ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

ರಾಷ್ಟ್ರವ್ಯಾಪಿ ಡಿ.ಎಲ್.ಸಿ. ಅಭಿಯಾನ 4.0 ಅನ್ನು ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಔಪಚಾರಿಕವಾಗಿ ಉದ್ಘಾಟಿಸಿದರು, ಮುಖ ದೃಢೀಕರಣ ತಂತ್ರಜ್ಞಾನವನ್ನು ಬಳಸಿಕೊಂಡು ಪಿಂಚಣಿದಾರರಿಗೆ 52 ಲಕ್ಷಕ್ಕೂ ಹೆಚ್ಚು ಡಿಜಿಟಲ್ ಜೀವ ಪ್ರಮಾಣಪತ್ರಗಳನ್ನು (ಡಿ.ಎಲ್.ಸಿ.) ಸೃಷ್ಠಿಸಲಾಯಿತು


ಪಿಂಚಣಿದಾರರಿಗೆ ಮುಖ ದೃಢೀಕರಣವು ಸುಲಭ ಮತ್ತು ಘನತೆಯನ್ನು ತರುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು

ನಾಗರಿಕ-ಕೇಂದ್ರಿತ ಸುಧಾರಣೆಗಳು ಪಿಂಚಣಿ ವಿತರಣೆಯನ್ನು ಭಾರತದ ಅತಿದೊಡ್ಡ ಡಿಜಿಟಲ್ ಸಬಲೀಕರಣ ಪ್ರಯತ್ನವಾಗಿ ಪರಿವರ್ತಿಸುತ್ತವೆ

90 ವರ್ಷಕ್ಕಿಂತ ಮೇಲ್ಪಟ್ಟ 85,000ಕ್ಕೂ ಹೆಚ್ಚು ಪಿಂಚಣಿದಾರರು, 100 ವರ್ಷಕ್ಕಿಂತ ಮೇಲ್ಪಟ್ಟ 2,200ಕ್ಕೂ ಹೆಚ್ಚು ಪಿಂಚಣಿದಾರರು ಇದರ ಪ್ರಯೋಜನ ಪಡೆದಿದ್ದಾರೆ

Posted On: 05 NOV 2025 4:33PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಪ್ರಧಾನಮಂತ್ರಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳ ಪರಿಹಾರ, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಇಂದು ರಾಷ್ಟ್ರವ್ಯಾಪಿ ಡಿಜಿಟಲ್ ಜೀವ ಪ್ರಮಾಣಪತ್ರ (ಡಿ.ಎಲ್.ಸಿ.) ಅಭಿಯಾನ 4.0 ಅನ್ನು ಔಪಚಾರಿಕವಾಗಿ ಪ್ರಾರಂಭಿಸಿದರು, ಇದು ಪಿಂಚಣಿದಾರರಿಗೆ ಜೀವನ ಪ್ರಮಾಣೀಕರಣವನ್ನು ಸರಳಗೊಳಿಸುವ ಕೇಂದ್ರ ಸರ್ಕಾರದ ನಿರಂತರ ಅಭಿಯಾನದಲ್ಲೊಂದು ಮಹತ್ವದ ಹೆಜ್ಜೆಯಾಗಿದೆ.

ನವೆಂಬರ್ 1 ರಂದು ಪ್ರಾರಂಭವಾಗಿ ನವೆಂಬರ್ 30, 2025 ರವರೆಗೆ ನಡೆಯಲಿರುವ ಒಂದು ತಿಂಗಳ ಅವಧಿಯ ಡಿ.ಎಲ್.ಸಿ.  ಅಭಿಯಾನ 4.0, ಮೊದಲ ನಾಲ್ಕು ದಿನಗಳಲ್ಲಿ 55 ಲಕ್ಷಕ್ಕೂ ಹೆಚ್ಚು ಡಿಜಿಟಲ್ ಲೈಫ್ ಪ್ರಮಾಣಪತ್ರಗಳನ್ನು ಸೃಷ್ಟಿಸಲಾಗಿದೆ, ಹಾಗೂ, ಒಂದು ತಿಂಗಳ ಅವಧಿಯಲ್ಲಿ ಎರಡು ಕೋಟಿ ಗುರಿಯನ್ನು ಸಾಧಿಸುವ ಉದ್ದೇಶ ಹೊಂದಿದೆ.

