ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
26 ಪ್ರಮುಖ ಇ-ಕಾಮರ್ಸ್ ವೇದಿಕೆಗಳಿಂದ 'ಡಾರ್ಕ್ ಪ್ಯಾಟರ್ನ್ಸ್'ಗಳನ್ನು ತೊಡೆದುಹಾಕಲು ಸ್ವಯಂ-ಪರಿಶೋಧನೆಯ ಅನುಸರಣೆ ಘೋಷಣೆ
Posted On:
20 NOV 2025 10:59AM by PIB Bengaluru
ಡಿಜಿಟಲ್ ಮಾರುಕಟ್ಟೆಯಲ್ಲಿ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಪ್ರಮುಖ ಹೆಜ್ಜೆಯಾಗಿ, 26 ಪ್ರಮುಖ ಇ-ಕಾಮರ್ಸ್ ವೇದಿಕೆಗಳು ಡಾರ್ಕ್ ಪ್ಯಾಟರ್ನ್ಸ್, 2023ರ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳಿಗೆ ಅನುಸರಣೆಯನ್ನು ದೃಢೀಕರಿಸುವ ಸ್ವಯಂ-ಘೋಷಣಾ ಪತ್ರಗಳನ್ನು ಸ್ವಯಂಪ್ರೇರಿತವಾಗಿ ಸಲ್ಲಿಸಿವೆ. ಗ್ರಾಹಕರನ್ನು ದಾರಿತಪ್ಪಿಸುವ ಅಥವಾ ನಿರ್ವಹಿಸುವ ಮೋಸದ ಆನ್‌ಲೈನ್ ವಿನ್ಯಾಸ ಅಭ್ಯಾಸಗಳನ್ನು ತಡೆಯುವ ಭಾರತದ ಪ್ರಯತ್ನಗಳಲ್ಲಿ ಈ ಬೆಳವಣಿಗೆಯು ಒಂದು ಪ್ರಮುಖ ಮೈಲಿಗಲ್ಲಾಗಿದೆ.
ಈ ವೇದಿಕೆಗಳು ತಮ್ಮಲ್ಲಿ ಡಾರ್ಕ್ ಪ್ಯಾಟರ್ನ್ಸ್ ಇರುವುದನ್ನು ಗುರುತಿಸಲು, ಮೌಲ್ಯಮಾಪನ ಮಾಡಲು ಮತ್ತು ತೆಗೆದುಹಾಕಲು ಆಂತರಿಕ ಸ್ವಯಂ-ಪರಿಶೋಧನೆಗಳು ಅಥವಾ ತೃತೀಯ ಪರಿಶೋಧನೆಗಳನ್ನು ನಡೆಸಿವೆ. ಈ ಎಲ್ಲಾ 26 ಕಂಪನಿಗಳು, ತಮ್ಮ ವೇದಿಕೆಗಳು ಡಾರ್ಕ್ ಪ್ಯಾಟರ್ನ್ಸ್‌ನಿಂದ ಮುಕ್ತವಾಗಿವೆ ಮತ್ತು ಯಾವುದೇ ಯೂಸರ್ ಇಂಟರ್‌ಫೇಸ್ ವಿನ್ಯಾಸಗಳನ್ನು ಬಳಸುತ್ತಿಲ್ಲ ಎಂದು ಘೋಷಿಸಿವೆ.
ಈ ಸಕ್ರಿಯ ಕೈಗಾರಿಕಾ-ವ್ಯಾಪಿ ಅನುಸರಣೆಯು ಗ್ರಾಹಕರ ಪಾರದರ್ಶಕತೆ, ನ್ಯಾಯಯುತ ವ್ಯಾಪಾರ ಪದ್ಧತಿ ಮತ್ತು ನೈತಿಕ ಡಿಜಿಟಲ್ ಪರಿಸರ ವ್ಯವಸ್ಥೆಗಳ ಕಡೆಗೆ ಬದ್ಧತೆ ಪ್ರದರ್ಶಿಸುತ್ತದೆ. ಈ ಸ್ವಯಂಪ್ರೇರಿತ ಕ್ರಮವು, ಗ್ರಾಹಕರ ರಕ್ಷಣೆ ಮತ್ತು ವ್ಯಾಪಾರ ಬೆಳವಣಿಗೆಯು ಜೊತೆಯಾಗಿ ಸಾಗಬಹುದು ಎಂಬುದನ್ನು ತಿಳಿಸುತ್ತದೆ. ಇದರಿಂದ ಬ್ರ್ಯಾಂಡ್‌ನ ವಿಶ್ವಾಸ ಮತ್ತು ದೀರ್ಘಕಾಲೀನ ವಿಶ್ವಾಸಾರ್ಹತೆ ಬಲಗೊಳ್ಳುತ್ತದೆ.
