ಸಂಪುಟ
2025-26ನೇ ಸಾಲಿನ ಹಿಂಗಾರು ಹಂಗಾಮಿಗೆ 'ಫಾಸ್ಪೆಟಿಕ್' ಮತ್ತು 'ಪೊಟ್ಯಾಸಿಕ್' ರಸಗೊಬ್ಬರಗಳ ಮೇಲಿನ 'ಪೋಷಕಾಂಶ ಆಧಾರಿತ ಸಬ್ಸಿಡಿ' ದರಗಳಿಗೆ ಸಂಪುಟ ಅನುಮೋದನೆ
Posted On:
28 OCT 2025 3:06PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, 2025-26ನೇ ಸಾಲಿನ ಹಿಂಗಾರು ಹಂಗಾಮಿಗೆ (01.10.2025 ರಿಂದ 31.03.2026 ರವರೆಗೆ) 'ಫಾಸ್ಪೆಟಿಕ್' ಮತ್ತು 'ಪೊಟ್ಯಾಸಿಕ್'(ಪಿ ಮತ್ತು ಕೆ) ರಸಗೊಬ್ಬರಗಳ ಮೇಲೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ(ಎನ್.ಬಿ.ಎಸ್) ದರಗಳನ್ನು ನಿಗದಿಪಡಿಸುವ ರಸಗೊಬ್ಬರ ಇಲಾಖೆಯ ಪ್ರಸ್ತಾವನೆಗೆ ಇಂದು ಅನುಮೋದನೆ ನೀಡಿದೆ. 2025-26ನೇ ಸಾಲಿನ ಹಿಂಗಾರು ಹಂಗಾಮಿಗೆ ಅಂದಾಜು ರೂ. 37,952.29 ಕೋಟಿ ಅನುದಾನದ ಅಗತ್ಯವಿರುತ್ತದೆ. ಇದು 2025ನೇ ಸಾಲಿನ ಮುಂಗಾರು ಋತುವಿನ ಬಜೆಟ್ ಅಗತ್ಯಕ್ಕಿಂತ ಅಂದಾಜು 736 ಕೋಟಿ ರೂ. ಹೆಚ್ಚಾಗಿದೆ.
'ಡಿ ಅಮೋನಿಯಂ ಫಾಸ್ಫೇಟ್’(ಡಿ.ಎ.ಪಿ) ಮತ್ತು 'ಎನ್.ಪಿ.ಕೆ.ಎಸ್' (ಸಾರಜನಕ, ರಂಜಕ, ಪೊಟ್ಯಾಶ್, ಸಲ್ಫರ್) ಶ್ರೇಣಿಗಳು ಸೇರಿದಂತೆ 'ಪಿ ಮತ್ತು ಕೆ' ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು 2025-26ನೇ ಸಾಲಿನ ಹಿಂಗಾರು ಹಂಗಾಮಿಗೆ ಅನುಮೋದಿತ ದರಗಳ ಆಧಾರದ ಮೇಲೆ (01.10.2025 ರಿಂದ 31.03.2026 ರವರೆಗೆ ಅನ್ವಯಿಸುತ್ತದೆ) ಒದಗಿಸಲಾಗುವುದು. ಆ ಮೂಲಕ ಈ ರಸಗೊಬ್ಬರಗಳು ಕೈಗೆಟುಕುವ ಬೆಲೆಯಲ್ಲಿ ರೈತರಿಗೆ ಸುಗಮವಾಗಿ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲಾಗುವುದು.
ಪ್ರಯೋಜನಗಳು:
- ಸಬ್ಸಿಡಿ ಒದಗಿಸುವ ಮೂಲಕ ರೈತರಿಗೆ ಕೈಗೆಟುಕುವ ಮತ್ತು ಸಮಂಜಸವಾದ ಬೆಲೆಯಲ್ಲಿ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲಾಗುವುದು.
- ರಸಗೊಬ್ಬರಗಳು ಮತ್ತು ಕಚ್ಚಾವಸ್ತುಗಳಲ್ಲಿನ ಅಂತಾರಾಷ್ಟ್ರೀಯ ಬೆಲೆಗಳಲ್ಲಿ ಇತ್ತೀಚಿನ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು 'ಪಿ ಮತ್ತು ಕೆ' ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ನಿರ್ಧರಿಸಲಾಗುವುದು.
ಹಿನ್ನೆಲೆ:
ಸರ್ಕಾರ 'ಡಿ.ಎ.ಪಿ' ಸೇರಿದಂತೆ 28 ದರ್ಜೆಯ 'ಪಿ ಮತ್ತು ಕೆ' ರಸಗೊಬ್ಬರಗಳನ್ನು ರೈತರಿಗೆ ಸಬ್ಸಿಡಿ ದರದಲ್ಲಿ ಒದಗಿಸುತ್ತದೆ. ರಸಗೊಬ್ಬರ ಉತ್ಪಾದಕರು/ಆಮದುದಾರರ ಮೂಲಕ ಇದು ಲಭ್ಯವಾಗುವಂತೆ ಮಾಡುತ್ತಿದೆ. 'ಪಿ ಮತ್ತು ಕೆ' ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು 01.04.2010ರಿಂದ ಅನ್ವಯವಾಗುವಂತೆ 'ಎನ್.ಬಿ.ಎಸ್’ ಯೋಜನೆಯು ನಿಯಂತ್ರಿಸುತ್ತದೆ. ಸರ್ಕಾರವು ತನ್ನ ರೈತ ಸ್ನೇಹಿ ಕಾರ್ಯವಿಧಾನಕ್ಕೆ ಅನುಗುಣವಾಗಿ, ಕೈಗೆಟುಕುವ ಬೆಲೆಯಲ್ಲಿ ರೈತರಿಗೆ 'ಪಿ ಮತ್ತು ಕೆ' ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ರಸಗೊಬ್ಬರಗಳು ಮತ್ತು ಯೂರಿಯಾ, ಡಿ.ಎ.ಪಿ, ಎಂ.ಒ.ಪಿ ಮತ್ತು ಸಲ್ಫರ್ ನಂತಹ ಕೃಷಿ ಬಳಕೆ ಉತ್ಪನ್ನಗಳ (ಇನ್‌ಪುಟ್) ಅಂತರರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಡಿ.ಎ.ಪಿ ಮತ್ತು ಎನ್.ಪಿ.ಕೆ.ಎಸ್ ಶ್ರೇಣಿಗಳು ಸೇರಿದಂತೆ ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (ಪಿ ಮತ್ತು ಕೆ) ರಸಗೊಬ್ಬರಗಳ ಮೇಲೆ 2025-26ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ 1.10.2025 ರಿಂದ 31.03.2026 ರವರೆಗೆ ಪೋಷಕಾಂಶ ಆಧರಿತ ಸಬ್ಸಿಡಿ ದರಗಳನ್ನು ಅನುಮೋದಿಸಲು ಸರ್ಕಾರ ನಿರ್ಧರಿಸಿದೆ. ಅನುಮೋದಿತ ಮತ್ತು ಅಧಿಸೂಚಿತ ದರಗಳ ಪ್ರಕಾರ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿಯನ್ನು ಒದಗಿಸಲಾಗುವುದು, ಇದರಿಂದ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರಗಳು ಲಭ್ಯವಾಗುತ್ತವೆ.
*****
(Release ID: 2183317)
Visitor Counter : 33
Read this release in:
Odia
,
Tamil
,
Malayalam
,
Assamese
,
Bengali
,
English
,
Urdu
,
हिन्दी
,
Nepali
,
Marathi
,
Manipuri
,
Punjabi
,
Gujarati
,
Telugu