ಪ್ರಧಾನ ಮಂತ್ರಿಯವರ ಕಛೇರಿ
ಎಲ್ಲಾ ನಾಗರಿಕರು ಭಾರತೀಯ ಉತ್ಪನ್ನಗಳನ್ನು ಖರೀದಿಸುವಂತೆ ಪ್ರಧಾನಮಂತ್ರಿ ಕರೆ
प्रविष्टि तिथि:
19 OCT 2025 8:36PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಈ ಹಬ್ಬದ ಋತುವಿನಲ್ಲಿ ಭಾರತದಲ್ಲೇ ತಯಾರಾದ ಉತ್ಪನ್ನಗಳನ್ನು ಖರೀದಿಸುತ್ತಾ 140 ಕೋಟಿ ಭಾರತೀಯರ ಕಠಿಣ ಪರಿಶ್ರಮ, ಸೃಜನಶೀಲತೆ ಮತ್ತು ನಾವಿನ್ಯತೆಯನ್ನು ಆಚರಿಸುವಂತೆ ಎಲ್ಲಾ ನಾಗರಿಕರಿಗೆ ಕರೆ ನೀಡಿದ್ದಾರೆ. "ಭಾರತೀಯ ಉತ್ಪನ್ನಗಳನ್ನು ಖರೀದಿಸೋಣ ಮತ್ತು ಹೆಮ್ಮೆಯಿಂದ ಇದು ಸ್ವದೇಶಿ ಎಂದು ಹೇಳೋಣ! ನೀವು ಖರೀದಿಸಿದ್ದನ್ನು ಸಾಮಾಜಿಕ ಮಾಧ್ಯಮದಲ್ಲಿಯೂ ಹಂಚಿಕೊಳ್ಳಿ. ಹೀಗೆ ಮಾಡುವ ಮೂಲಕ ನೀವು ಇತರರು ಸಹ ಸ್ವದೇಶಿ ವಸ್ತುಗಳನ್ನೇ ಖರೀದಿ ಮಾಡಲು ಪ್ರೇರೇಪಿಸುವಿರಿ" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಈ ಹಬ್ಬದ ಋತುವನ್ನು 140 ಕೋಟಿ ಭಾರತೀಯರ ಕಠಿಣ ಪರಿಶ್ರಮ, ಸೃಜನಶೀಲತೆ ಮತ್ತು ನಾವಿನ್ಯತೆಯ ಮೂಲಕ ಆಚರಿಸೋಣ.
ಭಾರತೀಯ ಉತ್ಪನ್ನಗಳನ್ನು ಖರೀದಿಸೋಣ ಮತ್ತು ಇದು ಸ್ವದೇಶಿ ಎಂದು ಹೆಮ್ಮೆಯಿಂದ ಹೇಳೋಣ.
ನೀವು ಖರೀದಿಸಿದ್ದನ್ನು ಸಾಮಾಜಿಕ ಮಾಧ್ಯಮದಲ್ಲಿಯೂ ಹಂಚಿಕೊಳ್ಳಿ. ಹೀಗೆ ನೀವು ಇತರರು ಕೂಡ ಅದೇ ರೀತಿ ಖರೀದಿ ಮಾಡಲು ಪ್ರೇರೇಪಿಸುವಿರಿ."
*****
(रिलीज़ आईडी: 2180969)
आगंतुक पटल : 28
इस विज्ञप्ति को इन भाषाओं में पढ़ें:
Odia
,
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Tamil
,
Telugu
,
Malayalam