ಕಳೆದ ವರ್ಷ ಹಿಂದಿನ ಡಿ.ಎಲ್.ಸಿ. ಅಭಿಯಾನ 3.0ರ ಸಾಧನೆಗಳನ್ನು ಉಲ್ಲೇಖಿಸಿ, ಈ ಬಾರಿ ಗಮನಾರ್ಹವಾಗಿ, 52.73 ಲಕ್ಷ ಡಿ.ಎಲ್.ಸಿ. ಗಳನ್ನು ಮುಖ ದೃಢೀಕರಣವನ್ನು ಬಳಸಿಕೊಂಡು ಸಲ್ಲಿಸಲಾಗಿದೆ ಮತ್ತು 72.64 ಲಕ್ಷ ಇ.ಪಿ.ಎಫ್.ಒ. ಪಿಂಚಣಿದಾರರಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡಿದರು.

ಕಳೆದ ವರ್ಷದ ಅಭಿಯಾನ 3.0 ಅನ್ನು ನವೆಂಬರ್ 2024ರಲ್ಲಿ ದೇಶದಾದ್ಯಂತ 845 ಜಿಲ್ಲೆಗಳು ಮತ್ತು ನಗರಗಳಲ್ಲಿ 1,984 ಸ್ಥಳಗಳಲ್ಲಿ ನಡೆಸಲಾಯಿತು, ಈ ಸಂದರ್ಭದಲ್ಲಿ 1.62 ಕೋಟಿ ಡಿ.ಎಲ್.ಸಿ. ಗಳನ್ನು ಸೃಷ್ಟಿಲಾಯಿತು, ಇದರಲ್ಲಿ 49.78 ಲಕ್ಷ ಕೇಂದ್ರ ಸರ್ಕಾರಿ ಪಿಂಚಣಿದಾರರಿಂದ ಬೇಡಿಕೆ ಬಂದವು ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು. ಇವುಗಳಲ್ಲಿ, 85,200ಕ್ಕೂ ಹೆಚ್ಚು 90 ವರ್ಷ ಮೇಲ್ಪಟ್ಟ ಪಿಂಚಣಿದಾರರಿಂದ ಮತ್ತು 2,200ಕ್ಕೂ ಹೆಚ್ಚು 100 ವರ್ಷ ಮೇಲ್ಪಟ್ಟ ಪಿಂಚಣಿದಾರರಿಂದ ಅರ್ಜಿಗಳು ಬಂದವು.

ಪ್ರಸ್ತುತ ನೂತನ ಅಭಿಯಾನ 4.0, ದೇಶಾದ್ಯಂತ ಸುಮಾರು 2,000 ಜಿಲ್ಲೆಗಳು, ನಗರಗಳು ಮತ್ತು ಪಟ್ಟಣಗಳನ್ನು 2,500 ಶಿಬಿರಗಳ ಮೂಲಕ ವಿಸೃತ ವ್ಯಾಪ್ತಿಯನ್ನು ಒಳಗೊಂಡಿದ್ದು, 1,250 ನೋಡಲ್ ಅಧಿಕಾರಿಗಳ ಸಂಯೋಜನೆಯೊಂದಿಗೆ, ಪ್ರಮುಖ ಬ್ಯಾಂಕುಗಳು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮತ್ತು ಪಿಂಚಣಿದಾರರ ಕಲ್ಯಾಣ ಸಂಘಗಳ ಭಾಗವಹಿಸುವಿಕೆಯೊಂದಿಗೆ ಸಮಗ್ರ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸ್ಥಳ ಅಥವಾ ಚಲನಶೀಲತೆಯ ನಿರ್ಬಂಧಗಳನ್ನು ಲೆಕ್ಕಿಸದೆ ಪ್ರತಿಯೊಬ್ಬ ಪಿಂಚಣಿದಾರರೂ ತಮ್ಮ ಜೀವನ ಪ್ರಮಾಣಪತ್ರವನ್ನು ಸರಾಗವಾಗಿ ಸಲ್ಲಿಸಬಹುದೆಂದು ಖಚಿತಪಡಿಸಿಕೊಳ್ಳಲು ಈ ಉಪಕ್ರಮವು ಸ್ಯಾಚುರೇಶನ್ ವಿಧಾನವನ್ನು ಅಳವಡಿಸಿಕೊಂಡಿದೆ.

