ಪ್ರಧಾನ ಮಂತ್ರಿಯವರ ಕಛೇರಿ
ನವ ರಾಯ್‌ಪುರದಲ್ಲಿ ಛತ್ತೀಸ್‌ಗಢ ವಿಧಾನಸೌಧದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ತಾವು ಮಾಡಿದ ಭಾಷಣದ ಕೆಲವು ತುಣುಕುಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
01 NOV 2025 4:15PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವ ರಾಯ್‌ಪುರದಲ್ಲಿ ಛತ್ತೀಸ್‌ಗಢ ವಿಧಾನಸೌಧದ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಭಾಷಣದ ಕೆಲವು ತುಣುಕುಗಳನ್ನು ಹಂಚಿಕೊಂಡಿದ್ದಾರೆ.
ಎಕ್ಸ್‌ನ ಪ್ರತ್ಯೇಕ ಪೋಸ್ಟ್ ಗಳಲ್ಲಿ, ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ;
"ಇಂದು, ಛತ್ತೀಸ್‌ಗಢ ವಿಧಾನಸಭೆಯ ಭವ್ಯ ಮತ್ತು ಆಧುನಿಕ ಹೊಸ ಕಟ್ಟಡದೊಂದಿಗೆ ಪೂಜ್ಯ ಅಟಲ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿ ಮೂಡುತ್ತಿರುವ ಭಾವನೆಗಳಿವು..."
"ಡಿಜಿಟಲ್ ಸೌಲಭ್ಯಗಳನ್ನು ಹೊಂದಿರುವ ಹೊಸ ಛತ್ತೀಸ್‌ಗಢ ಶಾಸಕಾಂಗ ಕಟ್ಟಡವು ಮುಂಬರುವ ದಶಕಗಳಲ್ಲಿ ರಾಜ್ಯದ ನೀತಿ, ಹಣೆಬರಹದ ನಿರ್ಧಾರ ತೆಗೆದುಕೊಳ್ಳುವ ಪ್ರಮುಖ ಕೇಂದ್ರವಾಗಲಿದೆ. ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಛತ್ತೀಸ್‌ಗಢದ ಭವಿಷ್ಯವನ್ನು ರೂಪಿಸುತ್ತವೆ."
"ನಮ್ಮ ಹೊಸ ಸಂಸತ್ತಿನ ಗ್ಯಾಲರಿಗಳು ಭಾರತದ ಪ್ರಜಾಪ್ರಭುತ್ವದ ಪ್ರತೀಕದಂತೆ, ಛತ್ತೀಸ್‌ಗಢ ವಿಧಾನಸಭೆಯ ಹೊಸ ಕಟ್ಟಡವು ಪರಂಪರೆ ಮತ್ತು ಅಭಿವೃದ್ಧಿಯ ವಿಶಿಷ್ಟ ಸಂಗಮವನ್ನು ಹೊಂದಿದೆ ಎಂದು ನನಗೆ ಸಂತೋಷವಾಗಿದೆ."
"'ನಾಗರಿಕರೇ ದೇವರು' ಎಂಬುದು ಉತ್ತಮ ಆಡಳಿತಕ್ಕಾಗಿ ನಮ್ಮ ಮಂತ್ರವಾಗಿದೆ. ಆದ್ದರಿಂದ, ಸುಧಾರಣೆಗಳನ್ನು ತೀವ್ರಗೊಳಿಸಿ, ಸಾಮಾನ್ಯ ಜನರಿಗೆ ಜೀವನವನ್ನು ಸುಲಭಗೊಳಿಸುವ ಕಾನೂನುಗಳಿಗೆ ನಾವು ಒತ್ತು ನೀಡಬೇಕು."
"ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯಾದ ಸಂದರ್ಭದಲ್ಲಿ, ನಾವೆಲ್ಲರೂ "ದೇಶಕ್ಕಾಗಿ ದೇವರು" ಮತ್ತು "ರಾಷ್ಟ್ರಕ್ಕಾಗಿ ರಾಮ" ಎಂಬ ಪ್ರತಿಜ್ಞೆ ಮಾಡಿದ್ದೆವು. ರಾಮ ದೇವರ ಅಜ್ಜಿಯ ಮನೆಯಾದ ಛತ್ತೀಸ್‌ಗಢದಲ್ಲಿಯೂ ನಾವು ಅವರ ಆದರ್ಶಗಳನ್ನು ಸಾಕಾರಗೊಳಿಸಬೇಕಾಗಿದೆ"
****
(Release ID: 2185382)
Visitor Counter : 5
Read this release in:
Odia
,
English
,
Urdu
,
हिन्दी
,
Marathi
,
Assamese
,
Bengali
,
Gujarati
,
Tamil
,
Telugu
,
Malayalam