ಸಿಸಿಪಿಎಯಿಂದ ಅನುಸರಣೆಯ ಅಂಗೀಕಾರ; ಇದು ಕೈಗಾರಿಕಾ-ಶ್ರೇಷ್ಠ ಪದ್ಧತಿ ಎಂದು ಉಲ್ಲೇಖ
ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಈ ಘೋಷಣೆಗಳನ್ನು ಶ್ಲಾಘಿಸಿದೆ ಮತ್ತು ಇವು ಅನುಕರಣೀಯವಾಗಿವೆ ಎಂದು ತಿಳಿಸಿದ್ದು, ಇತರ ಕಂಪನಿಗಳು ಸಹ ಇದೇ ರೀತಿಯ ಸ್ವಯಂ-ನಿಯಂತ್ರಣ ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಿದೆ. ಸಿಸಿಪಿಎ ಈ ಹಿಂದೆ, ಸಾರ್ವಜನಿಕ ಪ್ರವೇಶಕ್ಕಾಗಿ ಕಂಪನಿಗಳು ತಮ್ಮ ಸ್ವಯಂ-ಪರಿಶೋಧನಾ ಘೋಷಣೆಗಳನ್ನು ತಮ್ಮ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ನಿರ್ದೇಶಿಸಿತ್ತು.
ಈ ಘೋಷಣೆಗಳನ್ನು ಸಿಸಿಪಿಎ ಜಾಲತಾಣದಲ್ಲೂ ನೋಡಬಹುದು: https://www.doca.gov.in/ccpa/slef-audit-companies-dark-pattern.php
ಸಿಸಿಪಿಎ, ಎಲ್ಲಾ ಇತರ ಇ-ಕಾಮರ್ಸ್ ವೇದಿಕೆಗಳು, ಮಾರುಕಟ್ಟೆ ಘಟಕಗಳು, ಸೇವಾ ಪೂರೈಕೆದಾರರು ಮತ್ತು ಆ್ಯಪ್ ಡೆವಲಪರ್‌ಗಳು ಈ ಕಂಪನಿಗಳು ಹಾಕಿಕೊಟ್ಟ ಉದಾಹರಣೆಯನ್ನು ಅನುಸರಿಸುವಂತೆ ಬಲವಾಗಿ ಒತ್ತಾಯಿಸಿದೆ. ಭಾರತದ ಡಿಜಿಟಲ್ ಜಾಗದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಂದು ವ್ಯವಹಾರವೂ, ಅಭ್ಯಾಸಗಳು ಅಲ್ಪಾವಧಿಯ ತಂತ್ರಗಳಾಗಿವೆ ಮತ್ತು ದೀರ್ಘಾವಧಿಯಲ್ಲಿ ಗ್ರಾಹಕರಿಗೆ ಮತ್ತು ವ್ಯವಹಾರಗಳಿಗೆ ಹಾನಿ ಮಾಡುತ್ತವೆ ಎಂಬುದನ್ನು ಗುರುತಿಸಿದೆ.