ದೂರದ ಮತ್ತು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ದೇಶಾದ್ಯಂತ ಪ್ರತಿಯೊಬ್ಬ ಪಿಂಚಣಿದಾರರನ್ನು ತಲುಪುವ ಗುರಿಯೊಂದಿಗೆ, 19 ಪಿಂಚಣಿ ವಿತರಣಾ ಬ್ಯಾಂಕುಗಳು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐ.ಪಿ.ಪಿ.ಬಿ), ಪಿಂಚಣಿದಾರರ ಕಲ್ಯಾಣ ಸಂಘಗಳು, ಯು.ಐ.ಡಿ.ಎ.ಐ, ಮೈಟಿ, ಇ.ಪಿ.ಎಫ್.ಒ., ರೈಲ್ವೆಗಳು, ಸಿ.ಜಿ.ಡಿ.ಎ ಮತ್ತು ದೂರಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಡಿ.ಎಲ್.ಸಿ. ಅಭಿಯಾನ 4.0 ಅನ್ನು ನಡೆಸಲಾಗುತ್ತಿದೆ. ಐ.ಪಿ.ಪಿ.ಬಿ ಮಾತ್ರ 1,600ಕ್ಕೂ ಹೆಚ್ಚು ಜಿಲ್ಲೆಗಳು ಮತ್ತು ಉಪವಿಭಾಗಗಳಲ್ಲಿ 1.8 ಲಕ್ಷ ಪೋಸ್ಟ್ ಮ್ಯಾನ್ ಮತ್ತು ಗ್ರಾಮೀಣ ಡಾಕ್ ಸೇವಕರ ಜಾಲದ ಮೂಲಕ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ, ಹಾಗೂ ಪಿಂಚಣಿದಾರರಿಗೆ ಅವರ ಪಿಂಚಣಿ ವಿತರಿಸುವ ಬ್ಯಾಂಕ್ ಮೂಲಕ ಮನೆ ಬಾಗಿಲಿಗೆ ಡಿ.ಎಲ್.ಸಿ. ಸೇವೆಗಳನ್ನು ನೀಡಲಾಗುತ್ತಿದೆ.

ಇಲಾಖೆಯು 1,850 ನಗರಗಳು ಮತ್ತು ಪಟ್ಟಣಗಳಲ್ಲಿ 2,500ಕ್ಕೂ ಹೆಚ್ಚು ಶಿಬಿರ ಸ್ಥಳಗಳು ಮತ್ತು 1,200ಕ್ಕೂ ಹೆಚ್ಚು ನೋಡಲ್ ಅಧಿಕಾರಿಗಳನ್ನು ಹೊಂದಿರುವ ನಕ್ಷೆಯಲ್ಲಿ ಮೀಸಲಾದ ಡಿ.ಎಲ್.ಸಿ. ಪೋರ್ಟಲ್ ಅನ್ನು ಸಹ ರಚಿಸಲಾಗಿದೆ. ಒಂದು ತಿಂಗಳ ಅವಧಿಯ ಅಭಿಯಾನದ ಉದ್ದಕ್ಕೂ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಹಂತ ಹಂತವಾಗಿ ತರಬೇತಿಗಳನ್ನು ನಿಗದಿಪಡಿಸಲಾಗಿದೆ.

