ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿ ಅವರು ಆರನೇ ʻರಾಷ್ಟ್ರೀಯ ಜಲ ಪ್ರಶಸ್ತಿʼಗಳು ಮತ್ತು ʻಜಲ ಸಂಚಾಯ್-ಜನ ಭಾಗೀದಾರಿ ಪ್ರಶಸ್ತಿʼಗಳನ್ನು ಪ್ರದಾನ ಮಾಡಿದರು


ವ್ಯಕ್ತಿಗಳು, ಕುಟುಂಬಗಳು, ಸಮಾಜ ಮತ್ತು ಸರ್ಕಾರದ ಭಾಗವಹಿಸುವಿಕೆಯಿಂದ ಮಾತ್ರ ಪರಿಣಾಮಕಾರಿ ನೀರಿನ ನಿರ್ವಹಣೆ ಸಾಧ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು

Posted On: 18 NOV 2025 2:06PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ನವೆಂಬರ್ 18, 2025) ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಆರನೇ ‘ರಾಷ್ಟ್ರೀಯ ಜಲ ಪ್ರಶಸ್ತಿ’ಗಳು ಮತ್ತು ‘ಜಲ ಸಂಚಾಯ್-ಜನ ಭಾಗೀದಾರಿ ಪ್ರಶಸ್ತಿ’ಗಳನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಅವರು, ಮಾನವ ನಾಗರಿಕತೆಯ ಕಥೆಯು ನದಿ ಕಣಿವೆಗಳಲ್ಲಿ, ಸಮುದ್ರ ತೀರಗಳಲ್ಲಿ ಮತ್ತು ವಿವಿಧ ಜಲಮೂಲಗಳ ಸುತ್ತಲೂ ನೆಲೆಸಿದ ಗುಂಪುಗಳ ಕಥೆಯೇ ಆಗಿದೆ ಎಂದು ಹೇಳಿದರು. ನಮ್ಮ ಸಂಪ್ರದಾಯದಲ್ಲಿ, ನದಿಗಳು, ಸರೋವರಗಳು ಮತ್ತು ಇತರ ನೀರಿನ ಮೂಲಗಳನ್ನು ಪೂಜಿಸಲಾಗುತ್ತದೆ. ನಮ್ಮ ರಾಷ್ಟ್ರೀಯ ಗೀತೆಯಲ್ಲಿ ಬಂಕಿಮ್ ಚಂದ್ರ ಚಟರ್ಜಿ ಅವರು ಬರೆದ ಮೊದಲ ಪದ ʻಸುಜಲಾಂʼ. ಇದರ ಅರ್ಥ "ಹೇರಳವಾದ ಜಲ ಸಂಪನ್ಮೂಲಗಳಿಂದ ಆಶೀರ್ವದಿಸಲ್ಪಟ್ಟಿದೆ" ಎಂದು. ಈ ಸಂಗತಿಯು ನಮ್ಮ ದೇಶದ ನೀರಿನ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಷ್ಟ್ರಪತಿಗಳು ಅವರು ಅವರು ಹೇಳಿದರು.

ಸಮರ್ಥ ನೀರಿನ ಬಳಕೆಯು ಪ್ರಸ್ತುತ ಒಂದು ಜಾಗತಿಕ ಅನಿವಾರ್ಯತೆಯಾಗಿದೆ ಎಂದು ರಾಷ್ಟ್ರಪತಿ ಅಭಿಪ್ರಾಯಪಟ್ಟರು. ಜನಸಂಖ್ಯೆಗೆ ಹೋಲಿಸಿದರೆ ನಮ್ಮ ಜಲ ಸಂಪನ್ಮೂಲಗಳು ಸೀಮಿತವಾಗಿರುವುದರಿಂದ ಸಮರ್ಥ ನೀರಿನ ಬಳಕೆ ನಮ್ಮ ದೇಶಕ್ಕೆ ಇನ್ನಷ್ಟು ನಿರ್ಣಾಯಕವಾಗಿದೆ. ತಲಾವಾರು ನೀರಿನ ಲಭ್ಯತೆ ಒಂದು ಪ್ರಮುಖ ಸವಾಲಾಗಿದೆ. ಹವಾಮಾನ ಬದಲಾವಣೆಯು ನೀರಿನ ಚಕ್ರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಒತ್ತಿ ಹೇಳಿದರು. ಇಂತಹ ಸಂದರ್ಭಗಳಲ್ಲಿ, ನೀರಿನ ಲಭ್ಯತೆ ಮತ್ತು ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಬೇಕು ಎಂದು ರಾಷ್ಟ್ರಪತಿಗಳು ಅವರು ಕರೆ ನೀಡಿದರು.