ರಾಷ್ಟ್ರೀಯ ಗ್ರಾಹಕ ಸಹಾಯವಾಣಿ, ಸಾಮಾಜಿಕ ಮಾಧ್ಯಮ ಅಭಿಯಾನಗಳು, ಮಾಹಿತಿ ವೀಡಿಯೊಗಳು ಮತ್ತು ಸಂಪರ್ಕ ಕಾರ್ಯಕ್ರಮಗಳ ಮೂಲಕ, ಗ್ರಾಹಕರಿಗೆ ಡಾರ್ಕ್ ಪ್ಯಾಟರ್ನ್ಸ್ ಗುರುತಿಸುವ ಮತ್ತು ಅವುಗಳ ಬಗ್ಗೆ ವರದಿ ಮಾಡುವ ಬಗ್ಗೆ ಶಿಕ್ಷಣ ನೀಡಲಾಗಿದೆ. ಅಂತಹ ದೂರುಗಳನ್ನು ವ್ಯವಸ್ಥಿತವಾಗಿ ಪರಿಹರಿಸಲಾಗುತ್ತಿದೆ ಮತ್ತು ಅಗತ್ಯವಿದ್ದಲ್ಲಿ ಜಾರಿ ಕ್ರಮಗಳನ್ನು ಪರಿಗಣಿಸಲಾಗುತ್ತಿದೆ. ಸಿಸಿಪಿಎ ಸಂಭಾವ್ಯ ಉಲ್ಲಂಘನೆಗಳ ಮೇಲೆ ಸೂಕ್ಷ್ಮವಾಗಿ ನಿಗಾ ಇಟ್ಟಿರುವುದಾಗಿ ಮತ್ತು ತಪ್ಪಾದ ವೇದಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಪುನರುಚ್ಚರಿಸಿದೆ.
ಹಿನ್ನೆಲೆ
ಡಾರ್ಕ್ ಪ್ಯಾಟರ್ನ್ಸ್, 2023ರ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳನ್ನು 2023ರ ನವೆಂಬರ್ 30ರಂದು ಅಧಿಸೂಚಿಸಲಾಗಿದ್ದು, ಅವು ಈ ಕೆಳಗಿನ 13 ಡಾರ್ಕ್ ಪ್ಯಾಟರ್ನ್ಸ್ ಗುರುತಿಸಿ ನಿಷೇಧಿಸಿವೆ:
- ಫಾಲ್ಸ್ ಅರ್ಜೆನ್ಸಿ
- ಬ್ಯಾಸ್ಕೆಟ್ ಸ್ನೀಕಿಂಗ್
- ಕನ್ಫರ್ಮ್ ಶೇಮಿಂಗ್
- ಫೋರ್ಸಡ್ ಆಕ್ಷನ್
- ಸಬಸ್ಕ್ರಿಪ್ಷನ್ ಟ್ಯಾಪ್
- ಇಂಟರ್‌ಫೇಸ್ ಇಂಟರ್ಫರೆನ್ಸ್
- ಬೈಟ್ & ಸ್ವಿಚ್
- ಡ್ರಿಪ್ ಪ್ರೈಸಿಂಗ್
- ಡಿಸ್‍ಗೈಸ್ಡ್ ಅಡ್ವೆರ್ಟೈಸ್‍ಮೆಂಟ್ಸ್
- ನ್ಯಾಗಿಂಗ್
- ಟ್ರಿಕ್ ವರ್ಡಿಂಗ್
- ಎಸ್‌ಎಎಎಸ್ ಬಿಲ್ಲಿಂಗ್
- ರೋಗ್ ಮಾಲ್‌ವೇರ್ಸ್
ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಅಡಿಯಲ್ಲಿ ಹೊರಡಿಸಲಾದ ಈ ಮಾರ್ಗಸೂಚಿಗಳು, ಪಾರದರ್ಶಕ, ವಿಶ್ವಾಸಾರ್ಹ ಮತ್ತು ಗ್ರಾಹಕ-ಕೇಂದ್ರಿತ ಡಿಜಿಟಲ್ ಮಾರುಕಟ್ಟೆಯನ್ನು ನಿರ್ಮಿಸುವ ಸರ್ಕಾರದ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ.
