ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ʻಡಿಜಿಟಲ್ ಗುರುತಿನʼಯ ಭವಿಷ್ಯವನ್ನು ರೂಪಿಸಲು ಯು.ಐ.ಡಿ.ಎ.ಐ ತಾಂತ್ರಿಕ ಮತ್ತು ಕಾರ್ಯತಂತ್ರದ ಪರಿಶೀಲನೆಯನ್ನು ಪ್ರಾರಂಭಿಸಿದೆ
ತಾಂತ್ರಿಕ ಮತ್ತು ಕಾರ್ಯತಂತ್ರದ ಮಾರ್ಗಸೂಚಿಗೆ ಮಾರ್ಗದರ್ಶನ ನೀಡಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ
ಯು.ಐ.ಡಿ.ಎ.ಐನ ತಂತ್ರಜ್ಞಾನ ಸ್ಟ್ಯಾಕ್ ಪ್ರಮುಖ ಅಪ್‌ಗ್ರೇಡ್ ಗೆ ಸಜ್ಜಾಗಿದೆ, ಉದಯೋನ್ಮುಖ ತಂತ್ರಜ್ಞಾನ ಮತ್ತು ಆಳವಾದ ತಂತ್ರಜ್ಞಾನವನ್ನು ಪ್ರಮುಖ ಕೇಂದ್ರೀಕೃತ ಕ್ಷೇತ್ರವಾಗಿ ಬಳಸಿಕೊಳ್ಳುತ್ತದೆ
Posted On:
31 OCT 2025 4:24PM by PIB Bengaluru
ಅತಿ ವೇಗವಾಗಿ ಬದಲಾಗುತ್ತಿರುವ ತಾಂತ್ರಿಕ ಮತ್ತು ನಿಯಂತ್ರಕ ಕ್ಷೇತ್ರವನ್ನು ಗುರುತಿಸಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯು.ಐ.ಡಿ.ಎ.ಐ) ಹೊಸ 'ಆಧಾರ್ ವಿಷನ್ 2032' ಚೌಕಟ್ಟಿನ ಮೂಲಕ ಆಧಾರ್ ನ ವಿಕಾಸದ ಮುಂದಿನ ದಶಕವನ್ನು ರೂಪಿಸಲು ಸಮಗ್ರ ಕಾರ್ಯತಂತ್ರದ ಮತ್ತು ತಾಂತ್ರಿಕ ಪರಾಮರ್ಶೆಯನ್ನು ಪ್ರಾರಂಭಿಸಿದೆ.
ಆಧಾರ್ ವಿಷನ್ 2032
ಈ ಭವಿಷ್ಯದ ಮಾರ್ಗಸೂಚಿ ಆಧಾರ್ ನ ತಾಂತ್ರಿಕ ಅಡಿಪಾಯವನ್ನು ಬಲಪಡಿಸುವುದಲ್ಲದೆ ಉದಯೋನ್ಮುಖ ಡಿಜಿಟಲ್ ನಾವೀನ್ಯತೆಗಳನ್ನು ಸಂಯೋಜಿಸುತ್ತದೆ ಹಾಗು ಭಾರತದ ಡಿಜಿಟಲ್ ಗುರುತಿನ ವೇದಿಕೆಯು ದೃಢವಾಗಿ, ಅಂತರ್ಗತವಾಗಿ ಮತ್ತು ಭವಿಷ್ಯಕ್ಕೆ ಸಿದ್ಧವಾಗಿದೆ ಎನ್ನುವುದನ್ನು ಖಚಿತಪಡಿಸುತ್ತದೆ. ಆಧಾರ್ ಸೇವೆಗಳ ಬೆನ್ನೆಲುಬಾಗಿ ರೂಪುಗೊಳ್ಳುವ ಮತ್ತು ನಮ್ಮ ಡಿಜಿಟಲ್ ಆರ್ಥಿಕತೆಯ ಸಹಾಯಕನಾಗಿ ಕಾರ್ಯನಿರ್ವಹಿಸುವ ಯು.ಐ.ಡಿ.ಎ.ಐನ ತಂತ್ರಜ್ಞಾನ ಸ್ಟ್ಯಾಕ್ ಪ್ರಮುಖ ಅಪ್‌ಗ್ರೇಡ್ ಗೆ ಸಜ್ಜಾಗಿದೆ.