ಶಿಬಿರಗಳನ್ನು ಆಯೋಜಿಸುವಲ್ಲಿ ಮತ್ತು ಪಿಂಚಣಿದಾರರನ್ನು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಡಿ.ಒ.ಪಿ.ಪಿ.ಡಬ್ಲ್ಯೂ ನಲ್ಲಿ ನೋಂದಾಯಿಸಲಾದ 57 ಪಿಂಚಣಿದಾರರ ಕಲ್ಯಾಣ ಸಂಘಗಳಿಂದ ಈ ಅಭಿಯಾನವು ಗಮನಾರ್ಹ ಬೆಂಬಲವನ್ನು ಪಡೆಯುತ್ತಿದೆ. ಈ ವರ್ಷ, ವಯಸ್ಸಾದವರಿಗೆ ಪ್ರಕ್ರಿಯೆಯನ್ನು ಹೆಚ್ಚು ಸುಗಮ ಮತ್ತು ಅನುಕೂಲಕರವಾಗಿಸಲು ಮೈಟಿ  ಮತ್ತು ಯು.ಐ.ಡಿ.ಎ.ಐ ನಿಂದ ಸಂಪೂರ್ಣ ತಾಂತ್ರಿಕ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾದ ಮುಖ ದೃಢೀಕರಣ ತಂತ್ರಜ್ಞಾನವನ್ನು ಉತ್ತೇಜಿಸಲು ವಿಶೇಷ ಒತ್ತು ನೀಡಲಾಗುತ್ತಿದೆ.

ಪಿ.ಐ.ಬಿ, ಡಿ.ಡಿ. ನ್ಯೂಸ್ ಮತ್ತು ಆಲ್ ಇಂಡಿಯಾ ರೇಡಿಯೋ, ಸಾಮಾಜಿಕ ಮಾಧ್ಯಮ, ಎಸ್.ಎಂ.ಎಸ್ ಅಭಿಯಾನಗಳು ಮತ್ತು #DLCCampaign4 ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಕಿರುಚಿತ್ರಗಳ ಮೂಲಕ ಸಂಘಟಿತ ಸಮಗ್ರ ಪ್ರಚಾರದ ಮೂಲಕ ಈ ಜಾಗೃತಿ ಮೂಡಿಸಲಾಗುತ್ತಿದೆ.  ಇದು ಭಾರತದಲ್ಲಿ ಪಿಂಚಣಿದಾರರಿಗಾಗಿ ಇದುವರೆಗೆ ಕೈಗೊಂಡ ಅತಿದೊಡ್ಡ ಡಿಜಿಟಲ್ ಸಬಲೀಕರಣ ಅಭಿಯಾನವಾಗಿದೆ.

ಈ ಸುಧಾರಣೆಯ ಪ್ರಯಾಣವನ್ನು ನೆನಪಿಸಿಕೊಂಡ ಡಾ. ಜಿತೇಂದ್ರ ಸಿಂಗ್, ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅನ್ನು ಪರಿಚಯಿಸುವ ಹಿಂದಿನ ಕಲ್ಪನೆಯು ವೃದ್ಧರ ಬಗ್ಗೆ ಸಹಾನುಭೂತಿಯಿಂದ ಹುಟ್ಟಿಕೊಂಡಿದೆ ಎಂದು ಹೇಳಿದರು. "ಹಿರಿಯ ನಾಗರಿಕರು ತಮ್ಮ ಪಿಂಚಣಿ ಪಡೆಯಲು ಜೀವಂತವಾಗಿದ್ದಾರೆ ಎಂದು ದೈಹಿಕವಾಗಿ ಸಾಬೀತುಪಡಿಸಲು ಕೇಳುವುದು ಸಾಮಾಜಿಕವಗಿ ಅತ್ಯಂತ ಅಮಾನವೀಯವಾಗಿ ಕಾಣುತ್ತದೆ" ಎಂದು ಕೇಂದ್ರ ಸಚಿವರು ಹೇಳಿದರು. “ಕೇಂದ್ರ ಸರ್ಕಾರವು ಈ ಸವಾಲನ್ನು ಉದಾತ್ತ ಕಾರಣಕ್ಕಾಗಿ ಬಯೋಮೆಟ್ರಿಕ್ ಮತ್ತು ಫೇಸ್ ದೃಢೀಕರಣ ತಂತ್ರಜ್ಞಾನಗಳನ್ನು ಪರಿಚಯಿಸುವ ಅವಕಾಶವಾಗಿ ಪರಿವರ್ತಿಸಿದೆ” ಎಂದು ಅವರು  ಹೇಳಿದರು.