ಅನುಸರಣೆಯನ್ನು ಬಲಪಡಿಸಲು, ಸಿಸಿಪಿಎ ಜೂನ್ 5, 2025 ರಂದು ಒಂದು ಸಲಹಾ ಪತ್ರವನ್ನು ಹೊರಡಿಸಿತು. ಡಾರ್ಕ್ ಪ್ಯಾಟರ್ನ್ಸ್ ಪತ್ತೆಹಚ್ಚಲು ಮತ್ತು ತೆಗೆದುಹಾಕಲು ಎಲ್ಲಾ ಇ-ಕಾಮರ್ಸ್ ವೇದಿಕೆಗಳು ಮತ್ತು ಆನ್‌ಲೈನ್ ಸೇವಾ ಪೂರೈಕೆದಾರರು ಮೂರು ತಿಂಗಳೊಳಗೆ ಕಡ್ಡಾಯವಾಗಿ ಸ್ವಯಂ-ಪರಿಶೋಧನೆ ನಡೆಸುವಂತೆ ಈ ಸಲಹಾ ಪತ್ರವು ಸೂಚಿಸಿತು. ಈ ಸಲಹಾ ಪತ್ರವು ಪಾರದರ್ಶಕತೆ, ಸ್ಪಷ್ಟ ಸಮ್ಮತಿ, ಸ್ಪಷ್ಟ ಬಹಿರಂಗಪಡಿಸುವಿಕೆ ಮತ್ತು ದುರುಪಯೋಗಪಡಿಸದ ವಿನ್ಯಾಸಕ್ಕೆ ಒತ್ತು ನೀಡಿತ್ತು.
ಕೈಗಾರಿಕೆ, ಶಿಕ್ಷಣ ಮತ್ತು ಗ್ರಾಹಕ ಸಂಸ್ಥೆಗಳೊಂದಿಗೆ ಬಹು-ಪಾಲುದಾರರ ಸಮಾಲೋಚನೆಗಳ ನಂತರ, ಸಿಸಿಪಿಎ ಮೋಸದ ಡಿಜಿಟಲ್ ವಿನ್ಯಾಸಗಳನ್ನು ಮೂಲಭೂತವಾಗಿ ತೆಗೆದುಹಾಕುವ ಗುರಿಯನ್ನು ಹೊಂದಿರುವ ಒಂದು ಬಲವಾದ ನಿಯಂತ್ರಕ ಚೌಕಟ್ಟನ್ನು ನಿರ್ಮಿಸಿದೆ.
ಸ್ವಯಂ-ಲೆಕ್ಕಪರಿಶೋಧನಾ ಘೋಷಣೆಗಳನ್ನು ಸಲ್ಲಿಸಿದ ವೇದಿಕೆಗಳ ಪಟ್ಟಿ
- ಪೇಜ್ ಇಂಡಸ್ಟ್ರೀಸ್ (ಜಾಕಿ, ಸ್ಪೀಡೋ) – ಸ್ವಯಂ-ಪರಿಶೋಧನೆ ನಡೆಸಲಾಗಿದೆ; ವೇದಿಕೆ ಡಾರ್ಕ್ ಪ್ಯಾಟರ್ನ್ಸ್‌ನಿಂದ ಮುಕ್ತವಾಗಿದೆ.
- ವಿಲಿಯಂ ಪೆನ್ ಪ್ರೈ. ಲಿ. (ಶೀಫರ್, ಲ್ಯಾಪಿಡ್ ಬಾರ್ಡ್) – ಸ್ವಯಂ-ಪರಿಶೋಧನೆ ನಡೆಸಲಾಗಿದೆ; ಯಾವುದೇ ಡಾರ್ಕ್ ಪ್ಯಾಟರ್ನ್ಸ್ ಪತ್ತೆಯಾಗಿಲ್ಲ.
- ಫಾರ್ಮ್ ಈಸಿ (ಆಕ್ಸೆಲಿಯಾ ಸೊಲ್ಯೂಷನ್ಸ್ ಪ್ರೈ. ಲಿ.) – ಆಂತರಿಕ ಪರಿಶೋಧನೆಯು ಮಾರ್ಗಸೂಚಿಗಳ ಅನುಸರಣೆಯನ್ನು ದೃಢಪಡಿಸಿದೆ.
- ಝೆಪ್ಟೋ ಮಾರ್ಕೆಟ್‌ಪ್ಲೇಸ್ ಪ್ರೈ. ಲಿ. – ವೇದಿಕೆಯ ಯುಐ/ಯುಎಕ್ಸ್ ಪರಿಶೋಧನೆ ಮಾಡಲಾಗಿದೆ; ನಿರಂತರ ಮೇಲ್ವಿಚಾರಣೆ ಜಾರಿಯಲ್ಲಿದೆ.
- ಕುರಾಡೆನ್ ಇಂಡಿಯಾ (ಕುರಾಪ್ರಾಕ್ಸ್) – ಸ್ವಯಂ-ಲೆಕ್ಕಪರಿಶೋಧನೆಯು ಡಾರ್ಕ್ ಪ್ಯಾಟರ್ನ್ಸ್‌ನ ಅನುಪಸ್ಥಿತಿಯನ್ನು ದೃಢಪಡಿಸಿದೆ.