ಈ ಮಹತ್ವಾಕಾಂಕ್ಷೆಯ ರೂಪಾಂತರಕ್ಕೆ ಮಾರ್ಗದರ್ಶನ ನೀಡಲು, ಯು.ಐ.ಡಿ.ಎ.ಐ ಅಧ್ಯಕ್ಷರಾದ ಶ್ರೀ ನೀಲಕಂಠ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ. ಆಧಾರ್ ನ ನಾವೀನ್ಯತೆ ಮಾರ್ಗಸೂಚಿಯನ್ನು ಬಲಪಡಿಸುವ ಕುರಿತು ಕಾರ್ಯತಂತ್ರದ ನಿರ್ದೇಶನವನ್ನು ನೀಡಲು ಈ ಸಮಿತಿಯು ಶೈಕ್ಷಣಿಕ, ಉದ್ಯಮ ಮತ್ತು ಆಡಳಿತದ ಪ್ರಖ್ಯಾತ ತಜ್ಞರು ಮತ್ತು ನಾಯಕರನ್ನು ಜೊತೆಗೂಡಿಸುತ್ತದೆ.
ಸಮಿತಿಯು ಇವರುಗಳನ್ನು ಒಳಗೊಂಡಿದೆ: ಯು.ಐ.ಡಿ.ಎ.ಐ ಸಿ.ಇ.ಒ ಶ್ರೀ ಭುವನೇಶ್ ಕುಮಾರ್; ಸರ್ವಮ್ ಎ.ಐನ ಸಹ-ಸಂಸ್ಥಾಪಕ ಶ್ರೀ ವಿವೇಕ್ ರಾಘವನ್; ನ್ಯೂಟಾನಿಕ್ಸ್ ಸಂಸ್ಥಾಪಕ ಶ್ರೀ ಧೀರಜ್ ಪಾಂಡೆ; ಎಂ.ಒ.ಎಸ್.ಐ.ಪಿಯ ಎಂಜಿನಿಯರಿಂಗ್ ಮುಖ್ಯಸ್ಥ ಶ್ರೀ ಶಶಿಕುಮಾರ್ ಗಣೇಶನ್; ಟ್ರೈಲೀಗಲ್ ಪಾಲುದಾರ ಶ್ರೀ ರಾಹುಲ್ ಮಥನ್; ವಿಯಾನೈ ಸಿಸ್ಟಮ್ಸ್ನ ಸಿ.ಟಿ.ಒ ಮತ್ತು ಉತ್ಪನ್ನಗಳ ಮುಖ್ಯಸ್ಥರಾದ ಶ್ರೀ ನವೀನ್ ಬುಧಿರಾಜ; ಅಮೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರಭಾರನ್ ಪೂರ್ಣಚಂದ್ರನ್; ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶ್ರೀ ಅನಿಲ್ ಜೈನ್; ಐ.ಐ.ಟಿ ಜೋಧ್ಪುರದ ಪ್ರಾಧ್ಯಾಪಕ ಶ್ರೀ ಮಾಯಾಂಕ್ ವತ್ಸ; ಮತ್ತು ಯು.ಐ.ಡಿ.ಎ.ಐನ ಉಪ ಮಹಾನಿರ್ದೇಶಕ ಶ್ರೀ ಅಭಿಷೇಕ್ ಕುಮಾರ್ ಸಿಂಗ್.
