮಿಲಿ ಮ್ಯಾನ್ ಸಿಬ್ಬಂದಿ

ಗೋವಾ 2025ರ ಐ.ಎಫ್.ಎಫ್.ಐ ನ ರೆಡ್ ಕಾರ್ಪೆಟ್‌ನಲ್ಲಿ ಮನೋಜ್ ಬಾಜಪೇಯಿ ಮತ್ತು ದಿ ಫ್ಯಾಮಿಲಿ ಮ್ಯಾನ್ ಸಿಬ್ಬಂದಿ

ಗೋವಾದಲ್ಲಿ ನಡೆಯುತ್ತಿರುವ 56ನೇ ಐ.ಎಫ್.ಎಫ್.ಐ 2025ರ 'ರೆಡ್ ಕಾರ್ಪೆಟ್' ನಲ್ಲಿ ಖ್ಯಾತ ಚಲನಚಿತ್ರ ನಿರ್ಮಾಪಕ ಶ್ರೀ ಮುಜಾಫರ್ ಅಲಿ
ಐ.ಎಫ್.ಎಫ್.ಐ ರಾಯಭಾರಿಗಳ ದುಂಡುಮೇಜಿನ ಸಭೆಯಲ್ಲಿ ಸಹ-ನಿರ್ಮಾಣ ಸಾಮರ್ಥ್ಯವನ್ನು ಎತ್ತಿ ಹಿಡಿದ ಭಾರತ
ಸಹ-ನಿರ್ಮಾಣ, ತಂತ್ರಜ್ಞಾನ ಪಾಲುದಾರಿಕೆಗಳು ಮತ್ತು ನಿಯಂತ್ರಣ ಸೌಲಭ್ಯದಲ್ಲಿ ಹೆಚ್ಚಿದ ಸಹಕಾರವನ್ನು ಅನ್ವೇಷಿಸಲು ಐ.ಎಫ್.ಎಫ್.ಐ ಯು ಪಾಲುದಾರ ರಾಷ್ಟ್ರಗಳ ರಾಜತಾಂತ್ರಿಕರೊಂದಿಗೆ ರಾಯಭಾರಿಗಳ ದುಂಡುಮೇಜಿನ ಸಭೆಯನ್ನು ಆಯೋಜಿಸಿತ್ತು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಭಾರತವು ಜಾಗತಿಕ ನಿರ್ಮಾಣ ಕೇಂದ್ರವಾಗಿ ಹೊರಹೊಮ್ಮುತ್ತಿರುವುದನ್ನು ಎತ್ತಿ ಹಿಡಿದರು. ಇದೇ ವೇಳೆ, ಡಾ. ಮುರುಗನ್ ಅವರು ಸಹ-ನಿರ್ಮಾಣವು ಆಡಿಯೋ-ವಿಶುವಲ್ ಸಹಯೋಗದ ಪ್ರಮುಖ ಆಧಾರಸ್ತಂಭ ಎಂದು ಒತ್ತಿ ಹೇಳಿದರು.
ಅಂತರ-ಸಚಿವಾಲಯದ ಸಮನ್ವಯದ ಮೂಲಕ ಪೈರಸಿ ತಡೆ ಕ್ರಮಗಳು, VFX ಮತ್ತು ಅನಿಮೇಷನ್ ನಲ್ಲಿನ ಪ್ರಗತಿಯ ನೆರವಿನೊಂದಿಗೆ, 2025ರ ವೇಳೆಗೆ ಭಾರತದ ಮಾಧ್ಯಮ ಮತ್ತು ಮನರಂಜನಾ ವಲಯವು 31.6 ಬಿಲಿಯನ್ ಡಾಲರ್ ಗೆ ಬೆಳೆಯುವ ನಿರೀಕ್ಷೆಯಿದೆ ಎಂದು ಅವರು ಉಲ್ಲೇಖಿಸಿದರು.