- ಡ್ಯೂರೋಫ್ಲೆಕ್ಸ್ ಪ್ರೈ. ಲಿ. – ಸ್ವಯಂ-ಪರಿಶೋಧನೆಯು ವೇದಿಕೆಯ ಅನುಸರಣೆಯನ್ನು ದೃಢಪಡಿಸಿದೆ.
- ಫ್ಲಿಪ್‌ಕಾರ್ಟ್ ಇಂಟರ್‌ನೆಟ್ ಪ್ರೈ. ಲಿ. – ತೃತೀಯ ಪರಿಶೋಧನೆಯು ಯಾವುದೇ ಡಾರ್ಕ್ ಪ್ಯಾಟರ್ನ್ಸ್ ಇಲ್ಲ ಎಂದು ದೃಢಪಡಿಸಿದೆ.
- ಮಿಂತ್ರಾ ಡಿಸೈನ್ಸ್ ಪ್ರೈ. ಲಿ. – ತೃತೀಯ ಪರಿಶೋಧನೆಯು ಅನುಸರಣೆಯನ್ನು ದೃಢಪಡಿಸಿದೆ.
- ಕ್ಲಿಯರ್‌ಟ್ರಿಪ್ ಪ್ರೈ. ಲಿ. – ತೃತೀಯ ಪರಿಶೋಧನೆಯು ವೇದಿಕೆಯು ಡಾರ್ಕ್-ಪ್ಯಾಟರ್ನ್-ಮುಕ್ತವಾಗಿದೆ ಎಂದು ದೃಢಪಡಿಸಿದೆ.
- ವಾಲ್‌ಮಾರ್ಟ್ ಇಂಡಿಯಾ ಪ್ರೈ. ಲಿ. – ತೃತೀಯ ಪರಿಶೋಧನೆಯು ಯಾವುದೇ ಡಾರ್ಕ್ ಪ್ಯಾಟರ್ನ್ಸ್ ಇಲ್ಲ ಎಂದು ತೀರ್ಮಾನಿಸಿದೆ.
- ಮೇಕ್‌ಮೈಟ್ರಿಪ್ (ಇಂಡಿಯಾ) ಪ್ರೈ. ಲಿ. – ವೇದಿಕೆಗಳಿಗೆ ಸ್ಪಷ್ಟ ಗ್ರಾಹಕ ಸಮ್ಮತಿ ಅಗತ್ಯವಿದೆ; ಪೂರ್ವ-ಟಿಕ್ ಮಾಡಿದ ಬಾಕ್ಸ್‌ಗಳಿಲ್ಲ ಎಂದು ಘೋಷಿಸಿದೆ.
- ಬಿಗ್‌ಬಾಸ್ಕೆಟ್ (ಇನ್ನೋವೇಟಿವ್ ರಿಟೇಲ್ ಕಾನ್ಸೆಪ್ಟ್ಸ್ ಪ್ರೈ. ಲಿ.) – ಆಂತರಿಕ ಪರಿಶೀಲನೆ ಪೂರ್ಣಗೊಂಡಿದೆ; ಪರಿಹಾರ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
- ತಿರಾ ಬ್ಯೂಟಿ (ರಿಲಯನ್ಸ್ ರಿಟೇಲ್ ಲಿ.) – ಆಂತರಿಕ ಪರಿಶೀಲನೆಯು ಅನುಸರಣೆಯನ್ನು ದೃಢಪಡಿಸಿದೆ.
- ಜಿಯೋಮಾರ್ಟ್ (ರಿಲಯನ್ಸ್ ರಿಟೇಲ್ ಲಿ.) – ವೇದಿಕೆಯು ಡಾರ್ಕ್ ಪ್ಯಾಟರ್ನ್ಸ್‌ನಿಂದ ಮುಕ್ತವಾಗಿದೆ ಎಂದು ಘೋಷಿಸಲಾಗಿದೆ; ನಿರಂತರ ಮೇಲ್ವಿಚಾರಣೆ.