ಪಿಂಚಣಿ ವಿತರಣೆಯಲ್ಲಿನ ತಾಂತ್ರಿಕ ರೂಪಾಂತರವನ್ನು ವಿವರಿಸುತ್ತಾ, ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು , "ಇದು ಪಿಂಚಣಿದಾರರಿಗೆ ಜೀವನ ಸುಲಭತೆಯನ್ನು ಅವರ ಸನಿಹಕ್ಕೆ ತರುವುದಲ್ಲದೆ, ನಮ್ಮ ಸಾಮಾಜಿಕ ಮತ್ತು ಆರ್ಥಿಕ ನಡವಳಿಕೆಯನ್ನು ಸಹ ಬದಲಾಯಿಸುತ್ತದೆ, ಸಮಾಜವನ್ನು ಹೆಚ್ಚು ತಂತ್ರಜ್ಞಾನ ಸ್ನೇಹಿಯನ್ನಾಗಿ ಮಾಡುತ್ತದೆ" ಎಂದು ಹೇಳಿದರು.

ಈ ಉಪಕ್ರಮವು ಜಾಗತಿಕ ಯಶಸ್ಸಿನ ಕಥೆಯಾಗಿ ವಿಕಸನಗೊಂಡಿದೆ ಎಂದು ವಿವರಿಸುತ್ತಾ, "ಆಡಳಿತದಲ್ಲಿನ ಈ ವಿಶಿಷ್ಟ ಪ್ರಯೋಗವನ್ನು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ಮಾಡಲಾಗುತ್ತಿದೆ, ನಿಯೋಗಗಳು ಭಾರತದ ಮಾದರಿಯಿಂದ ಕಲಿಯಲು ಆಸಕ್ತಿ ವ್ಯಕ್ತಪಡಿಸುತ್ತಿವೆ" ಎಂದು ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು.

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯನ್ನು ಕೇಂದ್ರ ಸರ್ಕಾರದ ಅತ್ಯಂತ ಮೇಲುನೋಟಕ್ಕೆ ಕಾಣಿಸುವ ಮತ್ತು ಜನ-ಆಧಾರಿತ ಅಂಗಗಳಲ್ಲಿ ಒಂದನ್ನಾಗಿ ಪರಿವರ್ತಿಸುವಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಗರಿಕ ಕೇಂದ್ರಿತ ಆಡಳಿತದ ದೃಷ್ಟಿಕೋನ ಹಾಗೂ ಪರಿಕಲ್ಪನೆಯು ಪ್ರಮುಖ ಪಾತ್ರ ವಹಿಸಿದೆ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಶ್ಲಾಘಿಸಿದರು.

ದೇಶಾದ್ಯಂತ ಹಿರಿಯ ನಾಗರಿಕರನ್ನು ತಲುಪುವಲ್ಲಿ ನಿರ್ಣಾಯಕ ಪಾಲುದಾರರಾಗಿ ಹೊರಹೊಮ್ಮಿರುವ ವಿವಿಧ ಇಲಾಖೆಗಳು, ಬ್ಯಾಂಕುಗಳು ಮತ್ತು ಪಿಂಚಣಿದಾರರ ಕಲ್ಯಾಣ ಸಂಘಗಳ ಸಾಮೂಹಿಕ ಪ್ರಯತ್ನದ ಫಲವೇ ಈ ಅಭಿಯಾನದ ಯಶಸ್ಸು ಎಂದು ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು. "ತಂತ್ರಜ್ಞಾನ ಮತ್ತು ಸಾಂಸ್ಥಿಕ ಸಹಯೋಗವನ್ನು ಬಳಸಿಕೊಳ್ಳುವ ಮೂಲಕ, ಹಿರಿಯ ನಾಗರಿಕರು ನಿವೃತ್ತಿಯ ನಂತರದ ಜೀವನದಲ್ಲಿ ಘನತೆ, ಅನುಕೂಲತೆ ಮತ್ತು ಸೇರ್ಪಡೆಯನ್ನು ಅನುಭವಿಸುವುದನ್ನು ಕೇಂದ್ರ ಸರ್ಕಾರ ಖಚಿತಪಡಿಸುತ್ತಿದೆ" ಎಂದು ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು.