ಗೋವಾದ ಐ.ಎಫ್.ಎಫ್.ಐ ನಲ್ಲಿ ನಡೆದ 'ಸಹ-ನಿರ್ಮಾಣ' ಕುರಿತ ರಾಯಭಾರಿಗಳ ದುಂಡುಮೇಜಿನ ಸಭೆಯಲ್ಲಿ, ಕೇಂದ್ರ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು.

ಗೋವಾದಲ್ಲಿ ಐ.ಎಫ್.ಎಫ್.ಐ ನಲ್ಲಿ ಸಹ-ನಿರ್ಮಾಣದ ಕುರಿತು ರಾಯಭಾರಿಗಳ ದುಂಡು ಮೇಜಿನ ಸಭೆ

ಗೋವಾದಲ್ಲಿ ಐ.ಎಫ್.ಎಫ್.ಐ ನಲ್ಲಿ ಸಹ-ನಿರ್ಮಾಣದ ಕುರಿತು ರಾಯಭಾರಿಗಳ ದುಂಡು ಮೇಜಿನ ಸಭೆ

ಗೋವಾದಲ್ಲಿ ಐ.ಎಫ್.ಎಫ್.ಐ ನಲ್ಲಿ ಸಹ-ನಿರ್ಮಾಣದ ಕುರಿತು ರಾಯಭಾರಿಗಳ ದುಂಡು ಮೇಜಿನ ಸಭೆ
ಐ.ಎಫ್.ಎಫ್.ಐ ಯಲ್ಲಿ 'ಸಿನಿಮಾ ಮತ್ತು ಸಂಸ್ಕೃತಿ: ಎರಡು ಕಾಲಘಟ್ಟಗಳ ಪ್ರತಿಬಿಂಬ' ಕುರಿತ ಸಂವಾದ
'ಸಿನಿಮಾ ಮತ್ತು ಸಂಸ್ಕೃತಿ: ಎರಡು ಕಾಲಘಟ್ಟಗಳ ಪ್ರತಿಬಿಂಬ' ಎಂಬ ವಿಷಯದ ಕುರಿತು ನಡೆದ ವಿಶೇಷ ಸಂವಾದ ಗೋಷ್ಠಿಯು, ತಲೆಮಾರುಗಳಾಚೆಗಿನ ಭಾರತೀಯ ಸಿನಿಮಾದ ಬಗ್ಗೆ ವಿಶೇಷ ಒಳನೋಟಗಳನ್ನು ನೀಡಿತು. ಮುಜಾಫರ್ ಅಲಿ ಮತ್ತು ಶಾದ್ ಅಲಿ ಅವರನ್ನೊಳಗೊಂಡ ಈ ಗೋಷ್ಠಿಯನ್ನು ಸ್ವತಃ ಶಾದ್ ಅಲಿ ಅವರೇ ನಡೆಸಿಕೊಟ್ಟರು.
ರವಿ ಕೊಟ್ಟಾರಕರ ಅವರು ನೆರವೇರಿಸಿದ ಸನ್ಮಾನ ಕಾರ್ಯಕ್ರಮದ ನಂತರ ಆರಂಭವಾದ ಈ ಸಂವಾದವು, ಹಳೆಯ ನೆನಪುಗಳು, ಸೃಜನಶೀಲತೆ ಮತ್ತು ಬದಲಾಗುತ್ತಿರುವ ಕಲಾತ್ಮಕ ಶೈಲಿಗಳ ಕುರಿತು ಒಂದು ಮೌಲ್ಯಯುತ ಚರ್ಚೆಗೆ ಸಾಕ್ಷಿಯಾಯಿತು