ಕಳೆದ ವರ್ಷ ಪ್ರಾರಂಭಿಸಲಾದ ʻಜಲ ಸಂಚಾಯ-ಜನ ಭಾಗೀದಾರಿʼ ಉಪಕ್ರಮದ ಅಡಿಯಲ್ಲಿ 35 ಲಕ್ಷಕ್ಕೂ ಅಧಿಕ ಅಂತರ್ಜಲ ಮರುಪೂರಣ ರಚನೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿದು ರಾಷ್ಟ್ರಪತಿಗಳು ಅವರು ಹರ್ಷ ವ್ಯಕ್ತಪಡಿಸಿದರು.

ಪರಿಸರ ಸ್ನೇಹಿ ಹಾಗೂ ಮರುಬಳಕೆಯ (ಆವರ್ತನ) ನೀರಿನ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ಎಲ್ಲಾ ಕೈಗಾರಿಕೆಗಳು ಮತ್ತು ಇತರ ಮಧ್ಯಸ್ಥಗಾರರು ಜಲಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಸದ್ಬಳಕೆ ಮಾಡಿಕೊಳ್ಳಬಹುದು ಎಂದು ರಾಷ್ಟ್ರಪತಿಗಳು ಅವರು ಸಲಹೆ ನೀಡಿದರು. ನೀರಿನ ಸಂಸ್ಕರಣೆ ಮತ್ತು ಮರುಬಳಕೆಯ ಜೊತೆಗೆ, ಅನೇಕ ಕೈಗಾರಿಕಾ ಘಟಕಗಳು ಶೂನ್ಯ ದ್ರವ ವಿಸರ್ಜನೆಯ ಗುರಿಯನ್ನು ಸಾಧಿಸಿವೆ ಎಂದು ಅವರು ಮಾಹಿತಿ ನೀಡಿದರು. ಇಂತಹ ಪ್ರಯತ್ನಗಳು ನೀರಿನ ನಿರ್ವಹಣೆ ಮತ್ತು ಸಂರಕ್ಷಣೆಗೆ ಉಪಯುಕ್ತವಾಗಿವೆ ಎಂದು ಅವರು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು, ಗ್ರಾಮ ಪಂಚಾಯಿತಿಗಳು ಮತ್ತು ಪುರಸಭೆಗಳ ಮಟ್ಟದಲ್ಲಿ ಜಲ ಸಂರಕ್ಷಣೆ ಮತ್ತು ಸ್ಥಿರ ನಿರ್ವಹಣೆಗೆ ಆದ್ಯತೆ ನೀಡುವಂತೆ ರಾಷ್ಟ್ರಪತಿಗಳು ಅವರು ಒತ್ತಿ ಹೇಳಿದರು. ಹಲವಾರು ಶಿಕ್ಷಣ ಸಂಸ್ಥೆಗಳು, ನಾಗರಿಕ ವೇದಿಕೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಸಹ ಈ ನಿಟ್ಟಿನಲ್ಲಿ ಕೊಡುಗೆ ನೀಡುತ್ತಿವೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ನೀರಿನ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸುವ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಅವರು ರೈತರು ಮತ್ತು ಉದ್ಯಮಿಗಳಿಗೆ ಸಲಹೆ ನೀಡಿದರು. ಜಲ ಸಂರಕ್ಷಣೆಗೆ ವೈಯಕ್ತಿಕವಾಗಿ ಸ್ವಯಂ ಪ್ರೇರಿತರಾಗಿ ಕೊಡುಗೆ ನೀಡುವ ನಾಗರಿಕರು ಸಹ ಜಲ-ಸಮೃದ್ಧಿ ಮೌಲ್ಯ ಸರಪಳಿಯಲ್ಲಿ ಪ್ರಮುಖ ಪಾಲುದಾರರಾಗಿದ್ದಾರೆ ಎಂದು ಅವರು ಒತ್ತಿ ಹೇಳಿದರು. ವ್ಯಕ್ತಿಗಳು, ಕುಟುಂಬಗಳು, ಸಮಾಜ ಮತ್ತು ಸರ್ಕಾರದ ಭಾಗವಹಿಸುವಿಕೆಯಿಂದ ಮಾತ್ರ ಪರಿಣಾಮಕಾರಿ ನೀರಿನ ನಿರ್ವಹಣೆ ಸಾಧ್ಯ ಎಂದು ರಾಷ್ಟ್ರಪತಿಗಳು ಅವರು ಹೇಳಿದರು.