ಕೇಂದ್ರ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ (ಪಿಂಚಣಿ) ಶ್ರೀ ವಿ. ಶ್ರೀನಿವಾಸ್; ಕೇಂದ್ರ ಸಂವಹನ ಖಾತೆಗಳ ನಿಯಂತ್ರಕ ಜನರಲ್ ಶ್ರೀಮತಿ ವಂದನಾ ಗುಪ್ತಾ; ಕೇಂದ್ರ ರಕ್ಷಣಾ ಖಾತೆಗಳ ನಿಯಂತ್ರಕ ಜನರಲ್ ಶ್ರೀ ವಿಶ್ವಜಿತ್ ಸಹಾಯ್; ಯು.ಐ.ಡಿ.ಎ.ಐ ಸಿ.ಇ.ಒ ಶ್ರೀ ಭುವನೇಶ್ ಕುಮಾರ್; ಮತ್ತು ಕೇಂದ್ರ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀ ಧ್ರುಬಜ್ಯೋತಿ ಸೇನ್‌ ಗುಪ್ತಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರವ್ಯಾಪಿ ಅಭಿಯಾನವನ್ನು ಮುನ್ನಡೆಸುವಲ್ಲಿ ಅವರ ಅತ್ಯುತ್ತಮ ಪ್ರಯತ್ನಗಳಿಗಾಗಿ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಶ್ರೀ. ವಿ. ಶ್ರೀನಿವಾಸ್ ಮತ್ತು ಅವರ ತಂಡವನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು. ಅವರುಗಳ ಸಮರ್ಪಣೆ ಇಲಾಖೆಯನ್ನು ದಕ್ಷತೆ ಮತ್ತು ನಾಗರಿಕ-ಕೇಂದ್ರಿತ ಸೇವಾ ವಿತರಣೆಯ ಮಾದರಿಯಾಗಿ ಪರಿವರ್ತಿಸಿದೆ ಎಂದು ಗಮನಿಸಿದರು. ಇಲಾಖೆ ಮತ್ತು ಅದರ ಪಾಲುದಾರರು ಅಳವಡಿಸಿಕೊಂಡ ಸಂಘಟಿತ ವಿಧಾನವನ್ನು ಕೇಂದ್ರ ಸಚಿವರು ಶ್ಲಾಘಿಸಿದರು, ಹಾಗೂ, ಇದು ದೇಶಾದ್ಯಂತ ಲಕ್ಷಾಂತರ ಹಿರಿಯ ನಾಗರಿಕರಿಗೆ ಪಿಂಚಣಿ ವಿತರಣಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ, ಪ್ರವೇಶಿಸಬಹುದಾದ ಮತ್ತು ಮಾನವೀಯವಾಗಿಸಿ ಅನುಕೂಲಕರವಾಗಿಸಿದೆ ಎಂದು ಹೇಳಿದರು.

ತಮ್ಮ ಹೇಳಿಕೆಗಳನ್ನು ಮುಕ್ತಾಯಗೊಳಿಸುತ್ತಾ, ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಉಪಕ್ರಮವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೀವನ ಸುಲಭತೆ ಮತ್ತು ನಾಗರಿಕ ಕೇಂದ್ರಿತ ಆಡಳಿತದ ಮೇಲಿನ ಮಹತ್ವವನ್ನು ತಿಳಿಸುತ್ತದೆ ಎಂದು ಹೇಳಿದರು. ಈ ಉಪಕ್ರಮವು ನಿರಂತರ ಪಿಂಚಣಿ ವಿತರಣೆಯನ್ನು ಖಚಿತಪಡಿಸುವುದಲ್ಲದೆ, ಪಾರದರ್ಶಕ, ಪರಿಣಾಮಕಾರಿ ಮತ್ತು ಡಿಜಿಟಲ್ ಸಬಲೀಕರಣಗೊಂಡ ಆಡಳಿತಾತ್ಮಕ ಚೌಕಟ್ಟಿನತ್ತ ಭಾರತದ ಪರಿವರ್ತನೆಯನ್ನು ಇನ್ನಷ್ಟು ಬಲಪಡಿಸುತ್ತದೆ.

****

 

 


(Release ID: 2186700) Visitor Counter : 7