ಐ.ಎಫ್.ಎಫ್.ಐ ನಲ್ಲಿ 'ಸಿನಿಮಾ ಮತ್ತು ಸಂಸ್ಕೃತಿ: ಎರಡು ಕಾಲಘಟ್ಟಗಳ ಪ್ರತಿಬಿಂಬಗಳು' ಎಂಬ ವಿಷಯದ ಕುರಿತು ಮುಜಾಫರ್ ಅಲಿ ಮತ್ತು ಶಾದ್ ಅಲಿ ಅವರು ಅಧಿವೇಶನದಲ್ಲಿ ಭಾಗವಹಿಸಿದ್ದರು

ಐ.ಎಫ್.ಎಫ್.ಐ, ಚಲನಚಿತ್ರ ನಿರ್ಮಾಪಕ ರವಿ ಕೊಟ್ಟಾರಕರ ಅವರು ಮುಜಾಫರ್ ಅಲಿ ಮತ್ತು ಶಾದ್ ಅಲಿ ಅವರ ಕೊಡುಗೆಗಳ ಬಗ್ಗೆ ಆತ್ಮೀಯವಾಗಿ ಮಾತನಾಡಿದರು
ಐ.ಎಫ್.ಎಫ್.ಐ ಬಗ್ಗೆ
1952ರಲ್ಲಿ ಆರಂಭಗೊಂಡ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ), ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಹಬ್ಬವಾಗಿ ಹೊರಹೊಮ್ಮಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ) ಮತ್ತು ಗೋವಾ ಸರ್ಕಾರದ ಎಂಟರ್ ಟೈನ್ ಮೆಂಟ್ ಸೊಸೈಟಿ ಆಫ್ ಗೋವಾ (ಇ.ಎಸ್.ಜಿ) ಜಂಟಿಯಾಗಿ ಇದನ್ನು ಆಯೋಜಿಸುತ್ತವೆ. ಪುನರುಜ್ಜೀವನಗೊಂಡ ಶಾಸ್ತ್ರೀಯ ಚಿತ್ರಗಳು ಮತ್ತು ಧೈರ್ಯಶಾಲಿ ಪ್ರಯೋಗಗಳು ಒಂದಾಗುವ, ಹಾಗೂ ದಿಗ್ಗಜರೊಂದಿಗೆ ನಿರ್ಭೀತ ಹೊಸ ಪ್ರತಿಭೆಗಳು ವೇದಿಕೆ ಹಂಚಿಕೊಳ್ಳುವ ಈ ಉತ್ಸವವು ಇಂದು ಜಾಗತಿಕ ಸಿನಿಮಾ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್ ಕ್ಲಾಸ್ ಗಳು, ಗೌರವ ಸಲ್ಲಿಕೆಗಳು ಮತ್ತು ಹೊಸ ಆಲೋಚನೆಗಳು ಹಾಗೂ ಒಪ್ಪಂದಗಳಿಗೆ ರೆಕ್ಕೆ ನೀಡುವ ಅತ್ಯುತ್ಸಾಹದ 'ವೇವ್ಸ್ ಫಿಲ್ಮ್ ಬಜಾರ್' - ಇವೆಲ್ಲವೂ ಸೇರಿ ಐ.ಎಫ್.ಎಫ್.ಐ ಯ ಆಕರ್ಷಣೆಯನ್ನು ಹೆಚ್ಚಿಸಿವೆ. ಗೋವಾದ ಸುಂದರ ಕಡಲತೀರದ ಹಿನ್ನೆಲೆಯಲ್ಲಿ, ನವೆಂಬರ್ 20 ರಿಂದ 28 ರವರೆಗೆ ನಡೆಯುತ್ತಿರುವ ಈ 56ನೇ ಆವೃತ್ತಿಯು, ವಿವಿಧ ಭಾಷೆಗಳು, ಪ್ರಕಾರಗಳು ಮತ್ತು ಆವಿಷ್ಕಾರಗಳ ಅದ್ಭುತ ಲೋಕವನ್ನು ತೆರೆದಿಡಲಿದೆ. ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಅದ್ದೂರಿ ಆಚರಣೆಯಾಗಿದೆ.
*****
Release ID:
2192777
| Visitor Counter:
6