ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಗುರು ನಾನಕ್ ದೇವ್ ಅವರ ಜನ್ಮದಿನದ ಮುನ್ನಾದಿನದಂದು ಶುಭಾಶಯ ಕೋರಿದ ರಾಷ್ಟ್ರಪತಿ

Posted On: 04 NOV 2025 4:30PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಗುರುನಾನಕ್ ದೇವ್ ಅವರ ಜನ್ಮದಿನದ ಮುನ್ನಾದಿನವಾದ ಇಂದು ತಮ್ಮ ಸಹವರ್ತಿ ನಾಗರಿಕರಿಗೆ ಶುಭಾಶಯಗಳನ್ನು ಕೋರಿದ್ದಾರೆ.

ರಾಷ್ಟ್ರಪತಿ ಅವರು ತಮ್ಮ ಸಂದೇಶದಲ್ಲಿ, “ಗುರುನಾನಕ್ ಜಯಂತಿಯ ಈ ಶುಭ ಸಂದರ್ಭದಲ್ಲಿ, ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲಾ ಭಾರತೀಯರಿಗೆ, ವಿಶೇಷವಾಗಿ ನಮ್ಮ ಸಿಖ್ ಸಹೋದರ ಸಹೋದರಿಯರಿಗೆ ನನ್ನ ಆತ್ಮೀಯ ಶುಭಾಶಯಗಳನ್ನು ಕೋರುತ್ತೇನೆ.

ಗುರುನಾನಕ್ ದೇವ್ ಅವರ ಆದರ್ಶಗಳು ಮತ್ತು ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಜನ್ಮದಿನದ ಈ ಶುಭ ಸಂದರ್ಭವು ಅವುಗಳನ್ನು ಅಳವಡಿಸಿಕೊಳ್ಳಲು ನಮಗೆ ಸ್ಫೂರ್ತಿ ನೀಡುವುದಲ್ಲದೆ, ಉತ್ತಮ ಸಮಾಜ ನಿರ್ಮಾಣದತ್ತ ನಮಗೆ ಮಾರ್ಗದರ್ಶನವನ್ನೂ ನೀಡುತ್ತವೆ. ಸತ್ಯ, ನ್ಯಾಯ ಮತ್ತು ಕರುಣೆಯ ಆಧಾರದ ಮೇಲೆ ಜೀವನ ನಡೆಸುವುದು ಯಶಸ್ಸಿನ ನಿಜವಾದ ಸಾಕ್ಷಾತ್ಕಾರ ಎಂಬುದು ಅವರ ಸಂದೇಶವಾಗಿದೆ. ಅವರ ಬೋಧನೆಗಳು ದೇವರೊಬ್ಬನೇ ಎಂದು ಸಾರುತ್ತ, ಮಾನವ ಸಮಾನತೆಗೆ ಒತ್ತು ನೀಡುತ್ತದೆ. ಅವರು ಪ್ರಾಮಾಣಿಕತೆಯಿಂದ ಬದುಕಲು ಮತ್ತು ಸಂಪನ್ಮೂಲಗಳನ್ನು ಪರಸ್ಪರ ಹಂಚಿಕೊಳ್ಳಲು ನಮಗೆ ಸ್ಫೂರ್ತಿ ನೀಡುತ್ತಾರೆ.

ಈ ಸಂದರ್ಭದಲ್ಲಿ, ಗುರುನಾನಕ್ ದೇವ್ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಮತ್ತು ಹೆಚ್ಚು ಶಾಂತಿಯುತ ಮತ್ತು ಸಮೃದ್ಧ ರಾಷ್ಟ್ರವನ್ನು ನಿರ್ಮಿಸಲು ಅವರು ತೋರಿಸಿದ ಮಾರ್ಗದಲ್ಲಿ ನಡೆಯೋಣ” ಎಂದು ಹೇಳಿದ್ದಾರೆ.

ರಾಷ್ಟ್ರಪತಿ ಅವರ ಸಂದೇಶವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

 

****


(Release ID: 2186418) Visitor Counter : 12