- ರಿಲಯನ್ಸ್ ಜ್ಯುವೆಲ್ಸ್ – ಸಂಪೂರ್ಣವಾಗಿ ಅನುಸರಣೆ ಹೊಂದಿದೆ ಎಂದು ಘೋಷಿಸಿದೆ.
- ಅಜಿಯೋ – ಯಾವುದೇ ಡಾರ್ಕ್ ಪ್ಯಾಟರ್ನ್ಸ್ ಇಲ್ಲ; ನಿರಂತರ ವೇದಿಕೆ ಪರಿಶೀಲನೆಗಳು.
- ರಿಲಯನ್ಸ್ ಡಿಜಿಟಲ್ – ಆಂತರಿಕ ಪರಿಶೀಲನೆಯು ಸಂಪೂರ್ಣ ಅನುಸರಣೆಯನ್ನು ಖಚಿತಪಡಿಸುತ್ತದೆ.
- ನೆಟ್‌ಮೆಡ್ಸ್ – ಡಾರ್ಕ್ ಪ್ಯಾಟರ್ನ್ಸ್‌ನಿಂದ ಮುಕ್ತವಾಗಿದೆ ಎಂದು ಘೋಷಿಸಿದೆ.
- ಹ್ಯಾಮ್ಲೀಸ್ – ಆಂತರಿಕ ಪರಿಶೀಲನೆಯು ಅನುಸರಣೆಯನ್ನು ದೃಢಪಡಿಸಿದೆ.
- ಮಿಲ್‌ಬಾಸ್ಕೆಟ್ – ವೇದಿಕೆಯು ಅನುಸರಣೆ ಹೊಂದಿದೆ ಎಂದು ಘೋಷಿಸಿದೆ.
- ಸ್ವಿಗ್ಗಿ ಲಿ. – ಸ್ವಯಂ-ಲೆಕ್ಕಪರಿಶೋಧನೆ ಪೂರ್ಣಗೊಂಡಿದೆ; ಗ್ರಾಹಕ ಅನುಭವವನ್ನು ಹೆಚ್ಚಿಸಲು ಬದ್ಧವಾಗಿದೆ.
- ಟಾಟಾ 1ಎಂಜಿ – ಸಮಗ್ರ ಸ್ವಯಂ-ಪರಿಶೋಧನೆ; ಗ್ರಾಹಕ-ಕೇಂದ್ರಿತ ನಡವಳಿಕೆಗಾಗಿ ವಿನ್ಯಾಸಗೊಳಿಸಲಾಗಿದೆ.
- ಝೊಮ್ಯಾಟೊ – ಆಂತರಿಕ ಮೌಲ್ಯಮಾಪನವು ವೇದಿಕೆಯನ್ನು ಸಿಸಿಪಿಎ ಸಲಹೆಯೊಂದಿಗೆ ಜೋಡಿಸುತ್ತದೆ.
- ಬ್ಲಿಂಕಿಟ್ – ಆಂತರಿಕ ಪರಿಶೀಲನೆಯು ಪಾರದರ್ಶಕ, ಜವಾಬ್ದಾರಿಯುತ ವಿನ್ಯಾಸವನ್ನು ದೃಢಪಡಿಸುತ್ತದೆ.
- ಇಕ್ಸಿಗೋ – ಅತ್ಯುನ್ನತ ಅನುಸರಣೆ ಮಾನದಂಡಗಳನ್ನು ಪಾಲಿಸುತ್ತಾ, ಡಾರ್ಕ್ ಪ್ಯಾಟರ್ನ್ಸ್‌ನಿಂದ ಮುಕ್ತವಾಗಿದೆ ಎಂದು ಘೋಷಿಸಿದೆ.
- ಮೀಶೋ ಲಿ. – ಸಿಸಿಪಿಎ ಗುರುತಿಸಿದ ಎಲ್ಲಾ 13 ಡಾರ್ಕ್ ಪ್ಯಾಟರ್ನ್ಸ್‌ನಿಂದ ಮುಕ್ತವಾಗಿದೆ ಎಂದು ಘೋಷಿಸಿದೆ; ನಿಯಮಿತ ಸ್ವಯಂ-ಪರಿಶೀಲನೆಗಳು ನಡೆಯುತ್ತಿವೆ.
*****
(Release ID: 2192036)
Visitor Counter : 12