ಕನಸುಗಳು, ಆವಿಷ್ಕಾರ ಮತ್ತು ಪರಂಪರೆಯ ಪ್ರಯಾಣ: ಸಿನಿಮಾದ ಎರಡು ಯುಗಗಳನ್ನು ಪ್ರತಿಬಿಂಬಿಸಿದ ಮುಜಾಫರ್ ಅಲಿ ಮತ್ತು ಶಾದ್ ಅಲಿ
ಗಮನ್ ನಿಂದ ಝೂನಿಯವರೆಗೆ, ಸಂವಾದವು ವಿಜಯಗಳು, ವೈಫಲ್ಯಗಳು ಮತ್ತು ಚಲನಚಿತ್ರ ನಿರ್ಮಾತೃವಿನ ಆತ್ಮವನ್ನು ರೂಪಿಸುವ ದುರ್ಬಲ ಕನಸುಗಳ ಮೂಲಕ ಸಾಗಿತು
ಈ ಸಂವಾದವು ತಂದೆ-ಮಗ ಜೋಡಿಯನ್ನು ನೆನಪು, ಸಂಸ್ಕೃತಿ ಮತ್ತು ಅವರನ್ನು ರೂಪಿಸಿದ ಕಲೆಯ ಕುರಿತು ಅಪರೂಪದ, ಚಿಂತನಶೀಲ ಮಾತುಕತೆಯಲ್ಲಿ ತೊಡಗಿಸಿತು
'ಸಿನಿಮಾ ಮತ್ತು ಸಂಸ್ಕೃತಿ: ಎರಡು ಯುಗಗಳ ಚಿಂತನೆಗಳು' ಎಂಬ ವಿಷಯದ ಕುರಿತು ಐ.ಎಫ್.ಎಫ್.ಐ ನಲ್ಲಿ ನಡೆದ ಸಂವಾದ ಗೋಷ್ಠಿಯು ನೆನಪುಗಳು, ಕನಸುಗಳು ಮತ್ತು ಕಲಾತ್ಮಕತೆಯನ್ನು ಹೆಣೆದುಕೊಂಡ ತಂದೆ-ಮಗನ ಸಂಭಾಷಣೆಯೊಂದಿಗೆ, ತಲೆಮಾರುಗಳಾದ್ಯಂತ ಭಾರತೀಯ ಸಿನಿಮಾದ ಒಂದು ನೋಟವನ್ನು ನೀಡಿತು. ಗೋಷ್ಠಿಯನ್ನು ಉದ್ಘಾಟಿಸಿದ ಖ್ಯಾತ ಚಲನಚಿತ್ರ ನಿರ್ಮಾಪಕ ರವಿ ಕೊಟ್ಟಾರಕರ ಅವರು ಜೋಡಿಯನ್ನು ಅಭಿನಂದಿಸಿದರು ಮತ್ತು ಅವರ ಕೊಡುಗೆಗಳ ಬಗ್ಗೆ ಹೃತ್ಪೂರ್ವಕವಾಗಿ ಮಾತನಾಡಿದರು, ಅವರ ಕೆಲಸದ ನಿರಂತರ ಪರಿಣಾಮವನ್ನು ಒಪ್ಪಿಕೊಂಡರು. ನಂತರ ಶಾದ್ ಅಲಿ ಅವರು ತಮ್ಮ ತಂದೆ, ದಂತಕಥೆ ಮುಜಾಫರ್ ಅಲಿಯನ್ನು ಅವರ ದಶಕಗಳ ಅನುಭವಗಳು, ಪ್ರತಿಬಿಂಬಗಳು ಮತ್ತು ಪಾಠಗಳ ಮೂಲಕ ನೆನಪಿನ ಹಾದಿಗೆ ಕರೆದೊಯ್ದರು.

