ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಇಮ್ಕಾಂಗ್ ಎಲ್. ಇಮ್ಚೆನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 12 NOV 2025 7:04PM by PIB Bengaluru

ನಾಗಾಲ್ಯಾಂಡ್‌ನ ಹಿರಿಯ ನಾಯಕ ಶ್ರೀ ಇಮ್ಕಾಂಗ್ ಎಲ್. ಇಮ್ಚೆನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ನಾಗಾಲ್ಯಾಂಡ್‌ನ ಅಭಿವೃದ್ಧಿಗೆ ಶ್ರೀ ಇಮ್ಚೆನ್ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಅವರನ್ನು ಸ್ಮರಿಸಲಾಗುವುದು ಎಂದು ಪ್ರಧಾನಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಅವರು ಹಲವಾರು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು ಮತ್ತು ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕೆ ಕಟಿಬದ್ಧರಾಗಿದ್ದರು. ಅವರ ಶಾಸಕಾಂಗದ ಮತ್ತು ಸಚಿವ ಅವಧಿಗಳು ಅವರ ಪ್ರಭಾವ ಮತ್ತು ಸಮರ್ಪಣೆಗಾಗಿ ಪ್ರೀತಿಯಿಂದ ಸ್ಮರಿಸಲ್ಪಡುತ್ತವೆ ಎಂದೂ ಹೇಳಿದ್ದಾರೆ.

ಈ  ಕುರಿತು ಎಕ್ಸ್ ಪೋಸ್ಟ್‌ ನಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

“ಶ್ರೀ ಇಮ್ಕಾಂಗ್ ಎಲ್. ಇಮ್ಚೆನ್ ಜೀ ಅವರನ್ನು ನಾಗಾಲ್ಯಾಂಡ್‌ನ ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಸ್ಮರಿಸಲಾಗುವುದು. ಅವರು ಹಲವಾರು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು ಮತ್ತು ಬುಡಕಟ್ಟು ಸಮುದಾಯಗಳ ಕಲ್ಯಾಣದ ಬಗ್ಗೆ ವಿಶೇಷವಾಗಿ ಉತ್ಸುಕರಾಗಿದ್ದರು. ಅವರ ಶಾಸಕಾಂಗ ಮತ್ತು ಸಚಿವ ಅವಧಿಗಳನ್ನು ಪ್ರೀತಿಯಿಂದ ಸ್ಮರಿಸಲಾಗುವುದು. ಅವರು ನಾಗಾಲ್ಯಾಂಡ್‌ನಲ್ಲಿ ಬಿಜೆಪಿಯನ್ನು ಬಲಪಡಿಸುವಲ್ಲಿಯೂ ಕೊಡುಗೆ ನೀಡಿದ್ದಾರೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರೊಂದಿಗೆ ನಾವಿದ್ದೇವೆ.”

 

*****

 


(Release ID: 2189562) Visitor Counter : 6