ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ʻಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಉತ್ಪಾದನಾ ಯೋಜನೆʼ(ʻಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕಾಂಪೊನೆಂಟ್ ಸ್ಕೀಮ್ʼ- ಇಸಿಎಂಎಸ್) ಡಿಯಲ್ಲಿ 5500 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯ ಏಳು ಯೋಜನೆಗಳ ಮೊದಲ ಕಂತಿಗೆ ಅನುಮೋದನೆ ನೀಡಿದ ಭಾರತ ಸರ್ಕಾರ
ಯೋಜನೆಗಳು 36,559 ಕೋಟಿ ರೂ. ಮೌಲ್ಯದ ಉತ್ಪಾದನೆ ಮತ್ತು 5,100 ನೇರ ಉದ್ಯೋಗಗಳನ್ನು ಸೃಷ್ಟಿಸಲಿವೆ; ಅನುಮೋದಿತ ಉತ್ಪಾದನಾ ಘಟಕಗಳ ವ್ಯಾಪ್ತಿಯು ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದಾದ್ಯಂತ ಇರಲಿದೆ
ಹೊಸ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕಗಳು 100% ತಾಮ್ರದ ಕ್ಲಾಡ್ ಲ್ಯಾಮಿನೇಟ್, 20% ಮುದ್ರಿತ ಸರ್ಕ್ಯೂಟ್ ಬೋರ್ಡ್‌ಗಳು (ಪಿಸಿಬಿ) ಮತ್ತು 15% ಕ್ಯಾಮೆರಾ ಮಾಡ್ಯೂಲ್ ಬೇಡಿಕೆಯನ್ನು ದೇಶೀಯವಾಗಿ ಪೂರೈಸಲಿವೆ; ಉತ್ಪಾದಿತ ಸರಕುಗಳಲ್ಲಿ ಶೇ.60ರಷ್ಟು ರಫ್ತು ಮಾಡಲಾಗುವುದು: ಅಶ್ವಿನಿ ವೈಷ್ಣವ್
ಬಿಡಿಭಾಗಗಳ ತಯಾರಿಕೆಯಲ್ಲಿ ಬಲವಾದ ಪದಾರ್ಪಣೆ ಮಾಡಿದ ಭಾರತ; ಆಮದು ಅವಲಂಬನೆಯನ್ನು ಕಡಿಮೆ ಮಾಡಲು, ಹೆಚ್ಚಿನ ಕೌಶಲ್ಯದ ಉದ್ಯೋಗಗಳನ್ನು ಸೃಷ್ಟಿಸಲು ಹಾಗೂ ರಕ್ಷಣೆ, ದೂರಸಂಪರ್ಕ, ಎಲೆಕ್ಟ್ರಿಕ್ ವಾಹನಗಳು ಮತ್ತು ನವೀಕರಿಸಬಹುದಾದ ಇಂಧನಕ್ಕಾಗಿ ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ನಿರ್ಮಿಸುವ ಯೋಜನೆಗಳು ಇವಾಗಿವೆ
Posted On:
27 OCT 2025 5:25PM by PIB Bengaluru
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಉತ್ಪಾದನಾ ಯೋಜನೆ (ಇಸಿಎಂಎಸ್) ಅಡಿಯಲ್ಲಿ 7 ಯೋಜನೆಗಳ ಮೊದಲ ಹಂತಕ್ಕೆ ಅನುಮೋದನೆ ನೀಡಿರುವುದಾಗಿ ಘೋಷಿಸಿದರು. ಈಗ ಬಹು-ಪದರದ ಮುದ್ರಿತ ಸರ್ಕ್ಯೂಟ್ ಬೋರ್ಡ್‌ಗಳು (ಪಿಸಿಬಿಗಳು), ಎಚ್‌ಡಿಐ ಪಿಸಿಬಿಗಳು, ಕ್ಯಾಮೆರಾ ಮಾಡ್ಯೂಲ್‌ಗಳು, ತಾಮ್ರದ ಕ್ಲಾಡ್ ಲ್ಯಾಮಿನೇಟ್‌ಗಳು ಮತ್ತು ಪಾಲಿಪ್ರೊಪಿಲೀನ್ ಫಿಲ್ಮ್‌ಗಳನ್ನು ಭಾರತದಲ್ಲೇ ತಯಾರಿಸಲಾಗುವುದು.