ಶಾದ್ ಅಲಿ ಒಂದು ಸರಳ ಪ್ರಶ್ನೆಯೊಂದಿಗೆ ಪ್ರಾರಂಭಿಸಿದರು: ನೀವು ಮೊದಲು ಯಾವ ವೃತ್ತಿಯಲ್ಲಿ ಬೆಳೆಯಬೇಕೆಂದು ಕನಸು ಕಂಡಿದ್ದಿರಿ? ಮುಜಫರ್ ಅಲಿಯವರ ಉತ್ತರವು ಬಾಲ್ಯದ ರೇಖಾಚಿತ್ರಗಳು, ಕಲಾ ತರಗತಿಯ ಬಹುಮಾನಗಳು ಮತ್ತು ಕಾವ್ಯದ ಮೇಲಿನ ನಿರಂತರ ಆಕರ್ಷಣೆಯ ಹಾದಿಯಲ್ಲಿ ತೆರೆದುಕೊಂಡಿತು. ಚಲನಚಿತ್ರಗಳು ಆ ನಂತರ ಬಂದವು ಎಂದು ಅವರು ಹೇಳಿದರು. ಅವು ಸಾಂತ್ವನ ಮತ್ತು ಕಲ್ಪನೆಯು ಮುಕ್ತವಾಗಿ ವಿಹರಿಸಬಹುದಾದ ಸ್ಥಳವನ್ನು ನೀಡಿದವು, ಮುಖ್ಯವಾಹಿನಿಯ ಕಥೆ ಹೇಳುವಿಕೆಯ ಊಹಾತ್ಮಕ ಚಿತ್ರಣದಿಂದ ಮುಕ್ತಗೊಳಿಸದವು ಎಂದು ಅವರು ಹೇಳಿದರು. "ಕಲ್ಕತ್ತಾ ಸಿನಿಮಾ ಮತ್ತು ಕಲಾತ್ಮಕತೆ ಹೆಣೆದುಕೊಂಡಿರುವ ಮತ್ತು ಅನಿರೀಕ್ಷಿತವಾದದ್ದನ್ನು ಸಾಧ್ಯ ಮಾಡುವ ಜಗತ್ತನ್ನು ತೆರೆಯಿತು" ಎಂದು ಅವರು ನೆನಪಿಸಿಕೊಂಡರು. "ಚಲನಚಿತ್ರ ನಿರ್ಮಾಣವು ನಿಮ್ಮ ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಭೂವಿಜ್ಞಾನದ ಬಗ್ಗೆ" ಎಂದು ಅವರು ಸೃಷ್ಟಿಯ ಮೂಲಧಾತುಗಳ ಬಗ್ಗೆ ಮಾತನಾಡುತ್ತಾ ಹೇಳಿದರು.
ತಮ್ಮ ಆರಂಭಿಕ ವರ್ಷಗಳಲ್ಲಿ, ಮುಜಫರ್ ಅಲಿ ವಲಸೆ ಹೋಗುವ ಜನರ ದುಃಸ್ಥಿತಿ ಮತ್ತು ಅಸಹಾಯಕತೆಯನ್ನು ಕಂಡರು, ಈ ಅನುಭವವು ಸ್ಥಳಾಂತರದ ನೋವಿನ ಬಗ್ಗೆ ಅವರ ಚಿತ್ರವಾದ ಗಮನ್ ನ ಭಾವನಾತ್ಮಕ ತಿರುಳಾಯಿತು. ಈ ಚಿತ್ರವು ಐ ಎಫ್ ಎಫ್ ಐ ನಲ್ಲಿ ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನು ಗೆದ್ದಿದ್ದರೂ, ಆ ಸಾಧನೆಯಿಂದ ತಾವು ಎಂದಿಗೂ ಉನ್ನತಿ ಹೊಂದಿರುವುದಾಗಿ ಬಾವಿಸಲಿಲ್ಲ ಎಂದು ಮುಜಫರ್ ಅಲಿ ಹೇಳಿದರು. ಯಶಸ್ಸು ತಮಗೆಗೆ 'ಸಬಲೀಕರಣ'ದ ಭಾವನೆ ಮೂಡಿಸಲಿಲ್ಲ, ಬದಲಾಗಿ ಹೊಸ ಹೋರಾಟಗಳು ಮತ್ತು ಹೊಸ ಸವಾಲುಗಳು ಯಾವಾಗಲೂ ಮುಂದೆ ಕಾಯುತ್ತಿವೆ ಎಂಬುದನ್ನು ನೆನಪಿಸಿತು ಎಂದು ಅವರು ವಿವರಿಸಿದರು.

