ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರಿಂದ ಏಕತಾ ಪ್ರತಿಜ್ಞೆಯ ಬೋಧನೆ; ಈ ಆಚರಣೆಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿಯವರ ಕಛೇರಿಯ ಅಧಿಕಾರಿಗಳು
Posted On:
31 OCT 2025 2:06PM by PIB Bengaluru
ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರ ಕಚೇರಿಯ ಅಧಿಕಾರಿಗಳು ಇಂದು ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಾ ಏಕತಾ ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ (ಸ್ವತಂತ್ರ ನಿರ್ವಹಣೆ) ಮತ್ತು ಪ್ರಧಾನಮಂತ್ರಿಯವರ ಕಛೇರಿಯ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಏಕತಾ ಪ್ರತಿಜ್ಞೆಯನ್ನು ಬೋಧಿಸಿದರು.
ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರಾದ ಡಾ. ಪಿ. ಕೆ. ಮಿಶ್ರಾ, ಪ್ರಧಾನಮಂತ್ರಿಯವರ ದ್ವಿತೀಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಶಕ್ತಿಕಾಂತ ದಾಸ್, ಪ್ರಧಾನಮಂತ್ರಿಯವರ ಸಲಹೆಗಾರರಾದ ಶ್ರೀ ತರುಣ್ ಕಪೂರ್, ಪ್ರಧಾನಮಂತ್ರಿಯವರ ವಿಶೇಷ ಕಾರ್ಯದರ್ಶಿಯವರಾದ ಶ್ರೀ ಅತೀಶ್ ಚಂದ್ರ ಮತ್ತು ಇತರ ಅಧಿಕಾರಿಗಳು ಈ ಆಚರಣೆಯಲ್ಲಿ ಭಾಗವಹಿಸಿದ್ದರು.
ರಾಷ್ಟ್ರೀಯ ಏಕತಾ ದಿನದ ಆಚರಣೆಯು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯ ಸ್ಮರಣೆಯಾಗಿದೆ, ಇದು ಅವರ ಏಕೀಕೃತ ಮತ್ತು ಬಲಿಷ್ಠ ಭಾರತದ ದೃಷ್ಟಿಕೋನವನ್ನು ಸೂಚಿಸುತ್ತದೆ.
ಪ್ರಧಾನಮಂತ್ರಿಯವರ ಕಛೇರಿಯು Xನಲ್ಲಿ;
“ಕೇಂದ್ರ ಸಚಿವರಾದ @DrJitendraSingh ಅವರು ಪ್ರಧಾನಮಂತ್ರಿಯವರ ಕಛೇರಿಯಲ್ಲಿ ಏಕತಾ ಪ್ರತಿಜ್ಞೆಯನ್ನು ಬೋಧಿಸಿದರು.
ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರಾದ ಡಾ. ಪಿ. ಕೆ. ಮಿಶ್ರಾ, ಪ್ರಧಾನಮಂತ್ರಿಯವರ ದ್ವಿತೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಧಾನಮಂತ್ರಿಗಳ ಸಲಹೆಗಾರ ಶ್ರೀ ಶಕ್ತಿಕಾಂತ ದಾಸ್, ಪ್ರಧಾನಮಂತ್ರಿಯವರ ವಿಶೇಷ ಕಾರ್ಯದರ್ಶಿ ಶ್ರೀ ತರುಣ್ ಕಪೂರ್, ಶ್ರೀ ಅತೀಶ್ ಚಂದ್ರ ಮತ್ತು ಇತರ ಅಧಿಕಾರಿಗಳು ಈ ಆಚರಣೆಯಲ್ಲಿ ಭಾಗವಹಿಸಿದ್ದರು” ಎಂದು ಟ್ವೀಟ್ ಮಾಡಿದೆ.
*****
(Release ID: 2184656)
Visitor Counter : 4