ಪ್ರಧಾನ ಮಂತ್ರಿಯವರ ಕಛೇರಿ
ವಿಕಸಿತ ಭಾರತ ಯುವ ನಾಯಕರ ಸಂವಾದ 2.0 ರಲ್ಲಿ ಯುವಜನತೆ ಭಾಗವಹಿಸುವಂತೆ ಪ್ರಧಾನಮಂತ್ರಿ ಅವರು ಕೋರಿದ್ದಾರೆ
Posted On:
27 OCT 2025 8:40PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ ಯುವಕರಿಗೆ ವಿಕಸಿತ ಭಾರತ ಯುವ ನಾಯಕರ ಸಂವಾದ 2.0 ನಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು, ಇದು ರಾಷ್ಟ್ರ ನಿರ್ಮಾಣಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಒಂದು ಅಮೂಲ್ಯವಾದ ಅವಕಾಶ ಎಂದು ವಿವರಿಸಿದರು.
ಎಲ್ಲಾ ಯುವ ನಾಗರಿಕರು ಈ ಉಪಕ್ರಮದಲ್ಲಿ ತೊಡಗಿಸಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಪ್ರಧಾನಮಂತ್ರಿ ಅವರು ಯುವಜನತೆಯೂ ಒತ್ತಾಯಿಸಿದರು. ಮೊದಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಈ ವಿಕಸಿತ ಭಾರತ ಯುವ ನಾಯಕರ ಸಂವಾದ 2.0 ರಲ್ಲಿ ಭಾಗವಹಿಸಲು ಯುವಕರನ್ನು ಅವರು ಪ್ರೋತ್ಸಾಹಿಸಿದರು.
ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ತಮ್ಮ ಸಂದೇಶದಲ್ಲಿ, ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
"ವಿಕಸಿತ ಭಾರತ ಯುವ ನಾಯಕರ ಸಂವಾದ 2.0 ನಮ್ಮ ಯುವಕರಿಗೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಒಂದು ಉತ್ತಮ ಅವಕಾಶವಾಗಿದೆ. ನಮ್ಮ ಯುವಕರ ಆಲೋಚನೆಗಳು ಮತ್ತು ಒಳನೋಟಗಳು ವಿಕಸಿಊ ಭಾರತವನ್ನು ನಿರ್ಮಿಸುವಲ್ಲಿ ಉತ್ತಮ ದಾರಿ ತೋರಿಸಬಹುದು.
ಈ ಸಂವಾದದಲ್ಲಿ ಭಾಗವಹಿಸುವ ಸರಳ ಮಾರ್ಗವೆಂದರೆ ಮೊದಲು ಈ ವಿಶೇಷವಾಗಿ ರಚಿಸಲಾದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವುದು. ಈ ರೀತಿ ಭಾಗವಹಿಸಲು ನಿಮ್ಮೆಲ್ಲರನ್ನೂ ನಾನು ಈ ಮೂಲಕ ಒತ್ತಾಯಿಸುತ್ತೇನೆ...
ಸಂಪರ್ಕ ಕೊಂಡಿ ಇಲ್ಲಿದೆ
https://mybharat.gov.in/quiz ”
****
(Release ID: 2183190)
Visitor Counter : 5
Read this release in:
Telugu
,
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Malayalam