ಸಂವಾದವು ಕುಶಲತೆ ಮತ್ತು ಸಂಗೀತದ ಕಡೆಗೆ ತಿರುಗಿತು. ಶಾದ್ ಅಲಿ ಅವರು ಮುಜಫರ್ ಅಲಿಯವರ ಆರಂಭಿಕ ಸಿನಿಮಾಗಳ ವಿಶೇಷತೆಯ ಬಗ್ಗೆ ಗಮನ ಸೆಳೆದರು. ಗಮನ್ ನಿಂದ ಉಮ್ರಾವ್ ಜಾನ್ ವರೆಗೆ, ಬೇರೂರುವುದು ತಮ್ಮ ವಿಧಾನದ ಕೇಂದ್ರಬಿಂದುವಾಗಿತ್ತು ಎಂದು ತಂದೆ ವಿವರಿಸಿದರು. ಸಂಗೀತವು ಕಾವ್ಯ, ತತ್ವಶಾಸ್ತ್ರ ಮತ್ತು ಶರಣಾಗತಿಯಿಂದ ಕೂಡಿದೆ ಎಂದು ಅವರು ವಿವರಿಸಿದರು. ಉಮ್ರಾವ್ ಜಾನ್ ಸಿನಿಮಾದ ಮಧುರ ಗೀತೆಗಳು ನಮ್ರತೆ ಮತ್ತು ಸಹಯೋಗದ ಅಗತ್ಯವಿರುವ ಕಾವ್ಯಾತ್ಮಕ ಸಂವೇದನೆಯಿಂದ ಹುಟ್ಟಿಕೊಂಡಿವೆ ಎಂದು ಅವರು ವಿವರಿಸಿದರು. "ಕಾವ್ಯವು ನಿಮ್ಮನ್ನು ಕನಸು ಕಾಣುವಂತೆ ಮಾಡುತ್ತದೆ ಮತ್ತು ಕವಿಗಳು ನಮ್ಮೊಂದಿಗೆ ಕನಸು ಕಾಣಬೇಕು." ಎಂದು ಅವರು ಹೇಳಿದರು,
ನಂತರ ಝೂನಿ ಎಂಬ ಕನಸು ಬಂದಿತು, ಅದು ಸವಾಲಾಗಿ ಮಾರ್ಪಟ್ಟಿತು. ಕಾಶ್ಮೀರದಲ್ಲಿ ದ್ವಿಭಾಷಾ ಚಲನಚಿತ್ರವನ್ನು ಯೋಜಿಸುವುದು ಲಾಜಿಸ್ಟಿಕ್, ಸಾಂಸ್ಕೃತಿಕ ಮತ್ತು ಕಾಲೋಚಿತ ಅಡೆತಡೆಗಳನ್ನು ಎದುರಿಸಿತು, ಅಂತಿಮವಾಗಿ ನಿರ್ಮಾಣವನ್ನು ಸ್ಥಗಿತಗೊಳಿಸಲಾಯಿತು. ಮುಜಾಫರ್ ಅಲಿ ಈ ಅನುಭವವನ್ನು "ಹಲವು ಕನಸುಗಳನ್ನು ಮೀರಿದ ಕನಸು" ಮತ್ತು ಅದರ ವೈಫಲ್ಯವು