ಸಿದ್ಧ ಉತ್ಪನ್ನಗಳನ್ನು ತಯಾರಿಸುವ ಹಂತದಿಂದ ಮಾಡ್ಯೂಲ್‌ಗಳು, ಬಿಡಿಭಾಗಗಳು, ವಸ್ತುಗಳು ಮತ್ತು ಯಂತ್ರೋಪಕರಣಗಳನ್ನು ತಾನೇ ತಯಾರಿಸುವವರೆಗೆ ಭಾರತದ ಪ್ರಯಾಣದಲ್ಲಿ ಈ ನಡೆಯು ಒಂದು ಪ್ರಮುಖ ಹೆಜ್ಜೆಯಾಗಿದೆ.
ʻಇಸಿಎಂಎಸ್ʼಗೆ ಅಭೂತಪೂರ್ವ ಪ್ರತಿಕ್ರಿಯೆ
ಈ ಯೋಜನೆಗೆ ದೇಶೀಯ ಮತ್ತು ಜಾಗತಿಕ ಕಂಪನಿಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. 249 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದು 1.15 ಲಕ್ಷ ಕೋಟಿ ರೂ.ಗಳ ಹೂಡಿಕೆ, 10.34 ಲಕ್ಷ ಕೋಟಿ ಉತ್ಪಾದನೆ ಮತ್ತು 1.42 ಲಕ್ಷ ಉದ್ಯೋಗಗಳನ್ನು ಸೃಷ್ಟಿಯನ್ನು ಸೂಚಿಸುತ್ತದೆ. ಇದು ಭಾರತದ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಇದುವರೆಗಿನ ಅತ್ಯಧಿಕ ಹೂಡಿಕೆ ಬದ್ಧತೆ ಎನಿಸಿದೆ.
ಇಂದು 5,532 ಕೋಟಿ ರೂ. ಮೌಲ್ಯದ ಏಳು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳು 36,559 ಕೋಟಿ ರೂ. ಮೌಲ್ಯದ ಬಿಡಿಭಾಗಗಳ ಉತ್ಪಾದನೆಗೆ ಕಾರಣವಾಗಲಿವೆ ಮತ್ತು 5,100 ನೇರ ಉದ್ಯೋಗಗಳನ್ನು ಸೃಷ್ಟಿಸುತ್ತವೆ.
ಅನುಮೋದಿತ ಉತ್ಪಾದನಾ ಘಟಕಗಳು ತಮಿಳುನಾಡು (5), ಆಂಧ್ರಪ್ರದೇಶ (1) ಮತ್ತು ಮಧ್ಯಪ್ರದೇಶದಲ್ಲಿ (1) ತಲೆ ಎತ್ತಲಿವೆ. ಇದು ಸಮತೋಲಿತ ಪ್ರಾದೇಶಿಕ ಬೆಳವಣಿಗೆಯನ್ನು ಬಲಪಡಿಸುತ್ತದೆ ಮತ್ತು ಹೈಟೆಕ್ ಉತ್ಪಾದನೆಯನ್ನು ಮಹಾನಗರಗಳನ್ನು ಮೀರಿ ಆಚೆಗೆ ವಿಸ್ತರಿಸುತ್ತದೆ.

ಬೇಡಿಕೆ-ಪೂರೈಕೆ ಅಂತರವನ್ನು ಕಡಿಮೆ ಮಾಡುವುದು
"ನಮ್ಮ ದೇಶೀಯ ಬೇಡಿಕೆಯ ಶೇ.20 ರಷ್ಟು ʻಪಿಸಿಬಿʼಗಳು ಮತ್ತು ಶೇ.15 ಕ್ಯಾಮೆರಾ ಮಾಡ್ಯೂಲ್ ಸಬ್-ಅಸೆಂಬ್ಲಿಯನ್ನು ಈ ಘಟಕಗಳಿಂದ ಆಗುವ ಉತ್ಪಾದನೆಯ ಮೂಲಕ ಪೂರೈಸಲಾಗುವುದು," ಎಂದು ಕೇಂದ್ರ ಸಚಿವ ಶ್ರೀ ಅಶ್ವಿನಿ ವೈನವ್ ಅವರು ಮಾಹಿತಿ ನೀಡಿದರು.
