ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಿಂದ 2025ರ ನವೆಂಬರ್ 7 ರಂದು ರಾಷ್ಟ್ರೀಯ ಗೀತೆ "ವಂದೇ ಮಾತರಂ" ನ 150ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆ
Posted On:
06 NOV 2025 6:44PM by PIB Bengaluru
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ರಾಷ್ಟ್ರೀಯ ಗೀತೆ "ವಂದೇ ಮಾತರಂ" ನ 150ನೇ ವರ್ಷಾಚರಣೆ ಅಂಗವಾಗಿ ನವದೆಹಲಿಯ ಸಿಜಿಒ ಸಂಕೀರ್ಣದಲ್ಲಿ ಪಂಡಿತ್ ದೀನದಯಾಳ್ ಅಂತ್ಯೋದಯ ಭವನದ ಮಂಥನ ಸಭಾಂಗಣದಲ್ಲಿ 2025ರ ನವೆಂಬರ್ 7 ರಂದು ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಿದೆ.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು ಹಾಗೂ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವರಾದ ಶ್ರೀ ಜಾರ್ಜ್ ಕುರಿಯನ್ ಅವರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಭಾರತದ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ನೀಡಿದ ಹಾಗೂ ರಾಷ್ಟ್ರದ ಗರಿಮೆ ಮತ್ತು ಏಕತೆಯನ್ನು ಪ್ರೇರೇಪಿಸುವ ಕಾಲಾತೀತ ಗೀತ ಸಂಯೋಜನೆಯ 150 ವರ್ಷಗಳ ಆಚರಣೆ ಇದಾಗಿದೆ.
ಸಮಾರಂಭದಲ್ಲಿ “ವಂದೇ ಮಾತರಂ” ಗೀತೆಯ ಸಾಮೂಹಿಕ ಗಾಯನವಿರಲಿದೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು. ಕೇಂದ್ರ ಸಚಿವರಾದ ಶ್ರೀ ಕಿರಣ್ ರಿಜಿಜು ಮತ್ತು ರಾಜ್ಯ ಸಚಿವರಾದ ಶ್ರೀ ಜಾರ್ಜ್ ಕುರಿಯನ್ ಅವರು ಕಾರ್ಯಕ್ರಮದಲ್ಲಿ ಭಾಷಣ ಮಾಡುವರು. “ವಕ್ಫ್ (ತಿದ್ದುಪಡಿ) ಮಸೂದೆ, 2024ರ ಜಂಟಿ ಸಮಿತಿ” ಕುರಿತ ಕಿರುಪುಸ್ತಕವನ್ನು ಸಹ ಬಿಡುಗಡೆ ಮಾಡಲಾಗುವುದು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಡಾ. ಚಂದ್ರಶೇಖರ್ ಕುಮಾರ್, ಸಚಿವಾಲಯದ ಹಿರಿಯ ಅಧಿಕಾರಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ವರ್ಷ 2025ರಲ್ಲಿ “ವಂದೇ ಮಾತರಂ” ಗೀತೆ 150 ವರ್ಷಗಳನ್ನು ಪೂರೈಸಲಿದ್ದು, ಬಂಕಿಮಚಂದ್ರ ಚಟರ್ಜಿಯವರು ಈ ಗೀತೆಯನ್ನು 1875ರ ನವೆಂಬರ್ 7 ರಂದು ಅಕ್ಷಯ ನವಮಿಯ ಶುಭ ಸಂದರ್ಭದಲ್ಲಿ ಬರೆದಿದ್ದರು ಎಂದು ನಂಬಲಾಗಿದೆ. ನಮ್ಮನ್ನು ಹೆಮ್ಮೆ, ಗೌರವ ಮತ್ತು ಹಂಚಿತ ಗುರುತಿನಲ್ಲಿ ಒಗ್ಗೂಡಿಸುವುದನ್ನು ಮುಂದುವರಿಸುವ ನಮ್ಮ ರಾಷ್ಟ್ರೀಯ ಗೀತೆಗೆ ಗೌರವ ಸೂಚಕವಾಗಿ, ದೇಶಭಕ್ತಿ ಮತ್ತು ಕೃತಜ್ಞತೆಯ ಸಾಮೂಹಿಕ ಅಭಿವ್ಯಕ್ತಿಯಾಗಿ ಈ ಕಾರ್ಯಕ್ರಮದಲ್ಲಿ ದೇಶದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡಲಾಗುತ್ತಿದೆ.
****
(Release ID: 2187156)
Visitor Counter : 6