ನೋವಿನಿಂದ ಕೂಡಿದೆ ಎಂದು ಬಣ್ಣಿಸಿದರು. ಆದರೂ, ಅದರ ಅಪೂರ್ಣ ಸ್ಥಿತಿಯಲ್ಲಿಯೂ ಸಹ, ಅದರ ಚೈತನ್ಯವು ಉಳಿದುಕೊಂಡಿತು ಎಂದರು. ಕಾಶ್ಮೀರ ಕೇವಲ ಒಂದು ಸ್ಥಳಕ್ಕಿಂತ ಹೆಚ್ಚಿನದು; ಅದು ಜೀವಂತ ಸಂಸ್ಕೃತಿ ಎಂದು ಅವರು ಪ್ರೇಕ್ಷಕರಿಗೆ ನೆನಪಿಸಿದರು. "ಕಾಶ್ಮೀರಕ್ಕಾಗಿ ಚಲನಚಿತ್ರಗಳು ಕಾಶ್ಮೀರದಲ್ಲಿಯೇ ಹುಟ್ಟಬೇಕು" ಎಂದು ಅವರು ಹೇಳಿದರು, ಯುವ ಸ್ಥಳೀಯ ಪ್ರತಿಭೆಗಳು ಅದರ ಪರಂಪರೆಯನ್ನು ಮುಂದುವರಿಸಬೇಕೆಂದು ಅವರು ಹೇಳಿದರು.
ಝುನಿ ಚಿತ್ರದ ಮರುಸ್ಥಾಪನೆ, ಅದರ ನೆಗೆಟಿವ್ ಗಳು ಮತ್ತು ಸೌಂಡ್ ಟ್ರ್ಯಾಕ್ ಗಳನ್ನು ಪುನರ್ವಿಮರ್ಶಿಸುವುದು ಮತ್ತು ತನ್ನ ತಂದೆಯ ಸಿನಿಮೀಯ ದೃಷ್ಟಿಕೋನದೊಂದಿಗೆ ಮರುಸಂಪರ್ಕಿಸುವ ಬಗ್ಗೆ ಶಾದ್ ಅಲಿ ಮಾತನಾಡಿದರು. ಈ ಪ್ರಯಾಣದ ಮೂಲಕ, ಸಿನಿಮಾ ಕೇವಲ ಮನರಂಜನೆಯನ್ನು ಮಾತ್ರವಲ್ಲದೆ ಹೇಗೆ ಗುಣಪಡಿಸುತ್ತದೆ ಎಂಬುದರ ಕುರಿತು ಅವರು ಹೇಳಿದರು. ಝೂನಿ: ಲಾಸ್ಟ್ ಅಂಡ್ ಫೌಂಡ್ ಎಂಬ ಶೀರ್ಷಿಕೆಯ ಹೃದಯಸ್ಪರ್ಶಿ ವೀಡಿಯೊವನ್ನು ಪ್ರದರ್ಶಿಸಲಾಯಿತು, ಇದು ಚಿತ್ರವನ್ನು ಮರುಸೃಷ್ಟಿಸುವ ತಂದೆ-ಮಗನ ಕನಸುಗಳು, ಕಷ್ಟಗಳು ಮತ್ತು ಭರವಸೆಗಳ ಪ್ರಯಾಣವನ್ನು ಚಿತ್ರಿಸುತ್ತದೆ.