ತಾಮ್ರದ ಕ್ಲಾಡ್ ಲ್ಯಾಮಿನೇಟ್ ಬೇಡಿಕೆಯನ್ನು ಈಗ ಸಂಪೂರ್ಣವಾಗಿ ದೇಶೀಯವಾಗಿ ಪೂರೈಸಲಾಗುವುದು ಎಂದು ಅವರು ಉಲ್ಲೇಖಿಸಿದರು. ಈ ಘಟಕಗಳ ಮೂಲಕ ತಯಾರಿಸಲಾಗುವ ಹೆಚ್ಚುವರಿ ಶೇ.60ರಷ್ಟು ಉತ್ಪಾದನೆಯನ್ನು ರಫ್ತು ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಉತ್ಪನ್ನ ವಿವರಗಳು
ಅನುಮೋದಿತ ಯೋಜನೆಗಳು ಹೈ-ಡೆನ್ಸಿಟಿ ಇಂಟರ್‌ಕನೆಕ್ಟ್ (ಎಚ್‌ಡಿಐ) ಪಿಸಿಬಿಗಳು, ಬಹು-ಪದರದ ಪಿಸಿಬಿಗಳು, ಕ್ಯಾಮೆರಾ ಮಾಡ್ಯೂಲ್‌ಗಳು, ತಾಮ್ರದ ಕ್ಲಾಡ್ ಲ್ಯಾಮಿನೇಟ್‌ಗಳು ಮತ್ತು ಪಾಲಿಪ್ರೊಪಿಲೀನ್ ಫಿಲ್ಮ್‌ಗಳಂತಹ ಪ್ರಮುಖ ಬಿಡಿಭಾಗಗಳನ್ನು ಒಳಗೊಂಡಿವೆ.
ಕ್ಯಾಮೆರಾ ಮಾಡ್ಯೂಲ್‌ಗಳು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯುವ ಕಾಂಪ್ಯಾಕ್ಟ್ ಇಮೇಜಿಂಗ್ ಉಪಕರಣಗಳಾಗಿವೆ. ಭಾರತದಲ್ಲಿ ಇದರ ಉತ್ಪಾದನೆಯು ಸ್ಮಾರ್ಟ್‌ಫೋನ್‌ಗಳು, ಡ್ರೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ವೈದ್ಯಕೀಯ ಉಪಕರಣಗಳು, ರೋಬೋಟ್‌ಗಳು ಮತ್ತು ಆಟೋಮೋಟಿವ್ ವ್ಯವಸ್ಥೆಗಳಲ್ಲಿ ಈ ಉಪಕರಣಗಳ ಬಳಕೆಯನ್ನು ಸುಗಮಗೊಳಿಸಲಿದೆ.
ಎಚ್‌ಡಿಐ ಮತ್ತು ಬಹು-ಪದರದ ಪಿಸಿಬಿಗಳು ಪ್ರತಿ ಎಲೆಕ್ಟ್ರಾನಿಕ್ ಸಾಧನವನ್ನು ಸಂಪರ್ಕಿಸುವ ಮತ್ತು ನಿಯಂತ್ರಿಸುವ ಕೋರ್ ಸರ್ಕ್ಯೂಟ್ ಬೋರ್ಡ್‌ಗಳಾಗಿವೆ. ಇವುಗಳನ್ನು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ವಾಹನ ಮತ್ತು ಕೈಗಾರಿಕಾ ವ್ಯವಸ್ಥೆಗಳಲ್ಲಿ ಬಳಸಲಾಗುತ್ತದೆ.

ಬೇಸ್ ಮೆಟೀರಿಯಲ್ಸ್‌ನಲ್ಲಿ ಕಾರ್ಯತಂತ್ರದ ಸಾಧನೆಗಳು
ಇಸಿಎಂಎಸ್ ಬಿಡಿಭಾಗಗಳ ಸಾಮಗ್ರಿಗಳ ತಯಾರಿಕೆಯಲ್ಲಿ ಭಾರತದ ಬಲವಾದ ಪ್ರವೇಶವನ್ನು ಸೂಚಿಸುತ್ತದೆ.