ಈ ಸಮಿತಿಯು ಆಧಾರ್ ವಿಷನ್ 2032 ದಾಖಲೆಯನ್ನು ಅಭಿವೃದ್ಧಿಪಡಿಸುತ್ತದೆ, ಇದು ಭಾರತದ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ (ಡಿ.ಪಿ.ಡಿ.ಪಿ) ಕಾಯ್ದೆ ಮತ್ತು ಉದಯೋನ್ಮುಖ ಜಾಗತಿಕ ಗೌಪ್ಯತೆ ಮತ್ತು ಸೈಬರ್ ಭದ್ರತೆಯ ಮಾನದಂಡಗಳೊಂದಿಗೆ ಹೊಂದಿಕೊಂಡಿರುವ ಮುಂದಿನ ಪೀಳಿಗೆಯ ಆಧಾರ್ ಮೂಲಸೌಕರ್ಯದ ಚೌಕಟ್ಟನ್ನು ರಚಿಸುತ್ತದೆ.
ಆಧಾರ್ ವಿಷನ್ 2032 ಚೌಕಟ್ಟು ಕೃತಕ ಬುದ್ಧಿಮತ್ತೆ (ಎ.ಐ.), ಬ್ಲಾಕ್ ಚೈನ್, ಕ್ವಾಂಟಮ್ ಕಂಪ್ಯೂಟಿಂಗ್, ಅಡ್ವಾನ್ಸ್ಡ್ ಎನ್ಕ್ರಿಪ್ಶನ್ ಮತ್ತು ಮುಂದಿನ ಪೀಳಿಗೆಯ ದತ್ತಾಂಶ ಭದ್ರತಾ ಕಾರ್ಯವಿಧಾನಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಉತ್ತಮವಾಗಿ ಉಪಯೋಗಪಡಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸುತ್ತದೆ. ಇವು ಆಧಾರ್ ವಿಕಸನಗೊಳ್ಳುತ್ತಿರುವ ಸೈಬರ್ ಭದ್ರತಾ ಬೆದರಿಕೆಗಳ ವಿರುದ್ಧ ಚೇತರಿಕೆಯನ್ನು, ಭವಿಷ್ಯದ ಬೇಡಿಕೆಗೆ ಸ್ಕೇಲೆಬಲ್ ಅನ್ನು ಮತ್ತು ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ಕ್ಷೇತ್ರಕ್ಕೆ ಹೊಂದಿಕೊಳ್ಳುವಿಕೆಯನ್ನು ಖಚಿತಪಡಿಸುತ್ತದೆ.
ಈ ಉಪಕ್ರಮದೊಂದಿಗೆ, ಯು.ಐ.ಡಿ.ಎ.ಐ ತಾಂತ್ರಿಕ ಶ್ರೇಷ್ಠತೆ, ನಾವೀನ್ಯತೆ ಮತ್ತು ಸಾರ್ವಜನಿಕ ನಂಬಿಕೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಹಾಗು ಆಧಾರ್ ಭಾರತದ ಡಿಜಿಟಲ್ ಆಡಳಿತ ಪ್ರಯಾಣದಲ್ಲಿ ಪರಿವರ್ತಕ ಶಕ್ತಿಯಾಗಿಯೇ ಮುಂದುವರಿಯುವುದನ್ನು ಎನ್ನುವುದನ್ನು ಖಚಿತಪಡಿಸುತ್ತದೆ. ವಿಷನ್ 2032 ಮಾರ್ಗಸೂಚಿಯು ತಾಂತ್ರಿಕ ನಾಯಕತ್ವವನ್ನು ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ಸುರಕ್ಷಿತ, ಅಂತರ್ಗತ ಮತ್ತು ಜನ ಕೇಂದ್ರಿತ ಡಿಜಿಟಲ್ ಗುರುತಾಗಿ ಆಧಾರ್ ನ ಪಾತ್ರವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.
*****
(Release ID: 2184978)
Visitor Counter : 10