ಪ್ರಶ್ನೋತ್ತರ ಅವಧಿಯಲ್ಲಿ, ಕೇವಲ ಹಾಡುಗಳಿಗೆ ಹಿನ್ನೆಲೆಯಾಗಿ ಕಾರ್ಯನಿರ್ವಹಿಸದೆ, ಕಾಶ್ಮೀರದ ನಿಜವಾದ ಸಂಸ್ಕೃತಿಯನ್ನು ಪ್ರದರ್ಶಿಸುವ ಚಲನಚಿತ್ರಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಪ್ರಶ್ನೆಯನ್ನು ಎತ್ತಲಾಯಿತು. ಮುಜಾಫರ್ ಅಲಿ ದೃಢವಾಗಿ ಉತ್ತರಿಸಿದರು: ಝೂನಿಯನ್ನು ಅಂತಹ ಚಲನಚಿತ್ರವಾಗಿ ಕಲ್ಪಿಸಲಾಗಿತ್ತು. "ಕಾಶ್ಮೀರದಲ್ಲಿ ಎಲ್ಲವೂ ಇದೆ, ನೀವು ಪ್ರತಿಭೆಯನ್ನು ಆಹ್ವಾನಿಸುವ ಅಗತ್ಯವಿಲ್ಲ, ನೀವು ಅದನ್ನು ಅಲ್ಲಿ ಪೋಷಿಸಬೇಕು" ಎಂದು ಅವರು ಹೇಳಿದರು.
ಗೋಷ್ಠಿ ಮುಕ್ತಾಯಗೊಂಡಾಗ, ಪ್ರೇಕ್ಷಕರು ಕೇವಲ ಸಂವಾದಕ್ಕಿಂತ ಹೆಚ್ಚಿನದನ್ನು ವೀಕ್ಷಿಸಿದ್ದಾರೆ ಎಂಬುದು ಸ್ಪಷ್ಟವಾಗಿತ್ತು; ಅವರು ಸಿನಿಮಾದ ಪರಂಪರೆಯನ್ನು, ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಾದುಹೋಗುವ ಕನಸುಗಳು, ಹೋರಾಟಗಳು ಮತ್ತು ಪರಂಪರೆಗಳನ್ನು ಕಾಳಜಿ, ಶ್ರದ್ಧೆ ಮತ್ತು ಭರವಸೆಯೊಂದಿಗೆ ಮುಂದುವರಿಸಿಕೊಂಡು ಹೋಗುವುದನ್ನು ನೋಡಿದ್ದರು.
ಐ.ಎಫ್.ಎಫ್.ಐ ಬಗ್ಗೆ
1952ರಲ್ಲಿ ಪ್ರಾರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿದೆ. ಇದನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಮತ್ತು ಗೋವಾ ಸರ್ಕಾರದ ಗೋವಾ ಮನರಂಜನಾ ಸೊಸೈಟಿ ಜಂಟಿಯಾಗಿ ಆಯೋಜಿಸುತ್ತವೆ. ಈ ಉತ್ಸವವು ಜಾಗತಿಕ ಸಿನಿಮಾ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್ ಗಳು ದಿಟ್ಟ ಪ್ರಯೋಗಗಳನ್ನು ಸಂಧಿಸುತ್ತವೆ ಮತ್ತು ಹೆಸರಾಂತ ಕಲಾವಿದರು ಮೊದಲ ಬಾರಿಯ ಧೈರ್ಯಶಾಲಿಗಳೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ ಅನ್ನು ನಿಜವಾಗಿಯೂ ಅದ್ಭುತವಾಗಿಸುವುದು ಅದರ ಅದ್ಭುತವಾದ ಸಮ್ಮಿಲನಗಳು - ಅಂತರರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್ ಗಳು, ಗೌರವಗಳು ಮತ್ತು ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ವ್ಯವಹಾರಗಳು ಮತ್ತು ಸಹಯೋಗಗಳು ಹುಟ್ಟುತ್ತವೆ. ಗೋವಾದ ಬೆರಗುಗೊಳಿಸುವ ಕಡಲತೀರದ ಹಿನ್ನೆಲೆಯಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯುವ 56ನೇ ಆವೃತ್ತಿಯು ಬೆರಗುಗೊಳಿಸುವ ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಒಂದು ಅದ್ಭುತ ಶ್ರೇಣಿಯನ್ನು ಆಚರಿಸುವ ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56new/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
Release ID:
2192579
| Visitor Counter:
7