ಮೊದಲ ಬಾರಿಗೆ, ಭಾರತವು ತಾಮ್ರದ ಕ್ಲಾಡ್ ಲ್ಯಾಮಿನೇಟ್ (ಸಿಸಿಎಲ್) ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ. ಬಹು-ಪದರದ ಪಿಸಿಬಿಗಳನ್ನು ತಯಾರಿಸಲು ಸಿಸಿಎಲ್ ಮೂಲ ಘಟಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಪಿಸಿಬಿಗಳು ಪ್ರತಿ ಎಲೆಕ್ಟ್ರಾನಿಕ್ ಉಪಕರಣಕ್ಕೆ ಹೋಗುತ್ತವೆ. ಸದ್ಯ ಅದನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಪಾಲಿಪ್ರೊಪಿಲೀನ್ ಫಿಲ್ಮ್ - ಇದು ʻಕೆಪಾಸಿಟರ್ʼಗಳ ತಯಾರಿಕೆಯಲ್ಲಿ ಬಳಸುವ ಪ್ರಮುಖ ವಸ್ತುವಾಗಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್, ವಾಹನ, ಐಸಿಟಿ, ಕೈಗಾರಿಕಾ ಮತ್ತು ಉತ್ಪಾದನೆ, ದೂರಸಂಪರ್ಕ ಮತ್ತು ಕಂಪ್ಯೂಟಿಂಗ್ ಉಪಕರಣಗಳಿಗಾಗಿ ಈ ಫಿಲ್ಮ್‌ಗಳನ್ನು ಭಾರತದಲ್ಲೇ ತಯಾರಿಸಲಾಗುವುದು.

ಆರ್ಥಿಕ ಮತ್ತು ಕೈಗಾರಿಕಾ ಪರಿಣಾಮ
- ಈ ಯೋಜನೆಗಳು ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತವೆ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಉತ್ಪನ್ನ ಬೆಲೆಗಳನ್ನು ಕಡಿಮೆ ಮಾಡುತ್ತವೆ
- ಈ ಯೋಜನೆಗಳು ಉತ್ಪಾದನೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಉನ್ನತ ಕೌಶಲ್ಯದ ಉದ್ಯೋಗಗಳನ್ನು ಸೃಷ್ಟಿಸುತ್ತವೆ
- ರಕ್ಷಣೆ, ದೂರಸಂಪರ್ಕ, ಎಲೆಕ್ಟ್ರಿಕ್ ವಾಹನಗಳು ಮತ್ತು ನವೀಕರಿಸಬಹುದಾದ ಇಂಧನಕ್ಕಾಗಿ ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ನಿರ್ಮಿಸಲಾಗುವುದು
ಭಾರತವು ವಿನ್ಯಾಸಗೊಳಿಸುವ, ತಯಾರಿಸುವ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ರಫ್ತು ಮಾಡುವ ಸಾಮರ್ಥ್ಯವಿರುವ ಪ್ರತಿಷ್ಠಿತ ರಾಷ್ಟ್ರವಾಗುವತ್ತ ತನ್ನ ಪ್ರಯಾಣ ಮುಂದುವರಿಸಿದೆ. ಈ ಯೋಜನೆಯು ʻಉತ್ಪಾದನೆ ಆಧರಿತ ಪ್ರೋತ್ಸಾಹಧನʼ(ಪಿಎಲ್ಐ) ಮತ್ತು ʻಇಂಡಿಯಾ ಸೆಮಿಕಂಡಕ್ಟರ್ ಮಿಷನ್ʼಗೆ(ಐಎಸ್ಎಂ) ಪೂರಕವಾಗಿದೆ.
ಇದು ಎಲೆಕ್ಟ್ರಾನಿಕ್ ಸಾಧನಗಳಿಂದ ಚಿಪ್‌ಗಳವರೆಗೆ, ಬಿಡಿಭಾಗಗಳಿಂದ ವಸ್ತುಗಳವರೆಗೆ ಮತ್ತು ಉತ್ಪಾದನೆಯಿಂದ ನಾವೀನ್ಯತೆಯವರೆಗೆ ಸಮಗ್ರ ಮೌಲ್ಯ ಸರಪಳಿಯನ್ನು ಸೃಷ್ಟಿಸುತ್ತದೆ.
*****
(Release ID: 2183044)
Visitor Counter : 6