ನೀರನ್ನು ಬಳಸುವಾಗ, ನಾವು ಅತ್ಯಂತ ಅಮೂಲ್ಯವಾದ ಆಸ್ತಿಯನ್ನು ಬಳಸುತ್ತಿದ್ದೇವೆ ಎಂಬುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ರಾಷ್ಟ್ರಪತಿ ಹೇಳಿದರು. ಬುಡಕಟ್ಟು ಸಮುದಾಯಗಳು ನೀರು ಸೇರಿದಂತೆ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ಬಹಳ ಗೌರವದಿಂದ ಪರಿಗಣಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಜಲಸಂಪನ್ಮೂಲಗಳ ಅತ್ಯಂತ ಪರಿಣಾಮಕಾರಿ ಬಳಕೆಯು ನಮ್ಮ ಎಲ್ಲಾ ನಾಗರಿಕರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿರಬೇಕು ಎಂದು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬರೂ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ನೀರಿನ ಸಂರಕ್ಷಣೆಯ ಬಗ್ಗೆ ನಿರಂತರವಾಗಿ ಜಾಗರೂಕರಾಗಿರಬೇಕು ಎಂದು ಅವರು ಸಲಹೆ ನೀಡಿದರು. ನಮ್ಮ ದೇಶದ ಸಾರ್ವಜನಿಕರಲ್ಲಿ ನೀರಿನ ಜಾಗೃತಿ ಮೂಡಿಸುವುದು ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು. ಜನರ ಶಕ್ತಿಯಿಂದ ಮಾತ್ರ ನೀರನ್ನು ಕೊಯ್ಲು ಮತ್ತು ಸಂರಕ್ಷಿಸಲು ಸಾಧ್ಯ ಎಂದರು.

ʻರಾಷ್ಟ್ರೀಯ ಜಲ ಪ್ರಶಸ್ತಿʼಗಳು ನೀರಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಉತ್ತಮ ನೀರಿನ ಬಳಕೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿವೆ. ʼಜಲ ಸಂಚಾಯ್ ಜನ ಭಾಗೀದಾರಿʼ(ಜೆ.ಎಸ್.ಜೆ.ಬಿ) ಉಪಕ್ರಮವು ಸಮುದಾಯದ ಭಾಗವಹಿಸುವಿಕೆ ಮತ್ತು ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಮೂಲಕ ಅಂತರ್ಜಲ ಮರುಪೂರಣಕ್ಕಾಗಿ ವೈವಿಧ್ಯಮಯ, ಅಗಾಧವಾದ ಮತ್ತು ಪುನರಾವರ್ತಿಸಬಹುದಾದ ಮಾದರಿಗಳ ಆವಿಷ್ಕಾರಕ್ಕೆ ದಾರಿ ಮಾಡಿದೆ.

ರಾಷ್ಟ್ರಪತಿಗಳ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ-

 

*****


(Release ID: 2191214) Visitor Counter : 11